ಯುರೋಪ್‌ಗೆ ಹೋಗಲು ಇಚ್ಛಿಸುವ ಭಾರತೀಯರಿಗೆ ಶೆಂಗನ್ ವೀಸಾ ಇನ್ನೂ ಒಂದು ದೊಡ್ಡ ತಲೆನೋವಾಗಿ ಉಳಿದಿದೆ. ಯುರೋಪಿಯನ್ ಯೂನಿಯನ್ (EU) ಇತ್ತೀಚೆಗೆ ವೀಸಾ ಪ್ರಕ್ರಿಯೆ ಸರಳಗೊಳಿಸಲು "ವೀಸಾ ಕ್ಯಾಸ್ಕೇಡ್" (Visa Cascade) ಹೆಸರಿನ ಹೊಸ ವ್ಯವಸ್ಥೆ ಪರಿಚಯಿಸಿದರೂ, ಸುಧಾರಣೆಗಳು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ತಜ್ಞರು ಅಭಿಪ್ರಾಯಪಡುತ್ತಿದ್ದಾರೆ.

ಶೆಂಗನ್ ವಲಯದ ಪ್ರತಿಯೊಂದು ದೇಶಕ್ಕೂ ಪ್ರತ್ಯೇಕವಾಗಿ ಅರ್ಜಿ ಹಾಕಬೇಕಾಗುತ್ತದೆ. ಇದರಿಂದ ಗೊಂದಲ, ವಿಳಂಬ, ಹಾಗೂ ಅಸಮರ್ಪಕ ದಾಖಲೆಗಳ ಜಟಾಪಟಿ ಅರ್ಜಿದಾರರಿಗೆ ತಲೆನೋವನ್ನುಂಟುಮಾಡುತ್ತಿದೆ. ಇನ್ನು ಅರ್ಜಿ ತಿರಸ್ಕಾರ ಪ್ರಮಾಣ ಹೆಚ್ಚಾಗಿರುವುದು, ಶುಲ್ಕಗಳ ಏರಿಕೆ, ಮತ್ತು ಪ್ರಕ್ರಿಯೆ ಸಮಯದಲ್ಲಿ ಏಕಮಟ್ಟದ ಧೋರಣೆ ಇಲ್ಲದಿರುವುದು, ಸಮಸ್ಯೆಯನ್ನು ಮತ್ತಷ್ಟು ಗಂಭೀರಗೊಳಿಸುತ್ತಿವೆ.

ಇನ್ನು ಏಕೆ ಅಂತಹ ವಿಳಂಬಗಳು ನಡೆಯುತ್ತಿವೆ ಅನ್ನೋದಕ್ಕೆ ಒಂದು ಪ್ರಮುಖ ಕಾರಣವೆಂದರೆ – ರಾಜತಾಂತ್ರಿಕ ಕಚೇರಿಗಳಲ್ಲಿ ಸಿಬ್ಬಂದಿ ಕೊರತೆ. ವಿಶೇಷವಾಗಿ ಸಣ್ಣ EU ದೇಶಗಳು ಈ ಅರ್ಜಿಗಳನ್ನು ನಿರ್ವಹಿಸಲು ಸಾಕಷ್ಟು ಸೌಲಭ್ಯ ಹೊಂದಿಲ್ಲ. ಜರ್ಮನಿ, ಫ್ರಾನ್ಸ್‌ಗಳು ಕೆಲವಷ್ಟು ಉತ್ತಮ ಸ್ಥಿತಿಯಲ್ಲಿ ಇದ್ದರೂ, ಒಟ್ಟು EU ಮಟ್ಟದಲ್ಲಿ ಸಮಸ್ಯೆ ಜಟಿಲವಾಗಿದೆ.

ಹೆಚ್ಚುತ್ತಿರುವ ಪ್ರವಾಸೋದ್ಯಮ, ಉದ್ಯಮ ಮತ್ತು ಐಟಿ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಉದ್ಯೋಗ ಹುಡುಕುವವರ ಪ್ರಮಾಣದ ಜತೆ, ವೀಸಾ ಅರ್ಜಿಗಳ ಸಂಖ್ಯೆ ಏರಿಕೆಯಾಗಿದೆ. ಈ ಬೆನ್ನಲ್ಲೇ, ಶೆಂಗನ್ ವಲಯದ ಯಾವುದೇ ಒಂದು ದೇಶಕ್ಕೆ ವೀಸಾ ಪಡೆದ ಬಳಿಕ, ಉಳಿದ ದೇಶಗಳಿಗೂ ಪ್ರವೇಶ ನೀಡಲಾಗುವುದರಿಂದ, ಕೆಲವು ದೂತಾವಾಸಗಳಿಗೆ ಹೆಚ್ಚು ಒತ್ತಡ ಬೀಳುತ್ತಿದೆ.

