ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಒಂದೇ ಸೂರಿನಡಿ ಪ್ರವಾಸ, ಸಾರಿಗೆ, ವಾಸ್ತವ್ಯ ಮತ್ತು ಆತಿಥ್ಯವನ್ನು ಒದಗಿಸುವ ಮೂಲಕ ಜನಪ್ರಿಯತೆ ಗಳಿಸುತ್ತಿದೆ. ತನ್ನ ಹೆಜ್ಜೆ ಗುರುತುಗಳನ್ನು ಕರ್ನಾಟಕದಲ್ಲಿ ಸೀಮಿತಗೊಳಿಸದೆ, ಹೊರ ರಾಜ್ಯಗಳಿಗೂ ಮುಂದುವರಿಸಿದೆ. ಹೇಳಿ- ಕೇಳಿ- ಓದಿ ತಿಳಿದರೂ ಮುಗಿಯದಷ್ಟು ವೈಭವದ ಇತಿಹಾಸ ಕರ್ನಾಟಕಕ್ಕಿದೆ. ಇದನ್ನು ಪುಟಗಳಿಗೆ ಮಾತ್ರ ಸೀಮಿತವಾಗಿರಿಸದೆ, ಜನರನ್ನು ಸುತ್ತಿಸಿ ಪ್ರವಾಸದಲ್ಲಿನ ಸಾರ ಸತ್ವವನ್ನು ಹಂಚಬೇಕು ಎನ್ನುವ ಹುಮ್ಮಸ್ಸಿನಲ್ಲಿದೆ ಕೆಎಸ್‌ಟಿಡಿಸಿ. ಇಡೀ ರಾಜ್ಯವನ್ನು ಸುತ್ತಿಸುವ ಹುಮ್ಮಸ್ಸಿನಲ್ಲಿರುವ ಕೆಎಸ್‌ಟಿಡಿಸಿ ಇದೀಗ ಬಗೆ ಬಗೆಯ ಟೂರ್ ಪ್ಯಾಕೇಜ್ ಗಳನ್ನು ಘೋಷಿಸುತ್ತಿದೆ. ಪ್ರವಾಸೋದ್ಯಮದಲ್ಲಿ ಅಸಾಧಾರಣ ಸಾಧನೆ ಮಾಡುತ್ತಾ ಮುನ್ನುಗ್ಗುತ್ತಿದೆ. ಹೊಸ ಸಾಹಸಗಳಿಗೆ ತೆರೆದುಕೊಳ್ಳುತ್ತಾ ಅಚ್ಚರಿ ಹುಟ್ಟಿಸಿದೆ. ಬಜೆಟ್ ಸ್ನೇಹಿ ಪ್ಯಾಕೇಜ್ ಗಳೊಂದಿಗೆ ಪ್ರವಾಸಿಗರಿಗೆ ಹಬ್ಬದೂಟ ಬಡಿಸಿದೆ. ಹತ್ತಾರು ಪ್ಯಾಕೇಜ್ ಗಳನ್ನು ಘೋಷಿಸುವ ಮೂಲಕ ಬೇರೆಲ್ಲ ರಾಜ್ಯಗಳ ಪ್ರವಾಸೋದ್ಯಮಕ್ಕೂ ಸಡ್ಡು ಹೊಡೆಯುತ್ತಿದೆ. ನೈಸರ್ಗಿಕವಾಗಿ ಶ್ರೀಮಂತವಾಗಿರುವ ಕರ್ನಾಟಕವು ಪ್ರವಾಸೋದ್ಯಮದಲ್ಲಿ ಯಶಸ್ಸು ಸಾಧಿಸಲಿದೆ. ನವ ಚೈತನ್ಯದೊಂದಿಗೆ ಹಲವು ಯೋಜನೆಗಳನ್ನು ಹಮ್ಮಿಕೊಂಡಿರುವ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ(ಕೆಎಸ್‌ಟಿಡಿಸಿ) ಉತ್ತಮ ಕೆಲಸ ಮತ್ತು ಕಾರ್ಯಗಳನ್ನು ಮಾಡುತ್ತಿದೆ.
