ಪ್ರಕೃತಿಯ ಟೂರು... ಇಷ್ಟಪಡೋ ಪಾರು
ಕೆಲಸ ಮಾಡಿ ಮಾಡಿ ಸುಸ್ತಾದವರು ಒಂದು ಬ್ರೇಕ್ ಪಡೆದರೆ ಮನಸ್ಸಿಗೂ ನೆಮ್ಮದಿ. ಹಾಗಿರುವಾಗ ಟ್ರೆಕ್ಕಿಂಗ್ ಒಳ್ಳೆಯ ಆಯ್ಕೆ ಎಂದು ಮೋಕ್ಷಿತಾ ಬಲವಾಗಿ ನಂಬುತ್ತಾರೆ. ಈ ಕಾರಣಕ್ಕೆ ಸಮಯ ಸಿಕ್ಕಾಗ ಆಪ್ತರು ಹಾಗೂ ಗೆಳೆಯರ ಜೊತೆ ಅವರು ಟ್ರೆಕ್ಕಿಂಗ್ ತೆರಳುತ್ತಾರೆ. ಆಗುಂಬೆ, ಸಕಲೇಶಪುರ ಹಾಗೂ ವಯನಾಡಿನಂಥ ಜಾಗಗಳು ಇದಕ್ಕೆ ಹೆಚ್ಚು ಸೂಕ್ತ ಎಂಬುದು ಮೋಕ್ಷಿತಾ ಸಲಹೆ.
ಎಲ್ಲರಿಗೂ ದೇಶ-ವಿದೇಶ ಸುತ್ತಬೇಕು ಎನ್ನುವ ಆಸೆ ಇದ್ದೇ ಇರುತ್ತದೆ. ನಿಮ್ಮಿಷ್ಟದ ಜಾಗ ಯಾವುದು ಎಂದು ಕೇಳಿದಾಗ ಒಬ್ಬೊಬ್ಬರು ಒಂದೊಂದು ಪ್ರದೇಶದ ಹೆಸರನ್ನು ಹೇಳುತ್ತಾರೆ. ಇದೇ ಪ್ರಶ್ನೆಯನ್ನು ಸೆಲೆಬ್ರಿಟಿಗಳ ಎದುರು ಇಟ್ಟಾಗ ಬಹುತೇಕರು ವಿದೇಶದ ಸ್ಥಳವನ್ನು ಆಯ್ಕೆ ಮಾಡುತ್ತಾರೆ. ಆದರೆ, ಕೆಲವೇ ಕೆಲವು ಕಲಾವಿದರು ಸ್ಥಳೀಯ ಜಾಗಕ್ಕೆ ಒತ್ತು ನೀಡುತ್ತಾರೆ. ಈ ಸಾಲಿನಲ್ಲಿ ಬಿಗ್ ಬಾಸ್ ಮಾಜಿ ಸ್ಪರ್ಧಿ ಮೋಕ್ಷಿತಾ ಪೈ ಕೂಡ ಇದ್ದಾರೆ.
ಮೋಕ್ಷಿತಾ ಪೈ ಅವರು ‘ಪಾರು’ ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದರು. ಆ ಬಳಿಕ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಸ್ಪರ್ಧಿಸಿದರು. ಅವರ ನಟನೆಯ ‘ಅದೇ ಕಣ್ಣು’ ಹೆಸರಿನ ಮೈಕ್ರೋ ವೆಬ್ ಸೀರೀಸ್ ಇತ್ತೀಚೆಗೆ ಬಿಡುಗಡೆ ಆಗಿದೆ. ಇದರಲ್ಲಿ ಅವರು ಅಂಧೆಯ ಪಾತ್ರವನ್ನು ಮಾಡಿದ್ದಾರೆ.

