• ಯಾಮಿ ನೆಲ್ಲಿಕ್ಕಳಯ

ಕರ್ನಾಟಕದ ಸುಂದರವಾದ ಗಿರಿಧಾಮಗಳ ನಾಡೆಂದೇ ಪ್ರಸಿದ್ಧವಾದ ಸಕಲೇಶಪುರವೆಂದರೆ ಎಲ್ಲರಿಗೂ ಅಚ್ಚಮೆಚ್ಚು. ಇಲ್ಲಿನ ವಾತಾವರಣಕ್ಕೆ ಮಂತ್ರಮುಗ್ಧರಾಗಲು ರಾಜ್ಯದ ನಾನಾ ಭಾಗಗಳಿಂದಲೇ ಅಲ್ಲದೆ, ಇತರ ರಾಜ್ಯಗಳಿಂದಲೂ ಜನರು ಇಲ್ಲಿಗೆ ಭೇಟಿ ನೀಡುತ್ತಾರೆ. ಪ್ರಾಚೀನ ಕೋಟೆಯಿಂದ ಹಿಡಿದು ದೇವಾಲಯ, ಜಲಪಾತಗಳವರೆಗೆ ಎಲ್ಲವೂ ಒಂದೇ ಗಿರಿಧಾಮದಲ್ಲಿ ಕಣ್ತುಂಬಿಕೊಳ್ಳುವ ಅವಕಾಶ ಸಕಲೇಶಪುರದಲ್ಲಿ ಲಭ್ಯವಾಗುವುದರಿಂದ ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆಯಲ್ಲೂ ದಿನೇ ದಿನೇ ಏರಿಕೆ ಕಂಡಿದೆ.

ಪಶ್ಚಿಮ ಘಟ್ಟಗಳಲ್ಲಿ ನೆಲೆಸಿರುವ ಸಕಲೇಶಪುರವು ಚಹಾ, ಕಾಫಿ ಮತ್ತು ವಿಶಾಲವಾದ ಮಸಾಲೆ ತೋಟಗಳಿಂದ ಆವೃತವಾಗಿದ್ದು, ಇಲ್ಲಿನ ಪ್ರವಾಸಿ ತಾಣಗಳಲ್ಲಿ ತಮ್ಮ ಖುಷಿ ಕ್ಷಣಗಳನ್ನು ಕಂಡುಕೊಳ್ಳಲು ಬಯಸುವ ಜನರೇ ಹೆಚ್ಚು. ಹೀಗೆ ಸುತ್ತಾಟಕ್ಕಾಗಿ ಇಲ್ಲಿಗೆ ಬರುವ ಮಂದಿಗೆ ಉಳಿದುಕೊಳ್ಳಲು ಅನೇಕ ಹೊಟೇಲ್‌ಗಳು, ಹೋಮ್‌ ಸ್ಟೇ, ರೆಸಾರ್ಟ್‌ಗಳು ಇಲ್ಲಿವೆಯಾದರೂ ಅವುಗಳಲ್ಲಿ ಬೆಂಗಳೂರಿನಿಂದ ಕೇವಲ 2 ಗಂಟೆಗಳ ದೂರದಲ್ಲಿದ್ದು, ಬಹು ಬೇಡಿಕೆಯನ್ನು ಪಡೆದುಕೊಂಡಿರುವುದು ವಿಂಟೇಜ್‌ ವಿಲೇಜ್‌ ರೆಸಾರ್ಟ್‌.