ನಿಸರ್ಗ ಸೌಂದರ್ಯ ಸವಿಯಲು, ಗತ ಕಾಲದ ತಾಣಗಳಿಗೆ ಭೇಟಿ ನೀಡಲು, ಜಲಪಾತಕ್ಕೆ ಮೈಯೊಡ್ಡಲು, ಕಡಲ ಕಿನಾರೆಗೆ ಕಿವಿಗೊಟ್ಟು ಮುದಗೊಳ್ಳು ಕೆಎಸ್‌ಟಿಡಿಸಿಉತ್ತಮ ಅವಕಾಶ ಕಲ್ಪಿಸಿಕೊಟ್ಟಿದೆ. ಬಹಳ ಪ್ರಮುಖವಾಗಿ ಕೆಎಸ್‌ಟಿಡಿಸಿ ಇದೀಗ ಮೂರು ವಿಶೇಷ ಪ್ಯಾಕೇಜ್ ಗಳನ್ನು ಪರಿಚಯಿಸಿದೆ. ಒಂದು ದಿನದ ಪ್ರವಾಸ ಇದಾಗಿದ್ದು, ಸಾಂಸ್ಕೃತಿಕ ನಗರಿ ಮೈಸೂರಿನಿಂದ ಹಾಸನದ ಹಾಸನಾಂಬ ದೇವಾಲಯಕ್ಕೆ ಭೇಟಿ ನೀಡುವ ಪ್ಯಾಕೇಜ್ ವೊಂದಿದೆ. ರಾಜಧಾನಿ ಬೆಂಗಳೂರಿನಿಂದಲೂ ಹಾಸನಾಂಬ ದೇವಾಲಯಕ್ಕೆ ತೆರಳುವ ಪ್ಯಾಕೇಜ್ ಇದೆ. ಚಿತ್ರದುರ್ಗದ ಕಲ್ಲಿನ ಕೋಟೆಯನ್ನೂ ಒಂದು ದಿನದಲ್ಲಿ ತೋರಿಸಿಕೊಂಡು ಬರಲಿದೆ ಕೆಎಸ್‌ಟಿಡಿಸಿ. ಧಾರ್ಮಿಕ ಪ್ರವಾಸವಾಗಿ ಹಾಸನದ ಹಾಸನಾಂಬ ದೇವಾಲಯದ ಭೇಟಿಯಿದ್ದರೆ, ಐತಿಹಾಸಿಕ ಪ್ರವಾಸವಾಗಿ ಚಿತ್ರದುರ್ಗದ ಕೋಟೆಯನ್ನು ನೋಡಬಹುದು. ಪ್ರವಾಸಿಗರಿಗೆ ಇದು ಅಕ್ಷರಶಃ ಹಬ್ಬದ ವಾತಾವರಣ. ಊರು ಸುತ್ತುವ ಅವಕಾಶವನ್ನು ಯಾವ ಪ್ರವಾಸಿಗನೂ ಕಳೆದುಕೊಳ್ಳಲಾರ ಅಲ್ಲವೇ? ನೀವು ಅಷ್ಟೇ ಮನದಲ್ಲಿ ನೂರು ದುಗುಡಗಳಿದ್ದರೂ ಅದನ್ನು ಆಚೆಗೆ ಒಗೆಯಿರಿ. ನಿರುಮ್ಮಳವಾಗಿ ಸುತ್ತಾಡಿ. ನಿಮ್ಮೊಂದಿಗೆ ಕೆಎಸ್‌ಟಿಡಿಸಿ ಇದೆ ಎಂಬುದನ್ನು ಮರೆಯಬೇಡಿ ಅಷ್ಟೇ.

