ಏರ್ ಟ್ರಾವೆಲ್‌ನಲ್ಲಿ ನಿಮ್ಮ ಲಗೇಜು ಕಾಣೆಯಾದರೆ ಗಾಬರಿಯಾಗಬೇಡಿ: ಇಲ್ಲಿದೆ ಸಲಹೆ!
ಸಾಮಾನ್ಯವಾಗಿ ವಿಮಾನ ನಿಲ್ದಾಣ ಮತ್ತು ವಿಮಾನ ಪ್ರಯಾಣದ ವೇಳೆ ಸಾಕಷ್ಟು ಗೊಂದಲಗಳಾಗುತ್ತವೆ. ಪ್ರಯಾಣಿಕರು ಲಗೇಜು ಕಳೆದುಕೊಳ್ಳುವ ಸಾಧ್ಯತೆಗಳುರುತ್ತವೆ. ಆದರೆ ಹೀಗೆ ಮಾಡಿದರೆ ಲಗೇಜನ್ನು ಮತ್ತೆ ಪಡೆಯಬಹುದು.
ವಿಮಾನ ಪ್ರಯಾಣವು ಪ್ರತಿ ಬಾರಿಯೂ ಒಂದೊಂದು ರೀತಿಯ ಅನುಭವವನ್ನು ತಂದುಕೊಡುತ್ತದೆ. ಪ್ರಯಾಣಿಕರಿಗೆ ಸಂತಸದ ಜೊತೆಗೆ ಗೊಂದಲಗಳೂ ಇರುತ್ತವೆ. ಸಾಮಾನ್ಯವಾಗಿ ವಿಮಾನದಲ್ಲಿ ತೆರಳಬೇಕಾದರೆ ಪ್ರಯಾಣಿಕರು ತಮ್ಮ ಲಗೇಜುಗಳಿಗೆ ಕಾಯುತ್ತಾ ನಿಲ್ಲುತ್ತಾರೆ. ಎಷ್ಟೋ ಬಾರಿ ಲಗೇಜು ಕಳೆದುಹೋಗುವ ಸಾಧ್ಯತೆಯಿರುತ್ತದೆ. ಲಗೇಜುವಿಲ್ಲವೆಂದರೆ ಪ್ರಯಾಣಿಕರು ಆತಂಕಕ್ಕೆ ಒಳಗಾಗುವುದು ಸಹಜ. ಸಿಸಿಟಿವಿ ದೃಶ್ಯಾವಳಿಯಲ್ಲಿ ನೋಡಿದರೂ ಕೆಲವೊಮ್ಮೆ ಲಗೇಜುಗಳು ಪತ್ತೆಯಾಗುವುದಿಲ್ಲ. ಲಗೇಜು ಇಲ್ಲದಿದ್ದರೆ ಪ್ರಯಾಣಿಕರ ಯೋಜನೆಗಳು ಹಾಳಾಗುತ್ತವೆ. ಅವರ ಮೂಡ್ ಹಾಳಾಗುತ್ತದೆ. ಆದರೆ ತೀರಾ ಗೊಂದಲಕ್ಕೆ ಈಡಾಗುವ ಅಗತ್ಯವಿಲ್ಲ. ಲಗೇಜು ಮರಳಿಪಡೆಯಲು ಮತ್ತು ತಮ್ಮ ಲಗೇಜು ಎಲ್ಲಿದೆ ಎಂದು ಗೊತ್ತು ಮಾಡಿಕೊಳ್ಳಲು ಸಾಕಷ್ಟು ಸರಳ ಉಪಾಯ ಮತ್ತು ಸಲಹೆಗಳಿವೆ.
ಪರಿಸ್ಥಿತಿಯನ್ನು ಆರಾಮವಾಗಿ ಸುಧಾರಿಸಬಹುದು. ಭಯಪಡುವ ಅಗತ್ಯವಿಲ್ಲ. ಇಲಾಖೆಯ ಪ್ರಕಾರ, ವಿಮಾನಯಾನದಲ್ಲಿ ಕೇವಲ ಶೇ. 2% ಲಗೇಜುಗಳು ಅದರ ಹಕ್ಕುದಾರರಿಲ್ಲದೆ ಕಳೆದು ಹೋಗುತ್ತದೆ ಅಷ್ಟೇ. ಪ್ರಯಾಣಿಕರು ಮರಳಿ ತಮ್ಮ ಲಗೇಜನ್ನು ಪಡೆಯಲು ಹತ್ತಾರು ಮಾರ್ಗಗಳಿವೆ. ಅಂತಹ ಕೆಲವು ಸಲಹೆಗಳನ್ನು ನೀಡಲಾಗಿದೆ.
