ಗೋವಾ ರಾಜಧಾನಿಯಾದ ಪಣಜಿಯಲ್ಲಿ ಹತ್ತಾರು ಪ್ರವಾಸಿ ಆಕರ್ಷಣೆಗಳಿವೆ.ವಿಶೇಷವೆಂದರೆ ಅಲ್ಲಿ ಪ್ರಶಾಂತವಾದ ಬೀಚ್‌ಗಳಿವೆ. ಬೀಚ್‌ ಸೌಂದರ್ಯವನ್ನು ಸವಿಯಲೆಂದೇ ಪ್ರವಾಸಿಗರು ಗೋವಾಗೆ ಭೇಟಿ ನೀಡುತ್ತಾರೆ. ಸಮುದ್ರದ ಅಲೆಗಳ ನಡುವೆ ಪ್ರವಾಸಿಗರು ಎಂಜಾಯ್‌ ಮಾಡಬಹುದು. ಗೋವಾದಲ್ಲಿ ಸಾಕಷ್ಟು ಬೀಚ್‌ಗಳಿದ್ದರೂ ಪಣಜಿಯಲ್ಲಿನ ಈ ನಾಲ್ಕು ಬೀಚ್‌ಗಳು ಬಹಳ ಸುಪ್ರಸಿದ್ಧವಾಗಿವೆ. ಆ ಬೀಚ್‌ಗಳ ಕುರಿತಾದ ಮಾಹಿತಿ ಇಲ್ಲಿದೆ.

ಓಡ್ಸ್ಕೆಲ್‌ ಬೀಚ್
ಪಣಜಿಯಲ್ಲಿ ಸಾಕಷ್ಟು ಜನಪ್ರಿಯವಾದ ಬೀಚ್‌ಗಳಿವೆ. ಓಡ್ಕ್ಸೆಲ್ ಬೀಚ್ ಕೂಡ ಬಹಳ ಪ್ರಸಿದ್ಧಿ ಪಡೆದಿದೆ. ಇದು ಪಣಜಿಯಿಂದ ಕೇವಲ 11 ಕಿ.ಮೀ ದೂರದಲ್ಲಿದ್ದು, ಸಣ್ಣ ಕಡಲತೀರವಾಗಿದೆ. ಸರಿ ಸುಮಾರು 250 ಮೀಟರ್‌ ಉದ್ದವಿದೆ. ಆದಾಗ್ಯೂ ಈ ಬೀಚ್ ಸುಂದರವಾಗಿದ್ದು,ಶಾಂತಿಯುತ ವಾತಾವರಣವನ್ನು ತನ್ನೊಳಗೆ ಇರಿಸಿಕೊಂಡಿದೆ. ಈ ಬೀಚ್ ಗೋವಾ ಸುತ್ತಮುತ್ತಲಿನ ಪ್ರವಾಸಿಗರ ನೆಚ್ಚಿನ ಪಿಕ್ನಿಕ್ ಸ್ಥಳವಾಗಿದೆ.ವೀಕೆಂಡ್‌ ಕಳೆಯಲು ಇದು ಬೆಸ್ಟ್‌ ತಾಣ. ಆದರೆ ಈ ಬೀಚ್‌ನಲ್ಲಿ ಈಜಾಡಲು ಅವಕಾಶವಿರುವುದಿಲ್ಲ.

Odskal Beach


ಮಿರಾಮರ್‌ ಬೀಚ್
ಪಣಜಿಯ ಅತ್ಯದ್ಭುತವಾದ ಮಿರಾಮರ್ ಬೀಚ್ ರಾಜ್ಯದ ಅತಿ ಉದ್ದದ ಬೀಚ್ ಎಂದು ಕರೆಸಿಕೊಂಡಿದೆ. ಸರಿ ಸುಮಾರು 2 ಕಿ.ಮೀ ನಷ್ಟು ವಿಸ್ತರಿಸಿರುವ ಈ ಕಡಲತೀರದಲ್ಲಿ ನಿಂತು ಪ್ರವಾಸಿಗರು ಮಾಂಡೋವಿ ನದಿ ಹಾಗು ಅರೇಬಿಯನ್‌ ಸಮುದ್ರದ ಭವ್ಯತೆಯನ್ನು ವೀಕ್ಷಿಸಿ ಆನಂದಿಸಬಹುದು.