ಅವರಿಗೆ ಹಸಿರು ಗುಡ್ಡ-ಬೆಟ್ಟ ಕಂಡರೆ ಸಖತ್ ಇಷ್ಟ. ಹಸಿರು ಎಲ್ಲೇ ಇದ್ದರೂ ಅವರು ಅಲ್ಲಿಗೆ ತೆರಳಲು ಇಷ್ಟಪಡುತ್ತಾರೆ. ತಮ್ಮಿಷ್ಟದ ಒಂದಷ್ಟು ಜಾಗಗಳನ್ನು ಮೋಕ್ಷಿತಾ ಅವರು ‘ಪ್ರವಾಸಿ ಪ್ರಪಂಚ’ದ ಓದುಗರ ಎದುರು ಇಟ್ಟಿದ್ದಾರೆ.
ಪ್ರಕೃತಿ ಬೆಸ್ಟ್ ಫ್ರೆಂಡ್!
ಕೆಲಸ ಮಾಡಿ ಮಾಡಿ ಸುಸ್ತಾದವರು ಒಂದು ಬ್ರೇಕ್ ಪಡೆದರೆ ಮನಸ್ಸಿಗೂ ನೆಮ್ಮದಿ. ಹಾಗಿರುವಾಗ ಟ್ರೆಕ್ಕಿಂಗ್ ಒಳ್ಳೆಯ ಆಯ್ಕೆ ಎಂದು ಮೋಕ್ಷಿತಾ ಬಲವಾಗಿ ನಂಬುತ್ತಾರೆ. ಈ ಕಾರಣಕ್ಕೆ ಸಮಯ ಸಿಕ್ಕಾಗ ಆಪ್ತರು ಹಾಗೂ ಗೆಳೆಯರ ಜೊತೆ ಅವರು ಟ್ರೆಕ್ಕಿಂಗ್ ತೆರಳುತ್ತಾರೆ. ಆಗುಂಬೆ, ಸಕಲೇಶಪುರ ಹಾಗೂ ವಯನಾಡಿನಂಥ ಜಾಗಗಳು ಇದಕ್ಕೆ ಹೆಚ್ಚು ಸೂಕ್ತ ಎಂಬುದು ಮೋಕ್ಷಿತಾ ಸಲಹೆ. ಅಲ್ಲಿ ಹೋಗಿ ಒಂದಷ್ಟು ದಿನ ಇದ್ದು ಬಂದರೆ ಪ್ರಕೃತಿ ನಿಮ್ಮ ಒತ್ತಡ ಕಡಿಮೆ ಮಾಡುತ್ತದೆ.
ಆಗುಂಬೆಯ ಮಳೆ ಇಷ್ಟ
‘ಆಗುಂಬೆ ನನ್ನಿಷ್ಟದ ಜಾಗ. ಅಲ್ಲಿ ಯಾವಾಗಲೂ ಮಂಜು ಇರುತ್ತದೆ. ನನಗೆ ಬೀಚ್ ಇಷ್ಟ ಆಗುವುದಿಲ್ಲ. ಗುಡ್ಡ-ಬೆಟ್ಟ ಎಂದರೆ ಹೆಚ್ಚು ಪ್ರೀತಿ. ಆಗುಂಬೆಯಲ್ಲಿ ಯಾವಾಗಲೂ ಹಸಿರು ಇರುತ್ತದೆ. ಯಾವಾಗಲೂ ಸುರಿಯುವ ಮಳೆಗಿಂತ ಆಗಾಗ ಬಂದು ಹೋಗುವ ಮಳೆ ಇಷ್ಟ’ ಎಂದಿದ್ದಾರೆ ಮೋಕ್ಷಿತಾ.

ಇರಲಿ ಎಚ್ಚರಿಕೆ..
ಫೆಂಟಾ’ಸ್ಟಿಕ್’ ಪಾರೂ!
ಟ್ರೆಕ್ಕಿಂಗ್ ಎಂದಾಗ ಸಾಕಷ್ಟು ಚಾಲೆಂಜ್ಗಳು ಇರುತ್ತವೆ. ಅದನ್ನು ಎದುರಿಸಲು ಸಿದ್ಧರಾಗೇ ತೆರಳಬೇಕು. ಟ್ರೆಕ್ಕಿಂಗ್ಗೆ ಶೂಸ್ ಹಾಗೂ ಕಂಫರ್ಟಬಲ್ ಆಗಿರೋ ಬಟ್ಟೆ ತುಂಬ ಮುಖ್ಯ. ನೀರು ಹಾಗೂ ಒಂದು ಸಣ್ಣ ಸ್ಟಿಕ್ ಇಟ್ಟುಕೊಳ್ಳುತ್ತೇನೆ. ಸ್ಟಿಕ್ನಿಂದ ಮುಂದಿರುವ ಜಾಗ ಯಾವ ರೀತಿಯಲ್ಲಿ ಇರುತ್ತದೆ ಅನ್ನೋದು ಗೊತ್ತಾಗುತ್ತದೆ. ಇದರ ಜೊತೆಗೆ ಫಿಸಿಕಲ್ ಆಗಿಯೂ ಸ್ಟ್ರಾಂಗ್ ಆಗಿರಲು ಪ್ರಯತ್ನಿಸುತ್ತೇನೆ’

ಟ್ರೆಕ್ಕಿಂಗ್ ಲವ್!
ಟ್ರೆಕ್ಕಿಂಗ್ ಮೇಲೆ ಇಷ್ಟೆಲ್ಲ ಪ್ರೀತಿ ಹುಟ್ಟಲು ಕಾರಣ ನನ್ನ ಮಾವ. ‘ನಾನು ಚಿಕ್ಕವಳಿದ್ದಾಗ ದೊಡ್ಡ ಮಾವ ನನ್ನನ್ನು ಟ್ರೆಕ್ಕಿಂಗ್ಗೆ ಕರೆದುಕೊಂಡು ಹೋಗುತ್ತಿದ್ದರು. ಅದರಿಂದ ಈ ಹುಚ್ಚು ಬಂತು. ಈಗ ಬಿಡುವು ಸಿಕ್ಕಾಗ ಟ್ರೆಕ್ಕಿಂಗ್ ಹೋಗುತ್ತೇನೆ.
‘ಜೀವನಕ್ಕೆ ಕೆಲಸ ಅನ್ನೋದು ತುಂಬ ಮುಖ್ಯ ನನಗೆ ಗೊತ್ತು. ಇದರ ಜೊತೆಗೆ ನಿಮ್ಮ ದೇಹಕ್ಕೆ ಹಾಲಿಡೇ ಅನ್ನೋದು ಬೇಕು. ನಿಮ್ಮ ಮನಸ್ಸು ರೀ ಸ್ಟಾರ್ಟ್ ಆಗೋದಕ್ಕೆ ಪ್ರಕೃತಿ ಸಾಕಷ್ಟು ಸಹಾಯ ಮಾಡುತ್ತದೆ. ಪ್ರಕೃತಿ ಮಧ್ಯೆ ಸಮಯ ಕಳೆಯೋದು ತುಂಬಾನೇ ಖುಷಿ ಕೊಡುತ್ತದೆ’