ಆರೋಗ್ಯಕ್ಕೊಂದು ಹೊಸ ಆಯಾಮ - ಯೋಗಬನ
ಮನಶ್ಶಾಂತಿ, ಆರೋಗ್ಯ, ದೈಹಿಕ ಮತ್ತು ಮಾನಸಿಕ ಫಿಟ್ನೆಸ್ ಇವೆಲ್ಲವನ್ನೂ ಬಯಸುವವರಿಗೆ ಹೇಳಿ ಮಾಡಿಸಿದಂಥ ಒಂದು ಜಾಗವಿದ್ದರೆ ಅದು ಯೋಗಬನ. ಯೋಗ ಬನವನ್ನು ಇನ್ನೊಂದು ಹೆಸರಿನಿಂದಲೂ ಗುರುತಿಸಲಾಗುತ್ತದೆ. ಸರ್ವಕ್ಷೇಮ ಆಸ್ಪತ್ರೆ ಮತ್ತು ಸಂಶೋಧನಾ ಪ್ರತಿಷ್ಠಾನ(ಎಸ್ ಎಚ್ ಆರ್ ಎಫ್). ಸಮೃದ್ಧ ಪರಿಸರದ ಮಧ್ಯೆ ಸುಂದರ ವಾಸ್ತವ್ಯ, ಆಟ, ಊಟೋಪಚಾರ ಬಯಸುತ್ತಿದ್ದೀರಿ ಅಂದರೆ ನಿಮಗಾಗಿಯೇ ಎಂಬಂತಿದೆ ಯೋಗಬನ. ಇದೊಂದು ಸುಂದರ ಪ್ರವಾಸಿ ತಾಣದಂಥ ಆರೋಗ್ಯಧಾಮ. ಇಲ್ಲಿಗೆ ಬರುವ ಎಲ್ಲರನ್ನೂ ಚಿಕಿತ್ಸಕ ಪದ್ಧತಿಯಲ್ಲೇ ಉಪಚರಿಸಲಾಗುತ್ತದೆ.
ಸದೃಢ ದೇಹದಲ್ಲಿ ಸದೃಢ ಮನಸಿರುತ್ತದೆ. ಇದು ಸ್ವಾಮಿ ವಿವೇಕಾನಂದರು ಯುವ ಸಮೂಹಕ್ಕೆ ನೀಡಿದ್ದ ಆಲೋಚನೆಯಾಗಿತ್ತು. ಯೋಗಿಯಾಗಿ ಜಗತ್ತನ್ನೇ ಸುತ್ತಿದ ಯುಗಪುರುಷ ಸ್ವಾಮಿ ವಿವೇಕಾನಂದರು. ಸದೃಢಕಾಯ, ಸದೃಢಮನಸ್ಕರಾಗಿದ್ದ ಅವರು ಜಗತ್ತನ್ನೇ ಸುತ್ತಿ ಜ್ಞಾನವನ್ನು ಹಂಚಿದ್ದ ಭಾರತದ ಯುವ ಸಂತ.
ʻಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿʼ ಹೀಗೆಂದು ಎಚ್ಚರಿಸಿ ಆ ಮೂಲಕ ಭಾರತದ ಭವಿಷ್ಯವನ್ನು ಜಾಗೃತಗೊಳಿಸಿದ್ದರು. ಅವರು ಭೌತಿಕವಾಗಿ ನಮ್ಮೊಂದಿಗಿಲ್ಲದಿರಬಹುದು. ಆದರೆ ಅವರ ಚಿಂತನೆಗಳು ಚಿರಂತನ. ವಿವೇಕರ ಚಿಂತನೆಗಳನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಬೇಕು ಎನ್ನುವ ನಿಟ್ಟಿನಲ್ಲಿ ಡಿವೈನ್ ಪಾರ್ಕ್ ಇಂದಿಗೂ ಕಾರ್ಯ ನಿರ್ವಹಿಸುತ್ತಿದೆ. ಯೋಗಬನ ಎಂಬ ಅತಿವಿಶಿಷ್ಟ ಮಾದರಿಯ ಚಿಕಿತ್ಸಾ ಕೇಂದ್ರವನ್ನು ಮುನ್ನೆಲೆಗೆ ತಂದು ಯೋಗ, ಅಧ್ಯಾತ್ಮ, ಪ್ರಕೃತಿ, ಆಯುರ್ವೇದ ಚಿಕಿತ್ಸೆಯ ಜತೆಗೆ ವಿವೇಕಾನಂದರ ಚಿಂತನೆಗಳನ್ನು ಜೀವಂತವಾಗಿರಿಸುವ ಸಾರ್ಥಕ ಕಾರ್ಯ ಮಾಡುತ್ತಿದ್ದಾರೆ ಡಾ.ವಿವೇಕ್. ಪ್ರವಾಸ ನಿಮ್ಮಿತ್ತ ಬಂದರೂ ಚಿಕಿತ್ಸೆ ನಿಮಿತ್ತ ಬಂದರೂ ಇಲ್ಲಿನ ವಾಸ್ತವ್ಯ ನಿಮ್ಮನ್ನು ಚೈತನ್ಯಪೂರ್ಣರನ್ನಾಗಿ ಮಾಡುತ್ತದೆ. ಮನಸು ಮತ್ತು ದೇಹಕ್ಕೆ ಮತ್ತಷ್ಟು ಆರೋಗ್ಯ ಉಲ್ಲಾಸ ನೀಡಿ ಸಕಾರಾತ್ಮಕ ಭಾವಗಳನ್ನು ತುಂಬಿ ಕಳಿಸುತ್ತದೆ ಯೋಗಬನ.
ಯೋಗಬನ
ಕುಂದಾಪುರ ಬಳಿಯ ಸಾಲಿಗ್ರಾಮದಿಂದ ಕೇವಲ ಐದು ಕಿಮೀ ದೂರದಲ್ಲಿದ್ದು, ಸುಂದರ ಪರಿಸರದ ನಡುವೆ ಅತ್ಯಂತ ಸುಂದರ ರೂಪದೊಂದಿಗೆ ಮೈದಳೆದಿದೆ ಈ ಯೋಗಬನ. ಸುತ್ತಲೂ ಹಚ್ಚ ಹಸಿರಿನ ಪರಿಸರ, ಕುಂದಾಪುರದ ಕಾನನ, ಹಕ್ಕಿಗಳ ಗಾನ, ಜಿಂಕೆಗಳ ಕೂಟ ಎಲ್ಲವೂ ಮೇಳೈಸಿದಂತೆ ಗುಡಿಗಟ್ಟಿ ನಿಂತಿದೆ ಇಲ್ಲಿನ ಯೋಗಬನ.

ಮನಶ್ಶಾಂತಿ, ಆರೋಗ್ಯ, ದೈಹಿಕ ಮತ್ತು ಮಾನಸಿಕ ಫಿಟ್ನೆಸ್ ಇವೆಲ್ಲವನ್ನೂ ಬಯಸುವವರಿಗೆ ಹೇಳಿ ಮಾಡಿಸಿದಂಥ ಒಂದು ಜಾಗವಿದ್ದರೆ ಅದು ಯೋಗಬನ. ಯೋಗ ಬನವನ್ನು ಇನ್ನೊಂದು ಹೆಸರಿನಿಂದಲೂ ಗುರುತಿಸಲಾಗುತ್ತದೆ. ಸರ್ವಕ್ಷೇಮ ಆಸ್ಪತ್ರೆ ಮತ್ತು ಸಂಶೋಧನಾ ಪ್ರತಿಷ್ಠಾನ(ಎಸ್ ಎಚ್ ಆರ್ ಎಫ್).
ಸಮೃದ್ಧ ಪರಿಸರದ ಮಧ್ಯೆ ಸುಂದರ ವಾಸ್ತವ್ಯ, ಆಟ, ಊಟೋಪಚಾರ ಬಯಸುತ್ತಿದ್ದೀರಿ ಅಂದರೆ ನಿಮಗಾಗಿಯೇ ಎಂಬಂತಿದೆ ಯೋಗಬನ. ಇದೊಂದು ಸುಂದರ ಪ್ರವಾಸಿ ತಾಣದಂಥ ಆರೋಗ್ಯಧಾಮ. ಇಲ್ಲಿಗೆ ಬರುವ ಎಲ್ಲರನ್ನೂ ಚಿಕಿತ್ಸಕ ಪದ್ಧತಿಯಲ್ಲೇ ಉಪಚರಿಸಲಾಗುತ್ತದೆ.
ಯೋಗಬನದ ಮುಂದೆಯೇ ಇಳಿದರೆ, ಆಡಳಿತ ಕಚೇರಿಯಲ್ಲಿ ಚೆಕ್‌ಇನ್ ಮುಗಿಸಿ. ನಿಮಗೆ ಅಗತ್ಯವಿರುವ ಚಿಕಿತ್ಸೆಯ ಕುರಿತು ತಜ್ಞರಿಂದ ಮಾಹಿತಿ ಪಡೆದು ಪ್ಯಾಕೇಜ್‌ನಲ್ಲಿ ಕಾಯ್ದಿರಿಸಿದ ವಸತಿಯಲ್ಲಿ ಉಳಿದುಕೊಳ್ಳಬಹುದು. ಇಲ್ಲಿನ ವಾತಾವರಣ, ದಿನಚರಿ, ಆಹಾರ, ವಾಸ್ತು, ಪ್ರಕೃತಿ ಎಲ್ಲವೂ ನಿಮ್ಮ ಆರೋಗ್ಯ ವೃದ್ಧಿಯನ್ನೇ ಕೇಂದ್ರೀಕರಿಸಿ ರೂಪಿಸಲಾಗಿದೆ.
