ಉತ್ತರ ಭಾರತದ ಈ ಜಾಗಗಳನ್ನು ಮಿಸ್ ಮಾಡಿಕೊಳ್ಳಬೇಡಿ!
ದೇಶದ ಅತ್ಯಂತ ಜನಪ್ರಿಯ ಗುರುದ್ವಾರಗಳಲ್ಲಿ ಇದು ಕೂಡ ಒಂದಾಗಿದೆ. ತನ್ನ ಅದ್ಭುತವಾದ ವಾಸ್ತುಶಿಲ್ಪದಿಂದ ಭಾರತದ ಪ್ರವಾಸಿ ಪ್ರಿಯರನ್ನಷ್ಟೇ ಅಲ್ಲದೆ ವಿದೇಶಿ ಪ್ರವಾಸಿಗರನ್ನು ಕೂಡ ಸೆಳೆಯುತ್ತಿದೆ.
ಉತ್ತರ ಭಾರತದ ಪ್ರವಾಸ ಬೇರೆ ತೆರನಾದ ಅನುಭವವನ್ನೇ ನೀಡುತ್ತದೆ. ಸರಿ ಸುಮಾರು ಒಂದು ವರ್ಷ ನೋಡುವಷ್ಟು ಪ್ರವಾಸಿ ತಾಣಗಳು ಅಲ್ಲಿವೆ. ಒಂದೇ ಪ್ರವಾಸದಲ್ಲಿ ಉತ್ತರ ಭಾರತದ ಅಷ್ಟೂ ಸ್ಥಳಗಳನ್ನು ನೋಡಲು ಸಾಧ್ಯವಿಲ್ಲ. ಆದರೆ ಕಡಿಮೆ ಸಮಯದಲ್ಲಿಯೇ ಒಂದಿಷ್ಟು Ever Missing ಜಾಗಗಳಿಗೆ ಹೋಗಬಹುದು. ಉತ್ತರ ಭಾರತದ ಪ್ರವಾಸದಲ್ಲಿ ಎಂದಿಗೂ ಮಿಸ್ ಮಾಡಿಕೊಳ್ಳಬಾರದ ನಗರಗಳ ಪಟ್ಟಿಯಲ್ಲಿ ಸಾಕಷ್ಟು ತಾಣಗಳಿವೆ. ಅವುಗಳಲ್ಲಿ ಬಹುಮುಖ್ಯವಾದ ಸ್ಥಳಗಳ ಕುರಿತು ಇಲ್ಲಿ ಮಾಹಿತಿಯನ್ನು ಕೊಡಲಾಗಿದೆ.
ಅಮೃತಸರ
ಪಂಜಾಬ್ ರಾಜ್ಯದಲ್ಲಿರುವ ಅಮೃತಸರ್(Amritsar) ಪ್ರಮುಖ ಪುಣ್ಯಕ್ಷೇತ್ರಗಳಲ್ಲಿ ಒಂದಾಗಿದೆ. ತನ್ನ ಶ್ರೀಮಂತ ಪರಂಪರೆಯ ಮೂಲಕ ಇದು ಸಿಖ್ರ ಸ್ವರ್ಣ ದೇವಾಲಯವಾಗಿ ಹೆಚ್ಚು ಪ್ರಸಿದ್ಧತೆಯನ್ನು ಪಡೆದಿದೆ. ಅಮೃತ್ಸರ್ನ ಶ್ರೀ ಹರ್ಮಂದಿರ್ ಸಾಹಿಬ್ ದೇವಾಲಯವನ್ನು ಗೋಲ್ಡನ್ ಟೆಂಪಲ್ ಎಂದೂ ಸಹ ಕರೆಯುತ್ತಾರೆ. ದೇಶದ ಅತ್ಯಂತ ಜನಪ್ರಿಯ ಗುರುದ್ವಾರಗಳಲ್ಲಿ ಇದು ಕೂಡ ಒಂದಾಗಿದೆ. ತನ್ನ ಅದ್ಭುತವಾದ ವಾಸ್ತುಶಿಲ್ಪದಿಂದ ಭಾರತದ ಪ್ರವಾಸಿ ಪ್ರಿಯರನ್ನಷ್ಟೇ ಅಲ್ಲದೆ ವಿದೇಶಿ ಪ್ರವಾಸಿಗರನ್ನು ಕೂಡ ಸೆಳೆಯುತ್ತಿದೆ.

