ಯುವಾ ಮೆರಿಡಿಯನ್ ಎಂಬ ಜಾದೂನಗರಿ
ಕಾಂತಾರ ಚಿತ್ರದಲ್ಲಿ ಎಲ್ಲರ ಗಮನ ಸೆಳೆದಿರುವುದು ಸಿನಿಮೆಟೋಗ್ರಫಿ ಮತ್ತು ಅಲ್ಲಿನ ಸೆಟ್‌ಗಳು. ನೈಜವೆನಿಸುವಂತೆ ಕಾಡು, ಮನೆ, ಜಲಪಾತ, ಹಳ್ಳಿ, ಮಾರ್ಕೆಟ್ ಹೀಗೆ ಮಾಯಾಲೋಕವನ್ನೇ ಸೃಷ್ಟಿಸಿ ಅದನ್ನು ಅದ್ಭುತವಾಗಿ ತೆರೆಗೆ ತರುವಲ್ಲಿ ಕಾಂತಾರ ಯಶಸ್ವಿಯಾಗಿದೆ. ಕಾಂತಾರ ನೋಡಿದ ಮಂದಿ ಆ ಕೃತಕ ನಿರ್ಮಾಣದ ಬಗ್ಗೆ ಬೆರಗುಗಣ್ಣಿನಿಂದ ಮಾತನಾಡುತ್ತಿದ್ದಾರೆ. ಈ ಶೂಟಿಂಗ್ ಆಗಿದ್ದೆಲ್ಲಿ.. ಈ ಹಳ್ಳಿ ಇರೋದೆಲ್ಲಿ.. ಈ ಕಾಂತಾರ ಕಾಡಿರುವುದೆಲ್ಲಿ.. ಈಶ್ವರನ ಹೂದೋಟ ಎಲ್ಲಿದೆ? ಹೀಗೆ ಕಾತುರದಿಂದ ಮಾತನಾಡುತ್ತಿದ್ದಾರೆ. ಅಂದ ಹಾಗೆ ಈ ಮಾಯಾಲೋಕ ಇರೋದು ಬೇರೆಲ್ಲೂ ಅಲ್ಲ, ಯುವಾ ಮೆರಿಡಿಯನ್ ಎಂಬ ಜಾದುನಗರಿಯಲ್ಲಿ.
ಇಡೀ ಕರ್ನಾಟಕ ಇದೀಗ ಕಾಂತಾರ ಮೇನಿಯಾದಲ್ಲಿ ಮುಳುಗಿದೆ. ರಾಜ್ಯ ಮಾತ್ರವಲ್ಲ, ದೇಶಾದ್ಯಂತ ಹಾಗೂ ವಿದೇಶಕ್ಕೂ ಕಾಂತಾರ ಚಾಪ್ಟರ್ ಒನ್ ತನ್ನ ಪ್ರಭಾವಳಿ ವಿಸ್ತರಿಸಿದೆ. ಏಳುಸಾವಿರಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ತೆರೆಕಂಡ ಕಾಂತಾರ ತನ್ನ ದೃಶ್ಯವೈಭವದಿಂದ ಪ್ರೇಕ್ಷಕರ ಮನಸೂರೆಗೊಂಡಿದೆ. ರಿಷಬ್ ಶೆಟ್ಟಿ ಮತ್ತೊಮ್ಮೆ ತಮ್ಮ ಡಿವೈನ್ ಅಭಿನಯದಿಂದಾಗಿ ದೇಶಾದ್ಯಂತ ತಮ್ಮ ಅಭಿಮಾನಿ ಬಳಗವನ್ನು ಇಮ್ಮಡಿಗೊಳಿಸಿಕೊಂಡಿದ್ದಾರೆ. ಕಾಂತಾರ ಇದೀಗ ಸಾವಿರ ಕೋಟಿ ಕ್ಲಬ್ ದಾಟುವ, ಆ ಮೂಲಕ ಕನ್ನಡ ಚಿತ್ರರಂಗದಲ್ಲಿ ಸಾರ್ವಕಾಲಿಕ ದಾಖಲೆ ಬರೆಯುವ ಹಂತದಲ್ಲಿದೆ. ಭಾರತೀಯ ಸಿನಿಮಾಗಳ ಬಾಕ್ಸಾಫೀಸ್ ಕಲೆಕ್ಷನ್ ಪಟ್ಟಿಯಲ್ಲೂ ಟಾಪ್ ಫೈವ್ ತಲುಪುವ ಸೂಚನೆ ಕೊಡುತ್ತಿದೆ.
