Thursday, June 12, 2025
Thursday, June 12, 2025

ಉತ್ತರ ಪ್ರದೇಶದ ಸುಲ್ತಾನಪುರದಲ್ಲಿರುವ ಈ ಮರ ನಿಮ್ಮ ಎಲ್ಲ ಆಸೆಗಳಿಗೂ ಅಸ್ತು ಎನ್ನುತ್ತದೆಯಂತೆ..

ಭಾರತದ ಇತಿಹಾಸದಲ್ಲಿ ಉತ್ತರ ಪ್ರದೇಶದ ಸುಲ್ತಾನಪುರ ಕೊಡುಗೆ ಬಹಳ. ಗೋಮತಿ ನದಿಯ ದಂಡೆಯ ಮೇಲಿರುವ ಈ ನಗರದಲ್ಲಿ ರಾಮಾಯಣದಲ್ಲಿಯೂ ಉಲ್ಲೇಖಿಸಲಾದ ಅನೇಕ ದೇವಾಲಯಗಳಿವೆ. ಧಾರ್ಮಿಕ ಪ್ರವಾಸವನ್ನು ಮೆಚ್ಚಿಕೊಳ್ಳುವವರು ನೀವಾದರೆ ಭಾರತದ ಈ ಪ್ರಾಚೀನ ದೇವಾಲಯಗಳಿಗೆ ಒಮ್ಮೆ ಭೇಟಿ ನೀಡಿ.

ಭಾರತದ ಉತ್ತರ ಪ್ರದೇಶದ ಪ್ರಮುಖ ನಗರಗಳ ಪೈಕಿ ಸುಲ್ತಾನಪುರ್ ವೂ ಒಂದು. ಹಿಂದೂಗಳು ಪವಿತ್ರ ನದಿ ಎಂದೇ ಪರಿಗಣಿಸುವ ಗೋಮತಿಯ ದಡದಲ್ಲಿರುವ ಈ ನಗರದ ಇತಿಹಾಸ ತುಂಬಾ ಹಳೆಯದು. ಲಕ್ನೋದಿಂದ ಪೂರ್ವಕ್ಕೆ 135 ಕಿಲೋಮೀಟರ್ ದೂರದಲ್ಲಿರುವ ಈ ನಗರವನ್ನು ಬಹಳ ಹಿಂದೆ ಕುಶ್ಭವನಪುರ ಎಂದು ಕರೆಯಲಾಗುತ್ತಿತ್ತು. ಅದು ಕಾಲಾನಂತರದಲ್ಲಿ ಸುಲ್ತಾನಪುರ ಎಂದು ಬದಲಾಯಿತು. ಆದರೆ ಸುಲ್ತಾನಪುರದ ಪ್ರಮುಖ ಪ್ರವಾಸಿ ತಾಣಗಳು ಯಾವುವು ಎಂಬುದು ನಿಮಗೆ ಗೊತ್ತಾ?

ಬೇಡಿದ ವರಗಳ ಕರುಣಿಸುವ ಪಾರಿಜಾತ ಮರ:

ಸುಲ್ತಾನಪುರ ನಗರದ ಗೋಮತಿ ನದಿಯ ದಡದಲ್ಲಿ ಪ್ರಾಚೀನವಾದ ಒಂದು ಪಾರಿಜಾತದ ಮರವಿದೆ. ಇದು ಬರೀ ಮರವಲ್ಲ. ಬದಲಾಗಿ ಇದರೊಂದಿಗೆ ಜನರ ನಂಬಿಕೆಯೂ ಬೆಸೆದುಕೊಂಡಿದೆ. ಈ ಮರವನ್ನು ಪೂಜಿಸಲು ಜನರು ದೂರದೂರುಗಳಿಂದ ಇಲ್ಲಿಗೆ ಬರುತ್ತಾರೆ. ಇಲ್ಲಿಗೆ ಬಂದು ಮರಕ್ಕೆ ಪೂಜೆ ಸಲ್ಲಿಸುವ ಮೂಲಕ ತಮ್ಮ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ ಎಂಬ ನಂಬಿಕೆಯೂ ಇದೆ.

3447645_HYP_0_FEATUREIMG_20230907_155936

ಪ್ರಕೃತಿ ಪ್ರಿಯರ ನೆಚ್ಚಿನ ಅಮ್ಹತ್ ಪಾರ್ಕ್:

ಸುಲ್ತಾನಪುರದಲ್ಲಿರುವ ಅಮ್ಹತ್ ಪಾರ್ಕ್ ಪ್ರಕೃತಿ ಪ್ರೇಮಿಗಳ ನೆಚ್ಚಿನ ತಾಣ. ಎಕರೆಗಟ್ಟಲೆ ಭೂಮಿಯಲ್ಲಿ ಹರಡಿಕೊಂಡಿರುವ ಈ ಸುಂದರ ಉದ್ಯಾನವನ ವಿಶೇಷವಾದ ಕಾರಂಜಿ, ಶಾಂತವಾದ ಕೊಳಗಳಿಂದ ಪ್ರವಾಸಿಗರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಪ್ರಾಚೀನ ಇತಿಹಾಸ ಸಾರುವ ಧೋಪಪ್ ದೇವಾಲಯ:

ಸುಲ್ತಾನಪುರದಲ್ಲಿ ಧೋಪಪ್ ಎಂಬ ಪ್ರಸಿದ್ಧ ಧಾರ್ಮಿಕ ಸ್ಥಳವಿದೆ. ಪಾರಿಜಾತ ವೃಕ್ಷದಂತೆಯೇ ಈ ಸ್ಥಳವೂ ಸಹ ಅನೇಕ ನಂಬಿಕೆಗಳನ್ನು ಹೊಂದಿದೆ. ದಸರಾದಂದು ಇಲ್ಲಿಗೆ ಬರುವವರು ಗೋಮತಿ ನದಿಯಲ್ಲಿ ತಮ್ಮ ಪಾಪಗಳನ್ನು ಕಳೆದುಕೊಳ್ಳುತ್ತಾರೆ ಎಂಬ ನಂಬಿಕೆ ಭಕ್ತರದ್ದು. ಅಲ್ಲದೆ ಇಲ್ಲೊಂದು ರಾಮ ದೇವಾಲಯವಿದ್ದು, ರಾಮನವಮಿ ಮತ್ತು ಜ್ಯೇಷ್ಠ ಶುಕ್ಲ ದಶಮಿಯಂದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಬಂದು ಗೋಮತಿ ನದಿಯಲ್ಲಿ ಪವಿತ್ರ ಸ್ನಾನ ಮಾಡಿ ಪುಣ್ಯಪ್ರಾಪ್ತಿ ಮಾಡಿಕೊಳ್ಳುತ್ತಾರೆಂಬ ನಂಬಿಕೆಯಿದೆ.

25_06_2022-dhopap_temple_22832444

ಐತಿಹಾಸಿಕ ಬಿಜೇತುವಾ ಮಹಾವೀರನ್ ದೇವಸ್ಥಾನ:

ಇದು ಸುರಪುರ-ಸುಲ್ತಾನಪುರದಲ್ಲಿ ಜನಪ್ರಿಯ ದೇವಾಲಯವಾಗಿದ್ದು, ಮಂಗಳವಾರ ಮತ್ತು ಶನಿವಾರ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಭೇಟಿ ನೀಡುತ್ತಾರೆ. ಈ ಸ್ಥಳದ ಐತಿಹ್ಯದ ಬಗ್ಗೆ ತಿಳಿಯುವುದಾದರೆ ಹಿಂದೆ ಹನುಮಾನ್, ಲಕ್ಷ್ಮಣನಿಗಾಗಿ "ಸಂಜೀವಿನಿ" ತರುವ ಸಮಯದಲ್ಲಿ ವಿಶ್ರಾಂತಿ ಪಡೆಯಲು ಅಲ್ಲಿ ಕುಳಿತಿದ್ದನು. ಹನುಮಾನ್ ಬಿಜೇತುವಾ ದೇವಾಲಯದ ಪಕ್ಕದಲ್ಲಿರುವ ಮಕರಿ ಕುಂಡದಲ್ಲಿ ಸ್ನಾನ ಮಾಡಿದ್ದನು ಎಂಬ ಪ್ರತೀತಿಯಿದೆ. ಈ ದೇವಾಲಯದಲ್ಲಿ ಅತಿ ಹೆಚ್ಚು ಗಂಟೆಗಳನ್ನು ಕಾಣಲು ಸಾಧ್ಯ.

ದುರ್ಗಾ ಮಾತೆಯ ಲೋಹ್ರಾಮೌ ದೇವಿ ದೇವಸ್ಥಾನ:

ಸುಲ್ತಾನಪುರದಲ್ಲಿರುವ ಪವಿತ್ರ ದುರ್ಗಾದೇವಿ ಧಾಮ ಲೋಹ್ರಾಮೌ ದೇವಿ ದೇವಸ್ಥಾನ. ಲೋಹ್ರಾಮೌ ದುರ್ಗಾದೇವಿ ಧಾಮವು ಲಕ್ನೋದಿಂದ 7 ಕಿಲೋಮೀಟರ್ ದೂರದಲ್ಲಿದ್ದು, ಲಕ್ನೋ- ವಾರಣಾಸಿ ರಾಷ್ಟ್ರೀಯ ಹೆದ್ದಾರಿ-56 ರಲ್ಲಿದೆ. ನೂರಾರು ವರ್ಷಗಳಿಂದ ಲೋಹ್ರಾಮೌನಲ್ಲಿ ಸ್ಥಾಪಿಸಲಾದ ಈ ಮಾ ದುರ್ಗಾ ದೇವಾಲಯವು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಮಾತ್ರವಲ್ಲದೆ ರಾಜ್ಯದ ಇತರ ಹಲವು ಜಿಲ್ಲೆಗಳಲ್ಲಿಯೂ ಬಹಳ ಪ್ರಸಿದ್ಧವಾಗಿದೆ.

sultanpur

ಒಟ್ಟಿನಲ್ಲಿ ಸುಲ್ತಾನಪುರವು ತನ್ನ ಐತಿಹಾಸಿಕ, ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಅನೇಕ ಪ್ರವಾಸಿ ತಾಣ, ಧಾರ್ಮಿಕ ಸ್ಥಳಗಳನ್ನು ಹೊಂದಿದೆ. ಸುಲ್ತಾನಪುರ ಕೋಟೆ, ಪ್ರಸಿದ್ಧ ಪಕ್ಷಿಧಾಮ, ಚಿಮನ್ ಲಾಲ್ ಪಾರ್ಕ್‌ , ಶೀತ್ಲಾ ದೇವಿ ದೇವಾಲಯ ಸೇರಿ ಇನ್ನೂ ಅನೇಕ ತಾಣಗಳನ್ನು ಇಲ್ಲಿಗೆ ಭೇಟಿ ನೀಡುವ ವೇಳೆ ಮಿಸ್‌ ಮಾಡದೆ ನೋಡಿ ಬನ್ನಿ.

Bhagyalakshmi N

Bhagyalakshmi N

Travel blogger and adventurer passionate about exploring new cultures and sharing travel experiences.

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

Read Previous

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

ವಿಹಂಗಮ ಸಂಗಮ

Read Next

ವಿಹಂಗಮ ಸಂಗಮ