ವಿಶ್ವದ ಅತ್ಯಂತ ಸುಂದರವಾದ ಪ್ರವಾಸಿ ತಾಣಗಳಲ್ಲಿ ಒಂದು ಯುರೋಪ್‌ ಖಂಡದಲ್ಲಿರುವ ಬೆಲ್ಜಿಯಂ. ಬೆಲ್ಜಿಯಂ ಪ್ರದೇಶಾವಾರು ಚಿಕ್ಕದಾಗಿದ್ದರೂ, ಇಲ್ಲಿ ನೋಡಬಹುದಾದ ಪ್ರವಾಸಿತಾಣಗಳು ಅನೇಕ. ರೋಮಾಂಚಕಾರಿ ಅನುಭವಗಳನ್ನು ನೀಡುವ ಬಹಳಷ್ಟು ಐತಿಹಾಸಿಕ ತಾಣಗಳು ಮತ್ತು ಆಕರ್ಷಣೆಗಳು ಇಲ್ಲಿವೆ. ಬೆಲ್ಜಿಯಂಗೆ ಪ್ರವಾಸ ತೆರಳುವ ಮುನ್ನ ಈ ಪ್ರವಾಸಿ ಸ್ಥಳಗಳ ಬಗ್ಗೆ ತಿಳಿಕೊಳ್ಳಿ.

ಗ್ರ್ಯಾಂಡ್ ಪ್ಲೇಸ್, ಬ್ರಸೆಲ್ಸ್ (Grand Place, Brussels)

ಗ್ರ್ಯಾಂಡ್-ಪ್ಲೇಸ್ ಅನ್ನು ವಿಶ್ವದ ಅತ್ಯಂತ ಸುಂದರವಾದ ಸ್ಥಳಗಳಲ್ಲಿ ಒಂದೆಂದು ಗುರುತಿಸಲಾಗಿದೆ. 1998 ರಲ್ಲಿ ಯುನೆಸ್ಕೋದ ವಿಶ್ವ ಪರಂಪರೆಯ ಪಟ್ಟಿಯಲ್ಲಿ ನೋಂದಾಯಿಸಲಾದ ಈ ಪ್ರದೇಶವು ಸುಂದರವಾದ ವಾಸ್ತುಶಿಲ್ಪ ಹಾಗೂ ಐತಿಹಾಸಿಕ ತಾಣಗಳನ್ನು ಹೊಂದಿದೆ. ಪ್ರಮುಖವಾಗಿ ಗ್ರ್ಯಾಂಡ್-ಪ್ಲೇಸ್ ಗಿಲ್ಡ್ ಹೌಸ್‌ಗಳು, ಸಿಟಿ ಹಾಲ್ ಮತ್ತು ಮೈಸನ್ ಡು ರೋಯ್‌ನಿಂದ ಆವೃತವಾಗಿದೆ.

grand-place-brussels-adobestock-171059236-jpeg_header-15280225

ಫ್ಲಾಂಡರ್ಸ್‌ನ ಯುದ್ಧಭೂಮಿಗಳು

ಬೆಲ್ಜಿಯಂನ ಪ್ರಮುಖ ಆಕರ್ಷಣೆಗಳ ಪೈಕಿ ಫ್ಲಾಂಡರ್ಸ್‌ನ ಯುದ್ಧಭೂಮಿ ಒಂದು. ಐತಿಹಾಸಿಕವಾಗಿ ಮಹತ್ವದ್ದಾಗಿರುವ ಫ್ಲಾಂಡರ್ಸ್‌ನ ಯುದ್ಧಭೂಮಿ ನೋಡಲೇಬೇಕಾದ ಸ್ಥಳ. ಮಡಿದ ಸೈನಿಕರಿಗೆ ಗೌರವ ಸಲ್ಲಿಸಲು ಸಾವಿರಾರು ಸಮಾಧಿ ಕಲ್ಲುಗಳಿರುವ ಬಹುದೊಡ್ಡ ಸ್ಮಶಾನ ಇಲ್ಲಿದೆ.

images

ಬ್ರೂಗ್ಸ್‌ನ ಕಾಲುವೆಗಳು

ಬೆಲ್ಜಿಯಂಗೆ ತೆರಳಿದವರು ತಪ್ಪದೇ ಭೇಟಿ ನೀಡಬೇಕಿರುವ ಸ್ಥಳ ಬ್ರೂಗ್ಸ್‌ನ ಕಾಲುವೆಗಳು. ಇಲ್ಲಿ ಕಾಲುವೆಯ ಮೂಲಕ ಪ್ರಯಾಣಿಸಿ ಅಥವಾ ಬ್ರೂಗ್ಸ್ ಸಮೀಪ ನಡೆದು ಅದರ ವೈಭವವನ್ನು ಕಣ್ತುಂಬಿಕೊಳ್ಳಬಹುದು. ಆಕರ್ಷಕ ಸೇತುವೆಗಳು ಮತ್ತು ಉದ್ಯಾನಗಳು ಇಲ್ಲಿನ ಆಕರ್ಷಣೆಯೂ ಹೌದು.

