Saturday, June 14, 2025
Saturday, June 14, 2025

ಮೇ ತಿಂಗಳು ಮುಗಿಯುವುದರೊಳಗೆ ಈ ಜಾಗಗಳಿಗೆ ಭೇಟಿ ನೀಡಿ

ಈಗ ಉರಿ ಬೇಸಿಗೆ. ಮೇ ತಿಂಗಳು ಮುಗಿಯುತ್ತಿದ್ದಂತೆ ಬೇಸಿಗೆಯೂ ಮುಗಿಯುತ್ತದೆ. ಅಷ್ಟರೊಳಗೆ ಕರ್ನಾಟಕದ ಈ ಪ್ರಸಿದ್ಧ ತಾಣಗಳಿಗೆ ಭೇಟಿ ನೀಡಿ.

ಮೇ ತಿಂಗಳಲ್ಲಿ ಸಾಮಾನ್ಯವಾಗಿ ಉರಿ ಬಿಸಿಲಿರುತ್ತದೆ. ಬಿಸಿಲಿನ ಜಳಕ್ಕೆ ಎಂಥವರೂ ಹೈರಾಣಾಗುತ್ತಾರೆ. ಸೂರ್ಯನ ತಾಪಕ್ಕೆ ಹೊರಗೆ ಹೋಗಲು ಯಾರೂ ಬಯಸುವುದಿಲ್ಲ. ಮನೆಯಲ್ಲಿಯೇ ಕುಳಿತು ವಿಶ್ರಾಂತಿ ಪಡೆದರೆ ಸಾಕು ಎಂದುಕೊಳ್ಳುತ್ತಾರೆ. ಆದರೆ ಬೇಸಿಗೆಯಲ್ಲೂ ಭೇಟಿ ಕೊಡಬಹುದಾದ ಅದ್ಬುತವಾದ ಪ್ರವಾಸಿ ತಾಣಗಳು ಕರ್ನಾಟಕದಲ್ಲಿದೆ. ಅಂತಹ ಟಾಪ್‌ 6 ಪ್ರವಾಸಿ ತಾಣಗಳ ಕುರಿತಾದ ಮಾಹಿತಿ ಇಲ್ಲಿದೆ.

ಕೊಡಗು
ಕೊಡಗು ಪ್ರವಾಸಿಗರ ಅಚ್ಚುಮೆಚ್ಚಿನ ತಾಣ. ಆ ತಾಣವನ್ನು ಕರ್ನಾಟಕದ ಕಾಶ್ಮೀರ ಎಂದೇ ಕರೆಯಲಾಗುತ್ತದೆ. ಅಲ್ಲಿನ ಕಾಫಿ ತೋಟಗಳು ಪ್ರವಾಸಿಗರಿಗೆ ಮಜಾ ಕೊಡುತ್ತದೆ. ಪ್ರಕೃತಿ, ದಟ್ಟವಾದ ಕಾಡು ಮತ್ತು ಜಲಪಾತಗಳು ಎಲ್ಲರನ್ನು ಸೆಳೆಯುತ್ತದೆ. ಮೇ ತಿಂಗಳಲ್ಲಿ ಕೊಡಗಿಗೆ ಪ್ರವಾಸಿಗರು ತಪ್ಪದೇ ಭೇಟಿಕೊಡಬೇಕು.

ಕೊಡಗು


ದಾಂಡೇಲಿ
ಬೇಸಿಗೆ ಪ್ರವಾಸ ಕೈಗೊಳ್ಳುವ ಯೋಚನೆಯಲ್ಲಿದ್ದರೆ ಪ್ರವಾಸಿಗರು ಈ ತಿಂಗಳಲ್ಲಿ ದಾಂಡೇಲಿಗೆ ಹೋಗಬಹುದು, ಅಲ್ಲಿನ ದಟ್ಟಾರಣ್ಯ ಮತ್ತು ಕಾಳಿ ನದಿ ದಿವ್ಯಾನುಭವ ನೀಡುತ್ತದೆ. ಅಲ್ಲಿನ ಹತ್ತಾರು ರೆಸಾರ್ಟ್‌ಗಳಲ್ಲಿ ಪ್ರವಾಸಿಗರು ಎಂಜಾಯ್‌ ಮಾಡಬಹುದು. ಬೋಟಿಂಗ್‌ ಮತ್ತು ಇನ್ನಿತರ ಅಡ್ವೆಂಚರ್‌ ಕ್ಯಾಂಪ್‌ಗಳು ಖುಷಿಕೊಡುತ್ತದೆ.

ದಾಂಡೇಲಿ


ಗೋಕರ್ಣ
ಬಿರು ಬೇಸಿಗೆಯಲ್ಲಿ ಗೋಕರ್ಣ ದಿ ಬೆಸ್ಟ್‌ ತಾಣ. ಅಲ್ಲಿನ ಬೀಚ್‌ಗಳು ಬೇಸಿಗೆಗೆ ಹೇಳಿ ಮಾಡಿಸಿದ ತಾಣ. ಬೇಸಿಗೆಯಲ್ಲಿ ಮೆತ್ತಗಾದವರು ಕೂಲ್‌ ಆಗಬಹುದು. ಗೋಕರ್ಣದಲ್ಲಿ ಬೀಚ್‌ಗಳಷ್ಟೇ ಅಲ್ಲದೆ ಹತ್ತಾರು ಧಾರ್ಮಿಕ ಸ್ಥಳಗಳಿವೆ. ದೇವಾಲಯಗಳ ಬಗ್ಗೆ ಆಸಕ್ತಿ ಇರುವವರು ಅಲ್ಲಿಗೂ ಭೇಟಿ ನೀಡಬಹುದು.

