Tuesday, October 14, 2025
Tuesday, October 14, 2025

ವಿಧಾನಸೌಧದ ಅಂಗಳದಲ್ಲಿ ಕೆಎಸ್‌ಟಿಡಿಸಿ ರಾಜರಥ

ರಾಜಧಾನಿ ಬೆಂಗಳೂರಿನಲ್ಲಿರುವ ವಿಧಾನಸೌಧದ ನಿರ್ಮಾಣ, ಅದರ ಇತಿಹಾಸ ಅದ್ಭುತ ವಾಸ್ತುಶಿಲ್ಪ, ನಾಯಕರ ಪ್ರತಿಮೆಗಳು, ಶಾಸಕಾಂಗದ ಕಾರ್ಯನಿರ್ವಹಣೆಯ ಮಾಹಿತಿಗಳನ್ನು ನೀಡುವ 'ವಿಧಾನಸೌಧ ಮಾರ್ಗದರ್ಶಿ ನಡಿಗೆ ಪ್ರವಾಸ'ದತ್ತ ಸ್ಥಳೀಯರಲ್ಲದೆ, ಹೊರರಾಜ್ಯ ಮತ್ತು ವಿದೇಶಿಯರೂ ಅತಿಹೆಚ್ಚು ಆಕರ್ಷಿತರಾಗಿದ್ದಾರೆ. ಪ್ರವಾಸೋದ್ಯಮ ಇಲಾಖೆ, ವಿಧಾನಸೌಧದ ಸಚಿವಾಲಯ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಸಹಭಾಗಿತ್ವದಲ್ಲಿ 'ವಿಧಾನಸೌಧ ಮಾರ್ಗದರ್ಶಿ ನಡಿಗೆ ಪ್ರವಾಸ' ನಡೆಯುತ್ತಿದೆ.

