ಭಾರತದ ಪ್ರವಾಸಿಗರಿಗೆ ಆರೋಗ್ಯ ಸಲಹೆ ನೀಡಿದ ಥೈಲ್ಯಾಂಡ್ ಸರ್ಕಾರ: ಯಾಕೆ? ಇಲ್ಲಿದೆ ಮಾಹಿತಿ
ಭಾರತದ ಪ್ರವಾಸಿಗರಿಗೆ ಥೈಲ್ಯಾಂಡ್ ದೇಶವು ಅಚ್ಚುಮೆಚ್ಚಿನ ತಾಣವಾಗಿದೆ. ಅಲ್ಲಿನ ಹತ್ತಾರು ಪ್ರವಾಸಿ ತಾಣಗಳು ಎಂಥವರನ್ನೂ ಸೆಳೆಯುತ್ತದೆ. ಈ ನಡುವೆ ಥೈಲ್ಯಾಂಡ್ ಸರ್ಕಾರವು ಭಾರತೀಯ ಪ್ರವಾಸಿಗರಿಗೆ ಆರೋಗ್ಯ ಸಲಹೆಗಳ ಜೊತೆಗೆ ಕೆಲವು ಎಚ್ಚರಿಕೆಗಳನ್ನು ನೀಡಿದೆ.
ಭಾರತದ ಪ್ರವಾಸಿಗರಿಗೆ ಥೈಲ್ಯಾಂಡ್ ದೇಶವು ಅಚ್ಚುಮೆಚ್ಚಿನ ತಾಣವಾಗಿದೆ. ಅಲ್ಲಿನ ಹತ್ತಾರು ಪ್ರವಾಸಿ ತಾಣಗಳು ಎಂಥವರನ್ನೂ ಸೆಳೆಯುತ್ತದೆ. ಗೆಳೆಯರು, ಪ್ರೇಮಿಗಳು ಮತ್ತು ಹೊಸದಾಗಿ ಮದುವೆಯಾದ ನವ ಜೋಡಿಗಳು ಥೈಲ್ಯಾಂಡ್ ಪ್ರವಾಸ ಕೈಗೊಳ್ಳುತ್ತಾರೆ. ವಾರಗಟ್ಟಲೆ ಅಲ್ಲಿ ಸಮಯ ಕಳೆಯಲು ಬಯಸುತ್ತಾರೆ. ಈ ನಡುವೆಯೇ ಥೈಲ್ಯಾಂಡ್ ಸರ್ಕಾರವು ಭಾರತೀಯ ಪ್ರವಾಸಿಗರಿಗೆ ಆರೋಗ್ಯ ಸಲಹೆಗಳ ಜೊತೆಗೆ ಕೆಲವು ಎಚ್ಚರಿಕೆಗಳನ್ನು ನೀಡಿದೆ.
ಸರಿ ಸುಮಾರು 30 ವರ್ಷಗಳ ನಂತರ ಥೈಲ್ಯಾಂಡ್ ದೇಶದಲ್ಲಿ ಆಂಥ್ರಾಕ್ಸ್ ರೋಗ ಸಂಬಂಧಿತ ಸಾವು ದೃದಡಪಟ್ಟಿದೆ. ಸೋಂಕಿನ ಎರಡನೇ ಪ್ರಕರಣ ಖಚಿತವಾದ ನಂತರ ಥಾಯ್ ಸರ್ಕಾರ ಪ್ರವಾಸಿಗರಿಗೆ ಎಚ್ಚರಿಕೆ ನೀಡಿದೆ. ಎರಡೂ ಪ್ರಕರಣಗಳು ಲಾವೋಸ್ ಗಡಿಯ ಸಮೀಪವಿರುವ ಮುಕ್ದಹಾನ್ ಪ್ರಾಂತ್ಯದಲ್ಲಿ ಪತ್ತೆಯಾಗಿದ್ದು, ಸೋಂಕಿತ ಜಾನುವಾರುಗಳೊಂದಿಗೆ ನೇರ ಸಂಪರ್ಕ ಹೊಂದಿದ್ದ ಜನರಲ್ಲಿ ರೋಗ ಕಾಣಿಸಿಕೊಂಡಿದೆ. ಸಾಮಾನ್ಯವಾಗಿ ಜಾನುವಾರುಗಳ ಮೇಲೆ ಪರಿಣಾಮ ಬೀರುವ ಬ್ಯಾಕ್ಟೀರಿಯಾದ ಸೋಂಕಾದ ಆಂಥ್ರಾಕ್ಸ್ ನುಷ್ಯರಿಗೆ ಮಾರಕವಾಗಲಿದೆ. ಈ ರೋಗದಿಂದ ಚರ್ಮದ ಹುಣ್ಣುಗಳು, ಗುಳ್ಳೆಗಳು ಮತ್ತು ಊದಿಕೊಂಡ ದುಗ್ಧರಸ ಗ್ರಂಥಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.