ದೇವಾಲಯ ವಾಸ್ತುಶಿಲ್ಪ
ಈ ಪ್ರತಿಷ್ಠಾನದ ನಿರ್ಮಾಣವು ದೇವಾಲಯದ ವಾಸ್ತುಶಿಲ್ಪವನ್ನು ಹೊಂದಿದೆ. ಅಂದರೆ ಸಾಮಾನ್ಯವಾಗಿ ದೇವಾಲಯಗಳಲ್ಲಿ ಹೊರ ಪ್ರದಕ್ಷಿಣೆ ಪಥ, ಒಳ ಪ್ರದಕ್ಷಿಣೆ ಪಥ, ಹೃದಯ ಭಾಗದಲ್ಲಿ ಗರ್ಭಗುಡಿ ಮಧ್ಯೆ ದೇವರ ವಿಗ್ರಹವಿರುತ್ತದೆ. ಅದರಂತೆ ಪ್ರತಿಷ್ಢಾನದ ಹೊರ ಪ್ರದಕ್ಷಿಣೆ ಪಥವಾಗಿ ಸೈಕ್ಲಿಂಗ್ ಟ್ರ್ಯಾಕ್, ಒಳ ಪ್ರದಕ್ಷಿಣೆ ಪಥವಾಗಿ ವಾಕಿಂಗ್ ಪಾತ್, ಮಧ್ಯೆ ಕಮಲದ ಆಕಾರದ ಕೊಳದ ನಡುವೆ ಜಗತ್ತಿನ ಅತಿ ಎತ್ತರದ ಸ್ವಾಮಿ ವಿವೇಕಾನಂದರ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಕಮಲವು ಪವಿತ್ರತೆಯ ಸಂಕೇತ ಎಂದು ನಂಬಲಾಗಿದ್ದು ಅದರ ನಡುವೆ ವಿವೇಕಾನಂದರನ್ನು ಪ್ರತಿಷ್ಠಾಪಿಸಿರುವುದು ವಿಶೇಷವಾಗಿದೆ.
ಸೈಕ್ಲಿಂಗ್ ಟ್ರ್ಯಾಕ್
ಇದು 1.2 ಕಿಮೀ ಸುತ್ತಳತೆಯಷ್ಟು ವಿಶಾಲವಾಗಿದ್ದು, ಸುಸಜ್ಜಿತವಾಗಿದೆ. ಪಾತ್‌ನ ಇಕ್ಕೆಲಗಳಲ್ಲಿ ನೀವು ಕಣ್ಣಾಡಿಸಿದಷ್ಟೂ ಕಾಣುವುದೆಲ್ಲಾ ಹಚ್ಚಹಸಿರು. ಇಲ್ಲಿ ಚಿಕಿತ್ಸೆ ಪಡೆಯಲು ಬರುವ ಎಲ್ಲರಿಗೂ ಸೈಕಲ್‌ನ್ನು ಪ್ರತಿಷ್ಠಾನವೇ ನೀಡುತ್ತದೆ. ಸಾಕಾಗುವಷ್ಟು ಓಡಿಸಿ ಮರಳಿ ಅಲ್ಲಿಯೇ ನಿಲ್ಲಿಸಿದರಾಯಿತು.
ವಾಕಿಂಗ್ ಪಾತ್
ಇಲ್ಲಿ ಒಟ್ಟು ಮೂರು ಪಾತ್‌ವೇಗಳಿದ್ದು, ಸುಂದರ ಪರಿಸರದ ಸಿರಿಯನ್ನು ಕಾಲ್ನಡಿಗೆಯ ಮೂಲಕ ಆಸ್ವಾದಿಸುವುದು ರೋಗೋಪಶಮನಕ್ಕೆ ಉತ್ತಮವಾಗಿದೆ. ಇದು ವೈಜ್ಞಾನಿಕವೂ ಹೌದು. ಪಾತ್‌ವೇ ನಡಿಗೆಯ ವೇಳೆ ನವಿಲು, ಕೋಗಿಲೆ, ಕಾಜಾಣಗಳ ಧನಿಗಳು ನಿಮ್ಮ ಕಿವಿಗೆ, ಮನಸಿಗೆ ಮುದ ನೀಡುತ್ತವೆ. ರಿಫ್ಲೆಕ್ಸೋಲಜಿಯ ರಿಫ್ಲೆಕ್ಷನ್ ಎಂಬಂತೆ ಈ ಪಥಗಳ ಸಂಚಾರ ನಿಮ್ಮ ಮನಃಪಟಲಗಳಲ್ಲಿ ಮೂಡಿಬರುತ್ತವೆ.

ಆಕರ್ಷಕ ವಿವೇಕಾನಂದ ಪ್ರತಿಮೆ
ಇಲ್ಲಿರುವುದು ಜಗತ್ತಿನ ಅತಿ ಎತ್ತರದ ಸ್ವಾಮಿ ವಿವೇಕಾನಂದ ಪ್ರತಿಮೆ. 35 ಅಡಿ ಎತ್ತರದ ಈ ಪ್ರತಿಮೆ ಸರ್ವಕ್ಷೇಮ ಆಸ್ಪತ್ರೆ ಮತ್ತು ಸಂಶೋಧನಾ ಪ್ರತಿಷ್ಠಾನದ ಹೃದಯ ಭಾಗದಲ್ಲಿದೆ. ನೀವು ಸುತ್ತಲಿನ 500 ಮೀ ದೂರದಲ್ಲಿ ಎಲ್ಲಿಂದ ನಿಂತು ನೋಡಿದರೂ ಸ್ವಾಮಿ ವಿವೇಕಾನಂದರ ದರ್ಶನವಾಗುತ್ತದೆ. ಈ ಪ್ರತಿಮೆಯು ಫೆ.1.2020ರಲ್ಲಿ ಉದ್ಘಾಟನೆಗೊಂಡಿದ್ದು, ಅಂದಿನಿಂದಲೂ ಇದು ಇಲ್ಲಿನ ಆಕರ್ಷಣೆಯ ತಾಣವಾಗಿ ಗುರುತಿಸಿಕೊಂಡಿದೆ.