ಹಾಸನಾಂಬ ಜಾತ್ರೆ
ಪ್ರಶಸ್ತವಾದ ಸಮಯದಲ್ಲಿ ಕೆಎಸ್ ಟಿಡಿಸಿ ಪ್ರವಾಸಿಗರನ್ನು ಹಾಸನಾಂಬ ದೇವಾಲಯಕ್ಕೆ ಕರೆದೊಯ್ಯುತ್ತಿದೆ. ಇದನ್ನು ಭಕ್ತಿ ಪ್ರವಾಸ ಎನ್ನಬಹುದು. ಧಾರ್ಮಿಕ ಪ್ರವಾಸ ಎಂದೂ ಕರೆಯಬಹುದು. ಈಗ ಹಾಸನದ ಹಾಸನಾಂಬ ದೇವಾಲಯದಲ್ಲಿ ಜಾತ್ರಾ ಮಹೋತ್ಸವ. ಅದು ವಾರ್ಷಿಕವಾಗಿ ನಡೆಯುವ ಸಂಭ್ರಮ ಮತ್ತು ಸಡಗರದ ಜಾತ್ರೆ. ರಾಜ್ಯ ಮತ್ತು ಹೊರ ರಾಜ್ಯಗಳಿಂದೂ ಭಕ್ತರು ಈ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ. ಹಾಸನದ ಅಧಿದೇವತೆ ಶ್ರೀ ಹಾಸನಾಂಬ ಮತ್ತು ಶ್ರೀ ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಅಕ್ಟೋಬರ್9ರಿಂದ ಆರಂಭವಾಗಲಿದ್ದು, ಜಿಲ್ಲಾಡಳಿತದಿಂದ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ವರ್ಷಕ್ಕೊಮ್ಮೆ ಮಾತ್ರ ಭಕ್ತರಿಗೆ ದರ್ಶನ ನೀಡುವ ಹಾಸನಾಂಬೆಯ ದರ್ಶನೋತ್ಸವ ಅಕ್ಟೋಬರ್ 9ರಿಂದ 23ರವರೆಗೆ ನಡೆಯಲಿದೆ. ಅ.10ರಿಂದ 22ರ ತನಕ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶವಿರಲಿದೆ. ಈ ಬಾರಿ ರಾಜ್ಯ ಸೇರಿ ದೇಶದ ವಿವಿಧ ಭಾಗಗಳಿಂದ 25 ಲಕ್ಷಕ್ಕೂ ಹೆಚ್ಚು ಭಕ್ತರು ದೇವಿಯ ದರ್ಶನಕ್ಕೆ ಬರುವ ನಿರೀಕ್ಷೆ ಇದ್ದು, ಜಿಲ್ಲಾಡಳಿತದಿಂದ ಅಗತ್ಯ ಕ್ರಮ ಕೈಗೊಳ್ಳಲಾಗಿದೆ.
ದೇಗುಲದ ಇತಿಹಾಸ
ಶ್ರೀ ಸಿದ್ದೇಶ್ವರ ಮತ್ತು ಶ್ರೀ ಹಾಸನಾಂಬ ದೇವಿಯ ದೇಗುಲವು ಸುಮಾರು 12ನೇ ಶತಮಾನದಲ್ಲಿ ಪಾಳೆಗಾರ ಕೃಷ್ಣಪ್ಪ ನಾಯಕ ಹಾಗೂ ಸಂಜೀವ ನಾಯಕ ಅವರ ಕಾಲದಲ್ಲಿ ಸ್ಥಾಪಿತವಾಗಿದೆ ಎಂದು ಈ ಸ್ಥಳದಲ್ಲಿ ದೊರೆತ ಶಿಲಾಶಾಸನಗಳಿಂದ ತಿಳಿದು ಬರುತ್ತದೆ.
ಶ್ರೀ ಹಾಸನಾಂಬ ದೇವಿಯು ಶಕ್ತಿ ಸ್ವರೂಪಿಣಿಯಾಗಿದ್ದು ಸ್ಥಳ ಪುರಾಣದ ಪ್ರಕಾರ ಸಪ್ತ ಮಾತೃಕೆಯರು ವಾರಣಾಸಿಯಿಂದ ವಾಯು ವಿಹಾರಕ್ಕಾಗಿ ಹಾಸನಕ್ಕೆ ಬಂದರು, ಅವರಲ್ಲಿ ವೈಷ್ಣವಿ, ಮಹೇಶ್ವರಿ, ಕೌಮಾರಿ ದೇವತೆಯರು ದೇವಸ್ಥಾನದ ಸುತ್ತಲಿನ ಹುತ್ತದಲ್ಲಿ ನೆಲೆಸಿದ್ದಾರೆಂಬುದು ಸ್ಥಳೀಯ ಜನರ ನಂಬಿಕೆಯಾಗಿದೆ. ಹಾಗೆಯೇ ಕೆಂಚಮ್ಮ, ಬ್ರಾಹ್ಮಿಯಂತ ಸಪ್ತ ಮಾತೃಕೆಯರು ಆಲೂರು ಹಾಗೂ ಹಾಸನದ ವಿವಿಧ ಸ್ಥಳಗಳಲ್ಲಿ ನೆಲೆಸಿದ್ದಾರೆಂದು ಪುರಾಣ ಹೇಳುತ್ತದೆ.
ಪೌರಾಣಿಕ ಕಥೆಯನುಸಾರ ಶ್ರೀ ಹಾಸನಾಂಬ ದೇವಿಯ ಸ್ವರೂಪವು, ಭಕ್ತಿಯ ಪಾವಿತ್ರ್ಯತೆ ಹಾಗೂ ಮೈತ್ರಿಯ ಸಂಕೇತವಾಗಿದೆ. ಈ ಪ್ರಾಂತದಲ್ಲಿ ಅಂದು ಅಂಧಕಾಸುರ ಎಂಬ ರಾಕ್ಷಸ ಜನ ಸಾಮಾನ್ಯರಿಗೆ ಉಪಟಳ ನೀಡುತ್ತಿದ್ದನು. ಅವನನ್ನು ನಿಗ್ರಹಿಸಲು ಶಕ್ತಿ ಸ್ವರೂಪಿಣಿಯಾಗಿ ಬಂದ ಶ್ರೀ ಹಾಸನಾಂಬ ದೇಪರಾಕ್ರಮ ಮೆರೆದು ಈ ಪ್ರಾಂತ್ಯದಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಸುವಂತೆ ಮಾಡಿದರು ಎನ್ನುತ್ತದೆ. ಈ ದೇಗುಲದ ಕೆತ್ತನೆ, ದ್ರಾವಿಡ ಶೈಲಿಯ ರಾಜಗೋಪುರ ಇರುವುದನ್ನು ಕಾಣಬಹುದು.
ಇನ್ನು ಈ ಹಿಂದೆ ಹಾಸನಕ್ಕೆ ಸಿಂಹಾಸನಪುರಿ ಎಂಬ ಹೆಸರಿತ್ತು. ಅದು ಕಾಲಾನಂತರದಲ್ಲಿ ಹಾಸನ ಎಂದಾಗಿದೆ. ಹಿಂದೆ ಸುಮಾರು 12 ಶತಮಾನದಲ್ಲಿ ಹೊಯ್ಸಳರ ಕಾಲದಲ್ಲಿ ಒಂದು ವಿಗ್ರಹ ಸಿಕ್ಕಿತು. ಅದರ ಮುಖ ಮಂದಸ್ಮಿತವನ್ನು ಹೊಂದಿದ್ದರಿಂದ ಹಸನ ಅಂದರೆ ಹಾಸನ ಎಂಬ ಹೆಸರು ಬಂದಿತು ಎಂತಲೂ ಹೇಳುತ್ತಾರೆ.
