Tuesday, July 1, 2025
Tuesday, July 1, 2025

ವಿಮಾನ ಮತ್ತು ಬರ್ಡ್‌ ಹಿಟ್

ಒಮ್ಮೆ ವಿಮಾನ ಟೇಕಾಫ್ ಆಗಿ, ಸುಮಾರು ಐನೂರು ಮೀಟರ್ ಮೇಲಕ್ಕೆ ಹೋಗುವವರೆಗೆ, ಹಕ್ಕಿಗಳು ಅಪ್ಪಳಿಸುವ ಅಪಾಯವಿರುತ್ತದೆ. ವಿಮಾನ ಮೋಡದೊಳಗೆ ಹೋದ ಬಳಿಕ ಹಕ್ಕಿಗಳ ಅಪಾಯ ಇಲ್ಲ. ಬರ್ಡ್ ಹಿಟ್ ( Bird Hit ) ಅಥವಾ ಬರ್ಡ್ ಸ್ಟ್ರೈಕ್ (Bird Strike) ಎನ್ನುವುದು ವಿಮಾನ ಉದ್ಯಮದಲ್ಲಿ ಬಹಳ ಗಂಭೀರ ಸಮಸ್ಯೆ.

ವಿಮಾನಗಳಿಗೆ ಹಕ್ಕಿಗಳು ಅಪ್ಪಳಿಸುತ್ತವೆಯಾ? ಒಂದು ವೇಳೆ ಹಕ್ಕಿಗಳು ಅಪ್ಪಳಿಸಿದರೆ ವಿಮಾನಗಳು ಉರುಳುತ್ತವಾ? ಹಕ್ಕಿಗಳು ವಿಮಾನಗಳ ವೈರಿಗಳಾ? ಎಂದು ಕೇಳುವವರಿದ್ದಾರೆ. ನಿಜ, ಹಕ್ಕಿಗಳು ಅಪ್ಪಳಿಸಿದರೆ ವಿಮಾನಗಳು ಅಪಘಾತಕ್ಕೀಡಾಗುತ್ತವೆ. ಹಕ್ಕಿಗಳು ವಿಮಾನಗಳ ವೈರಿಗಳೇ.

ಒಮ್ಮೆ ವಿಮಾನ ಟೇಕಾಫ್ ಆಗಿ, ಸುಮಾರು ಐನೂರು ಮೀಟರ್ ಮೇಲಕ್ಕೆ ಹೋಗುವವರೆಗೆ, ಹಕ್ಕಿಗಳು ಅಪ್ಪಳಿಸುವ ಅಪಾಯವಿರುತ್ತದೆ. ವಿಮಾನ ಮೋಡದೊಳಗೆ ಹೋದ ಬಳಿಕ ಹಕ್ಕಿಗಳ ಅಪಾಯ ಇಲ್ಲ. ಬರ್ಡ್ ಹಿಟ್ (Bird Hit) ಅಥವಾ ಬರ್ಡ್ ಸ್ಟ್ರೈಕ್ (Bird Strike) ಎನ್ನುವುದು ವಿಮಾನ ಉದ್ಯಮದಲ್ಲಿ ಬಹಳ ಗಂಭೀರ ಸಮಸ್ಯೆ.

ಬರ್ಡ್ ಹಿಟ್ ಎನ್ನುವುದು ವಿಮಾನಗಳ ಸುರಕ್ಷತೆ, ನಿರ್ವಹಣಾ ವೆಚ್ಚ ಮತ್ತು ಮಾನವ ಜೀವಗಳಿಗೆ ಅಪಾಯ ಉಂಟು ಮಾಡುವ ಗಂಭೀರ ವಿಷಯ. ಅಷ್ಟಕ್ಕೂ ಬರ್ಡ್ ಹಿಟ್ ಅಂದರೆ ಏನು? ಬರ್ಡ್ ಹಿಟ್ ಅಂದರೆ ಒಂದು ಅಥವಾ ಹೆಚ್ಚು ಪಕ್ಷಿಗಳು ಹಾರುತ್ತಿರುವ ವಿಮಾನಕ್ಕೆ ಡಿಕ್ಕಿ ಹೊಡೆಯು‌ವುದು. ಈ ಘಟನೆ ಸಾಮಾನ್ಯವಾಗಿ ವಿಮಾನ ಟೇಕಾಫ್ ಅಥವಾ ಲ್ಯಾಂಡ್ ಆಗುವ ಸಂದರ್ಭಗಳಲ್ಲಿ ಆಗುತ್ತದೆ.‌