ಪ್ರತಿಮೆಯ ಸುತ್ತ ಏನೇನಿದೆ?
ಒಳಾಂಗಣ ಆಟಗಳ ಮಂದಿರ (ಮಂಟಪ 1)
ಇಲ್ಲಿ ಒಳಾಂಗಣ ಆಟಗಳಾದ ಅಳಗುಳಿ ಮನೆ, ಚದುರಂಗ, ಚೌಕಬಾರ, ಹಾವು ಏಣಿ, ಕೇರಂ ಮೊದಲಾದ ಆಟಗಳಿಗೆ ಅವಕಾಶ ಮಾಡಿಕೊಡಲಾಗಿದೆ.ಆಟವಾಡಿ ಉಲ್ಲಸಿತರಾಗಲು ಅವಕಾಶ ನೀಡಲಾಗಿದೆ.
ಥೆರಪಿ ಕೇಂದ್ರ (ಸಂಶೋದನ)
ಈ ಕೇಂದ್ರದಲ್ಲಿ ಥೆರಪೆಟಿಕ್ ಮಸಾಜ್, ಹಿಪ್ ಬಾತ್, ಆರ್ಮ್ಸ್ & ಫೂಟ್ ಬಾತ್, ಸೌನಾ ಬಾತ್, ಸ್ಟೀಮ್ ಬಾತ್, ಸ್ಪೈನಲ್ ಸ್ಪ್ರೇ ಹೀಗೆ ವೈವಿಧ್ಯಮಯ ಥೆರಪಿಗಳಿಗಾಗಿ ಸುಸಜ್ಜಿತ ಕೊಠಡಿಗಳಿವೆ. ನೂತನ ಉಪಕರಣಗಳೊಂದಿಗೆ ಇಲ್ಲಿ ಎಲ್ಲಾ ಥೆರಪಿಗಳನ್ನು ನಿರ್ವಹಿಸಲಾಗುತ್ತದೆ.

ಯೋಗ ಮಂದಿರ (ಯೋಗಶ್ರೀ ಜಯಚಂದ್ರ)
ಇಲ್ಲಿ ಯೋಗಕ್ಕಾಗಿ ವಿಶಾಲ ಯೋಗ ಮಂದಿರವಿದ್ದು, ನುರಿತ ಯೋಗ ತರಬೇತುದಾರರ ಮಾರ್ಗದರ್ಶನದಲ್ಲಿ ಯೋಗಾಭ್ಯಾಸವನ್ನು ಮಾಡಬಹುದು. ಇಲ್ಲಿ ಎಲ್ಲರೂ ಮಾಡಬಹುದಾದ ಮತ್ತು ಪರಿಣಾಮಕಾರಿ ಆಸನಗಳನ್ನು ಮಾಡಿಸಲಾಗುತ್ತಿದ್ದು, ಹೆಚ್ಚಾಗಿ ಓಡಾಡಲಾಗದವರೂ ಸೇರಿ ಎಲ್ಲ ವಯಸ್ಸಿನ ಜನರೂ ಭಾಗವಹಿಸುತ್ತಿರುವುದು ವಿಶೇಷ.
ಸೌಂದರ್ಯ ವೃದ್ಧಿ, ಬೊಜ್ಜು ನಿವಾರಣೆ, ದೇಹವನ್ನು ಸದೃಢವಾಗಿರಿಸಲು, ಅಂಗಾಂಗ ನೋವುಗಳ ನಿವಾರಣೆಯಂಥ ಹಲವು ಸಮಸ್ಯೆಗಳಿಗೆ ಪರಿಹಾರವಾಗಿ ಇಲ್ಲಿ ಯೋಗ ಚಿಕಿತ್ಸೆಯನ್ನು ಕನ್ಸಲ್ಟೆನ್ಸಿಯೊಂದಿಗೆ ಹೇಳಿಕೊಡಲಾಗುತ್ತಿದೆ. ಹಾಸ್ಯಯೋಗದ ಮೂಲಕ ಮನರಂಜಿಸುತ್ತಲೇ ಚಿಕಿತ್ಸೆ ನೀಡುವುದು ಇಲ್ಲಿನ ಮತ್ತೊಂದು ವಿಶೇಷ. ಇಲ್ಲಿಗೆ ಭೇಟಿ ನೀಡುವ ಜನರು ತಮ್ಮ ಯೋಜಿತ ಪ್ಯಾಕೇಜ್ ಮುಗಿದ ನಂತರ ತಾವಾಗಿ ಅಳವಡಿಸಿಕೊಳ್ಳಬಹುದಾದ ಸರಳ ಯೋಗ ಕ್ರಮಗಳನ್ನು ಇಲ್ಲಿ ಅನುಸರಿಸಲಾಗುತ್ತದೆ.
ಜಯಾಂಗಣ (ಪಾಕಶಾಲೆ)
ಜಯಾಂಗಣ ಅಂದರೆ ಇಲ್ಲಿರುವ ರೆಸ್ಟೋರೆಂಟ್ ನ ಹೆಸರು. ಸುಸಜ್ಜಿತ ವ್ಯವಸ್ಥೆಯೊಂದಿಗೆ 50ಜನರು ಕುಳಿತುಕೊಳ್ಳಬಹುದಾದಷ್ಟು ವಿಶಾಲವಾಗಿದೆ. ಸಂಪೂರ್ಣ ಸಸ್ಯಾಹಾರಿಯಾಗಿದ್ದು, ಪ್ರತಿದಿನವೂ ವೈವಿಧ್ಯಮಯ ಭೋಜನಗಳನ್ನು ಸವಿಯಬಹುದು. ಪಾಕಶಾಲೆಯು ಇದಕ್ಕೆ ಅಂಟಿಕೊಂಡಂತಿದ್ದು ಸದಾ ಶುಚಿತ್ವ ನಿಮ್ಮ ಕಣ್ಣಿಗೆ ಬೀಳುತ್ತದೆ.
ತರಕಾರಿಗಾಗಿ ಇಲ್ಲೇ ಸಾವಯವ ಕೃಷಿ ತೋಟವೊಂದನ್ನು ನಿರ್ವಹಿಸಲಾಗುತ್ತಿದ್ದು, ಇದರಿಂದ ಬೆಳೆದ ತರಕಾರಿಗಳನ್ನೇ ಅಡುಗೆಗೆ ಬಳಸಲಾಗುತ್ತಿರುವುದು ವಿಶೇಷ.
ಮಂದಿರ (ಮಂಟಪ 2)
ಜಯಾಂಗಣದ ನಂತರ ಸಿಗುವುದು ಮಂದಿರ. ಇಲ್ಲಿ ಲಕ್ಷ್ಮೀ ಸಮೇತ ಶೇಷಶಯನ ವಿಗ್ರಹವನ್ನು ಇರಿಸಲಾಗಿದ್ದು, ಪ್ರಶಾಂತ ವಾತಾವರಣವಾದುದರಿಂದ ಮನಸನ್ನು ಅಹ್ಲಾದಕರಗೊಳಿಸುವ ಶಕ್ತಿ ಅಲ್ಲಿ ಅಡಕವಾಗಿದೆ. ಭಜನಾ ಕಾರ್ಯಕ್ರಮವನ್ನೂ ಇಲ್ಲಿ ಹಮ್ಮಿಕೊಳ್ಳಲಾಗುತ್ತದೆ. ಸುತ್ತಲೂ ಕುಳಿತುಕೊಳ್ಳಲು ಅವಕಾಶ ಕಲ್ಪಿಸಲಾಗಿದ್ದು, ಪ್ರಶಾಂತತೆಯ ಜತೆಗೆ ದೈವಿಕತೆಯ ಅನುಭೂತಿಯನ್ನು ಅಸ್ವಾದಿಸಬಹುದಾಗಿದೆ.
ಇವೆಲ್ಲವೂ ಸ್ವಾಮಿ ವಿವೇಕಾನಂದರ ಸುತ್ತ ಒಂದು ಸುತ್ತಿನಲ್ಲೇ ನಿಮ್ಮ ಕಣ್ಣಿಗೆ ಬೀಳುವ ವೈಶಿಷ್ಟ್ಯಗಳು.
ಪ್ರಶಾಂತ ವಾಸಗೃಹ
ಎರಡು ಅಂತಸ್ತಿನ ಈ ಸುಂದರ ವಸತಿ ಗೃಹದಲ್ಲಿ ಏಕಕಾಲದಲ್ಲಿ 50ಜನರು ಉಳಿದುಕೊಳ್ಳಬಹುದಾಗಿದೆ. ಇದಕ್ಕಾಗಿ 25 ಸುಸಜ್ಜಿತ ರೂಮ್‌ಗಳು ಇಲ್ಲಿವೆ. ಇರುವಷ್ಟು ದಿನಗಳು ಚೆನ್ನಾಗಿ ನಿಮ್ಮನ್ನು ನೋಡಿಕೊಳ್ಳುವ ಸಿಬ್ಬಂದಿ ನಿಮ್ಮ ಕರೆಗೆ ನಿಮಿಷಾರ್ಧದಲ್ಲಿ ಸ್ಪಂದಿಸುತ್ತಾರೆ. ಇಲ್ಲಿ ಉಳಿದುಕೊಳ್ಳುವ ಅಷ್ಟೂ ಹೊತ್ತು ನಿಮ್ಮ ನೆನಪಿನಲ್ಲಿ ಉಳಿಯುತ್ತವೆ. ಇಲ್ಲಿ ಒಟ್ಟಾರೆ ಐದು ವಿಧದ ರೂಮ್‌ಗಳು ಇದ್ದು, ಸ್ಪೆಷಲ್, ಡಿಲಕ್ಸ್ ಎಸಿ ರಹಿತ, ಎಸಿ ರೂಮ್, ಸೆಮಿ ಕಾಟೇಜ್ ಮತ್ತು ಕಾಟೇಜ್ ರೂಮ್‌ಗಳೂ ಇವೆ. ಪ್ರಕೃತಿಯ ಮಡಿಲಿನಲ್ಲಿನ ಈ ಕೋಣೆಗಳಲ್ಲಿ ಉಳಿದುಕೊಳ್ಳುವ ನೀವು ಬೆಳಗ್ಗೆ ಏಳುವುದು ಮಾತ್ರ ಹಕ್ಕಿಗಳ ಹಗಲಿನ ಚೆಲುವಿನ ಕರೆಗೆ. ಹಾಂ… ನೀವು ಓದುಗರಾಗಿದ್ದರೆ ರೂಮ್‌ಗಳಲ್ಲೇ ಇಡಲಾಗಿರುವ ವಿವೇಕ ಪ್ರಕಾಶನದ ವಿವಿಧ ಪುಸ್ತಕಗಳನ್ನು ಓದಿಕೊಳ್ಳಬಹುದು. ದಿನಚರಿಯ ಕುರಿತು ಮುದ್ರಿತ ಪ್ರತಿಯನ್ನು ಅಲ್ಲಿ ನೀಡಲಾಗಿರುತ್ತದೆ. ಓದಿಕೊಂಡು ಓಡಾಡಿಕೊಂಡು ಬರಬಹುದು.

ದಾರಿ ಹೇಗೆ?
ಬೆಂಗಳೂರು ಮಾರ್ಗವಾಗಿ ಹೊರಟರೆ ಕುಂದಾಪುರ ಸಮೀಪದ ಕೋಟಾದಲ್ಲಿ ಇಳಿದು ಅಲ್ಲಿಂದ ಸ್ಥಳೀಯ ಸಾರಿಗೆ ಮೂಲಕ ನೇರವಾಗಿ ಯೋಗಬನಕ್ಕೆ ತಲುಪಬಹುದು. ಸರಕಾರಿ ಸಾರಿಗೆ ವ್ಯವಸ್ಥೆಯೂ ಇದೆ.
ಬುಕಿಂಗ್‌ಗಾಗಿ
ಇಲ್ಲಿ 3,5 ಮತ್ತು 7ದಿನಗಳ ವಿಶೇಷ ಕಾರ್ಯಕ್ರಮಗಳು ನಡೆಯುತ್ತವೆ. ನೀವೂ ಇದರಲ್ಲಿ ಭಾಗವಹಿಸಬೇಕು ಎಂದಾದರೆ ಈ ಕ್ಯೂಆರ್ ಕೋಡ್ ಬಳಸಿ ನಿಮಗೆ ಇಷ್ಟವಾದ ಕಾರ್ಯಕ್ರಮವನ್ನು ಮುಂಚಿತವಾಗಿ ಕಾಯ್ದಿರಿಸಿಕೊಳ್ಳಬಹುದು.
ವೆಬ್‌ಸೈಟ್: https://www.shrfyoga.com/
ಇ-ಮೇಲ್: info@shrfyoga.com
ದೂರವಾಣಿ ಸಂಖ್ಯೆ: 9606031231 / 9606031232
ಯೋಗಬನದಲ್ಲಿ ಯೋಗಕ್ಕೆ ಹೆಚ್ಚು ಪ್ರಾಶಸ್ತ್ಯವಿದೆ. ಇಲ್ಲಿ ಯೋಗವನ್ನು ಜೀವನ ಕ್ರಮವಾಗಿ ಹೇಳಿ ಕೊಡಲಾಗುತ್ತದೆ. ಇಲ್ಲಿಗೆ ಬಂದವರಿಗೆ ಚಿಕಿತ್ಸೆ ನೀಡಿ ಗುಣಪಡಿಸುವುದು ಮಾತ್ರವಲ್ಲ, ಅದರ ಜತೆಗೆ ಅವರು ಮನೆಗಳಿಗೆ ಮರಳಿದ ನಂತರವೂ ಯೋಗವನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಹೇಳಿಕೊಡಲಾಗುತ್ತದೆ. ಇಲ್ಲಿ ಆಧ್ಯಾತ್ಮಿಕ ಚಿಕಿತ್ಸೆಯ ಭಾಗವಾಗಿ ಭಜನೆ ಕಾರ್ಯಕ್ರಮವಿರುತ್ತದೆ. ಅ, ಉ, ಅಂ ಕಾರಗಳ ಚಾಂಟಿಂಗ್, ಸದ್‌ಗ್ರಂಥ ಪಠಣವನ್ನು ಮಾಡಿಸಲಾಗುತ್ತದೆ. ಇಡೀ ಪ್ರತಿಷ್ಠಾನ ದೇವಸ್ಥಾನದ ವಾಸ್ತುಶಿಲ್ಪದಲ್ಲಿದ್ದು, ಹೃದಯ ಭಾಗದಲ್ಲಿರುವ ಕಮಲದ ಆಕಾರದ ಮಧ್ಯೆ ಜಗತ್ತಿನ ಅತಿ ಎತ್ತರದ ವಿವೇಕಾನಂದರ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಅನವಶ್ಯಕ ಮಾತ್ರೆಗಳನ್ನು ಬಿಡಿಸುವುದೂ ನಮ್ಮ ಉದ್ದೇಶ. ಸ್ವಾಮಿ ವಿವೇಕಾನಂದರನ್ನು ಸ್ಫೂರ್ತಿಯಾಗಿ ತೆಗೆದುಕೊಳ್ಳಲಾಗಿರುವ ಪ್ರತಿಷ್ಠಾನವಿದು. ಪ್ರತಿ ತಿಂಗಳಿನ ಎರಡನೇ ಶನಿವಾರ ಇಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ನಡೆಸಲಾಗುತ್ತಿದೆ. ನೂರಾರು ಜನರು ಅಂದು ಇಲ್ಲಿ ಸೇರಿರುತ್ತಾರೆ.