ಈ ದೇವಾಲಯದ ಪ್ರಾಂಗಣದಲ್ಲಿ ಮುಖ್ಯವಾಗಿ ಮೂರು ದೇಗುಲಗಳಿವೆ. ಅವುಗಳೆಂದರೆ ದರ್ಬಾರ್ ಗಣಪತಿ ದೇವಾಲಯ, ಹಾಸನಾಂಬ ದೇವಾಲಯ ಹಾಗೂ ಸಿದ್ಧೇಶ್ವರ ದೇವಾಲಯ. ಇಲ್ಲಿ ಇನ್ನೊಂದು ಮುಖ್ಯವಾದ ಸ್ಥಳವೆಂದರೆ ಕಳ್ಳಪ್ಪನ ಗುಡಿ. ಇಲ್ಲಿ 3 ವಿಗ್ರಹಗಳಿದ್ದು ಅವುಗಳು ದೇವಾಲಯವನ್ನು ಕಳ್ಳತನ ಮಾಡಲು ಬಂದು ದೇವಿಯ ಅವಕೃಪೆಗೆ ಒಳಗಾದ ಕಳ್ಳರದ್ದು ಎಂದು ಹೇಳುತ್ತಾರೆ. ಹಾಸನಾಂಬ ದೇಗುಲವನ್ನು ದೀಪಾವಳಿಯ ಸಂದರ್ಭದಲ್ಲಿ ಕೆಲವೇ ದಿನಗಳ ಕಾಲ ಮಾತ್ರ ದೇವಾಲಯವನ್ನು ತೆರೆಯಲಾಗುತ್ತದೆ.
ಇತ್ತ ಕೆ ಎಸ್‌ಟಿಡಿಸಿ ಒಂದು ದಿನದ ಚಿತ್ರದುರ್ಗ ಪ್ರವಾಸವನ್ನು ಘೋಷಿಸಿದೆ. ಹೇಳಿ ಕೇಳಿ ಚಿತ್ರದುರ್ಗ ಮದಕರಿ ನಾಯಕನ ಊರು. ಒನಕೆ ಓಬವ್ವನ ವೀರಗಾಥೆಯನ್ನು ಚಿತ್ರದುರ್ಗದ ಪ್ರತಿ ಕಲ್ಲೂ ಹೇಳುತ್ತದೆ. ಅಲ್ಲಿ ಪುರಾಣ ಪ್ರಸಿದ್ಧ ದೇವಾಲಯಗಳೂ ಇವೆ. ಅವುಗಳನ್ನು ಕಾಣುವ ಭಾಗ್ಯ ಮತ್ತು ಸೌಭಾಗ್ಯ ಪ್ರವಾಸಿಗರದ್ದು. ಪ್ರವಾಸಿಗರ ಆಯ್ಕೆ ಕೆ ಎಸ್‌ಟಿಡಿಸಿ ಆಗಬೇಕು.
ಪ್ಯಾಕೇಜ್
ಕೆಎಸ್ ಟಿಡಿಸಿ ಅಲ್ಲಿ ಬುಕ್ ಮಾಡುವವರಿಗೆ ವಿಶೇಷ ಅವಕಾಶಗಳಿವೆ.
ಡಿಲಕ್ಸ್ ಎಸಿ ಬಸ್ನಲ್ಲಿ ಆರಾಮದಾಯಕ ಸುಖ ಪ್ರಯಾಣ.
ಆಯ್ಕೆ ಮಾಡಿಕೊಂಡ ಪ್ಯಾಕೇಜ್‌ಅನ್ವಯ ಪ್ರವಾಸ
ರಾಜ್ಯ, ಕೇಂದ್ರ ಮತ್ತು ಸಾರ್ವಜನಿಕ ವಲಯದ ಉದ್ಯೋಗಿಗಳಿಗೆ ಎಲ್ಟಿಸಿ ಸೌಲಭ್ಯ
ಕೆಎಸ್ ಟಿ ಡಿ ಸಿ ನಿಮ್ಮ ಆಯ್ಕೆಯಾಗಲಿ
ಕೆಎಸ್ ಟಿ ಡಿ ಸಿ ಯ ಪ್ಯಾಕೇಜ್ ಬಜೆಟ್ ಸ್ನೇಹಿಯಾಗಿದ್ದು, ಬೇರೆಲ್ಲೂ ಸಿಗದ ಆರಾಮದಾಯಕ, ಸುರಕ್ಷಿತ ಮತ್ತು ಸುಸಜ್ಜಿತ ಯೋಜನೆಯ ಪ್ರವಾಸದ ಭರವಸೆಯನ್ನು ನೀಡುತ್ತದೆ.
ಆರಾಮದಾಯಕ ಪ್ರಯಾಣ: ಆಧುನಿಕ ಬಸ್ಗಳು ಮತ್ತು ಅನುಭವಿ ಚಾಲಕರೊಂದಿಗೆ ಇಡೀ ದಿನ ಸುರಕ್ಷಿತ ಪ್ರಯಾಣ ಮಾಡಬಹುದು.
ವಿಶೇಷ ಗೈಡ್ ಗಳು: ತಾಣಗಳ ಇತಿಹಾಸ ಮತ್ತು ಮಹತ್ವವನ್ನು ವಿವರಿಸುವ ತಜ್ಞ ಗೈಡ್‌ಗಳು ಪ್ರವಾಸಿಗರೊಂದಿಗೆ ಇರುತ್ತಾರೆ.
ಸಮಗ್ರ ಯೋಜನೆ: ಪ್ಯಾಕೇಜ್ ನಲ್ಲಿ ಇರುವ ಎಲ್ಲ ತಾಣಗಳನ್ನೂ ಮನಸ್ಸಿಗೆ ಸಮಾಧಾನ ಆಗುವವರೆಗೂ ನೋಡಬಹುದು. ಹಿತಾನುಭವ ಪಡೆಯಬಹುದು. ಸಮಯದ ಪ್ಲ್ಯಾನಿಂಗ್ ಕೂಡ ಅತ್ಯಂತ ಶಿಸ್ತಿನಿಂದ ರೂಪಿಸಿರಲಾಗುತ್ತದೆ.
ಕೈಗೆಟುಕುವ ಬೆಲೆ: ಎಲ್ಲರಿಗೂ ಒಗ್ಗುವ, ಮಧ್ಯಮ ವರ್ಗದವರ ಕನಸು ನನಸು ಮಾಡುವ, ಕೈಗೆಟುಕುವ ದರದಲ್ಲಿ ಪ್ರಯಾಣ ಸೇವೆ ಸಿಗುತ್ತದೆ. ಮತ್ತೇನು ಯೋಚನೆ ಮಾಡ್ತಿದ್ದೀರಿ? ಕೆಎಸ್ ಟಿಡಿಸಿ ನಿಮ್ಮ ಸಂಗಾತಿ. ಈಗಲೇ ಬುಕ್ ಮಾಡಿ. ಹೊರಡಿ. ಜಗತ್ತು ಕೈ ಬೀಸಿ ಕರೆಯುತ್ತಿದೆ.

ಹಾಸನಾಂಬ ದರ್ಶನ (ಮೈಸೂರಿನಿಂದ)
1 ದಿನ
ಬೆಳಗ್ಗೆ 7:00 ಗಂಟೆಗೆ : ಮೈಸೂರಿನ ಹೊಟೇಲ್ ಮಯೂರ ಹೊಯ್ಸಳದಿಂದ ಹೊರಡಲಾಗುತ್ತದೆ.