ಡಾಲ್ಹೌಸಿ
ಹಿಮಾಚಲ ಪ್ರದೇಶದಲ್ಲಿರುವ ಡಾಲ್ ಹೌಸಿ(Dallhousie) ಭಾರತದಲ್ಲಿರುವ ಅತ್ಯಾಕರ್ಷಕ ಗಿರಿಧಾಮವಾಗಿದೆ. ಇದು ಚಂಬಾ ಜಿಲ್ಲೆಯಲ್ಲಿದ್ದು, ವರ್ಷದ ಅಷ್ಟೂ ದಿನವು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ. ವರ್ಷವಡೀ ಹಿತವಾದ ವಾತಾವರಣವನ್ನು ಹೊಂದಿರುವ ಈ ಗಿರಿಧಾಮವು ಮಧುಚಂದ್ರಕ್ಕೆ ಸೂಕ್ತವಾಗಿದೆ. ಇನ್ನು ವಾತಾವರಣವು ಮಂಜಿನಿಂದ ಕೂಡಿದ ಪರ್ವತಗಳು, ಪೈನ್ ವೃಕ್ಷಗಳು, ಕಣಿವೆಗಳು, ಅರಣ್ಯಗಳು ಅದ್ಭುತವಾಗಿ ಕಾಣುತ್ತದೆ. ಡಾಲ್ ಹೌಸಿಯಲ್ಲಿ 12ಕ್ಕೂ ಹೆಚ್ಚು ಪ್ರೇಕ್ಷಣೀಯ ಸ್ಥಳಗಳಿವೆ. ಇಲ್ಲಿ ಮೂರು ದಿನಗಳ ಕಾಲ ಪ್ರವಾಸ ಮಾಡಬಹುದು.

ನೈನಿತಾಲ್
ನೈನಿತಾಲ್(Nainital)( ಪ್ರವಾಸಿಗರನ್ನು ಮೂಕ ವಿಸ್ಮಿತಗೊಳಿಸುವ ಅತ್ಯದ್ಭುತವಾದ ತಾಣ. ಇದು ಉತ್ತರಾಖಂಡದಲ್ಲಿರುವ ಸುಂದರವಾದ ಜಾಗವಾಗಿದೆ. ನೈನಿತಾಲ್ ತನ್ನದೇ ಆದ ಪ್ರಶಾಂತವಾದ ವಾತಾವರಣ ಎತ್ತರದ ಪರ್ವತ, ಸ್ವಚ್ಛಂದವಾಗಿ ಹರಿಯುವ ನದಿಗಳು, ಹಚ್ಚ ಹಸುರಿನಿಂದ ಕೂಡಿದ ಪರಿಸರ ಮನ ಮೋಹಕವಾಗಿರುತ್ತದೆ. ಇಲ್ಲಿ 14ಕ್ಕಿಂತ ಹೆಚ್ಚಿನ ಪ್ರೇಕ್ಷಣೀಯ ಸ್ಥಳಗಳಿವೆ. 4 ದಿನಗಳ ಮಟ್ಟಿಗೆ ಆರಾಮವಾಗಿ ಟ್ರಿಪ್ ಮಾಡಬಹುದು. ಮಂಜಿನಿಂದ ಕಂಗೊಳಿಸುವ ವಾತಾವರಣವು ಹಿತಾನುಭವವನ್ನು ನೀಡುತ್ತದೆ.

ವಾರಾಣಸಿ
ಉತ್ತರ ಪ್ರದೇಶದ ವಾರಾಣಸಿ(Varanasi)( ಜಗತ್ತಿನ ಅತ್ಯಂತ ಪ್ರಸಿದ್ಧ ಹಿಂದೂ ಪುಣ್ಯಕ್ಷೇತ್ರವಾಗಿದೆ. ಇದನ್ನು ಬನಾರಸ್ ಅಥವಾ ಕಾಶಿ ಎಂದೂ ಕೂಡ ಕರೆಯುತ್ತಾರೆ. ಇಲ್ಲಿ ಪರಮ ಪವಿತ್ರವಾದ ಕಾಶಿ ವಿಶ್ವನಾಥ ದೇವಾಲಯ ಸೇರಿದಂತೆ ಇನ್ನು ಹತ್ತು ಹಲವು ಧಾರ್ಮಿಕ ತಾಣಗಳಿವೆ. ನೀವು ವಾರಾಣಸಿಯ ಪ್ರವಾಸದಲ್ಲಿ 15 ಪ್ರೇಕ್ಷಣೀಯ ಸ್ಥಳಗಳಿವೆ. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಇಲ್ಲಿಗೆ ಭೇಟಿ ಕೊಡುವುದು ಸೂಕ್ತವಾದ ಸಮಯವಾಗಿದೆ.

ಜೈಪುರ
ರಾಜಸ್ಥಾನದ ಜೈಪುರವು(Jaipur) ಅತ್ಯಂತ ಆಕರ್ಷಣೀಯ ನಗರವಾಗಿದೆ. ಇದನ್ನು ಪಿಂಕ್ ಸಿಟಿ ಎಂದು ಕರೆಯುತ್ತಾರೆ. ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿರುವ ಈ ನಗರವು ಪ್ರವಾಸಿಗರ ಮನಸೂರೆಗೊಳಿಸುತ್ತದೆ. ಇಲ್ಲಿ ಬಹುಮುಖ್ಯವಾಗಿ ಕೋಟೆಗಳು, ಅರಮನೆಗಳು, ಮ್ಯೂಸಿಯಂಗಳು, ಐತಿಹಾಸಿಕ ಕಟ್ಟಡಗಳು, ಉದ್ಯಾನಗಳು, ನದಿಗಳು ಸೇರಿದಂತೆ ಹತ್ತಾರು ಸ್ಥಳಗಳಿವೆ.