ವೀಸಾ ಪ್ರಕ್ರಿಯೆ ತಂತ್ರಜ್ಞಾನ ಬಳಸಿ ಸುಧಾರಣೆಯಾಗಬಹುದೆಂಬ ನಂಬಿಕೆಯಿದೆ. BLS ಇಂಟರ್‌ನ್ಯಾಷನಲ್‌ನಂತಹ ಸಂಸ್ಥೆಗಳು AI ಆಧಾರಿತ ಪರಿಹಾರಗಳನ್ನು ಆಲೋಚಿಸುತ್ತಿವೆ. ಉದಾಹರಣೆಗೆ:

  • ಡಾಕ್ಯುಮೆಂಟ್‌ಗಳ ಮಾನ್ಯತೆಗಾಗಿ AI ನಿಂದ ತಪಾಸಣೆ
  • ಡೈನಾಮಿಕ್ ಸ್ಲಾಟ್ ನಿರ್ವಹಣೆ
  • ಮೊಬೈಲ್ ಮೂಲಕ ಬಯೋಮೆಟ್ರಿಕ್ಸ್ ಸಂಗ್ರಹ
  • ಶೆಂಗನ್ ಕಚೇರಿಗಳ ನಡುವೆ ಡೇಟಾ ಸಿಂಕ್‌ ಮಾಡುವುದು
  • ಅರ್ಜಿ ಸಂಖ್ಯೆಗಳನ್ನು ಮಿತಿಗೊಳಿಸಲು ಫೋರ್ಕಾಸ್ಟ್‌ ಆಧಾರಿತ ಸಮಯ ನಿರ್ವಹಣೆ

2023ರ "ದಿ ಇಕನಾಮಿಸ್ಟ್" ವರದಿಯ ಪ್ರಕಾರ, ಭಾರತೀಯರಿಗೆ ಶೆಂಗನ್ ವೀಸಾ ಪ್ರಕ್ರಿಯೆಯು ಅವಮಾನಕಾರಿ ಹಾಗೂ ದೋಷಪೂರಿತವಾಗಿದೆ. ಹಣಕಾಸು ಸ್ಥಿತಿ, ಹಿಂದಿರುಗುವ ಉದ್ದೇಶದ ಪುರಾವೆ, ಮತ್ತು ಇತರ ದಾಖಲೆಗಳ ಖಚಿತಪಡಿಸಿಕೊಳ್ಲಿಕೆ ತೀವ್ರವಾಗಿರುವ ಕಾರಣ, ಅರ್ಜಿದಾರರು ನಿರಾಸೆಗೊಳಗಾಗುತ್ತಿದ್ದಾರೆ.

ವೀಸಾ ಪ್ರಕಾರಗಳು

  • ಶಾರ್ಟ್ ಸ್ಟೇ ವೀಸಾ (Type C): ಪ್ರವಾಸ, ವ್ಯವಹಾರ, ಕುಟುಂಬ ಭೇಟಿಗೆ. ಪಾಸ್‌ಪೋರ್ಟ್, ವಿಮಾ, ಹಣದ ಪುರಾವೆ, ಹೋಟೆಲ್‌ ಬುಕ್ಕಿಂಗ್. €90 ಶುಲ್ಕ, 15-45 ದಿನಗಳಲ್ಲಿ ನಿರ್ಧಾರ.
  • ಲಾಂಗ್ ಸ್ಟೇ ವೀಸಾ (Type D): ಉದ್ಯೋಗ ಅಥವಾ ವಿದ್ಯಾಭ್ಯಾಸಕ್ಕಾಗಿ. ಪ್ರಕ್ರಿಯೆ ಸಮಯ 6 ವಾರದಿಂದ 3 ತಿಂಗಳು.

2024ರಲ್ಲಿ ಅತಿಹೆಚ್ಚು ತಿರಸ್ಕೃತ ರಾಷ್ಟ್ರಗಳು:

  • ಫ್ರಾನ್ಸ್ – 21%
  • ಜರ್ಮನಿ – 19%
  • ನೆದರ್‌ಲ್ಯಾಂಡ್ಸ್ – 17%
  • ಎಸ್ತೋನಿಯಾ, ಲಾತ್ವಿಯಾ – 25%ಕ್ಕಿಂತ ಹೆಚ್ಚು

ಯುಎಸ್, ಕೆನಡಾ ಅಥವಾ ಆಸ್ಟ್ರೇಲಿಯಾದಂತಹ ರಾಷ್ಟ್ರಗಳಿಗೆ ನೀಡಲಾಗುವ ವೀಸಾ-ರಹಿತ ಪ್ರವೇಶದಲ್ಲಿ ಗರಿಷ್ಠ ಪ್ರಮಾಣದ ನಿಯಮಗಳನ್ನು ಜಾರಿಗೆ ತರಬೇಕು. ಇದರಿಂದ ಭಾರತೀಯರಿಗೆ ನ್ಯಾಯ ಸಿಗಬಹುದು.