ಕಾಂತಾರ ಚಿತ್ರದಲ್ಲಿ ಎಲ್ಲರ ಗಮನ ಸೆಳೆದಿರುವುದು ಸಿನಿಮೆಟೋಗ್ರಫಿ ಮತ್ತು ಅಲ್ಲಿನ ಸೆಟ್‌ಗಳು. ನೈಜವೆನಿಸುವಂತೆ ಕಾಡು, ಮನೆ, ಜಲಪಾತ, ಹಳ್ಳಿ, ಮಾರ್ಕೆಟ್ ಹೀಗೆ ಮಾಯಾಲೋಕವನ್ನೇ ಸೃಷ್ಟಿಸಿ ಅದನ್ನು ಅದ್ಭುತವಾಗಿ ತೆರೆಗೆ ತರುವಲ್ಲಿ ಕಾಂತಾರ ಯಶಸ್ವಿಯಾಗಿದೆ. ಕಾಂತಾರ ನೋಡಿದ ಮಂದಿ ಆ ಕೃತಕ ನಿರ್ಮಾಣದ ಬಗ್ಗೆ ಬೆರಗುಗಣ್ಣಿನಿಂದ ಮಾತನಾಡುತ್ತಿದ್ದಾರೆ. ಈ ಶೂಟಿಂಗ್ ಆಗಿದ್ದೆಲ್ಲಿ.. ಈ ಹಳ್ಳಿ ಇರೋದೆಲ್ಲಿ.. ಈ ಕಾಂತಾರ ಕಾಡಿರುವುದೆಲ್ಲಿ.. ಈಶ್ವರನ ಹೂದೋಟ ಎಲ್ಲಿದೆ? ಹೀಗೆ ಕಾತುರದಿಂದ ಮಾತನಾಡುತ್ತಿದ್ದಾರೆ. ಅಂದ ಹಾಗೆ ಈ ಮಾಯಾಲೋಕ ಇರೋದು ಬೇರೆಲ್ಲೂ ಅಲ್ಲ. ಕರ್ನಾಟಕದ ಕುಂದಾಪುರದಲ್ಲಿ!

ಯುವಾ ಮೆರಿಡಿಯನ್ ಒಳಗಿದೆ ಜಾದೂನಗರಿ!