ವಿಮಾನ ಸಂಸ್ಥೆಯನ್ನು ಸಂಪರ್ಕಿಸುವುದು
ಲಗೇಜು ಕಳೆದುಕೊಂಡಾಗ ಮಾಡಬೇಕಾದ ಪ್ರಮುಖ ಕೆಲಸವೆಂದರೆ ನಿಮ್ಮ ವಿಮಾನಯಾನ ಸಂಸ್ಥೆಯ ಪ್ರತಿನಿಧಿಯನ್ನು ಕೌಂಟರ್‌ನಲ್ಲಿ ಭೇಟಿ ಮಾಡಿ ಕೂಡಲೇ ನಿಮ್ಮ ಸಮಸ್ಯೆಯನ್ನು ಅವರಿಗೆ ತಿಳಿಸುವುದು. ನೀವು ಪರಿಶೀಲಿಸಿದ ಪ್ರತಿಯೊಂದು ಬ್ಯಾಗ್‌ಗೆ ಲಗೇಜ್ ರಶೀದಿಯನ್ನು ಹೊಂದಿರುವಿರಾ ಎಂದು ಖಚಿತಪಡಿಸಿಕೊಳ್ಳಿ. ಇದರಿಂದ ನಿಮ್ಮ ಲಗೇಜ್ ತಲುಪುವುದರಲ್ಲಿ ವಿಳಂಬವಾಗಿದೆಯೇ ಅಥವಾ ಸಂಪೂರ್ಣವಾಗಿ ಕಳೆದುಹೋಗಿದೆಯೇ ಎಂದು ತಿಳಿಯುತ್ತದೆ. ನಿಮ್ಮ ಲಗೇಜ್ ಸಂಪೂರ್ಣವಾಗಿ ಕಳೆದುಹೋದರೆ. ಗ್ರಾಹಕ ಸೇವೆಯ ಮೂಲಕವೂ ಲಗೇಜನ್ನು ಪತ್ತೆಹಚ್ಚಬಹುದು.
ಕೆಲವು ಪ್ರಮುಖ ಸಲಹೆಗಳು
- ಹಳೆಯ ಟ್ಯಾಗ್‌ಗಳನ್ನು ತೆಗೆದುಹಾಕಿ, ಇದರಿಂದಾಗಿ ಲಗೇಜು ಸಾಗಿಸುವ ಬಗ್ಗೆ ಯಾರಿಗೂ ಗೊಂದಲ ಉಂಟಾಗುವುದಿಲ್ಲ.
- ನಿಮ್ಮ ವಿಮಾನಕ್ಕೆ ಚೆಕ್-ಇನ್ ಮಾಡುವಾಗ, ನಿಮ್ಮ ಬ್ಯಾಗ್‌ಗಳು ನಿಮ್ಮ ಡೆಸ್ಟಿನೇಷನ್‌ಗೆ ತಲುಪಿರುತ್ತದೆ. ಬಹುಮುಖ್ಯವಾಗಿ ಸರಿಯಾದ ಟ್ಯಾಗ್‌ಗಳೊಂದಿಗೆ ಲಗತ್ತಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ.
- ನಿಮ್ಮ ಸಂಪರ್ಕ ವಿವರಗಳನ್ನು ನಿಮ್ಮ ಲಗೇಜ್‌ನಲ್ಲಿ ಇರಿಸಿ.
- ನಿಮ್ಮ ಸೂಟ್‌ಕೇಸ್ ವಿಭಿನ್ನವಾಗಿ ಕಾಣುವಂತೆ ಏನನ್ನಾದರೂ ಲಗತ್ತಿಸಿ. ಇದರಿಂದ ಒಂದೇ ರೀತಿಯ ಬ್ಯಾಗ್‌ಗಳು ಅಥವಾ ಸೂಟ್‌ಕೇಸ್ ಹೊಂದಿದ್ದರೆ ಅದನ್ನು ತೆಗೆದುಕೊಳ್ಳುವುದಿಲ್ಲ ಮತ್ತು ಗೊಂದಲಕ್ಕೆ ಈಡಾಗುವುದಿಲ್ಲ.
- ನಿಮ್ಮ ಲಗೇಜಿನ ಫೋಟೊವನ್ನು ಕ್ಲಿಕ್ ಮಾಡಿಕೊಂಡು ಫೋನ್‌ನಲ್ಲಿ ಸೇವ್ ಮಾಡಿ ಇಟ್ಟುಕೊಳ್ಳುವುದು ಒಳಿತು.
ಇತ್ತೀಚೆಗೆ ವಿಮಾನ ಪ್ರಯಾಣವು ಸಾಮಾನ್ಯವಾಗಿದೆ. ಆದರೆ ಪ್ರಯಾಣದ ಸಮಯದಲ್ಲಿ ತೊಂದರೆಗಳಾಗುತ್ತವೆ. ಪ್ರಯಾಣಿಕರು ಅದಕ್ಕೆ ಗೊಂದಲಗೊಳ್ಳದೆ ಸಲಹೆ ಸೂಚನೆಗಳನ್ನು ಪಡೆದು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು.