ಅಮರನಾಥ ಯಾತ್ರೆಗೆ 3.60 ಲಕ್ಷ ನೋಂದಣಿ
ಅಮರನಾಥ ಯಾತ್ರೆಗೆ ಎರಡು ತಿಂಗಳಷ್ಟೇ ಬಾಕಿ ಇದೆ. ಹಿಮಲಿಂಗವಿರುವ ಅಮರನಾಥದ ಗುಹಾಂತರ ದೇಗುಲಕ್ಕೆ ಜುಲೈ 3ರಿಂದ ಯಾತ್ರೆ ಆರಂಭವಾಗಿ ಅಗಸ್ಟ್.19ರಂದು ರಕ್ಷಾ ಬಂಧನ ಹಬ್ಬದ ವೇಳೆಗೆ ಮುಕ್ತಾಯಗೊಳ್ಳಲಿದೆ.
ಶ್ರೀನಗರ: ಅಮರನಾಥ ಯಾತ್ರೆಗೆ ದಿನಗಣನೆ ಪ್ರಾರಂಭವಾಗಿದೆ. ಇನ್ನು ಎರಡು ತಿಂಗಳಳಲ್ಲಿ ಅಂದರೆ ಜುಲೈ 3ರಿಂದ ಯಾತ್ರೆ ಆರಂಭವಾಗಿ ಅಗಸ್ಟ್.19ರ ವೇಳೆಗೆ ಹಿಮಲಿಂಗವಿರುವ ಅಮರನಾಥದ ಗುಹಾಂತರ ದೇವಾಲಯದ ಭೇಟಿ ಮುಕ್ತಾಯಗೊಳ್ಳಲಿದೆ.

ಯಾತ್ರೆಗೆ ದಿನಗಣನೆ ಪ್ರಾರಂಭವಾಗುತ್ತಿದ್ದಂತೆ, ಯಾತ್ರಿಕರ ನೋಂದಣಿಯೂ ಹೆಚ್ಚುತ್ತಿದೆ. ಭಕ್ತರು ಮಂಜುಗಡ್ಡೆಯಿಂದ ಮಾಡಿದ ಪೌರಾಣಿಕ ಶಿವಲಿಂಗವನ್ನು ವೀಕ್ಷಿಸಲು ಪವಿತ್ರ ಪ್ರಯಾಣಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ಪಹಲ್ದಾಮ್ ನಲ್ಲಿನ ಭಯೋತ್ಪಾದಕ ದಾಳಿ ಬಳಿಕ ಭೀತಿ ಆವರಿಸಿದ್ದರೂ ಭಕ್ತರಲ್ಲಿ ಅಮರನಾಥ ಯಾತ್ರೆಗೆ ತೆರಳುವ ಉತ್ಸಾಹ ಕಡಿಮೆಯಾಗಿಲ್ಲ. ಅಮರ ನಾಥ ಯಾತ್ರೆಗೆ ಈವರೆಗೆ 3.60 ಲಕ್ಷಕ್ಕೂ ಅಧಿಕ ಯಾತ್ರಿಕರು ನೋಂದಾಯಿಸಿಕೊಂಡಿದ್ದಾರೆ. ಪ್ರವಾಸಿಗರ ಸಂಖ್ಯೆ ಇನ್ನೂ ಹೆಚ್ಚುವ ನಿರೀಕ್ಷೆಯಿದೆ.
ಜಮ್ಮು-ಕಾಶ್ಮೀರ ಆಡಳಿತವೂ ಅಮರನಾಥ ಯಾತ್ರೆಗೆ ಸಿದ್ಧತೆಗಳನ್ನು ತೀವ್ರಗೊಳಿಸಿದೆ. ಜಮ್ಮು-ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಶ್ರೀನಗರದ ಪಂಥ ಚೌಕದಲ್ಲಿರುವ ಅಮರನಾಥ ಯಾತ್ರಾ ಸಾರಿಗೆ ವ್ಯವಸ್ಥೆ ಶಿಬಿರ್ಕೆ ಭೇಟಿ ನೀಡಿ ಯಾತ್ರೆ ಸಿದ್ಧತೆಗಳನ್ನು ಪರಿಶೀಲಿಸಿದ್ದಾರೆ.
ಬಾಲ್ಟಲ್ ಮತ್ತು ಚಂದನ್ವಾರಿ ಪ್ರಮುಖ ಮಾರ್ಗಗಳಲ್ಲಿ ಹಿಮ ಆವರಿಸಿದೆ. ರೈಲ್ವೆ ಹಳಿಗಳು ಹಿಮದಿಂದ ಆವೃತವಾಗಿದೆ. ತೆರವು ಕಾರ್ಯ ಆರಂಭವಾಗಿದೆ.