ಇದನ್ನೂ ಓದಿ: ವಿಮಾನದೊಳಗಿನ ವಾತಾವರಣ

ಏಕೆಂದರೆ ಈ ಸಮಯದಲ್ಲಿ ವಿಮಾನಗಳು ಕೆಳಮಟ್ಟದಲ್ಲಿ ಅಥವಾ ಹಕ್ಕಿಗಳು ಹಾರುವ ಎತ್ತರದಲ್ಲಿ ಹಾರುತ್ತಿರುತ್ತವೆ. ವಿಮಾನ ಹಾರಾಟದಷ್ಟೇ ಬರ್ಡ್ ಹಿಟ್ ಇತಿಹಾಸವೂ ಹಳೆಯದು. 1905ರ ಮೊದಲ ಘಟನೆ ವರದಿಯಾಗಿತ್ತು. ವಿಮಾನವನ್ನು ಕಂಡುಹಿಡಿದ ವಿಲ್ಬರ್ ರೈಟ್ ತನ್ನ ವಿಮಾನ ಹಾರಿಸುತ್ತಿದ್ದಾಗ ಪಕ್ಷಿಯೊಂದು ಡಿಕ್ಕಿ ಹೊಡೆಯಿತು.

flight and bird

ಇಂದಿಗೂ, ತಂತ್ರಜ್ಞಾನ ಇಷ್ಟು ಬೆಳವಣಿಗೆಯಾದರೂ ಬರ್ಡ್ ಹಿಟ್ ಸಮಸ್ಯೆ ಕಡಿಮೆಯಾಗಿಲ್ಲ ಮತ್ತು ಅದಕ್ಕೆ ಪರಿಹಾರವೂ ಸಿಕ್ಕಿಲ್ಲ. ಬರ್ಡ್ ಹಿಟ್ ಯಾವಾಗ ಸಂಭವಿಸುತ್ತದೆ? ಬಹುತೇಕ ಬರ್ಡ್ ಹಿಟ್ ಘಟನೆಗಳು ಸಂಭವಿಸುವುದು ವಿಮಾನ ಟೇಕಾಫ್ ಆಗುವಾಗ. ಈ ಸಮಯದಲ್ಲಿ ವಿಮಾನ ಒಂದೇ ಸಮನೆ ತೀವ್ರವೇಗ ಪಡೆಯುತ್ತಿರುತ್ತದೆ‌ ಮತ್ತು ಹತ್ತಿರದ ಪರಿಸರದಲ್ಲಿ ಪಕ್ಷಿಗಳು ಹಾರುತ್ತಿರುವ ಸಂಭವ ಹೆಚ್ಚಿರುತ್ತದೆ.