resort entrance

ಹೆಸರೇ ಹೇಳುವಂತೆ ಗ್ರಾಮೀಣ ಸೊಗಡನ್ನು ನಗರಿಗರಿಗೆ ಪರಿಚಯಿಸುವ ಉದ್ದೇಶದೊಂದಿಗೆ ನಿರ್ಮಾಣಗೊಂಡಿರುವ ವಿಂಟೇಜ್‌ ವಿಲೇಜ್‌ ರೆಸಾರ್ಟ್‌, 42 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದ್ದು, ಅರಣ್ಯ ಪ್ರದೇಶ, ಹಚ್ಚಹಸಿರಿನ ಅಡಿಕೆ, ತೆಂಗಿನ ತೋಟಗಳ ನಡುವೆಯಿದೆ. ಹೆಸರಿಗೆ ತಕ್ಕಂತೆ ವಿಂಟೇಜ್ ಫೀಲ್‌ನಲ್ಲಿ ನಿರ್ಮಾಣ ಮಾಡಲಾಗಿರುವ ಈ ರೆಸಾರ್ಟ್‌ನ ಗೋಡೆಗಳಲ್ಲಿರುವ ವಿಭಿನ್ನವಾದ ಗ್ರಾಮೀಣ ಕಲಾಕೃತಿಗಳು, ಕಲರ್ ಫುಲ್ ಆರ್ಕಿಟೆಕ್ಚರ್ ಇಲ್ಲಿನ ವಿಶೇಷ.

ವಾಸ್ತವ್ಯಕ್ಕೆ ಆಯ್ಕೆಗಳು ಹಲವು

ವಿಂಟೇಜ್‌ ರೂಮ್ಸ್‌

ಹೆವನ್ ರೂಮ್ಸ್

ಕಾಟೇಜಸ್

ಸ್ಟುಡಿಯೋ ರೂಮ್ಸ್

ಬಂಕ್ ಹೈ – ಡಾರ್ಮೆಟ್ರಿ

ಮಡ್ ರೂಮ್ಸ್‌

ಹೋಲೋ ಎಸ್ಕೇಪ್‌ ರೂಮ್‌

Swimming pool in resort

ವಿಹಾರಕ್ಕಷ್ಟೇ ಅಲ್ಲ, ಆಹಾರಕ್ಕೂ ಸೈ

ಸಕಲೇಶಪುರ ಆಸುಪಾಸಿನ ರೆಸಾರ್ಟ್‌ಗಳೆಂದ ಮೇಲೆ ವಾಸ್ತವ್ಯದ ಜತೆಗೆ ರುಚಿಕರವಾದ ಆಹಾರಕ್ಕೆ ಮೊದಲ ಆದ್ಯತೆ ನೀಡಲಾಗುತ್ತದೆ. ಅದರಂತೆಯೇ ರೆಸಾರ್ಟ್‌ನೊಳಗೆ ಇರುವಂಥ ರೆಸ್ಟೋರೆಂಟ್ ವೈಬ್ರೆಂಟ್ ಹಾಗೂ ಕ್ಲಾಸಿ ಲುಕ್‌ನಲ್ಲಿ ಅತ್ಯದ್ಭುತವಾಗಿದ್ದು, ರೆಸಾರ್ಟ್‌ನಲ್ಲಿ ಉಳಿದುಕೊಳ್ಳುವವರಿಗಾಗಿ ಮೂರು ಹೊತ್ತು ಅನ್‌ ಲಿಮಿಟೆಡ್‌ ಫುಡ್ ಲಭ್ಯವಿದೆ. ವೆಜ್‌ ಮಾತ್ರವಲ್ಲದೆ ನಾನ್‌ ವೆಜ್‌ ಪ್ರಿಯರಿಗಾಗಿಯೂ ಇಲ್ಲಿ ಅನೇಕ ಆಯ್ಕೆಗಳಿದ್ದು, ರುಚಿಯ ಬಗ್ಗೆ ಎರಡು ಮಾತಿಲ್ಲ.

