2025ರ ವಿಶ್ವದ ಅತ್ಯುತ್ತಮ 50 ಬೀಚ್‌ಗಳ (Top 50 Beach in the world) ಪಟ್ಟಿಯಲ್ಲಿ ಆಸ್ಟ್ರೇಲಿಯಾದ (Australia) ಮೂರು ವಿಶಿಷ್ಟ ಬೀಚ್ ಗಳೂ ಸೇರಿವೆ. ಪಶ್ಚಿಮ ಆಸ್ಟ್ರೇಲಿಯಾ ಮತ್ತು ಕ್ವೀನ್ಸ್‌ಲ್ಯಾಂಡ್ ನಲ್ಲಿ ಬರುವ ಈ ಬೀಚ್‌ಗಳು ಹಲವಾರು ವೈವಿಧ್ಯತೆಯಿಂದ ಕಂಗೊಳಿಸುತ್ತವೆ.

11 ಟರ್ಕಾಯ್ಸ್ ಬೇ (Turquoise Bay), ಪಶ್ಚಿಮ ಆಸ್ಟ್ರೇಲಿಯಾ:

ಈ ಬೀಚ್ 2025ರಲ್ಲಿ ಜಗತ್ತಿನ 11ನೇ ಅತ್ಯುತ್ತಮ ಬೀಚ್ ಎಂಬ ಹಿರಿಮೆ ಹೊಂದಿರುವ ಈ ಬೀಚ್ ಟರ್ಕಾಯ್ಸ್ ಬಣ್ಣದ ನೀರಿನಿಂದ ಕಂಗೊಳಿಸುತ್ತದೆ. ಕೇಪ್ ರೇಂಜ್ ನ್ಯಾಷನಲ್ ಪಾರ್ಕ್‌ನೊಳಗಿದ್ದು ನಿಂಗಾಲೂ ರೀಫ್‌ಗೆ ನೇರ ಪ್ರವೇಶ ಹೊಂದಿದ್ದು ಸ್ಕೂಬಾ ಡೈವಿಂಗ್ ಮತ್ತು ಡ್ರಿಫ್ಟ್ ಸ್ನೋರ್ಕಲಿಂಗ್‌ಗೆ ಫೇಮಸ್.

21 ವಾರ್ಟನ್ ಬೀಚ್ (Wharton Beach), ಪಶ್ಚಿಮ ಆಸ್ಟ್ರೇಲಿಯಾ:

ಇದು 21ನೇ ಸ್ಥಾನವನ್ನು ಪಡೆದಿದ್ದು, ಡ್ಯೂಕ್ ಆಫ್ ಆರ್ಡಿಯನ್ಸ್ ಬೇ ಬಳಿ ಇರುವ ಈ ಬೀಚ್ ತೀರಾ ಪ್ರತ್ಯೇಕ ಮತ್ತು ಅತ್ಯಂತ ಸುಂದರ. ಈ ಸ್ಥಳದಲ್ಲಿ ಜನಸಂಚಾರ ಕಡಿಮೆ, ಶಾಂತಿಯುತ ಪರಿಸರ ಪ್ರವಾಸಿ ಪ್ರೇಮಿಗಳ ನೆಚ್ಚಿನ ತಾಣವಾಗಿದೆ.

37 ನ್ಯೂಡಿ ಬೀಚ್ (Nudey Beach), ಕ್ವೀನ್ಸ್‌ಲ್ಯಾಂಡ್:

ಫಿಟ್‌ಝ್ರಾಯ್ ದ್ವೀಪದಲ್ಲಿ ಇರುವ ಈ ಬೀಚ್ ಕ್ವೀನ್ಸ್‌ಲ್ಯಾಂಡ್‌ನ ಕರಾವಳಿ ವೈಭವವನ್ನು ತೋರಿಸುತ್ತದೆ. ಗ್ರೇಟ್ ಬ್ಯಾರಿಯರ್ ರೀಫ್‌ಗೆ ನೇರ ಸಂಪರ್ಕವಿರುವ ಈ ಬೀಚ್ ಬೋಟು ಮೂಲಕ ಮಾತ್ರ ತಲುಪಬಹುದಾದುದು ಇದನ್ನು ಇನ್ನಷ್ಟು ವಿಶಿಷ್ಟಗೊಳಿಸಿದೆ. ಸುದೀರ್ಘ ಮರದ ಕಾಡು, ನಿಸರ್ಗ ನಿಶ್ಯಬ್ದತೆ ಮತ್ತು ಸ್ಪಷ್ಟ ನೀರಿನ ಮೂಲಕ ಇದು ಪ್ರವಾಸಿಗರ ಹೃದಯ ಗೆದ್ದಿದೆ.

ಜಗತ್ತಿನ ಟಾಪ್ 3 ಬೀಚ್‌ಗಳು:

2025ರ ಪಟ್ಟಿಯ ಟಾಪ್ 3 ಸ್ಥಾನಗಳಲ್ಲಿ ಇಟಲಿಯ ಕಾಲಾ ಗೊಲೋರಿಟ್ಜೆ, ಫಿಲಿಪೈನ್ಸ್‌ನ ಎಂಟಲೂಲಾ ಬೀಚ್ ಮತ್ತು ಥೈಲ್ಯಾಂಡ್‌ನ ಬ್ಯಾಂ ಬಾವ್ ಬೀಚ್ ಸ್ಥಾನ ಪಡೆದಿವೆ.