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಒಂದೇ ಸೂರಿನಡಿ ಪ್ರವಾಸ, ಸಾರಿಗೆ, ವಾಸ್ತವ್ಯ ಮತ್ತು ಆತಿಥ್ಯವನ್ನು ಒದಗಿಸುವ ಮೂಲಕ ಜನಪ್ರಿಯತೆ ಗಳಿಸುತ್ತಿದೆ. ತನ್ನ ಹೆಜ್ಜೆ ಗುರುತುಗಳನ್ನು ಕರ್ನಾಟಕದಲ್ಲಿ ಸೀಮಿತಗೊಳಿಸದೆ, ಹೊರ ರಾಜ್ಯಗಳಿಗೂ ಮುಂದುವರಿಸಿದೆ. ಹೇಳಿ- ಕೇಳಿ- ಓದಿ ತಿಳಿದರೂ ಮುಗಿಯದಷ್ಟು ವೈಭವದ ಇತಿಹಾಸ ಕರ್ನಾಟಕಕ್ಕಿದೆ. ಇದನ್ನು ಪುಟಗಳಿಗೆ ಮಾತ್ರ ಸೀಮಿತವಾಗಿರಿಸದೆ, ಜನರನ್ನು ಸುತ್ತಿಸಿ ಪ್ರವಾಸದಲ್ಲಿನ ಸಾರ ಸತ್ವವನ್ನು ಹಂಚಬೇಕು ಎನ್ನುವ ಹುಮ್ಮಸ್ಸಿನಲ್ಲಿದೆ ಕೆಎಸ್‌ಟಿಡಿಸಿ. ಇಡೀ ರಾಜ್ಯವನ್ನು ಸುತ್ತಿಸುವ ಹುಮ್ಮಸ್ಸಿನಲ್ಲಿರುವ ಕೆಎಸ್‌ಟಿಡಿಸಿ ಇದೀಗ ಪ್ರವಾಸಿಗರನ್ನು ವಿಧಾನಸೌಧದ ಒಳಗೂ ಕರೆದುಕೊಂಡು ಹೋಗುತ್ತಿದೆ. ರಾಜಧಾನಿ ಬೆಂಗಳೂರಿನಲ್ಲಿ ನೂರಾರು ಆಕರ್ಷಣೆಗಳಿವೆ ನಿಜ. ಆದರೆ ವಿಧಾನಸೌಧ ಎಲ್ಲ ಆಕರ್ಷಣೆಗಳನ್ನೂ ಮೀರಿದ್ದು. ವಿಧಾನಸೌಧವೆಂದರೆ ಅಲ್ಲಿಗೆ ರಾಜಕಾರಣಿಗಳಿಗಷ್ಟೇ ಪ್ರವೇಶ ಎಂಬ ಮಾತಿತ್ತು. ಸಾಮಾನ್ಯ ಜನರು ಅಂಥ ಮಹೋನ್ನತ ಕಟ್ಟಡವನ್ನು ದೂರದಲ್ಲೆಲ್ಲೋ ನಿಂತು ನೋಡಬೇಕಿತ್ತು. ಅದರ ಒಳಗೆ ಹೋಗಿ ಕಟ್ಟದ ವಿನ್ಯಾಸ ಮತ್ತು ಸೌಂದರ್ಯವನ್ನು ಕಣ್ತುಂಬಿಕೊಳ್ಳುವ ಅವಕಾಶವಿರಲಿಲ್ಲ. ಆದರೆ ಬರಬರುತ್ತಾ ವಿಧಾನಸೌಧವೂ ಪ್ರವಾಸಿ ತಾಣವಾಯಿತು. ಪ್ರವಾಸಿಗರಿಗೂ ಆಕರ್ಷಕ ಕೇಂದ್ರವಾಯಿತು. ವಿಧಾನಸೌಧದೊಳಗೆ ಜನ ಸಾಮಾನ್ಯರಿಗೂ ಪ್ರವೇಶವಿದೆ ಎಂಬ ನಿಯಮ ಜಾರಿಗೆ ಬಂತು. ಈಗ ʼವಿಧಾನಸೌಧ ಮಾರ್ಗದರ್ಶಿ ನಡಿಗೆʼ ಎಂಬ ಹೊಸಕಲ್ಪನೆ ಜಾರಿಗೆ ಬಂದಿದೆ. ಸ್ವತಃ ಸರಕಾರ ಮತ್ತು ಸಂಬಂಧಿತ ಮಂತ್ರಿ,ಅಧಿಕಾರಿಗಳು ಸಾರ್ವಜನಿಕರ ಪ್ರವೇಶಕ್ಕೆ ಅನುಮತಿ ನೀಡಿದ್ದಾರೆ. ಇದೀಗ ಸಾರ್ವಜನಿಕರು ಬಹಳ ಸಂತಸದಿಂದ ತಮ್ಮ ಮನೆಯ ಮಕ್ಕಳು ಮತ್ತು ಕುಟುಂಬದೊಂದಿಗೆ ವಿಧಾನಸೌಧಕ್ಕೆ ಹೋಗುತ್ತಿದ್ದಾರೆ. ಅರೆ.. ನೀವು ಹೋಗಿ ಬರಬಹುದಲ್ವ? ಇಡೀ ವಿಧಾನಸೌಧದ ನಿರ್ಮಾಣ, ಅಲ್ಲಿನ ವಾಸ್ತುಶಿಲ್ಪ, ನಾಯಕರ ಪ್ರತಿಮೆಗಳು ನಿಮ್ಮನ್ನು ಅಚ್ಚರಿಗೆ ಕೆಡವುತ್ತವೆ.

Vidhanasoudha Bangalore

ರಾಜಧಾನಿ ಬೆಂಗಳೂರಿನಲ್ಲಿರುವ ವಿಧಾನಸೌಧದ ನಿರ್ಮಾಣ, ಅದರ ಇತಿಹಾಸ ಅದ್ಭುತ ವಾಸ್ತುಶಿಲ್ಪ, ನಾಯಕರ ಪ್ರತಿಮೆಗಳು, ಶಾಸಕಾಂಗದ ಕಾರ್ಯನಿರ್ವಹಣೆಯ ಮಾಹಿತಿಗಳನ್ನು ನೀಡುವ 'ವಿಧಾನಸೌಧ ಮಾರ್ಗದರ್ಶಿ ನಡಿಗೆ ಪ್ರವಾಸ'ದತ್ತ ಸ್ಥಳೀಯರಲ್ಲದೆ, ಹೊರರಾಜ್ಯ ಮತ್ತು ವಿದೇಶಿಯರೂ ಅತಿಹೆಚ್ಚು ಆಕರ್ಷಿತರಾಗಿದ್ದಾರೆ. ಪ್ರವಾಸೋದ್ಯಮ ಇಲಾಖೆ, ವಿಧಾನಸೌಧದ ಸಚಿವಾಲಯ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಸಹಭಾಗಿತ್ವದಲ್ಲಿ 'ವಿಧಾನಸೌಧ ಮಾರ್ಗದರ್ಶಿ ನಡಿಗೆ ಪ್ರವಾಸ' ನಡೆಯುತ್ತಿದೆ. ಜೂನ್ 1ರಿಂದ ಸೆಪ್ಟೆಂಬರ್ 21ರವರೆಗೆ, ಕನ್ನಡದಲ್ಲಿ 62 ಮತ್ತು ಇಂಗ್ಲಿಷ್‌ನಲ್ಲಿ 94 ತಂಡಗಳಲ್ಲಿ 4,674 ಮಂದಿ ಪ್ರವಾಸ ಕೈಗೊಂಡು, ಸರಕಾರದ ಆಡಳಿತ ಯಂತ್ರದ ಕೇಂದ್ರ ಸ್ಥಾನ ವಿಧಾನಸೌಧದ ಮಾಹಿತಿ ಪಡೆದುಕೊಂಡಿದ್ದಾರೆ.

