ಮೆಕ್ಕಾ - ಮದೀನಾ ಯಾತ್ರಾರ್ಥಿಗಳಿಗೆ ವೀಸಾ, ಪ್ರಯಾಣ ವ್ಯವಸ್ಥೆಯ ವೇಳಾಪಟ್ಟಿ ಬಿಡುಗಡೆ
ಸೌದಿ ಅರೇಬಿಯಾದ ಹಜ್ ಮತ್ತು ಉಮ್ರಾ ಸಚಿವಾಲಯವು ಅಧಿಕೃತವಾಗಿ 1447 ಹಿಜ್ರಿ (2025-26) ವರ್ಷದ ಉಮ್ರಾ ಯಾತ್ರೆಯ ಕಾಲಪಟ್ಟಿಕೆಯನ್ನು ಬಿಡುಗಡೆ ಮಾಡಿದೆ.
ಸೌದಿ ಅರೇಬಿಯಾದ ಹಜ್ ಮತ್ತು ಉಮ್ರಾ ಸಚಿವಾಲಯವು ಅಧಿಕೃತವಾಗಿ 1447 ಹಿಜ್ರಿ (2025-26) ವರ್ಷದ ಉಮ್ರಾ ಯಾತ್ರೆಯ ಕಾಲಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಕ್ರಮವು ಯಾತ್ರಾರ್ಥಿಗಳ ಅನುಭವವನ್ನು ಮತ್ತಷ್ಟು ಸುಗಮಗೊಳಿಸಲು, ವೀಸಾ ಪ್ರಕ್ರಿಯೆ, ಪ್ರಯಾಣ ವ್ಯವಸ್ಥೆ ಹಾಗೂ ನಿರ್ಗಮನ ವೇಳಾಪಟ್ಟಿಗಳನ್ನು ತಿಳಿಸುತ್ತದೆ.
ಈ ಹೊಸ ಯೋಜನೆ ಅಂತಾರಾಷ್ಟ್ರೀಯ ಏಜೆಂಟುಗಳು, ಸ್ಥಳೀಯ ಉಮ್ರಾ ಕಂಪನಿಗಳು ಮತ್ತು ಯಾತ್ರಾರ್ಥಿಗಳ ನಡುವೆ ಸಮನ್ವಯವನ್ನು ಸುಧಾರಿಸುತ್ತದೆ, ಸೇವೆಗಳ ಗುಣಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಉಚಿತವಾಗಿ ಯಾತ್ರೆ ನಡೆಸಲು ನೆರವಾಗುತ್ತದೆ.
ಮುಖ್ಯ ದಿನಾಂಕಗಳು:
ಮೇ 27, 2025 (29 ದುಲ್ ಕ಼ಾದಾ 1446): ವಿದೇಶಿ ಏಜೆಂಟ್‌ಗಳೊಂದಿಗೆ ಒಪ್ಪಂದಗಳನ್ನು ಪೂರ್ಣಗೊಳಿಸಲು ಉಮ್ರಾ ಕಂಪನಿಗಳ ಕೊನೆಯ ದಿನಾಂಕ.
ಜೂನ್ 10, 2025 (14 ದುಲ್ ಹಿಜ್ಜಾ 1446): ಉಮ್ರಾ ವೀಸಾ ಪ್ರಕ್ರಿಯೆ ಅಧಿಕೃತವಾಗಿ ಆರಂಭವಾಗುವ ದಿನ.
ಜೂನ್ 11, 2025 (15 ದುಲ್ ಹಿಜ್ಜಾ 1446): ಮೊದಲ ಅಂತಾರಾಷ್ಟ್ರೀಯ ಯಾತ್ರಾರ್ಥಿಗಳ ಆಗಮನ ಆರಂಭ.
ಜನವರಿ 20, 2026 (1 ಶಾಬಾನ್ 1447): ಅಂತಿಮವಾಗಿ ಅರ್ಹ ಏಜೆಂಟ್‌ಗಳಿಂದ ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನ.
ಮಾರ್ಚ್ 20, 2026 (1 ಶವ್ವಾಲ್ 1447): ಉಮ್ರಾ ವೀಸಾ ನೀಡಲು ಕೊನೆಯ ದಿನಾಂಕ.
ಏಪ್ರಿಲ್ 3, 2026 (15 ಶವ್ವಾಲ್ 1447): ಯಾತ್ರಾರ್ಥಿಗಳು ಸೌದಿ ಪ್ರವೇಶಿಸಲು ಕೊನೆಯ ದಿನ.
ಏಪ್ರಿಲ್ 18, 2026 (1 ದುಲ್ ಕ಼ಾದಾ 1447): ಯಾತ್ರಾರ್ಥಿಗಳು ಸೌದಿ ತೊರೆಯಲು ಕೊನೆಯ ದಿನಾಂಕ.
ಸುಧಾರಿತ ಸೌಕರ್ಯಗಳು
2025ರ ಮೊದಲ ತ್ರೈಮಾಸಿಕದಲ್ಲೇ 6.5 ಮಿಲಿಯನ್ ಅಂತಾರಾಷ್ಟ್ರೀಯ ಯಾತ್ರಾರ್ಥಿಗಳು ಉಮ್ರಾ ನೆರವೇರಿಸಿದ್ದು, ಇದು ಕಳೆದ ವರ್ಷಕ್ಕಿಂತ 11% ಹೆಚ್ಚಾಗಿದೆ ಎಂದು ಸಚಿವ ಡಾ. ತೌಫಿಕ್ ಅಲ್-ರಬಿಯಾ ಮದೀನಾದಲ್ಲಿ ನಡೆದ ಉಮ್ರಾ ಮತ್ತು ಜಿಯಾರಾ ಮೇಳದಲ್ಲಿ ಪ್ರಕಟಿಸಿದರು.
ಇಸ್ಲಾಂನಲ್ಲಿ ಹಜ್ ಕಡ್ಡಾಯವಾಗಿದ್ದು, ನಿರ್ದಿಷ್ಟ ದಿನಗಳಲ್ಲಿ ಮಾತ್ರ ನೆರವೇರಿಸಬೇಕು. ಆದರೆ ಉಮ್ರಾ ಸ್ವಯಂಪ್ರೇರಿತ ಯಾತ್ರೆಯಾಗಿದ್ದು, ವರ್ಷದಲ್ಲಿ ಯಾವ ಸಮಯದಲ್ಲಾದರೂ ನೆರವೇರಿಸಬಹುದಾದ ಪವಿತ್ರ ಯಾತ್ರೆಯಾಗಿದೆ. ಈ ಮೂಲಕ ಲಕ್ಷಾಂತರ ಮಸ್ಲಿಂ ಧರ್ಮಾನುಯಾಯಿಗಳು ಮೆಕ್ಕಾ-ಮದೀನಾಗೆ ಭೇಟಿ ನೀಡಿ ಆಧ್ಯಾತ್ಮಿಕ ತೃಪ್ತಿಯನ್ನು ಪಡೆಯಲು ಸದಾ ಉತ್ಸುಕರಾಗಿರುತ್ತಾರೆ.