• ಕೆ. ರಾಧಾಕೃಷ್ಣ ಹೊಳ್ಳ

ಅಧ್ಯಕ್ಷರು, ಕರ್ನಾಟಕ ರಾಜ್ಯ ಟ್ರಾವೆಲ್ಸ್ ಮಾಲೀಕರ ಸಂಘ (ರಿ.)

--

ಇಂದು ಭಾರತ ‘ವಿಕಸಿತ ರಾಷ್ಟ್ರ’ ಎಂಬ ಗುರಿಯತ್ತ ದೃಢ ಹೆಜ್ಜೆ ಇಡುತ್ತಿದೆ. ಕೈಗಾರಿಕೆ, ಕೃಷಿ, ಶಿಕ್ಷಣ, ತಂತ್ರಜ್ಞಾನದ ಜತೆಗೆ ಪ್ರವಾಸೋದ್ಯಮವೂ ವಿಕಸಿತ ಭಾರತದ ಆಧಾರಸ್ತಂಭವಾಗಿದೆ. ಪ್ರವಾಸೋದ್ಯಮ ಎಂದರೆ ಕೇವಲ ಮನರಂಜನೆಯಲ್ಲ, ಅದು ದೇಶದ ಆರ್ಥಿಕ ಬೆಳವಣಿಗೆಯ ಶಕ್ತಿ, ಉದ್ಯೋಗ ಸೃಷ್ಟಿಯ ಸಾಧನ ಮತ್ತು ಸಂಸ್ಕೃತಿಯ ಸಂರಕ್ಷಣೆಯ ಮಾರ್ಗ.

ಜಾಗತಿಕ ಪ್ರವಾಸೋದ್ಯಮದಲ್ಲಿ ಭಾರತ ಇಂದು ಎಂಟನೇ ಸ್ಥಾನ ಮತ್ತು ಕರ್ನಾಟಕ ದೇಶೀಯ ಪ್ರವಾಸೋದ್ಯಮದಲ್ಲಿ ಮೂರನೇ ಸ್ಥಾನ, ಅಂತಾರಾಷ್ಟ್ರೀಯ ಪ್ರವಾಸೋದ್ಯಮದಲ್ಲಿ ನಾಲ್ಕನೇ ಸ್ಥಾನ ಪಡೆದಿರುವುದು ಹೆಮ್ಮೆಯ ವಿಷಯ. ಇದು ಸರಕಾರದ ಸಾಧನೆಯಷ್ಟೇ ಅಲ್ಲ —ಉದ್ಯಮಿಗಳು, ಕ್ಷೇತ್ರದ ಪ್ರೋತ್ಸಾಹಿ ಯುವ ಕಾರ್ಮಿಕರು ಮತ್ತು ಜನಸಾಮಾನ್ಯರ ಶ್ರಮದ ಫಲ.

ಹಿಮಾಲಯದಿಂದ ಕನ್ಯಾಕುಮಾರಿವರೆಗೆ, ಧಾರ್ಮಿಕ ಕ್ಷೇತ್ರಗಳಿಂದ ಯೋಗ–ಆಯುರ್ವೇದವರೆಗೆ, ಕರಾವಳಿಯಿಂದ ಹಿಲ್‌ ಸ್ಟೇಷನ್‌ಗಳವರೆಗೆ—ಭಾರತದ ವೈವಿಧ್ಯತೆ ಪ್ರವಾಸೋದ್ಯಮದ ದೊಡ್ಡ ಶಕ್ತಿ.

ಪ್ರವಾಸೋದ್ಯಮ ಬೆಳೆಯುತ್ತಾ ಬಂದಂತೆ ಗ್ರಾಮೀಣ ಆರ್ಥಿಕತೆ, ಹೋಮ್‌ ಸ್ಟೇಗಳು, ಹಸ್ತಕಲೆಗಳು ಮತ್ತು ಸ್ಥಳೀಯ ಆಹಾರ ಪದ್ಧತಿಗಳು ಬಲಗೊಳ್ಳುತ್ತವೆ. ಮಹಿಳೆಯರಿಗೆ ಉದ್ಯೋಗ, ಯುವಕರಿಗೆ ಸ್ವಾವಲಂಬನೆ ದೊರೆಯುತ್ತದೆ.

ತಂತ್ರಜ್ಞಾನ ಆಧಾರಿತ ಪ್ರವಾಸೋದ್ಯಮದಲ್ಲಿ ಯುವಕರು ತಮ್ಮ ಭವಿಷ್ಯ ನಿರ್ಮಿಸಿಕೊಳ್ಳಬೇಕು. ಕಾಲೇಜು ಪಠ್ಯಕ್ರಮದಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಪ್ರಾಮುಖ್ಯತೆ ಅಗತ್ಯ.

ಜಗತ್ತಿನಂತೆ ಕರ್ನಾಟಕವೂ ಪ್ರವಾಸಿ ಮಿತ್ರ ರಾಜ್ಯವಾಗಬೇಕು. ಹೊರ ರಾಜ್ಯಗಳಿಂದ ಬರುವ ಪ್ರವಾಸಿಗರಿಗೆ ರಸ್ತೆ ತೆರಿಗೆಯಲ್ಲಿ ಪೂರ್ಣ ವಿನಾಯಿತಿ ನೀಡಿ ಪ್ರವಾಸೋದ್ಯಮವನ್ನು ಆರ್ಥಿಕ ಸಬಲೀಕರಣದ ಮೂಲ ಮಾಡಬೇಕಾದ ಕಾಲ ಸನ್ನಿಹಿತವಾಗಿದೆ.

ಪ್ರವಾಸೋದ್ಯಮ ಎಂದರೆ ರಾಷ್ಟ್ರ ನಿರ್ಮಾಣ.

ವಿಕಸಿತ ಭಾರತ ಯುವ ಶಕ್ತಿಯಿಂದ, ಪ್ರವಾಸೋದ್ಯಮದ ಮೂಲಕ.