ಆನ್‌ಲೈನ್‌ ನೋಂದಣಿ

ಪ್ರವಾಸ ಕೈಗೊಳ್ಳಲು ಬಯಸುವವರು ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಳ್ಳಬೇಕು. ದಿನ ಮತ್ತು ಸಮಯವನ್ನು ಆಯ್ಕೆ ಮಾಡಿಕೊಂಡು, ವೈಯಕ್ತಿಕ ವಿವರದ ದಾಖಲೆಗಳನ್ನು ಅಪ್‌ಲೋಡ್ ಮಾಡಿ, ಪ್ರವೇಶ ಶುಲ್ಕವನ್ನು ಪಾವತಿಸಬೇಕು. ಪ್ರವಾಸಕ್ಕೂ ಮುನ್ನ, ಈ ದಾಖಲೆಗಳನ್ನು ಭದ್ರತಾ ಸಿಬ್ಬಂದಿ ಪರಿಶೀಲಿಸಿ, ಪ್ರವೇಶಕ್ಕೆ ಅವಕಾಶ ನೀಡುತ್ತಾರೆ.

'ಪ್ರತಿ ಭಾನುವಾರ, ತಿಂಗಳ ಎರಡನೇ ಹಾಗೂ ನಾಲ್ಕನೇ ಶನಿವಾರ ಮಾರ್ಗದರ್ಶಿ ಪ್ರವಾಸ ಇರುತ್ತದೆ. ದಿನಕ್ಕೆ ಎಂಟು ತಂಡಗಳಿಗೆ (ಒಂದು ತಂಡದಲ್ಲಿ 30 ಮಂದಿ) ಕನ್ನಡ ಹಾಗೂ ಇಂಗ್ಲಿಷ್‌ನಲ್ಲಿ ಮಾಹಿತಿ ನೀಡಲಾಗುತ್ತದೆ. ಸರಕಾರಿ ಶಾಲೆಯ ಪ್ರತಿ ಮಕ್ಕಳಿಗೂ ಉಚಿತ ಪ್ರವೇಶ. ಈ ಪ್ರವಾಸಿ ಮಾರ್ಗದರ್ಶಿಗೆ ಐಟಿ ಕಂಪನಿಗಳ ಉದ್ಯೋಗಿಗಳು, ಹೊರ ರಾಜ್ಯ ಹಾಗೂ ವಿದೇಶಿಗರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದಾರೆ' ಎಂದು ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ(ಕೆಎಸ್‌ಟಿಡಿಸಿ) ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