ನೀವು ನಂಬಲೇಬೇಕು.. ಕಾಂತಾರ ಚಾಪ್ಟರ್ ಒನ್ ಬಹುತೇಕ ಚಿತ್ರೀಕರಣ ನಡೆದಿರುವುದು ಕುಂದಾಪುರದ ಯುವಾ ಮೆರಿಡಿಯನ್ ಬೇ ಅವರ ಸ್ಟುಡಿಯೋದಲ್ಲಿ. ಕಾಂತಾರಕ್ಕಾಗಿ ವಿಶೇಷ ಸೆಟ್‌ಗಳು ಸಿದ್ಧವಾಗಿದ್ದೂ ಇಲ್ಲಿಯೇ. ಕೋಟೇಶ್ವರದಲ್ಲಿರುವ ಉದಯ್ ಶೆಟ್ಟಿ ಮತ್ತು ವಿನಯ್ ಶೆಟ್ಟಿ ಮಾಲೀಕತ್ವದ ಯುವಾ ಮೆರಿಡಿಯನ್ ಅನ್ನು ನೀವು ಸಿನಿಮಾ ನಗರಿ ಎಂದು ಧಾರಾಳವಾಗಿ ಕರೆಯಬಹುದು. ನೂರಾರು ಕೋಟಿ ವೆಚ್ಚದ ಬಿಗ್ ಬಜೆಟ್ ಕಾಂತಾರ ಚಿತ್ರದ ಚಿತ್ರೀಕರಣ ಮತ್ತು ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಅಲ್ಲಿಯೇ ನಡೆದಿದೆ ಎಂದರೆ ಇದು ಕರ್ನಾಟಕದ ಹೆಮ್ಮೆ. ರಿಷಬ್ ಶೆಟ್ಟಿ ಕಾಂತಾರದ ಚಿತ್ರೀಕರಣ ಕುಂದಾಪುರದಲ್ಲೇ ಆಗಬೇಕು ಎಂದು ಎಂದೋ ಕಂಡಿದ್ದ ಕನಸು ನನಸಾಗಿದ್ದು ಮತ್ತು ಆ ಕನಸಿಗೆ ಯುವಾ ಮೆರಿಡಿಯನ್ ಸಾಥ್ ಕೊಟ್ಟಿದ್ದು ಹೀಗೆ!
ಕುಂದಾಪುರವೀಗ ಫಿಲ್ಮ್ ಸಿಟಿ
ಕಿರಾಡಿ ಫಿಲ್ಮ್ ಸಿಟಿ ಎಂದು ಈಗ ಕಾಂತಾರ ಚಿತ್ರೀಕರಣವಾದ ಜಾಗ ಕರೆಸಿಕೊಳ್ಳುತ್ತಿದೆ ಅಂದರೆ ಅದಕ್ಕೆ ಕಾರಣ ಯುವಾ ಮೆರಿಡಿಯನ್‌ನ ಸುಸಜ್ಜಿತ ಜಾಗ ಮತ್ತು ಸ್ಟುಡಿಯೋ.
ಇನ್ನು ಮುಂದೆ ಪರಭಾಷೆಯ ಚಿತ್ರರಂಗದವರು, ಕನ್ನಡದ ಇನ್ನಿತರ ಚಿತ್ರಕರ್ಮಿಗಳು, ಬೆಂಗಳೂರು ಅಥವಾ ಹೈದರಾಬಾದ್ ಬದಲು ಕುಂದಾಪುರದತ್ತ ಪಯಣ ಬೆಳೆಸಿದರೂ ಅಚ್ಚರಿ ಬೇಡಿ. ಏಕೆಂದರೆ ಕಾಸ್ಟ್ ಆಫ್ ಲಿವಿಂಗ್ ಕಡಿಮೆ ಇರುವ ಕುಂದಾಪುರದಲ್ಲಿ ಸಿನಿಮಾ ಕೆಲಸ ನಡೆದದ್ದೇ ಆದಲ್ಲಿ ಅದು ನಗರಗಳಲ್ಲಿರುವ ಸ್ಟುಡಿಯೋಗಿಂತ ಕಡಿಮೆ ವೆಚ್ಚದಲ್ಲೂ ಆಗುತ್ತದೆ. ಅದಕ್ಕಿಂತ ಮೇಲಾಗಿ ಯಾವ ಡಿಸ್ಟರ್ಬೆನ್ಸ್ ಕೂಡ ಇಲ್ಲದೇ ಇಲ್ಲಿಗೆ ಬಂದು ಇಡೀ ಸಿನಿಮಾ ತೊಂಬತ್ತು ಭಾಗ ಮುಗಿಸಿಕೊಂಡು ಹೋಗಬಹುದಾಗಿದೆ. ಇದಕ್ಕಾಗಿ ಈಗ ಯುವಾ ಮೆರಿಡಿಯನ್ ಸ್ಟುಡಿಯೋಗೆ ಇನ್ನಿಲ್ಲದ ಬೇಡಿಕೆ ಸೃಷ್ಟಿಯಾಗುವ ಸಾಧ್ಯತೆ ಇದೆ.

