ಏಷಿಯಾದ ಸ್ಕೈಲೈನ್ ನಗರಗಳ ಪಟ್ಟಿಯಲ್ಲಿ ಮುಂಬೈ ಟಾಪ್
ಏಷಿಯಾದಲ್ಲಿ ಅತ್ಯದ್ಭುತ ಸ್ಕೈ ಲೈನ್ ಹೊಂದಿರುವ ಮುಂಬೈಗೆ ಮತ್ತೊಂದು ಕಿರೀಟ
ನಾವು ಯಾವುದೇ ನಗರಕ್ಕೆ ಹೋದರೂ ನಾವು ಮೊದಲು ನೋಡುವುದು ಸ್ಕೈ ಲೈನ್! ಹಾಗೆ ಗಗನಚುಂಬಿ ಕಟ್ಟಡಗಳ ದೃಶ್ಯವಿಲ್ಲದೆ ನಗರ ಪ್ರವಾಸ ಅರ್ಥವಿಲ್ಲದಂತಾಗುತ್ತದೆ. ಇದೀಗ Slingo ಎಂಬ ವೆಬ್‌ಸೈಟ್ ವಿಶ್ವದ ಪ್ರಮುಖ ಸಿಟಿಗಳ ಸ್ಕೈಲೈನ್‌ಗಳನ್ನು ಅಧ್ಯಯನ ಮಾಡಿ ಪಟ್ಟಿ ಬಿಡುಗಡೆ ಮಾಡಿದೆ.
ಈ ಅಧ್ಯಯನದಲ್ಲಿ ರಾಜಧಾನಿ ನಗರಗಳು, ವ್ಯಾಪಾರದ ಕೇಂದ್ರಗಳು ಮತ್ತು ಪ್ರವಾಸೋದ್ಯಮ ಹಾಟ್‌ಸ್ಪಾಟ್‌ಗಳನ್ನು ಒಳಗೊಂಡಂತೆ ಪಟ್ಟಿಯು ರೂಪುಗೊಂಡಿದೆ. ಪ್ರತಿಯೊಂದು ನಗರಕ್ಕೂ ಸಂಬಂಧಿಸಿದ ಇನ್‌ಸ್ಟಾಗ್ರಾಂ ಹ್ಯಾಶ್‌ಟ್ಯಾಗ್‌ಗಳ ಸಂಖ್ಯೆ, 150 ಮೀಟರ್, 200 ಮೀಟರ್ ಮತ್ತು 300 ಮೀಟರ್‌ಗೆ ಮೀರಿರುವ ಕಟ್ಟಡಗಳ ಸಂಖ್ಯೆ ಮತ್ತು ವಿನ್ಯಾಸದ ಅಂಶಗಳನ್ನು (golden ratio) ಆಧರಿಸಿ ಅಂಕ ನೀಡಲಾಗಿದೆ.
ಅಧ್ಯಯನದ ಪ್ರಕಾರ, ಮುಂಬೈ ಏಷ್ಯಾದಲ್ಲಿ ಅಗ್ರಸ್ಥಾನವನ್ನು ಪಡೆದಿದೆ. ಇದರ ಸ್ಕೋರ್ 10ರಲ್ಲಿ 7.84. 150 ಮೀಟರ್‌ಗಿಂತ ಎತ್ತರದ ಸಾಕಷ್ಟು ಕಟ್ಟಡಗಳು, 32,000ಕ್ಕೂ ಹೆಚ್ಚು ಇನ್‌ಸ್ಟಾಗ್ರಾಂ ಪೋಸ್ಟ್‌ಗಳು ಮುಂಬೈಗೆ ಈ ಸ್ಥಾನವನ್ನು ಪಡೆದುಕೊಂಡಿವೆ. ಮುಂಬೈ ನಗರದ ಸ್ಕೈಲೈನ್ ಗೋಥಿಕ್, ವಿಕ್ಟೋರಿಯನ್, ಆಧುನಿಕ ಹಾಗೂ ಆರ್ಟ್ ಡೆಕೋ ಶೈಲಿಗಳ ಮಿಶ್ರಣದಿಂದ ರೂಪುಗೊಂಡಿದೆ.
ವಿಶ್ವದಲ್ಲೇ ಅತ್ಯದ್ಭುತ ಸ್ಕೈಲೈನ್ ಹೊಂದಿರುವ ನಗರಗಳು
- ನ್ಯೂಯಾರ್ಕ್ ಸಿಟಿ ಮೊದಲ ಸ್ಥಾನ ಪಡೆದಿದ್ದು 9.68 ಅಂಕಗಳೊಂದಿಗೆ. ಇಲ್ಲಿ 318 ಕಟ್ಟಡಗಳು 150 ಮೀಟರ್‌ಗಿಂತ ಎತ್ತರದಲ್ಲಿವೆ.
- ದುಬೈ, ದ್ವಿತೀಯ ಸ್ಥಾನದಲ್ಲಿ, ಭವಿಷ್ಯದ ವಿನ್ಯಾಸಗಳು ಮತ್ತು ದಾಖಲೆಯ ಕಟ್ಟಡಗಳಿಗಾಗಿ ಪ್ರಸಿದ್ಧವಾಗಿದೆ.
- ಶಿಕಾಗೋ ಮೂರನೇ ಸ್ಥಾನದಲ್ಲಿ, ವಿಲ್ಲಿಸ್ ಟವರ್ ಮತ್ತು ಜಾನ್ ಹ್ಯಾಂಕಾಕ್ ಸೆಂಟರ್ ಮುಂತಾದ ಕಟ್ಟಡಗಳು ಇಲ್ಲಿ ಪ್ರಮುಖ ಆಕರ್ಷಣೆ.
ಅಧ್ಯಯನದ ಪ್ರಕಾರ, ನ್ಯೂಯಾರ್ಕ್ ಸಿಟಿಯ ಸ್ಕೈಲೈನ್ ವಿಶ್ವದ ಅತ್ಯಂತ ಆಕರ್ಷಕ ದೃಶ್ಯವೆಂದು ಪರಿಗಣಿಸಲಾಗಿದೆ. 661,000 ಇನ್‌ಸ್ಟಾಗ್ರಾಂ ಪೋಸ್ಟ್‌ಗಳಿರುವ ಈ ಸಿಟಿಯಲ್ಲಿದೆ ಎಂಪೈರ್ ಸ್ಟೇಟ್ ಬಿಲ್ಡಿಂಗ್ ಮತ್ತು ಒನ್ ವರ್ಲ್ಡ್ ಟ್ರೇಡ್ ಸೆಂಟರ್ ಮುಂತಾದ ಐಕಾನಿಕ್ ಕಟ್ಟಡಗಳು ಈ ನಗರಕ್ಕೆ ಮೆರಗಣ್ಣು ನೀಡುತ್ತಿದೆ