'ವಿಧಾನಸೌಧ ಬಲ ಭಾಗದಲ್ಲಿರುವ ಗಾಂಧೀಜಿ ಪ್ರತಿಮೆಯ ಸಮೀಪದಿಂದ ಪ್ರವಾಸ ಆರಂಭವಾಗಲಿದೆ. ಅಲ್ಲಿಂದ ವಿಧಾನಸೌಧ ನಿರ್ಮಾಣದ ಶಂಕು ಸ್ಥಾಪನೆಯ ಶಿಲಾಫಲಕ, ವಿಧಾನಸೌಧದ ಶ್ರೀಗಂಧದ ಮಾದರಿ ವೀಕ್ಷಣೆಗೂ ಅವಕಾಶವಿದೆ. ಬ್ಯಾಂಕ್ವೆಟ್ ಸಭಾಂಗಣವನ್ನು ಪ್ರವಾಸಿಗರು ಕಣ್ತುಂಬಿಕೊಳ್ಳಬಹದು. ವಿಧಾನಸಭೆ ಅಧ್ಯಕ್ಷರ ಗ್ಯಾಲರಿಗೆ ಪ್ರವೇಶ, ಸಭೆಯ ನಡಾವಳಿಗಳ ಬಗ್ಗೆ ಮಾರ್ಷಲ್‌ಗಳು ವಿವರಣೆ ನೀಡುತ್ತಾರೆ. ಇನ್ನು ವಿಧಾನ ಪರಿಷತ್‌ ಪ್ರವೇಶ ದ್ವಾರದ ಬಳಿ ಮೈಸೂರು ಸಂಸ್ಥಾನದ ಪ್ರಜಾಪ್ರತಿನಿಧಿ ಸಭೆ 1890ರ ದಶಕದಿಂದ ವಿವಿಧ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸಿ, ವಿಧಾನಸೌಧದವರೆಗೆ ನಡೆದು ಬಂದ ಹಾದಿಯನ್ನು ವಿವರಿಸುವ ಚಿತ್ರಗಳ ಬಗ್ಗೆ ವಿವರಣೆ ನೀಡಲಾಗುತ್ತದೆ. ಅಲ್ಲಿಂದ ಸೆಂಟ್ರಲ್ ಹಾಲ್, ಕೆಂಗಲ್ ಹನುಮಂತಯ್ಯ ಅವರ ಪ್ರತಿಮೆ, ಗುಲಾಬಿ ಉದ್ಯಾನ, ವಿಧಾನಸೌಧದ ಭವ್ಯಮೆಟ್ಟಿಲುಗಳಲ್ಲಿ ಪ್ರವಾಸ ಕೊನೆಗೊಳ್ಳುತ್ತದೆ.

ನೋಂದಣಿ ಕಡ್ಡಾಯ

ಕೆಎಸ್‌ಟಿಡಿಸಿಯ www.kstdc.co ವೆಬ್‌ಸೈಟ್‌ನಲ್ಲಿ ಆಸಕ್ತರು ನೋಂದಣಿ ಮಾಡಿಕೊಳ್ಳಬೇಕು. ಮಾಹಿತಿಗೆ: 080-4334 4334, 08970650080 ಸಂಪರ್ಕಿಸಬಹುದು. ಟಿಕೆಟ್ ಕಾಯ್ದಿರಿಸಿದವರು, ಖರೀದಿಸಿದವರು ಆಧಾರ್ ಕಾರ್ಡ್ ತೋರಿಸುವುದು ಕಡ್ಡಾಯ. ಕೆಎಸ್‌ಟಿಡಿಸಿ, ವಿಧಾನಸೌಧದ ಭದ್ರತಾ ಸಿಬ್ಬಂದಿ ನೀಡುವ ಸೂಚನೆಗಳನ್ನು ಪಾಲಿಸಬೇಕು.

ವಿಧಾನಸೌಧ ಮಾರ್ಗದರ್ಶಿ ನಡಿಗೆ ನಿಜಕ್ಕೂ ಉತ್ತಮ ಪ್ರಯತ್ನ. ಪ್ರವಾಸಕ್ಕೆ ಸಾರ್ವಜನಿಕರಿಂದ ಉತ್ತಮ ರೀತಿಯಲ್ಲಿ ಸ್ಪಂದನೆ ಸಿಗುತ್ತಿದೆ. ಇಲ್ಲಿನ ವಿಶೇಷಗಳ ಬಗ್ಗೆ ಮಾರ್ಗದರ್ಶಕರು ಸಾರ್ವಜನಿಕರಿಗೆ ಮಾಹಿತಿ ನೀಡುತ್ತಿದ್ದಾರೆ. ಶಾಲಾ ಮಕ್ಕಳೂ ಬಹಳ ಉತ್ಸುಕತೆಯಿಂದ ವಿಧಾನಸೌಧ ಮಾರ್ಗದರ್ಶಿ ಪ್ರವಾಸದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಸಾರ್ವಜನಿಕರಿಂದ ಮತ್ತಷ್ಟು ಸ್ಪಂದನೆ ವ್ಯಕ್ತವಾಗಲಿದೆ ಎಂಬ ವಿಶ್ವಾಸವಿದೆ.
ಪ್ರಶಾಂತ್ ಕುಮಾ‌ರ್ ಮಿಶ್ರಾ
ಕೆಎಸ್‌ಟಿಡಿಸಿ ವ್ಯವಸ್ಥಾಪಕ ನಿರ್ದೇಶಕ

