Thursday, January 8, 2026
Thursday, January 8, 2026

ಡಿವೈನ್‌ ಪಾರ್ಕ್‌ನ ಸಂಸ್ಥಾಪಕ ಡಾ. ಎ. ಚಂದ್ರಶೇಖರ್‌ ಉಡುಪ ನಿಧನ

ಸತತ ಐದು ದಶಕಗಳಿಂದ ಡಿವೈನ್‌ ಪಾರ್ಕ್‌ ಮೂಲಕ ಸ್ವಾಮಿ ವಿವೇಕಾನಂದರ ಆಧ್ಯಾತ್ಮಿಕ ಬೆಳಕನ್ನು ಚೆಲ್ಲುತ್ತಿದ್ದ ಡಾ. ಎ. ಚಂದ್ರಶೇಖರ್‌ ಉಡುಪ (75) ಅವರು ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.

ಸತತ ಐದು ದಶಕಗಳಿಂದ ಡಿವೈನ್‌ ಪಾರ್ಕ್‌ ಮೂಲಕ ಸ್ವಾಮಿ ವಿವೇಕಾನಂದರ ಆಧ್ಯಾತ್ಮಿಕ ಬೆಳಕನ್ನು ಚೆಲ್ಲುತ್ತಿದ್ದ ಡಾ. ಎ. ಚಂದ್ರಶೇಖರ್‌ ಉಡುಪ (75) ಅವರು ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.

ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದ ಸಮಯದಲ್ಲೇ ಸ್ವಾಮಿ ವಿವೇಕಾನಂದರ ಚಿಂತನೆಗಳ ಪ್ರಭಾವಕ್ಕೆ ಒಳಗಾಗಿದ್ದ ಇವರು, ಆ ಚಿಂತನೆಗಳನ್ನು ಜನಮನಗಳಿಗೆ ತಲುಪುವಂತೆ ಮಾಡಬೇಕು, ಆ ಮೂಲಕ ದೇಶದ ಅಭಿವೃದ್ಧಿಯಾಗಬೇಕು ಎನ್ನುವ ಕನಸನ್ನು ಹೊಂದಿದ್ದರು. ಪ್ರತೀ ತಿಂಗಳಿನಲ್ಲೂ ವಿವೇಕಾನಂದರ ಚಿಂತನೆಗಳನ್ನು ಜನರಿಗೆ ತಲುಪಿಸಲು ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದರು. ದೇಶ-ವಿದೇಶಗಳಲ್ಲೂ ಹಲವು ಭಕ್ತರು ಮತ್ತು ಅನುಯಾಯಿಗಳನ್ನು ಸಂಪಾದಿಸಿದ್ದ ಡಾ. ಎ. ಚಂದ್ರಶೇಖರ್‌ ಉಡುಪರನ್ನು ಜನರು ಪ್ರೀತಿಯಿಂದ ಡಾ. ಜಿ ಎಂದೇ ಕರೆಸಿಕೊಳ್ಳುತ್ತಿದ್ದರು.

ಮೂಲತಃ ವೈದ್ಯರಾಗಿರುವ ಇವರು ಚಿಕಿತ್ಸಾ ಪದ್ದತಿಯಾಗಿ ಆಧ್ಯಾತ್ಮವನ್ನು ಪರಿಚಯಿಸಿದವರು. ಇದರ ಭಾಗವಾಗಿ ಡಿವೈನ್‌ ಪಾರ್ಕ್‌ ನಂತರ ವಿಶ್ವದ ಅತಿ ಎತ್ತರದ ಸ್ವಾಮಿ ವಿವೇಕಾನಂದರ ಪ್ರತಿಮೆಯನ್ನು ಒಳಗೊಂಡ ಎಸ್‌ಎಚ್‌ಆರ್‌ಎಫ್‌ (ಯೋಗಬನ) ಸ್ಥಾಪಿಸಿದ್ದರು. ಹೀಗೆ ಆರೋಗ್ಯಕ್ಕಾಗಿ ಆಧ್ಯಾತ್ಮವನ್ನು ಮುನ್ನೆಲೆಗೆ ತಂದಿದ್ದ ಡಾ. ಜಿ (ಡಾ. ಎ. ಚಂದ್ರಶೇಖರ್‌ ಉಡುಪ) ಅವರು ಇಂದು ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಚಂದ್ರಶೇಖರ್ ಉಡುಪ ಅವರು ಪತ್ನಿ, ಪುತ್ರ ಡಾ. ವಿವೇಕ ಉಡುಪ, ಪುತ್ರಿ ಮತ್ತು ಸೊಸೆ ಸೇರಿದಂತೆ ತುಂಬು ಕುಟುಂಬವನ್ನು ಹಾಗೂ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಅಗಲಿದ್ದಾರೆ. ಇಂದು ಸಂಜೆ 4:30ರವರೆಗೆ ಡಿವೈನ್‌ ಪಾರ್ಕ್‌ನ ಜ್ಞಾನ ಮಂದಿರದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ.

Jadesha Emmiganur

Jadesha Emmiganur

Jadesha Emmiganur Is a Passionate Journalist from Ballari