ಡಾ. ಶ್ರೀ ಗಣೇಶ್ ಅಸೋಸಿಯೇಟ್ ಡೈರೆಕ್ಟರ್, ಅಡ್ಮಿನಿಸ್ಟ್ರೇಷನ್ ಅಂಡ್ ಮಾರ್ಕೆಟಿಂಗ್, ಯೋಗಬನ
ಶಿಬಿರದಲ್ಲಿ ಆಹಾರ ವಿಧಾನ, ತಪಾಸಣೆ, ಸುಂದರ ಪ್ರಕೃತಿಯ ಮಧ್ಯೆ ವಿಹಾರ, ರಜೆಯ ಮನರಂಜನೆ ಹೀಗೆ ವಿವಿಧ ಕಾರಣಗಳಿಂದ ಇಲ್ಲಿಗೆ ಜನರು ಬರುತ್ತಾರೆ. ಯೋಗ, ಹಾಸ್ಯ ಯೋಗ ಹೀಗೆ ಸುಧಾರಿತ ಮತ್ತು ತುಂಬಾ ಸರಳ ಯೋಗ ಮತ್ತು ಪ್ರಾಣಾಯಾಮಗಳನ್ನು ಇಲ್ಲಿ ಹೇಳಿಕೊಡುತ್ತೇವೆ. ಯಾವುದೇ ವಯಸ್ಕರು ಇಲ್ಲಿಗೆ ಬರಬಹುದು.
ಉಪವಾಸವನ್ನು ಹೆಚ್ಚಾಗಿ ಶಿಫಾರಸು ಮಾಡುವುದಿಲ್ಲ. ಮೂರು ಹೊತ್ತು ಊಟ ಜತೆಗೆ ಸಂಜೆಯ ಹೊತ್ತಿಗೆ ಒಂದು ಲಘು ಉಪಾಹಾರವನ್ನು ನೀಡಲಾಗುತ್ತದೆ. ಒಳಾಂಗಣ ಆಟಗಳನ್ನು ಆಡಬಹುದು. ಹೊರಾಂಗಣ ಆಟಗಳಿಗಾಗಿ ವಿಶಾಲ ಸ್ಥಳ ಅವಕಾಶವಿದೆ. ಅನವಶ್ಯಕ ಮಾತ್ರೆಗಳನ್ನು ಬಿಡುವುದರ ಜತೆಗೆ ಮೊದಲು ತೆಗೆದುಕೊಳ್ಳುತ್ತಿದ್ದ ಮಾತ್ರೆಗಳನ್ನು ಕಡಿಮೆ ಮಾಡಿಕೊಂಡ ಸಾಕಷ್ಟು ಉದಾಹರಣೆಗಳು ನಮ್ಮ ಕಣ್ಣಿನ ಮುಂದೆ ಇವೆ. ಸೌಂದರ್ಯದ ವೃದ್ಧಿ, ತೂಕ ಹೆಚ್ಚಿಸಲು ಮತ್ತು ಕಡಿಮೆ ಮಾಡಿಕೊಳ್ಳಲು, ಒತ್ತಡಗಳ ನಿವಾರಣೆಗೆ ಇಲ್ಲಿಗೆ ಸಾಕಷ್ಟು ಜನರು ಬರುತ್ತಾರೆ. ಅವರಿಗೆ ಇಲ್ಲಿನ ಚಿಕಿತ್ಸಕ ಕ್ರಮಗಳೂ ಇಷ್ಟವಾಗಿವೆ.