ಮುತ್ಯಾಲ ಮಡುವಿನಲ್ಲಿ ಮಯೂರ ನಿಸರ್ಗ ಪರ್ಲ್ ವ್ಯಾಲಿ

ಆತಿಥ್ಯಕ್ಕೆ ಹೇಳಿ ಮಾಡಿಸಿದ ಹೊಟೇಲ್‌ಎಂದರೆ ಅದು ಮಯೂರ. ಪ್ರವಾಸಿಗರ ಬಯಕೆಗಳನ್ನು ಈಡೇರಿಸಿ ಅವರನ್ನು ಸಂತೃಪ್ತಿಗೊಳಿಸಲು ಪ್ರತಿ ಪ್ರವಾಸಿ ತಾಣದಲ್ಲೂ ಮಯೂರವಿದೆ. ಆತಿಥ್ಯವೆಂದರೆ ಮಯೂರ ಎಂಬಮಟ್ಟಿಗೆ ಅದು ಪ್ರಸಿದ್ಧಿಗಳಿಸಿದೆ. ಶುಚಿ ಮತ್ತು ರುಚಿ ಎರಡಕ್ಕೂ ಮಯೂರ ದಿ ಬೆಸ್ಟ್.‌ಅಲ್ಲಿನ ಸಿಬ್ಬಂದಿ, ಹಿತವಾದ ವಾತಾವರಣ, ವಿಶೇಷ ಸೌಲಭ್ಯ ಮತ್ತು ಸೌಕರ್ಯಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ. ಕೆಎಸ್ ಟಿಡಿಸಿ ಪ್ಯಾಕೇಜ್ ನಡಿ ಪ್ರವಾಸಕ್ಕೆ ಹೊರಡುವ ಪ್ರವಾಸಿಗರಿಗೆಲ್ಲರಿಗೂ ಹೊಟೇಲ್ ಮಯೂರ ಅಚ್ಚುಕಟ್ಟಾದ ವಾಸ್ತವ್ಯ ಮತ್ತು ಊಟೋಪಚಾರಗಳನ್ನು ಒದಗಿಸಿಕೊಡುತ್ತದೆ. ಪ್ರತಿ ಜಿಲ್ಲೆಯಲ್ಲೂ ಮಯೂರ ಹೊಟೇಲ್‌ನ ಶಾಖೆಗಳಿವೆ. ಮಯೂರವೆಂದರೆ ಅಲ್ಲಿ ಗುಣಮಟ್ಟದ ಮತ್ತು ಆತ್ಮೀಯವಾದ ಆತಿಥ್ಯ ಇದ್ದೇ ಇರುತ್ತದೆ. ಮಯೂರ ತನ್ನ ಗ್ರಾಹಕರನ್ನು ಅದ್ಭುತವಾಗಿ ಉಪಚರಿಸುತ್ತದೆ. ಸೇವೆ ನೀಡುವುದರಲ್ಲಿ ಯಾವುದೇ ರಾಜಿಯಿಲ್ಲ. ಪ್ರವಾಸಿಗನಿಗೆ ಮನೆಯ ವಾತಾವರಣವನ್ನು ಮಯೂರ ಹೊಟೇಲ್ ನಿರ್ಮಿಸಿಕೊಡುತ್ತದೆ. ಹೊಟೇಲ್ ನ ಪ್ರತಿ ಸಿಬ್ಬಂದಿಯೂ ಆಪ್ತವಾಗಿ ಮಾತಿಗಿಳಿಯುತ್ತಾ ವಾಸ್ತವ್ಯವಿರುವ ಅಷ್ಟು ಘಳಿಗೆಯೂ ಚೆನ್ನಾಗಿ ನೋಡಿಕೊಳ್ಳುತ್ತಾರೆ. ನೀವು ಆನೇಕಲ್‌ಸುತ್ತಮುತ್ತಲಿನ ತಾಣಗಳನ್ನು ನೋಡಲು ಹೋದರೆ ಮರೆಯದೆ ಮಯೂರ ನಿಸರ್ಗ ಪರ್ಲ್‌ವ್ಯಾಲಿಯಲ್ಲಿ ಉಳಿದುಕೊಳ್ಳಿ. ಮುತ್ಯಾಲ ಮಡುವಿನ ಬಳಿ ಈ ಮಯೂರ ಹೊಟೇಲ್‌ಇದೆ. ವ್ಯಾಲಿಯಿಂದ ನೀರು ಮುತ್ತುಗಳಂತೆ ಬೀಳುವುದನ್ನು ಕಂಡು ಸಂಭ್ರಮಿಸಬಹುದು. ಮ್ಯೂಸಿಕ್‌ಫೌಂಟೇನ್‌ ಬಂಡೆಗಳ ಮೇಲೆ ಚಿಮ್ಮುವುದನ್ನು ನೋಡಿದಾಗ ಮಜವೆನಿಸುತ್ತದೆ. ಸುಂದರ ದೃಶ್ಯ ವೈಭವವನ್ನು ಕಂಡು ಪ್ರವಾಸಿಗರು ಮುದಗೊಳ್ಳಬಹುದು.ರಾಜಧಾನಿ ಬೆಂಗಳೂರಿನಿಂದ ಕೇವಲ 40 ಕಿಮೀ ದೂರದಲ್ಲಿರುವ ಆನೇಕಲ್ ಬಳಿಯ ಮುತ್ಯಾಲ ಮಡುವಿನಲ್ಲಿರುವ ಮಯೂರದಲ್ಲಿ ನೀವು ನಿಮ್ಮ ಕುಟುಂಬ ಅಥವಾ ಗೆಳೆಯರೊಂದಿಗೆ ವಾಸ್ತವ್ಯ ಹೂಡಲೇಬೇಕು. ಮನೆಯಲ್ಲಿದ್ದೇನೆ ಎಂಬ ಭಾವ ಖಂಡಿತ ಮೂಡುತ್ತದೆ.

