ವಿಮಾನ ಯಾನ ಮಾಡಬೇಕೆಂಬ ಮಹದಾಸೆಯಿದ್ದರು, ಟಿಕೆಟ್‌ ಬೆಲೆ ಭಾರೀ ದುಬಾರಿ ಎಂಬ ಕಾರಣಕ್ಕೆ ಆಸೆಯನ್ನು ಮರೆತ ಅದೆಷ್ಟೋ ಮಂದಿ ನಮ್ಮ ನಡುವೆಯೇ ಇದ್ದಾರೆ. ವಿಮಾನದಲ್ಲಿ ಸೌಲಭ್ಯಗಳು, ಸವಲತ್ತುಗಳು ಹೆಚ್ಚಾದಷ್ಟು ಟಿಕೆಟ್‌ನ ದರವೂ ಏರಿಕೆ ಕಾಣುತ್ತಲೇ ಹೋಗುತ್ತದೆ. ಆದರೆ 2026ರಿಂದ ಅಗ್ಗದ ಬೆಲೆಯಲ್ಲೂ ನೀವು ವಿಮಾನಯಾನವನ್ನು ಕೈಗೊಳ್ಳಬಹುದು. ಹೌದು, ಸುಮಾರು 500 ರೂ. ಅಥವಾ ಅದಕ್ಕಿಂತ ಕಡಿಮೆ ಬೆಲೆಗೆ ವಿಮಾನ ಟಿಕೆಟ್ ಖರೀದಿಸಬಹುದೆಂದರೆ ನೀವು ನಂಬಲೇಬೇಕು. ಯುರೋ ವೀಕ್ಲಿ ನ್ಯೂಸ್ ಪ್ರಕಾರ, ಯುರೋಪಿನ ಕೆಲವು ವಿಮಾನಯಾನ ಸಂಸ್ಥೆಗಳು ಇಂತಹ ವಿಶೇಷವಾದ ಪ್ರಯತ್ನಗಳನ್ನು ಕಾರ್ಯಗತಗೊಳಿಸುವ ಯೋಜನೆಯನ್ನು ಹಾಕಿಕೊಂಡಿದೆಯಂತೆ.

standing seats

ಅಗ್ಗದ ಬೆಲೆಯ ಟಿಕೆಟ್‌ ನೀಡಲು ಹೇಗೆ ಸಾಧ್ಯ ?

ಅತಿಯಾದ ಸವಲತ್ತುಗಳಿಗೆ ಕಡಿವಾಣ ಹಾಕಲಿರುವ ವಿಮಾನ ಯಾನ ಸಂಸ್ಥೆಗಳು, ಐಷಾರಾಮಿ ಆಸನ ವ್ಯವಸ್ಥೆಗೆ ಬದಲಾಗಿ, ವಿಮಾನದಲ್ಲಿ ನಿಂತಿರುವ ಆಸನಗಳು ಹಾಕುವ ಯೋಜನೆ ಹಾಕಿದೆಯಂತೆ. ಸ್ಕೈರೈಡರ್ 2.0 ಎಂದು ಕರೆಯಲ್ಪಡುವ ಈ ಆಸನಗಳನ್ನು ಇಟಾಲಿಯನ್ ಕಂಪನಿ ಅವಿಯೋ ಇಂಟೀರಿಯರ್ಸ್ ವಿನ್ಯಾಸಗೊಳಿಸಿದೆ. ಈ ವಿನ್ಯಾಸವು ಪ್ಯಾಡೆಡ್ ಸೈಕಲ್ ಸ್ಯಾಡಲ್ ಅನ್ನು ಹೋಲುತ್ತದೆ. ನೆಲ ಮತ್ತು ಸೀಲಿಂಗ್‌ಗೆ ಭದ್ರಪಡಿಸಲಾಗಿದ್ದು, ಈ ಆಸನಗಳಲ್ಲಿ ಸೀಟ್‌ಬೆಲ್ಟ್ ಹಾಕಿಕೊಳ್ಳಲೇಬೇಕು. ಪ್ರಯಾಣಿಕರು ಸುಮಾರು 45 ಡಿಗ್ರಿ ಕೋನದಲ್ಲಿ ವಿಶ್ರಾಂತಿ ಪಡೆಯಬಹುದು.