ಗೇಮ್ಸ್‌ಗೂ ಸ್ಪೇಸ್ ಬೇಕಲ್ಲ…

ರೆಸಾರ್ಟ್‌ನ ಸುಂದರ ವಾತಾವರಣ, ಹೊಟ್ಟೆ ತುಂಬಾ ರುಚಿಕರ ಖಾದ್ಯಗಳನ್ನಷ್ಟೇ ಸವಿಯುವುದಲ್ಲ. ಇಲ್ಲಿ ಅಡ್ವೆಂಚರ್ ಗೇಮ್ಸ್, ಇಂಡೋರ್‌ ಹಾಗೂ ಔಟ್‌ ಡೋರ್‌ ಗೇಮ್ಸ್‌ಗೂ ಅವಕಾಶವಿದೆ. ಶಟಲ್‌, ಬ್ಯಾಡ್ಮಿಂಟನ್‌, ಕ್ರಿಕೆಟ್‌, ವಾಲಿಬಾಲ್‌, ಸ್ಕೈ ಸೈಕ್ಲಿಂಗ್‌, ರೋಪ್‌ ಆಕ್ಟಿವಿಟಿಗಳು, ಟೇಬಲ್‌ ಟೆನಿಸ್‌, ಚೆಸ್‌, ಕೇರಂ ಸೇರಿದಂತೆ ಹಲವಾರು ಗೇಮ್ಸ್‌ಗಳನ್ನು ಆಡುತ್ತಾ ಖುಷಿಯಿಂದ ಕಾಲಕಳೆಯಬಹುದು. ರೆಸಾರ್ಟ್ ಸುತ್ತಲೂ ಸೈಕಲ್ ಏರಿ ಸವಾರಿಗೂ ಅವಕಾಶವಿದೆ.

Cottages in resort

ಹತ್ತಿರದಲ್ಲೇ ಇದೆ, ಮಿಸ್ ಮಾಡಿಕೊಳ್ಳಬೇಡಿ:

ಎತ್ತಿನಭುಜ, ಬೆಟ್ಟದ ಭೈರವೇಶ್ವರ, ಅಬ್ಬೆ ಫಾಲ್ಸ್ ಮಾತ್ರವಲ್ಲದೆ ಇಲ್ಲಿಂದ ಧರ್ಮಸ್ಥಳ ಹಾಗೂ ಸೌತಡ್ಕ ದೇವಾಲಯಗಳೂ ಹತ್ತಿರದಲ್ಲೇ ಇದೆ.

ವಿಂಟೇಜ್‌ ವಸ್ತುಗಳನ್ನು ಇಲ್ಲಿ ಪ್ರದರ್ಶನಕ್ಕಿಟ್ಟಿದ್ದು, ಹಳೆಯ ಕಾರು, ಸ್ಟೂಟರ್‌ಗಳನ್ನು ಕಾಣಬಹುದು. ಇವುಗಳನ್ನು ಬಳಕೆ ಮಾಡಿಕೊಂಡು ವಿಂಟೇಜ್ ಶೈಲಿಯಲ್ಲಿ ಪ್ರಿ ವೆಡ್ಡಿಂಗ್‌ ಶೂಟ್‌ ಮಾಡಿಸಿಕೊಳ್ಳಬೇಕು ಅಂದುಕೊಂಡರೆ ಚಿಂತಿಸಬೇಡಿ..ಅದಕ್ಕೂ ಅವಕಾಶ ಮಾಡಿಕೊಡುತ್ತಾರೆ. ಒಟ್ಟಿನಲ್ಲಿ ಪ್ರಶಾಂತವಾಗಿ ಕುಟುಂಬ, ಸ್ನೇಹಿತರ ಜತೆ ನಿಮ್ಮ ಉತ್ತಮ ಸಮಯವನ್ನು ಕಳೆಯಬೇಕೆಂದುಕೊಂಡವರು 3999 ರೂಪಾಯಿಗಳನ್ನು ನೀಡಿ ರೆಸಾರ್ಟ್ ಸ್ಟೇ ಇಂದೇ ಬುಕ್ ಮಾಡಿಕೊಳ್ಳಬಹುದು.

ಸಂಪರ್ಕ ಹೇಗೆ ?

ವಿಳಾಸ: ಬಿ..ರಸ್ತೆ, ಆಲೂರು, ಬಿಜ್ಜನಹಳ್ಳಿ, ಬಸವನಹಳ್ಳಿ, ಕರ್ನಾಟಕ, 573218

ಸಂಪರ್ಕ ಸಂಖ್ಯೆ: 7779077756