Nisarga Pearl valley-Mutyal Madu


ದಾರಿ ಹೇಗೆ?

ಹೊಟೇಲ್ ಮಯೂರ ನಿಸರ್ಗ ಪರ್ಲ್ ವ್ಯಾಲಿ, ಮುತ್ಯಾಲ ಮಡುವಿಗೆ ಹತ್ತಿರದಲ್ಲಿದೆ. ಆನೇಕಲ್ ನಿಂದ 5 ಕಿಮೀ ದೂರದಲ್ಲಿದೆ. ಈ ಚಿಕ್ಕ, ಫ್ರೆಂಡ್ಲಿ ಹೊಟೇಲ್‌ನಲ್ಲಿ 5 ಡಬಲ್ ಬೆಡ್ ರೂಮ್‌ಗಳು ರೆಸ್ಟೋರೆಂಟ್ ಇದೆ.

ಮನೆಯಲ್ಲಿ ಕೂತಿದ್ದರೆ ಕೂತೇ ಇರುತ್ತೀರಿ. ಮನೆಯಲ್ಲಿ ಸಿಗುವ ವಾತಾವರಣ ಹೊಟೇಲ್‌ ಮಯೂರದಲ್ಲಿಯೂ ಸಿಗುತ್ತದೆ. ಆದರೆ ಅಲ್ಲಿನ ವಾತಾವರಣ ಹಿತವಾಗಿರುತ್ತದೆ. ಹೊಸತನವೂ ಇರುತ್ತದೆ. ಉಳಿದುಕೊಳ್ಳೋದಕ್ಕೇನು ಎಲ್ಲಿ ಬೇಕಾದರೂ ಉಳಿದುಕೊಳ್ಳಬಹುದು ಎನ್ನಬೇಡಿ. ಕೆಲವೊಮ್ಮೆ ಸ್ಟೇಯಿಂಗ್‌ ಕೂಡ ಒಳ್ಳೆಯ ವೈಬ್‌ ಕೊಡುತ್ತದೆ.