ಏವಿಯೋ ಇಂಟೀರಿಯರ್ಸ್ ಹೇಳುವಂತೆ, ಸ್ಕೈರೈಡರ್ ಸೀಟುಗಳು ವಾಯುಯಾನ ನಿಯಮಗಳನ್ನು ಪಾಲಿಸುವುದಷ್ಟೇ ಅಲ್ಲದೆ, ಎಲ್ಲಾ ಸುರಕ್ಷತಾ ಪರೀಕ್ಷೆಗಳಲ್ಲಿ ಉತ್ತೀರ್ಣವಾಗಿವೆ. ಆದ್ದರಿಂದ, ಪ್ರಯಾಣಿಕರು ತುರ್ತು ಪರಿಸ್ಥಿತಿಗಳು ಅಥವಾ ವಿಮಾನದಲ್ಲಿ ಆಗಬಹುದಾದ ಅಪಾಯಗಳ ಬಗ್ಗೆ ಚಿಂತಿಸಬೇಕಾಗಿಲ್ಲ.

fly standing up

ವಿಮಾನಯಾನ ಸಂಸ್ಥೆಗಳಿಗೇನು ಲಾಭ ?

ಪ್ರತಿ ಘಟಕವು ಕಡಿಮೆ ಜಾಗವನ್ನು ತೆಗೆದುಕೊಳ್ಳುವುದರಿಂದ, ಎರಡು ಗಂಟೆ ಅಥವಾ ಅದಕ್ಕಿಂತ ಕಡಿಮೆ ಅವಧಿಯ ವಿಮಾನಗಳಲ್ಲಿ ವಿಮಾನಯಾನ ಸಂಸ್ಥೆಗಳು ಶೇಕಡಾ 20 ರಷ್ಟು ಹೆಚ್ಚಿನ ಪ್ರಯಾಣಿಕರಿಗೆ ಅವಕಾಶ ಕಲ್ಪಿಸಬಹುದು ಎಂದು ವರದಿಗಳು ಸೂಚಿಸುತ್ತವೆ. ಇದು ಲಾಭವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಹಗುರವಾದ ಆಸನಗಳು ಮತ್ತು ಸರಳ ವಿನ್ಯಾಸಗಳಿರುವುದರಿಂದ ಶುಚಿಗೊಳಿಸುವಿಕೆಯ ಚಿಂತೆಯಿರದು. ಅಲ್ಲದೆ ಅದಕ್ಕೆ ಕಡಿಮೆ ಸಮಯವನ್ನು ವ್ಯಯಿಸಿಕೊಂಡರೂ ಸಾಕಾಗುತ್ತದೆ.

ವಿಮಾನ ಪ್ರಯಾಣಿಕರಿಗೆ ಅಗ್ಗದ ಟಿಕೆಟ್ ಬೆಲೆಗಳು

ಸಾಂಪ್ರದಾಯಿಕ ವಿಮಾನಗಳಿಗಿಂತ ಕಡಿಮೆ ದರದಲ್ಲಿ ʻನಿಂತಿರುವ ಆಸನಗಳುʼ ಬರುವ ನಿರೀಕ್ಷೆಯಿದೆ. ನಿಖರವಾದ ಬೆಲೆಗಳು ತಿಳಿದಿಲ್ಲವಾದರೂ, 2012 ರಲ್ಲಿ, ರಯಾನ್ಏರ್ ಸಿಇಒ ಮೈಕೆಲ್ ಒಲಿಯರಿ ತಮ್ಮ ಬೋಯಿಂಗ್ 737-800 ವಿಮಾನಗಳನ್ನು 10 ಸಾಲುಗಳ ನಿಂತಿರುವ ಆಸನಗಳು ಮತ್ತು 15 ಸಾಲುಗಳ ಸಾಮಾನ್ಯ ಆಸನಗಳೊಂದಿಗೆ ಅಳವಡಿಸಲು ಪ್ರಸ್ತಾಪಿಸಿದರು. ಆ ಸಮಯದಲ್ಲಿ, ನಿಂತಿರುವ ಟಿಕೆಟ್‌ಗಳು 1-5 ಪೌಂಡ್‌ಗಳಷ್ಟು (ರೂ. 115-575) ಕಡಿಮೆ ವೆಚ್ಚವಾಗಬಹುದು ಎಂದು ಅವರು ಸೂಚಿಸಿದರು. ಸ್ಪೇನ್‌ನಿಂದ ಪೂರ್ವ ಯುರೋಪ್‌ವರೆಗಿನ ಇತರ ವಿಮಾನಯಾನ ಸಂಸ್ಥೆಗಳು ಸಹ ಈ ಪರಿಕಲ್ಪನೆಯ ಬಗ್ಗೆ ಅಧ್ಯಯನ ನಡೆಸುತ್ತಿದೆಯಂತೆ.