ತನ್ನ ಬಿಳಿ ಮರಳು, ನೀಲಿ ಬಣ್ಣದ ಸಮುದ್ರ, ಶಾಂತವಾಗಿ ಅಪ್ಪಳಿಸುವ ಅಲೆಗಳಿಗೆ ಈ ಬೀಚ್‌ ಹೆಸರುವಾಸಿಯಾಗಿದೆ. ಕಡಲತೀರವು ಎತ್ತರದ ಹಾಗು ತೂಗಾಡುವ ತಾಳೆ ಮರಗಳನ್ನು ಹೊಂದಿದೆ. ಕುಟುಂಬ ಪ್ರವಾಸ ಮಾಡಲು ಅಥವಾ ನವ ಜೋಡಿಗಳ ಹನಿಮೂನ್‌ಗೆ ಈ ಬೀಚ್‌ ಉತ್ತಮ ಆಯ್ಕೆ ಎನ್ನಬಹುದು.

Miramir Beach

ಡೊನಾ ಪೌಲಾ ಬೀಚ್
ಪಣಜಿಯಿಂದ ಕೇವಲ 9 ಕಿಲೋಮೀಟರ್ ದೂರದಲ್ಲಿರುವ ಡೊನಾ ಪೌಲಾ ಬೀಚ್‌ ಬಹಳ ಅದ್ಭುತವಾದ ಬೀಚ್‌. ಇಲ್ಲಿ ಸೂರ್ಯಾಸ್ತದ ಮನಮೋಹಕವಾದ ದೃಶ್ಯವನ್ನು ಕಣ್ತುಂಬಿಕೊಳ್ಳಬಹುದು. ಈ ಸುಂದರವಾದ ಪ್ರದೇಶವು ಮಾಂಡೋವಿ ಮತ್ತು ಜುವಾರಿ ನದಿಗಳು ಮತ್ತು ಅರೇಬಿಯನ್ ಸಮುದ್ರದ ಸಂಗಮದಲ್ಲಿದೆ. ಗೋವಾ ಪ್ರವಾಸ ಕೈಗೊಳ್ಳುವವರು ತಪ್ಪದೇ ಈ ಬೀಚ್‌ಗೆ ಹೋಗಬೇಕು.

Dona Paula Beach

ಬಾಂಬೋಲಿಮ್ ಬೀಚ್
ಈ ಬಾಂಬೋಲಿಮ್‌ ಬೀಚ್‌ ಪಣಜಿಯಲ್ಲಿನ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ಕುಟುಂಬದೊಂದಿಗೆ ಈ ಬೀಚ್‌ಗೆ ಪಿಕ್ನಿಕ್‌ಗೆ ಹೋಗಬಹುದು. ಆದರೆ ಹೆಚ್ಚಿನ ಪ್ರವಾಸಿಗರಿಗೆ ಈ ಬೀಚ್‌ ಕುರಿತು ತಿಳಿದಿಲ್ಲ. ಪಣಜಿಯಿಂದ ಕೇವಲ 7 ಕಿ.ಮೀ ದೂರದಲ್ಲಿರುವ ಈ ಕಡಲತೀರದಲ್ಲಿ ಹಿತವಾದ ವಾತಾವರಣವಿದೆ.ಅರೇಬಿಯನ್‌ ಸಮುದ್ರದ ಸೌಂದರ್ಯವನ್ನೂ ಅನುಭವಿಸಿ ಪುಳಕಿತರಾಗಬಹುದು.ಗೋವಾ ಪ್ರವಾಸ ಹೋಗುವವರು ಇಲ್ಲಿಗೆ ಮಿಸ್‌ ಮಾಡಿಕೊಳ್ಳದೆ ಹೋಗಬೇಕು. ಇಂತಹ ಜಾಗಗಳಿಗೆ ಹೋಗದಿದ್ದರೆ ಪ್ರವಾಸಿಗರಿಗೆ ನಷ್ಟ!

Bambolim Beach