Hotel Mayura Nisarga

ಸಂಪರ್ಕ:

ಶ್ರೀ ಎಸ್. ಶ್ರೀನಿವಾಸ್

ಮುತ್ಯಾಲಮಡುವು, ಆನೇಕಲ್

PIN: 562106

9606987813, 080 27859303

nisarga@karnatakaholidays.net

ಪ್ಯಾಕೇಜ್

ಕೆಎಸ್‌ಟಿಡಿಸಿ ಅಲ್ಲಿ ಬುಕ್ ಮಾಡುವವರಿಗೆ ವಿಶೇಷ ಅವಕಾಶಗಳಿವೆ.

ಡಿಲಕ್ಸ್ ಎಸಿ ಬಸ್‌ನಲ್ಲಿ ಆರಾಮದಾಯಕ ಸುಖ ಪ್ರಯಾಣ.

ಆಯ್ಕೆ ಮಾಡಿಕೊಂಡ ಪ್ಯಾಕೇಜ್‌ ಅನ್ವಯ ಪ್ರವಾಸ.

ರಾಜ್ಯ, ಕೇಂದ್ರ ಮತ್ತು ಸಾರ್ವಜನಿಕ ವಲಯದ ಉದ್ಯೋಗಿಗಳಿಗೆ ಎಲ್‌ಟಿಸಿ ಸೌಲಭ್ಯ.

ಕೆಎಸ್‌ಟಿಡಿಸಿ ನಿಮ್ಮ ಆಯ್ಕೆಯಾಗಲಿ

ಕೆಎಸ್‌ಟಿಡಿಸಿ ಯ ಪ್ಯಾಕೇಜ್ ಬಜೆಟ್ ಸ್ನೇಹಿಯಾಗಿದ್ದು, ಬೇರೆಲ್ಲೂ ಸಿಗದ ಆರಾಮದಾಯಕ, ಸುರಕ್ಷಿತ ಮತ್ತು ಸುಸಜ್ಜಿತ ಯೋಜನೆಯ ಪ್ರವಾಸದ ಭರವಸೆಯನ್ನು ನೀಡುತ್ತದೆ.

ಆರಾಮದಾಯಕ ಪ್ರಯಾಣ: ಆಧುನಿಕ ಬಸ್‌ಗಳು ಮತ್ತು ಅನುಭವಿ ಚಾಲಕರೊಂದಿಗೆ ಇಡೀ ದಿನ ಸುರಕ್ಷಿತ ಪ್ರಯಾಣ ಮಾಡಬಹುದು.

ವಿಶೇಷ ಗೈಡ್‌ಗಳು: ತಾಣಗಳ ಇತಿಹಾಸ ಮತ್ತು ಮಹತ್ವವನ್ನು ವಿವರಿಸುವ ತಜ್ಞ ಗೈಡ್‌ಗಳು ಪ್ರವಾಸಿಗರೊಂದಿಗೆ ಇರುತ್ತಾರೆ.

ಸಮಗ್ರ ಯೋಜನೆ: ಪ್ಯಾಕೇಜ್‌ನಲ್ಲಿ ಇರುವ ಎಲ್ಲ ತಾಣಗಳನ್ನೂ ಮನಸ್ಸಿಗೆ ಸಮಾಧಾನ ಆಗುವವರೆಗೂ ನೋಡಬಹುದು. ಹಿತಾನುಭವ ಪಡೆಯಬಹುದು. ಸಮಯದ ಪ್ಲ್ಯಾನಿಂಗ್ ಕೂಡ ಅತ್ಯಂತ ಶಿಸ್ತಿನಿಂದ ರೂಪಿಸಿರಲಾಗುತ್ತದೆ.

ಕೈಗೆಟುಕುವ ಬೆಲೆ: ಎಲ್ಲರಿಗೂ ಒಗ್ಗುವ, ಮಧ್ಯಮ ವರ್ಗದವರ ಕನಸು ನನಸು ಮಾಡುವ, ಕೈಗೆಟುಕುವ ದರದಲ್ಲಿ ಪ್ರಯಾಣ ಸೇವೆ ಸಿಗುತ್ತದೆ. ಮತ್ತೇನು ಯೋಚನೆ ಮಾಡ್ತಿದ್ದೀರಿ? ಕೆಎಸ್ ಟಿಡಿಸಿ ನಿಮ್ಮ ಸಂಗಾತಿ. ಈಗಲೇ ಬುಕ್ ಮಾಡಿ. ಹೊರಡಿ. ಜಗತ್ತು ಕೈ ಬೀಸಿ ಕರೆಯುತ್ತಿದೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

Read Next

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..