ಷಣ್ಮುಖ ಅಸೋಸಿಯೇಟ್ ಡೈರೆಕ್ಟರ್, ಯೋಗ ಥೆರಪಿಸ್ಟ್. ಯೋಗಬನ
ನನಗೆ ಈಗಾಗಲೇ 81ವರ್ಷಗಳು ತುಂಬಿವೆ. ಈ ಯೋಗಬನದ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ನೋಡಿದ್ದೆ. ಒಮ್ಮೆ ಇಲ್ಲಿಗೆ ಭೇಟಿ ನೀಡಲೇಬೇಕು ಎನ್ನುವ ಮನಸಾಗಿತ್ತು. ಅದರಂತೆ ನಾನು ನನ್ನ ಸ್ನೇಹಿತರ ಜತೆಗೂಡಿ ಬಂದಿದ್ದೇನೆ. ನನ್ನದು ಧಾರವಾಡ. ಅಲ್ಲಿಂದ ಇಲ್ಲಿಗೆ ಬರುವ ಮಧ್ಯೆ ಪ್ರಯಾಣವನ್ನೂ ನಾನು ಆನಂದಿಸಿದ್ದೇನೆ. ಯೋಗಬನ ಬಹಳ ಸ್ವಚ್ಛಂದವಾಗಿದೆ. ಇಲ್ಲಿನ ಸಿಬ್ಬಂದಿ ಸೇವೆ ಮತ್ತು ಊಟ ತುಂಬಾ ಚೆನ್ನಾಗಿದೆ. ವಾಕಿಂಗ್ ಸಮಯದಲ್ಲಿ ಪ್ರಾಣಿ, ಪಕ್ಷಿಗಳ ಧ್ವನಿ ಕೇಳುವುದು ಅಹ್ಲಾದಕರ ಎನಿಸುತ್ತದೆ. ಯೋಗಬನದ ಸಂಸ್ಥಾಪಕರ ಆಟೊಬಯೋಗ್ರಫಿಯನ್ನು ಓದಿದೆ. ಅವರು ಆದರ್ಶಪ್ರಾಯರು. ಯೋಗಬನದ ಆರ್ಕಿಟೆಕ್ಚರ್ ಸುವ್ಯವಸ್ಥಿತವಾಗಿದೆ. ಇಲ್ಲಿ ಯೋಗಗುರುಗಳು ಸರಳವಾದ ಯೋಗಾಸನ ಮತ್ತು ಪ್ರಾಣಾಯಾಮದ ನಡುವೆ ಹಾಸ್ಯವನ್ನು ಕೂಡಿಸಿ ತುಂಬಾ ಚೆನ್ನಾಗಿ ಹೇಳಿಕೊಡುತ್ತಾರೆ.
ಡಾ. ಭೂಪೇಂದ್ರ ಒಡೆಯರ್ ನಿವೃತ್ತ ಪ್ರೊಫೆಸರ್, ಕರ್ನಾಟಕ ವಿಶ್ವ ವಿದ್ಯಾಲಯ ಧಾರವಾಡ
ಯೂಟ್ಯೂಬ್‌ನಲ್ಲಿ ಈ ಯೋಗಬನದ ಕುರಿತು ನೋಡಿದ್ದೆ. ಅದರಲ್ಲಿ ನೋಡಿದಂತೆ ಯೋಗಬನ ಇರುವುದಿಲ್ಲ ಎಂದೇ ಅನಿಸಿತ್ತು. ಆಗ ಮಳೆಗಾಲವಾಗಿದ್ದರಿಂದ ಬರಲು ಸಾಧ್ಯವಾಗಿರಲಿಲ್ಲ. ಮಳೆಗಾಲ ಮುಗಿದ ನಂತರ ಏನೇ ಆಗಲಿ, ಒಮ್ಮೆಯಾದರೂ ಭೇಟಿ ನೀಡೋಣ ಎಂದುಕೊಂಡೇ ಬಂದೆ. ಇಲ್ಲಿ ಎಲ್ಲವೂ ತುಂಬಾ ಸುಂದರವಾಗಿದೆ. ಕಿವಿಯ ತೊಂದರೆ ನಿವಾರಣೆ ಮತ್ತು ತೂಕ ಹೆಚ್ಚಿಸಿಕೊಳ್ಳಲು ಇಲ್ಲಿಗೆ ಬಂದಿದ್ದೆ. ಈಗ ಭರವಸೆ ಮೂಡಿದೆ. ಇಲ್ಲಿಂದ ಮರಳಿದ ಮೇಲೆ ಪರಿಚಯದವರಿಗೂ ಈ ಕುರಿತು ಹೇಳುವ ಆಸೆ ನನ್ನಲ್ಲಿದೆ. ಡಾ. ವಿವೇಕ್ ಅವರೂ ತುಂಬಾ ಆತ್ಮೀಯವಾಗಿ ನಮ್ಮನ್ನು ವಿಚಾರಿಸುತ್ತಾರೆ. ಊಟೋಪಚಾರ, ವಾತಾವರಣ, ವಾಸ್ತವ್ಯ ಎಲ್ಲವೂ ತುಂಬಾ ಚೆನ್ನಾಗಿದೆ.
ಉಮಾ ಸೋಮಶೇಖರ್ ಹಿರೇಮಠ್, ಬೆಳಗಾವಿ