ಬೆಳಗ್ಗೆ 8:00 ಗಂಟೆಗೆ : ಉಪಾಹಾರ
ಬೆಳಗ್ಗೆ 10:00- ಮಧ್ಯಾಹ್ನ 2:30 ಗಂಟೆ : ಹಾಸನಾಂಬ ದೇವಿ ದರ್ಶನ ಮತ್ತು ಊಟ
ಮಧ್ಯಾಹ್ನ 3:30-4:30 ಗಂಟೆ : ಹೊಯ್ಸಳೇಶ್ವರ ದೇವಸ್ಥಾನ, ಹಳೆಬೀಡು
ಸಂಜೆ 5:00-6:00 ಗಂಟೆ: ಚೆನ್ನಕೇಶ್ವರ ದೇವಸ್ಥಾನ, ಬೇಲೂರು
ರಾತ್ರಿ 9:30 ಗಂಟೆ : ಮೈಸೂರಿಗೆ ಹಿಂತಿರುಗಲಾಗುತ್ತದೆ
ಹಾಸನಾಂಬ ದರ್ಶನ (ಬೆಂಗಳೂರಿನಿಂದ)
1 ದಿನ
ಬೆಳಗ್ಗೆ 6:00 ಗಂಟೆ: ಯಶವಂತಪುರದ ಕೆಎಸ್‌ಟಿಡಿಸಿ ಕಚೇರಿಯಿಂದ ಹೊರಡಲಾಗುತ್ತದೆ.
ಬೆಳಗ್ಗೆ 8:00 ಗಂಟೆ: ಯಡಿಯೂರಿನಲ್ಲಿ ಉಪಾಹಾರ.
ಬೆಳಗ್ಗೆ 10:00 ಗಂಟೆ-10:30 : ನುಗ್ಗೆಹಳ್ಳಿ ಲಕ್ಷ್ಮೀ ನರಸಿಂಹ ದೇವಸ್ಥಾನಕ್ಕೆ ಭೇಟಿ.
ಬೆಳಗ್ಗೆ 11:00 ಗಂಟೆ-12:00 ಗಂಟೆ : ನಗರ ನವಿಲೆ ನಾಗೇಶ್ವರ ದೇವಸ್ಥಾನಕ್ಕೆ ಭೇಟಿ.
ಮಧ್ಯಾಹ್ನ 1:00-2:00 ಗಂಟೆ : ಊಟ
ಮಧ್ಯಾಹ್ನ 2:30-ಸಂಜೆ 5:00 ಗಂಟೆ : ಹಾಸನಾಂಬ ದರ್ಶನ
ರಾತ್ರಿ 10:00 ಗಂಟೆ : ಬೆಂಗಳೂರಿಗೆ ಹಿಂತಿರುಗಲಾಗುತ್ತದೆ
ಚಿತ್ರದುರ್ಗ ಪ್ರವಾಸ (ಬೆಂಗಳೂರಿನಿಂದ)
1 ದಿನ
ಬೆಳಗ್ಗೆ 6:00 ಗಂಟೆ: ಯಶವಂತಪುರದ ಕೆಎಸ್‌ಟಿಡಿಸಿ ಕಚೇರಿಯಿಂದ ಹೊರಡಲಾಗುತ್ತದೆ
ಬೆಳಗ್ಗೆ 8:30 ಗಂಟೆ : ದಾರಿ ಮಧ್ಯೆ ಉಪಾಹಾರ
ಬೆಳಗ್ಗೆ 10:00- ಮಧ್ಯಾಹ್ನ 1:30 : ಚಿತ್ರದುರ್ಗ ಕೋಟೆ
ಮಧ್ಯಾಹ್ನ 1:30 : ಊಟ
ಮಧ್ಯಾಹ್ನ 1:30- ಸಂಜೆ 5:00 : ಚಂದ್ರವಳ್ಳಿ ಗುಹೆ, ನಿಜಲಿಂಗಪ್ಪ ಸ್ಮಾರಕ ಭವನ
ರಾತ್ರಿ 9:30 ಗಂಟೆ : ಬೆಂಗಳೂರಿಗೆ ಹಿಂತಿರುಗಲಾಗುತ್ತದೆ