1000_F_226449997_2hEmDu3B7jpLWZBrNtVOpbFwR9nXWAxO

ಘೆಂಟ್‌ನ ಗ್ರಾವೆನ್‌ಸ್ಟೀನ್ (Ghent's Gravensteen) ಮತ್ತು ಓಲ್ಡ್ ಟೌನ್

ಈ ಐತಿಹಾಸಿಕ ಸ್ಮಾರಕವು ಕೋಟೆಯಂತೆ ನಿರ್ಮಾಣವಾಗಿದ್ದು, ಒಮ್ಮೆ ಫ್ಲಾಂಡರ್ಸ್‌ನ ಕೌಂಟ್‌ಗಳಿಗೆ ನೆಲೆಯಾಗಿತ್ತು. ಈ ಕಂದಕ ಕೋಟೆಯ ಮಾದರಿಯಲ್ಲಿ ನಿರ್ಮಾಣವಾಗಿರುವ ಘೆಂಟ್‌ನ ಗ್ರಾವೆನ್‌ಸ್ಟೀನ್ ಬಿಲ್ಜಿಯಂನಲ್ಲಿ ಭೇಟಿ ನೀಡಲೇಬೇಕಾದ ಪ್ರವಾಸಿತಾಣಗಳಲ್ಲಿ ಒಂದು.

Gravensteen,_Ghent_(DSCF0191)

ಹೊರ್ಟಾ ವಸ್ತುಸಂಗ್ರಹಾಲಯ

ಸುಮಾರು1898 ಮತ್ತು 1901ರ ವಿಕ್ಟರ್ ಹೊರ್ಟಾ ಅವರು ಉಳಿದುಕೊಂಡಿದ್ದ ಕಟ್ಟಡವಿದು. ಹೊರ್ಟಾ ಮತ್ತು ಅವರ ಸಮಕಾಲೀನರು ವಿನ್ಯಾಸಗೊಳಿಸಿದ ಪೀಠೋಪಕರಣಗಳು, ಪಾತ್ರೆಗಳು ಮತ್ತು ಕಲಾ ವಸ್ತುಗಳ ಪ್ರದರ್ಶನವಿದೆ. ಜೊತೆಗೆ ಅವರ ಜೀವನ ಮತ್ತು ಸಮಯಕ್ಕೆ ಸಂಬಂಧಿಸಿದ ದಾಖಲೆಗಳಿವೆ. ಹೊರ್ಟಾ ಮತ್ತು ಅವರ ಕಲೆಗೆ ಸಂಬಂಧಿಸಿದ ವಿಷಯಗಳ ಕುರಿತು ಪ್ರದರ್ಶನಗಳನ್ನು ಸಹ ವಸ್ತುಸಂಗ್ರಹಾಲಯವು ಆಯೋಜಿಸುತ್ತದೆ.

images (1)

ಸೇಂಟ್ ಬಾವೊ ಕ್ಯಾಥೆಡ್ರಲ್, ಘೆಂಟ್

ಸಿಂಟ್-ಬಾಫ್ಸ್ ಕ್ಯಾಥೆಡ್ರಲ್ ಎಂದೂ ಕರೆಯಲ್ಪಡುವ ಸೇಂಟ್ ಬಾವೋಸ್ ಕ್ಯಾಥೆಡ್ರಲ್, ಬೆಲ್ಜಿಯಂನ ಘೆಂಟ್‌ನಲ್ಲಿರುವ ರೋಮನ್ ಕ್ಯಾಥೋಲಿಕ್ ಕ್ಯಾಥೆಡ್ರಲ್ ಆಗಿದೆ. ಇಲ್ಲಿನ ಈ ಗೋಥಿಕ್ ಮತ್ತು ರೋಮನೆಸ್ಕ್ ರಚನೆಯು ಮಹತ್ವದ ಪ್ರವಾಸಿ ಆಕರ್ಷಣೆಯಾಗಿದೆ.

7d202a09a606ebb2f5f0466d94f12df6

ಆಂಟ್ವೆರ್ಪ್ ನ ಗ್ರ್ಯಾಂಡ್ ಪ್ಲೇಸ್, ಮ್ಯೂಸ್ ಕಣಿವೆ, ಮಾನ್ಸ್ ಓಲ್ಡ್ ಟೌನ್ ಹೀಗೆ ಇನ್ನೂ ಅನೇಕ ಪ್ರವಾಸಿ ತಾಣಗಳು ಬೆಲ್ಜಿಯಂಗೆ ಭೇಟಿ ನೀಡುವ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತವೆ. ಒಟ್ಟಿನಲ್ಲಿ ವಿಶ್ವದ ಅತ್ಯಂತ ಸುಂದರವಾದ ಪ್ರವಾಸಿ ತಾಣವೆಂದು ಕರೆಸಿಕೊಳ್ಳುವ ಬೆಲ್ಜಿಯಂಗೆ ಭೇಟಿ ಕೊಡಲು ಮರೆಯದಿರಿ.