ಈ ಪ್ರಕರಣಗಳನ್ನು ಥೈಲ್ಯಾಂಡ್ ಸರ್ಕಾರವು ಗಂಭೀರವಾಗಿ ಪರಿಗಣಿಸಿದೆ. ಥಾಯ್ ಆರೋಗ್ಯ ಅಧಿಕಾರಿಗಳು ಮೇಲ್ವಿಚಾರಣೆ ವಹಿಸಿಕೊಂಡಿದ್ದಾರೆ. ಮಾಂಸ ವ್ಯಾಪಾರಿಗಳು ಮತ್ತು ಹಸಿ ಮಾಂಸ ಸೇವಿಸಿದವರು ಸೇರಿದಂತೆ 638 ವ್ಯಕ್ತಿಗಳನ್ನು ಕ್ವಾರಂಟೈನ್‌ನಲ್ಲಿ ಇರಿಸಿ ಚಿಕಿತ್ಸೆ ನೀಡುತ್ತಿದ್ದಾರೆ. ಪ್ರವಾಸಿಗರು ವಿಶೇಷವಾಗಿ ಈಶಾನ್ಯ ಪ್ರದೇಶಗಳಲ್ಲಿ ಸಾಧ್ಯವಾದಷ್ಟು ಎಚ್ಚರಿಕೆಯಿಂದಿರಬೇಕು ಮತ್ತು ಕೆಲವು ಸ್ಥಳೀಯ ತಿಂಡಿ ತಿನಿಸುಗಳನ್ನು ತಿನ್ನಬಾರದೆಂಬ ಎಚ್ಚರಿಕೆ ನೀಡಿದೆ. ಅದರಲ್ಲೂ ಕಚ್ಚಾ ಮತ್ತು ಬೇಯಿಸಿದ ಮಾಂಸ ಪದಾರ್ಥಗಳನ್ನು ತಿನ್ನಬಾರದು ಎಂದು ಸಲಹೆ ನೀಡಿದೆ.
ಆರೋಗ್ಯ ಸಲಹೆಯ ಜೊತೆಗೆ ಥೈಲ್ಯಾಂಡ್ ತನ್ನ ಭದ್ರತೆಯನ್ನು ಹೆಚ್ಚಿಸಿಕೊಂಡಿದೆ. ಸಾರ್ವಜನಿಕ ಆರೋಗ್ಯಸಲಹೆಗಳನ್ನು ನೀಡುತ್ತಿದೆ. ಮೇ 1, 2025 ರಿಂದ, ಎಲ್ಲಾ ವಿದೇಶಿ ಪ್ರಯಾಣಿಕರು ಥೈಲ್ಯಾಂಡ್ ದೇಶವನ್ನು ಪ್ರವೇಶಿಸುವ ಮೊದಲು ಡಿಜಿಟಲ್ ಎಂಟ್ರಿ ಕಾರ್ಡ್ (TDAC) ಅನ್ನು ಭರ್ತಿ ಮಾಡಬೇಕು ಎಂಬುದಾಗಿ ಹೇಳಿದೆ.
ಪ್ರವಾಸಿಗರಿಗೆ ಥೈಲ್ಯಾಂಡ್ ನೀಡಿದ ಸಲಹೆಗಳೇನು?
- ಸುರಕ್ಷಿತ ಪ್ರವಾಸಕ್ಕಾಗಿ ಪ್ರವಾಸಿಗರು ತಮ್ಮ ಭೇಟಿಯ ಮೊದಲು ಅಥವಾ ಭೇಟಿಯ ಸಮಯದಲ್ಲಿ ಥಾಯ್ ಅಧಿಕಾರಿಗಳು ಮತ್ತು ಭಾರತೀಯ ವಿದೇಶಾಂಗ ಸಚಿವಾಲಯಕ್ಕೆ ಮಾಹಿತಿ ನೀಡಬೇಕು. ಇತ್ತೀಚಿನ ಪ್ರಯಾಣ ಸಲಹೆಗಳು ಅಥವಾ ಆರೋಗ್ಯ ಸಂಬಂಧ ಅಪ್ಡೇಟ್‌ಗಳನ್ನು ಪರಿಶೀಲಿಸಲು ಮರೆಯುವಂತಿಲ್ಲ.
- ಆಂಥ್ರಾಕ್ಸ್ ಸೋಂಕಿನ ಪ್ರಕರಣಗಳು ವರದಿಯಾಗಿರುವ ಪ್ರದೇಶಗಳಲ್ಲಿ ಕಚ್ಚಾ ಅಥವಾ ಬೇಯಿಸದ ಮಾಂಸವನ್ನು ಸೇವಿಸುವಂತಿಲ್ಲ.
ಪ್ರವಾಸದ ಮೊದಲು ಶಿಫಾರಸು ಮಾಡಲಾದ ವ್ಯಾಕ್ಸಿನೇಷನ್‌ಗಳ ಬಗ್ಗೆ ವೈದ್ಯರೊಂದಿಗೆ ಮಾತನಾಡಬೇಕು. ಪ್ರಯಾಣಕ್ಕೂ ಮೊದಲು ರೋಗ ನಿರೋಧಕ ಶಕ್ತಿ ಮೆಡಿಸನ್ ಗಳು, ಅಗತ್ಯವಿರುವ ಮಾತ್ರೆ ಮತ್ತು ಇನ್ನಿತರ ಔಷಧಿಗಳನ್ನು ಇಟ್ಟುಕೊಳ್ಳಬೇಕು. ವೈದ್ಯಕೀಯ ಸಲಹೆ ಕಡ್ಡಾಯ.