ಗೋಕರ್ಣ

ಕುದುರೆಮುಖ
ಕುದುರೆಮುಖ ಕರ್ನಾಟಕದ ದಿ ಬೆಸ್ಟ್‌ ತಾಣ. ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ನೈಸರ್ಗಿಕ ಸೌಂದರ್ಯವನ್ನು ಮೆತ್ತಿಕೊಂಡಿರುವ ಕುದುರೆಮುಖ ತಾಣವು ಪ್ರವಾಸಿಗರನ್ನು ಸೆಳೆಯುತ್ತದೆ. ಚಾರಣದಲ್ಲಿ ಆಸಕ್ತಿ ಉಳ್ಳವರು ಕುದುರೆಮುಖವನ್ನು ಆಯ್ಕೆ ಮಾಡಿಕೊಳ್ಳಬಹುದು. ನೇಚರ್‌ ಲವರ್ಸ್‌ ಕುದುರೆಮುಖದಲ್ಲಿ ಬೆಸ್ಟ್‌ ಫೋಟೊ ಶೂಟ್‌ ಮಾಡಿಸಬಹುದು. ಮೇ ತಿಂಗಳಲ್ಲಿ ಹೋಗಲೇಬೇಕಾದ ತಾಣಗಳಲ್ಲಿ ಕುದುರೆಮುಖವೂ ಒಂದು.

ಕುದುರೆಮುಖ


ನಂದಿಬೆಟ್ಟ
ರಾಜಧಾನಿ ಬೆಂಗಳೂರಿನ ಸುತ್ತಮುತ್ತ ಇರುವವರು ಪಿಕ್ನಿಕ್‌ಗಾಗಿ ನಂದಿಬೆಟ್ಟಕ್ಕೆ ಹೋಗಬಹುದು. ಚಾರಣ ಪ್ರಿಯರಿಗೆ ನಂದಿ ಹಿಲ್ಸ್‌ ಹೆಚ್ಚು ಆಪ್ತವಾಗುತ್ತದೆ. ಅಲ್ಲಿನ ಪ್ರಾಕೃತಿಕ ಸೌಂದರ್ಯ ಕಣ್ಮನ ಸೆಳೆಯುತ್ತದೆ. ನಂದಿ ಬೆಟ್ಟದ ತಪ್ಪಲಿನಲ್ಲಿಯೇ ಪುರಾಣ ಪ್ರಸಿದ್ಧ ದೇವಾಲಯಗಳಿವೆ. ಟಿಪ್ಪು ಡ್ರಾಪ್‌ ಅಲ್ಲಿನ ಆಕರ್ಷಣೆ. ಅದನ್ನು ಸೂಸೈಡ್‌ ಪಾಯಿಂಟ್‌ ಎಂತಲೂ ಕರೆಯಲಾಗುತ್ತದೆ.

ನಂದಿಬೆಟ್ಟ


ಕೊಡಚಾದ್ರಿ
ಕೊಡಚಾದ್ರಿ ಟ್ರೆಕ್ಕಿಂಗ್‌ ಗೆ ಹೇಳಿ ಮಾಡಿಸಿದ ತಾಣ. ಶಿವಮೊಗ್ಗದಿಂದ ಸರಿ ಸುಮಾರು ನೂರು ಕಿ.ಮೀ ದೂರದಲ್ಲಿರುವ ಈ ತಾಣಕ್ಕೆ ಪ್ರವಾಸಿಗರು ಪ್ರತಿದಿನ ಭೇಟಿ ನೀಡುತ್ತಾರೆ. ಅಲ್ಲಿನ ಹಿತವಾದ ವಾತಾವರಣವೇ ಇಡೀ ಪ್ರವಾಸವನ್ನು ಬೆಚ್ಚಗೆ ಇರಿಸುತ್ತದೆ. ಫೋಟೊ ಶೂಟ್‌ ಅದರಲ್ಲೂ ಪ್ರೀ ವೆಡ್ಡಿಂಗ್‌ ಶೂಟ್‌ಗೆ ಕೊಡಚಾದ್ರಿ ಬೆಸ್ಟ್‌ ತಾಣ.

ಕೊಡಚಾದ್ರಿ


ಮೇ ತಿಂಗಳಲ್ಲಿ ಈ ಜಾಗಗಳಿಗೂ ಹೋಗಿ
ಆಗುಂಬೆ
ನಾಗರಹೊಳೆ
ಚಿಕ್ಕಮಗಳೂರು

Deekshith Nair

Deekshith Nair

Travel blogger and adventurer passionate about exploring new cultures and sharing travel experiences.

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!