ಹಾಗೆಯೇ ಲ್ಯಾಂಡ್ ಆಗುವ ಸಂದರ್ಭದಲ್ಲಿಯೂ ಅಪಘಾತವಾಗುವ ಸಾಧ್ಯತೆ ಹೆಚ್ಚು. ಸಾಮಾನ್ಯ ವಾಗಿ ಕಡಿಮೆ ಎತ್ತರ (Low Altitude) ಅಂದರೆ 3000 ಅಡಿಗಳ ಒಳಗೆ ಬಹುತೇಕ ಬರ್ಡ್ ಹಿಟ್ ಸಂಭವಿಸುತ್ತದೆ. ಬರ್ಡ್ ಹಿಟ್ ಆದರೆ ಏನಾಗುತ್ತದೆ? ಪಕ್ಷಿಗಳು ರಭಸದಿಂದ ವಿಮಾನಕ್ಕೆ ಅಪ್ಪಳಿಸಿದಾಗ ಎಂಜಿನ್‌ನ ಬ್ಲೇಡ್‌ಗಳು ಛಿದ್ರವಾಗುತ್ತವೆ. ಇದರಿಂದ ಎಂಜಿನ್ ನಿಷ್ಕ್ರಿಯವಾಗಬಹುದು ಅಥವಾ ಬೆಂಕಿ ಹೊತ್ತಿಕೊಳ್ಳಬಹುದು. ವಿಮಾನದ ರಚನಾತ್ಮಕ ಭಾಗಗಳು (High Airspeed and Rigid Design) ಅಂದರೆ ಮುಂಭಾಗ, ವಿಂಡ್ ಶೀಲ್ಡ್, ಪೈಲಟ್ ಕ್ಯಾಬಿನ್, ಪೆನಲ್ ತೀವ್ರ‌ ಜಖಂಗೊಳ್ಳಬಹುದು.

ಕೆಲವು ವೇಳೆ ವಿಮಾನ ಅಪಘಾತಕ್ಕೀಡಾಗಬಹುದು. ಪೈಲಟ್, ಸಿಬ್ಬಂದಿ ಮತ್ತು ಪ್ರಯಾಣಿಕರ ಜೀವಕ್ಕೂ ಮಾರಕವಾಗಿ ಪರಿಣಮಿಸಬಹುದು. ಬರ್ಡ್ ಹಿಟ್‌ನ ಆರ್ಥಿಕ ಪರಿಣಾಮಗಳು ಗಂಭೀರವಾದುದು. ಇದರಿಂದ ಎಂಜಿನ್ ಬದಲಾಯಿಸಬೇಕಾಗಬಹುದು. ಇದರ ದುರಸ್ತಿ ವೆಚ್ಚ ವಿಪರೀತ. ಇದರಿಂದ ವಿಮಾನ ಸಂಚಾರದಲ್ಲಿ ವ್ಯತ್ಯಯವಾಗಬಹುದು.

ವಿಮಾನ ಹಾರಾಟ ಸ್ಥಗಿತವಾಗಬಹುದು. ವಿಮಾನವು ವಿಮಾ ಸಂಸ್ಥೆಗಳಿಗೆ ವಿಪರೀತ ಹೊರೆಯಾಗಬಹುದು. ಇದು ವಿಮಾನ ನಿಲ್ದಾಣಗಳ ನಿರ್ವಹಣೆ ಮತ್ತು ಸುರಕ್ಷತಾ ಕ್ರಮಗಳ ವೆಚ್ಚಕ್ಕೂ ಕಾರಣವಾಗಬಹುದು. ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆ (ICAO) ಪ್ರಕಾರ, ಪ್ರತಿ ವರ್ಷ ವಿಮಾನ ಉದ್ಯಮಕ್ಕೆ ಬರ್ಡ್ ಹಿಟ್ ಪ್ರಕರಣಗಳಿಂದ ಹತ್ತಾರು ಕೋಟಿ ಡಾಲರ್ ನಷ್ಟವಾಗುತ್ತದೆ.

