ದಕ್ಷಿಣ ಭಾರತದಲ್ಲಿ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸಲು ಸಾರಿಗೆ ವ್ಯವಸ್ಥೆಯಾಗಿ ಬೆರಳೆಣಿಗೆಯಷ್ಟು ಕಡೆಗಳಲ್ಲಿ ಮಾತ್ರ ರೋಪ್‌ ವೇ ಗಳನ್ನು ನಾವು ಕಾಣಬಹುದು. ಊಟಿಯ ನೀಲಗಿರಿ ಬೆಟ್ಟಗಳಲ್ಲಿ, ಕೇರಳದ ಮುನ್ನಾರ್ ಮತ್ತು ಮಲಂಪುಳ ಉದ್ಯಾನಗಳಲ್ಲಿನ ರೋಪ್‌ವೇ ಗಳಲ್ಲಿ ಪ್ರಯಾಣಿಸಬಹುದು. ಕರ್ನಾಟಕದ ಬೆಂಗಳೂರು ಬಳಿಯ ನಂದಿ ಬೆಟ್ಟಗಳಿಗೆ ಹೊಸ ರೋಪ್‌ವೇ ಯೋಜನೆಯನ್ನು ಸಹ ಯೋಜಿಸಲಾಗಿದೆ. ಆದರೆ ಸದ್ಯ ದಕ್ಷಿಣ ಭಾರತದಲ್ಲಿ ಅತಿ ಉದ್ದದ ರೋಪ್‌ ವೇ ಒಂದು ಸದ್ಯದಲ್ಲೇ ನಿರ್ಮಾಣಗೊಳ್ಳಲಿದೆ.

1660289524_10_56am

ಎಲ್ಲಿಂದ ಎಲ್ಲಿಗೆ ?

ವಯನಾಡ್ ಮತ್ತು ಕೋಝಿಕ್ಕೋಡ್ ಜಿಲ್ಲೆಗಳನ್ನು ಸಂಪರ್ಕಿಸುವ ಈ ರೋಪ್‌ವೇ ಯೋಜನೆಗೆ ಕೇರಳ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ಲಕ್ಕಿಡಿಯನ್ನು ಆದಿವಾರಂ ಜೊತೆ ಸಂಪರ್ಕಿಸುವ 3.675 ಕಿಲೋಮೀಟರ್ ಉದ್ದದ ರೋಪ್‌ವೇ ದಕ್ಷಿಣ ಭಾರತದ ಅತ್ಯಂತ ಉದ್ದವಾದ ರೋಪ್‌ ವೇ ಎನ್ನಿಸಿಕೊಳ್ಳಲಿದೆ. ಇದು ಎರಡು ಹೆಕ್ಟೇರ್‌ಗಳಿಗಿಂತ ಹೆಚ್ಚು ಪ್ರಾಚೀನ ಅರಣ್ಯ ಪ್ರದೇಶವನ್ನು ಹಾದುಹೋಗುತ್ತದೆ. ಒಂದು ಭಾಗದ ಸಂಚಾರಕ್ಕೆ ಕೇವಲ 15 ನಿಮಿಷಗಳು ಬೇಕಾಗುತ್ತದೆ. ಮತ್ತು ಪ್ರಯಾಣಿಕರು ಈ ಅವಧಿಯಲ್ಲಿ ಮೂರು ಕಿಲೋಮೀಟರ್‌ಗಳನ್ನು ಕ್ರಮಿಸುತ್ತಾರೆ. ಈಗ, ಲಕ್ಕಿಡಿಯಿಂದ ಪರ್ವತ ಪಾಸ್ ಮೂಲಕ ಅಡಿವಾರಕ್ಕೆ ಪ್ರಯಾಣಬೆಳೆಸಲು ಕನಿಷ್ಠ 40 ನಿಮಿಷಗಳು ಬೇಕಾಗುತ್ತದೆ.

listicle_1687189010037_xzpvl_847x400

ಕೇಬಲ್‌ ಕಾರ್‌ ವೈಶಿಷ್ಟ್ಯ

ಎಸಿ ಕೇಬಲ್ ಕಾರುಗಳು ಏಕಕಾಲದಲ್ಲಿ ಆರು ಪ್ರಯಾಣಿಕರಿಗೆ ಅವಕಾಶ ಕಲ್ಪಿಸಬಹುದು. ಒಂದು ಗಂಟೆಯಲ್ಲಿ 400 ಕ್ಕೂ ಹೆಚ್ಚು ಜನರು ರೋಪ್‌ವೇಯನ್ನು ಬಳಸಬಹುದೆಂದು ನಿರೀಕ್ಷಿಸಲಾಗಿದೆ. ಈ ಯೋಜನೆಗಾಗಿ ಅಡಿವಾರಂ ಮತ್ತು ಲಕ್ಕಿಡಿ ನಡುವೆ ನಲವತ್ತು ಗೋಪುರಗಳನ್ನು ನಿರ್ಮಿಸಲಾಗುವುದು. ಇದಲ್ಲದೆ, ಬತೇರಿಯಿಂದ ಲಕ್ಕಿಡಿಗೆ ಮತ್ತು ಕೋಝಿಕ್ಕೋಡ್ ನಿಂದ ಆದಿವಾರಕ್ಕೆ ವಿಶೇಷ ಬಸ್ ಸೇವೆಗಳನ್ನು ಸಹ ವ್ಯವಸ್ಥೆ ಕಲ್ಪಿಸಲಾಗುತ್ತಿದ್ದು, ಈ ಯೋಜನೆಯು ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ಎಲ್ಲಾ ತಾಂತ್ರಿಕ ಅನುಮೋದನೆಗಳನ್ನು ಪಡೆದುಕೊಂಡಿದೆ.