ಮಲೇಷ್ಯಾದ ದೇಗುಲವೊಂದರಲ್ಲಿ ಮೊದಲ ಎಐ ದೇವತೆ!
ಇದು ತಂತ್ರಜ್ಞಾನದ ಕಾಲ. ಈಗ ಎಐ(ಕೃತಕ ಬುದ್ದಿಮತ್ತೆ) ಹಾವಳಿ. ಇದೀಗ ಮಲೇಷ್ಯಾದಲ್ಲಿ ಜಗತ್ತಿನ ಮೊಟ್ಟ ಮೊದಲ ಎಐ ದೇವತೆ ಕಾಣಿಸಿಕೊಂಡಿದೆ.
ಇದು ತಂತ್ರಜ್ಞಾನದ ಕಾಲ. ಇತ್ತೀಚೆಗಂತೂ ಎಐ(ಕೃತಕ ಬುದ್ದಿಮತ್ತೆ) ಹಾವಳಿ. ಎಐ ಎಲ್ಲೆಡೆ ತನ್ನ ಅಸ್ತಿತ್ತವನ್ನು ಸ್ಥಾಪಿಸಿಕೊಂಡಿದೆ. ಅದರ ಬಳಕೆಯಿಂದಾಗಿ ಮಾನವ ಸಂಪನ್ಮೂಲಗಳ ಅಗತ್ಯವೇ ಇಲ್ಲದಂತಾಗಿದೆ. ಯುವಕರು ನಿರುದ್ಯೋಗಿಗಳಾಗುವ ಭಯದಲ್ಲಿದ್ದಾರೆ. ಎಐ ಎಲ್ಲಾ ಕ್ಷೇತ್ರದಲ್ಲೂ ತನ್ನ ಕಬಂಧ ಬಾಹುವನ್ನು ಚಾಚಿದೆ. ಇದೀಗ ಮಲೇಷ್ಯಾ ದೇಶವು ಇನ್ನು ಮುಂದಕ್ಕೆ ಹೋಗಿದೆ. ಆ ದೇಶದ ದೇವಾಲಯವೊಂದರಲ್ಲಿ ಜಗತ್ತಿನ ಮೊಟ್ಟ ಮೊದಲ ಎಐ ದೇವತೆ ಕಾಣಿಸಿಕೊಂಡಿದೆ.
ತಂತ್ರಜ್ಞಾನ ಹಾಗೂ ಭಕ್ತಿಯನ್ನು ಸಮ್ಮಿಳನಗೊಳಿಸಿರುವ ಮಲೇಷ್ಯಾದ ತಿಯಾನ್‌ಹೌ ದೇವಾಲಯವು ಜಗತ್ತಿನ ಮೊದಲ ಎಐ ದೇವತೆಯನ್ನು ಪರಿಚಯಿಸಿದೆ. ಸಮುದ್ರ ಯಾತ್ರಿಗಳು ಮತ್ತು ರಕ್ಷಣೆ ಕೋರುವವರಿಗೆ ಅಭಯ ನೀಡುವ ಮಾಜು ಎಂಬ ಸಮುದ್ರ ದೇವತೆಯನ್ನು ಎಐ ರೂಪದಲ್ಲಿ ಕಾಣಿಸಿಕೊಂಡಿದ್ದು,ಭಕ್ತರೊಂದಿಗೆ ಸಂವಹನ ನಡೆಸುತ್ತದೆ. ಸಾಮಾನ್ಯವಾಗಿ ಎಲ್ಲಾ ದೇವಾಲಯಗಳಲ್ಲಿ ದೇವರಿಗೆ ಪೂಜೆ ಸಮರ್ಪಿತವಾಗುತ್ತದೆ. ಆದರೆ ಮಲೇಷ್ಯಾದ ಮಾಜು ದೇವತೆಯು ಭಕ್ತರಿಗೆ ಆಶೀರ್ವಾದ ಮಾಡುತ್ತದೆ. ಒಂದಷ್ಟು ಸಲಹೆ ಸೂಚನೆಗಳನ್ನು ನೀಡುತ್ತದೆ. ಎಮೈಜಿನ್ ಸಂಸ್ಥೆಯು ಈ ಎಐ ಪರಿಕಲ್ಪನೆಯನ್ನು ಯಶಸ್ವಿಯಾಗಿ ಸಾಕಾರಗೊಳಿಸಿದೆ.
ಮಲೇಷ್ಯಾಗೆ ಹೋಗುವ ಪ್ರವಾಸಿಗರಿಗೆ ಈ ಎಐ ದೇವತೆಯು ಕೂಡ ಆಕರ್ಷಣೆಯಾಗಲಿದೆ. ಇದೀಗ ಮಾಜು ದೇವತೆಯು ಭಕ್ತರೊಂದಿಗೆ ಮಾತನಾಡುವ ವಿಡಿಯೊ ಸಾಕಷ್ಟು ವೈರಲ್ ಆಗಿದೆ. ಇತ್ತ ಕಡೆ ಹಲವು ನೆಟ್ಟಿಗರು ಮಾನವ ದೇವರನ್ನೂ ಸೃಷ್ಟಿಸಿಬಿಟ್ಟ ಎನ್ನುತ್ತಿದ್ದಾರೆ.