fligt destroy

ಇದಕ್ಕಾಗಿ ವಿಮಾನ ನಿಲ್ದಾಣ ಪ್ರಾಧಿಕಾರವು ನಿಲ್ದಾಣದ ಸುತ್ತಮುತ್ತಲ ಪ್ರದೇಶಗಳಲ್ಲಿ ಹಕ್ಕಿಗಳ ಹಾರಾಟದ ಮೇಲೆ ಕಣ್ಣಿಡುತ್ತದೆ. ಹಕ್ಕಿಗಳು ಕಂಡಾಕ್ಷಣ ಗುಂಡು ಹೊಡೆದು ಸಾಯಿಸುತ್ತಾರೆ ಅಥವಾ ಬೆದರಿಸುತ್ತಾರೆ. ಸುತ್ತಮುತ್ತ ಕಸದ ರಾಶಿಗಳು ಶೇಖರವಾಗದಂತೆ ನಿಗಾವಹಿಸುತ್ತಾರೆ. ಪಕ್ಷಿಗಳನ್ನು ಆಕರ್ಷಿಸುವ ಜಲಾಶಯಗಳ ಮೇಲೆ ಕಣ್ಣಿಡುತ್ತಾರೆ. ಹಕ್ಕಿಗಳ ಆಹಾರ ಮೂಲವನ್ನು ನಾಶಪಡಿಸುತ್ತಾರೆ.

ಲೇಸರ್ ತಂತ್ರಜ್ಞಾನ, ಡ್ರೋನ್, ಸೌಂಡ್ ಅಥವಾ ವಾಯ್ಸ ಸಿಗ್ನಲ್‌ಗಳನ್ನು ಬಳಸಿ ಪಕ್ಷಿಗಳನ್ನು ಓಡಿಸುತ್ತಾರೆ. ಏವಿಯನ್ ರಡಾರ್ ಉಪಕರಣದಿಂದ ಪಕ್ಷಿಗಳ ಚಲನೆಯನ್ನು ಪತ್ತೆಹಚ್ಚುತ್ತಾರೆ, ಪೈಲಟ್‌ಗಳಿಗೆ ಮುನ್ನೆಚ್ಚರಿಕೆ ನೀಡುತ್ತಾರೆ. ಇತ್ತೀಚೆಗೆ ವಿಮಾನ ತಾಂತ್ರಿಕ ವಿನ್ಯಾಸದಲ್ಲಿಯೇ ಮಾರ್ಪಾಟು ಮಾಡಿ, ವಿಂಡ್ ಶೀಲ್ಡ್ ಅನ್ನು ಬಲಿಷ್ಠಗೊಳಿಸಿರುತ್ತಾರೆ. ಆದರೆ ವಿಮಾನದ ವೇಗ ತೀವ್ರವಾಗಿದ್ದರೆ, ವಿಂಡ್ ಶೀಲ್ಡ್ ಎಷ್ಟೇ ಬಲಿಷ್ಠವಾಗಿದ್ದರೂ ಹಕ್ಕಿಗಳು ಡಿಕ್ಕಿ ಹೊಡೆದಾಗ ದುರಂತ ಸಂಭವಿಸುತ್ತದೆ.‌

Vishweshwar Bhat

Vishweshwar Bhat

Editor in Chief

ಜಪಾನಿನಲ್ಲಿ ಬೀದಿಯಲ್ಲಿಟ್ಟ ಕಸದ ತೊಟ್ಟಿಗಳೂ ಮಾತಾಡುತ್ತವೆ!

Read Previous

ಜಪಾನಿನಲ್ಲಿ ಬೀದಿಯಲ್ಲಿಟ್ಟ ಕಸದ ತೊಟ್ಟಿಗಳೂ ಮಾತಾಡುತ್ತವೆ!

ಒಂದು ಮರದ ಕೊಂಬೆ ಅಲ್ಲಾಡಿಸಿದ್ದಕ್ಕೆ ಕ್ಯಾತೆ ತೆಗೆದಿದ್ದ ಜಪಾನಿಯರು!

Read Next

ಒಂದು ಮರದ ಕೊಂಬೆ ಅಲ್ಲಾಡಿಸಿದ್ದಕ್ಕೆ ಕ್ಯಾತೆ ತೆಗೆದಿದ್ದ ಜಪಾನಿಯರು!