ಪ್ರವಾಸಿಗರ ದಂಡು..!
ಫಿಲ್ಮ್ ಸಿಟಿ ಯಾವತ್ತಿಗೂ ಪ್ರವಾಸಿಗರಿಗೆ ಪ್ರೇಕ್ಷಣೀಯ ಸ್ಥಳವೇ. ರಾಮೋಜಿರಾವ್ ಫಿಲ್ಮ್ ಸಿಟಿ, ಇನ್ನೋವೇಟಿವ್ ಫಿಲ್ಮ್ ಸಿಟಿ, ಕಂಠೀರವ ಸ್ಟುಡಿಯೋ ಇವೆಲ್ಲವನ್ನೂ ನೋಡಲು ಸದಾ ಪ್ರವಾಸಿಗರು ಉತ್ಸುಕರಾಗಿ ಇರುತ್ತಾರೆ. ಅದೇ ಸಾಲಿನಲ್ಲಿ ಪ್ರವಾಸಿಗರು ಕುಂದಾಪುರದ ಕಾಂತಾರ ಚಿತ್ರೀಕರಣವಾಗಿರುವ ಫಿಲ್ಮ್ ಸಿಟಿಯನ್ನು ನೋಡಬಂದರೂ ಅಚ್ಚರಿ ಇಲ್ಲ.
ಈಗಾಗಲೇ ಅಲ್ಲಿ ಹಲವಾರು ರೀತಿಯಲ್ಲಿ ಉದ್ಯೋಗ ಸೃಷ್ಟಿಯೂ ಆಗಿದೆ. ವ್ಯಾಪಾರಗಳು ಚುರುಕಾಗಿವೆ. ಕ್ಯಾಬ್ ಸರ್ವಿಸ್, ಅಂಗಡಿಗಳು, ಆಹಾರ ಉದ್ಯಮ ಎಲ್ಲವೂ ಚಿಗುರಿವೆ. ಸಿನಿಮಾ ಚಟುವಟಿಕೆ ಅಲ್ಲಿ ಜೋರಾದಲ್ಲಿ ಉದ್ಯಮಗಳಿಗೆ ಲಾಭ ಆಗುವುದು ಖಚಿತ.
ಇನ್ನು ಕಾಂತಾರದ ಭೂಮಿ ನೋಡಲು ಪ್ರವಾಸಿಗರು ಬಂದದ್ದೇ ಆದಲ್ಲಿ ಅವರಿಗೆ ಬೆಸ್ಟ್ ಅತಿಥ್ಯತಾಣವಾಗಿ ಯುವಾ ಮೆರಿಡಿಯನ್ ಸ್ವಾಗತಿಸಲಿದೆ. ಎಕರೆಗಟ್ಟಲೆ ವಿಸ್ತಾರದಲ್ಲಿ ತಯಾರಾಗಿರುವ ಯುವಾ ಮೆರಿಡಿಯನ್‌ನಲ್ಲಿ ಏನುಂಟು ಏನಿಲ್ಲ? ಇಲ್ಲಿ ತೊಯ್ದಷ್ಟು ತೊಯ್ಯಬೇಕೆನಿಸುವ ಕೃತಕ ಸಮುದ್ರದ ಅಲೆ ಇದೆ. ಬೆಚ್ಚಿ ಬೀಳುವ ಸುಂದರ ಅನುಭವ ನೀಡುವ ಭೂತದ ಪಾರ್ಕ್ ಇದೆ. ಮಕ್ಕಳ ಮೇಲೆ ಸಮ್ಮೋಹಿನಿ ಮಾಡುವ ವಾಟರ್ ಪಾರ್ಕ್ ಇದೆ. ಇಲ್ಲೊಂದು ಸಂಭ್ರಮದ ಜಾತ್ರೆಯೂ ಇದೆ. ವಯೋವೃದ್ಧರ ಮನರಂಜನೆಗೆಂದೇ ಇಲ್ಲೊಂದು ತ್ರಿಡಿ ಎಫೆಕ್ಟ್ ಹಾಲ್ ಇದೆ. ಕೈಗೆಟುಕುವಂತೆ ಸಿಗುವ ಆಯಾ ವಾತಾವರಣದ ಸೀಸನ್ನಿನ ಹಣ್ಣುಗಳಿವೆ. ಫಿಟ್ನೆಸ್ಸಿಗೆ ಏನೂ ಇಲ್ವಾ ಅಂತ ಕೇಳಿದರೆ ಸುಸಜ್ಜಿತ ಅಂತಾರಾಷ್ಟ್ರೀಯ ಗುಣಮಟ್ಟದ ಜಿಮ್ ಇದೆ. ಮೈಕೈಗೆ ಉಲ್ಲಾಸ ಬೇಕೆಂದರೆ ಸ್ಪಾ ಇದೆ. ದೇಹದಣಿಸಿ ಮನಸ್ಸು ಅರಳಿಸುವ ಈಜುಕೊಳವಿದೆ. ನಾಲಗೆ ಸಂತೃಪ್ತಿಗೆ ಉದರಲಾಲನೆಗೆ ನಿಮಿಷಾರ್ಧದಲ್ಲಿ ಪ್ರತ್ಯಕ್ಷವಾಗುವ ಸರ್ವ ರೀತಿಯ ರುಚಿಕರ ಆಹಾರಗಳಿವೆ. ವಾಕಿಂಗ್ ಮಾಡಲು ಹಸಿರು ಸಿರಿಯ ಮಾರ್ಗಗಳಿವೆ. ಕಂಡುಕೇಳರಿಯದ ಸಾವಿರಾರು ಜಾತಿಯ ಗಿಡಮರಗಳಿವೆ. ಯಾವ ಆಟ ಆಡಬೇಕು ಅನಿಸಿದರೂ ಆ ಆಟಕ್ಕೆ ಬೇಕಾದ ಜಾಗವಿದೆ. ಸೌಕರ್ಯವಿದೆ. ಅಷ್ಟೇ ಯಾಕೆ ಡೆಸ್ಟಿನೇಷನ್ ವೆಡ್ಡಿಂಗ್ ಆಗೋಕೂ ಇದು ಹೇಳಿ ಮಾಡಿಸಿದ ಜಾಗ. ಸಂಗೀತ ಕಚೇರಿ, ಮ್ಯೂಸಿಕಲ್ ನೈಟ್, ಬರ್ತ್ ಡೇ ಪಾರ್ಟಿ, ಮೆಹಂದಿ, ಏನು ಪ್ಲಾನ್ ಮಾಡಿದರೂ ಅದಕ್ಕೆ ಯುವ ಮೆರಿಡಿಯನ್ ಅದ್ಭುತ ವೇದಿಕೆ ಒದಗಿಸಿಕೊಡುತ್ತದೆ. ಕರ್ನಾಟಕದ ಸಿನಿಮಾ ಸ್ಟುಡಿಯೋಗಳೇ ನಾಚಬೇಕು ಅಂತ ಹೊರಾಂಗಣ ಫ್ರೇಮ್‌ಗಳು ಯುವ ಮೆರಿಡಿಯನ್‌ನಲ್ಲಿ ಕ್ಯಾಮೆರಾಗೆ ಸಿಗುತ್ತವೆ. ಇನ್ನು ಗಣ್ಯರು ಹೆಲಿಕಾಪ್ಟರಲ್ಲಿ ಹಾರಿ ಬಂದರೆ ಇಳಿಯೋಕೆ ಹೆಲಿಪ್ಯಾಡ್ ಇದೆ. ಘಮಘಮಿಸುವ ವಾತಾವರಣ, ಶುಚಿರುಚಿ ಊಟತಿಂಡಿ, ಅತಿಸ್ವಚ್ಛ ಶೌಚಾಲಯಗಳು, ಶುದ್ಧ ನೀರಿನ ವ್ಯವಸ್ಥೆ.. ಒಂದೇ ಎರಡೇ? ಯುವ ಮೆರಿಡಿಯನ್‌ನ ವೈಭವ ವರ್ಣಿಸುತ್ತಾ ಹೋದರೆ ಯೌವ್ವನವೇ ಸಾಲದಾದೀತು. ಇಲ್ಲಿ ಹೇಳಿದ ಒಂದೇ ಒಂದು ಅಂಶವೂ ಉತ್ಪ್ರೇಕ್ಷೆಯ ಮಾತಲ್ಲ. ನೀವೊಮ್ಮೆ ಖುದ್ದು ಭೇಟಿ ನೀಡಿ ಬನ್ನಿ. ಇದರ ಹತ್ತುಪಟ್ಟು ಹೆಚ್ಚು ಹೊಗಳುತ್ತೀರಿ. ಅನುಮಾನವೇ ಬೇಡ ಇದು ಕರ್ನಾಟಕದಲ್ಲೇ ಬೆಸ್ಟ್ ಅಥವಾ ಭಾರತದಲ್ಲೇ ಬೆಸ್ಟ್ ಆತಿಥ್ಯತಾಣ. ಕಾಂತಾರ ಚಿತ್ರೀಕರಣ ನಡೆಸಿದ ರಿಷಬ್ ಶೆಟ್ಟಿ ತಂಡ ಇಂದಿಗೂ ಯುವ ಮೆರಿಡಿಯನ್ ಅನುಭವಗಳನ್ನುಬಹಳ ಖುಷಿಯಿಂದ ಹೇಳಿಕೊಳ್ಳುತ್ತಾರೆ.
ತಮ್ಮ ಕುರಿತು ಹೇಳಿಕೊಳ್ಳಲು ಸಂಕೋಚ ಪಡುವ, ನಮ್ಮ ಕೆಲಸ ಕಾಣಬೇಕು ನಾವಲ್ಲ ಎಂಬುದನ್ನು ಧ್ಯೇಯ ವಾಕ್ಯ ಮಾಡಿಕೊಂಡಿರುವ ಈ ಸೋದರರ ಹೆಸರು ಬೈಲೂರು ಉದಯಕುಮಾರ ಶೆಟ್ಟಿ ಹಾಗೂ ಬೈಲೂರು ವಿನಯಕುಮಾರ ಶೆಟ್ಟಿ. ಆ ಹೆಸರುಗಳ ಮೊದಲ ಅಕ್ಷರದಿಂದಲೇ 2009ರಲ್ಲಿ UVA ಬ್ರ್ಯಾಂಡ್ ಜನಿಸಿದ್ದು. ಈ ಉದ್ಯಮಕ್ಕೂ ಮುನ್ನ ಸರ್ಕಾರಿ ಗುತ್ತಿಗೆ ಕೆಲಸ ಮಾಡುತ್ತಿದ್ದ ಇವರು ಬೃಹತ್ ನೀರಾವರಿ ಇಲಾಖೆಯ ಅಡಿಯಲ್ಲಿ ಮಹಾರಾಷ್ಟ್ರ, ಆಲಮಟ್ಟಿ ಸೇರಿದಂತೆ ವಿವಿಧೆಡೆ ಕೆಲಸ ಮಾಡಿದ್ದಾರೆ. 2009ರಲ್ಲಿ ತಮ್ಮದೇ ಮೂವತ್ತೈದು ನಲವತ್ತು ಎಕರೆ ಜಾಗದಲ್ಲಿ ಯುವ ಮೆರಿಡಿಯನ್ ಬೇ ಪ್ರಾರಂಭಿಸಿದರು.. ಅಲ್ಲಿ ಶುರುವಾದ ಪಯಣ ಇಲ್ಲಿಯವರೆಗೆ ಕರೆತಂದಿದೆ. ಇಂದಿಗೂ ಯಶಸ್ವಿಯಾಗಿ ಮುನ್ನಡೆಯುತ್ತಲೇ ಇದೆ.