ವಿಮಾನದಲ್ಲಿ ಬರ್ಗರ್ ಜನಪ್ರಿಯತೆ
ಡೆಲ್ಟಾ ಏರ್‌ಲೈನ್ಸ್ ತನ್ನ ಪ್ರಥಮ ದರ್ಜೆ ಪ್ರಯಾಣಿಕರಿಗಾಗಿ, ಆಯ್ದ ದೀರ್ಘಾವಧಿಯ ವಿಮಾನ ಗಳಲ್ಲಿ ಶೇಕ್ ಶಾಕ್‌ನ ಪ್ರಸಿದ್ಧ ‘ಶಾಕ್‌ಬರ್ಗರ್’ ಅನ್ನು ಪರಿಚಯಿಸಿದೆ. ಇದು ಕೇವಲ ಒಂದು ಪ್ರಚಾರದ ತಂತ್ರ ವಲ್ಲ. ಬದಲಿಗೆ ಇದೊಂದು ದೊಡ್ಡ ಯಶಸ್ಸನ್ನು ಕಂಡಿದೆ. ಈ ಬರ್ಗರ್ ಯಾಕೆ ಅಷ್ಟು ವಿಶೇಷ? ವಿಮಾನವು 35 ಸಾವಿರ ಅಡಿ ಎತ್ತರದಲ್ಲಿ ಹಾರುವಾಗ, ನಮ್ಮ ರುಚಿ ಗ್ರಹಿಸುವ ಸಾಮರ್ಥ್ಯ ಕಡಿಮೆ ಯಾಗುತ್ತದೆ. ಹೀಗಾಗಿ ವಿಮಾನದಲ್ಲಿ ನೀಡುವ ಆಹಾರ ಸಾಮಾನ್ಯವಾಗಿ ರುಚಿಸುವುದಿಲ್ಲ.
ಕೆಲ ವರ್ಷಗಳ ಹಿಂದೆ, ಭಾರತದ ಜೆಟ್ ಏರ್ ವೇಸ್ ವಿಮಾನದಲ್ಲಿ ಪ್ರಯಾಣಿಸುವವರಿಗೆ, ಗಗನಸಖಿ ಯರು ಸಕ್ಕರೆ ಕಣಗಳಿರುವ ಹುಣಸೆಹಣ್ಣಿನ ಚಿಗಳಿಯನ್ನು ನೀಡುತ್ತಿದ್ದರು. ಅದು ಒಂಥರ ಹುಳಿ-ಸಿಹಿ ರುಚಿಯನ್ನು ನೀಡುತ್ತಿತ್ತು. ಒಂದು ಸಮೀಕ್ಷೆಯಲ್ಲಿ, ಜೆಟ್ ಏರ್ ವೇಸ್ ವಿಮಾನದಲ್ಲಿ ಏಕೆ ಪ್ರಯಾಣಿಸುತ್ತೀರಿ ಎಂದು ಕೇಳಿದಾಗ ಅನೇಕ ಪ್ರಯಾಣಿಕರು ಈ ಚಿಗಳಿಯನ್ನು ಪ್ರಸ್ತಾಪಿಸಿದ್ದರು.
ಅದೇ ರೀತಿ ಡೆಲ್ಟಾ ಏರ್ಲೈನ್ಸ್ ವಿಮಾನದೊಳಗೆ ’ಶೇಕ್ ಶಾಕ್ ಬರ್ಗರ್’ ನೀಡುವ ಮೂಲಕ ಹೊಸ ಪ್ರಯೋಗ ಮಾಡಿದ್ದು ಯಶಸ್ವಿಯಾಗಿದೆ. ಡೆಲ್ಟಾ ಏರ್ಲೈನ್ಸ್, ಅಮೆರಿಕದ ಪ್ರಮುಖ ವಿಮಾನಯಾನ ಸಂಸ್ಥೆ. ತನ್ನ ಪ್ರಯಾಣಿಕರಿಗೆ ನೀಡುತ್ತಿರುವ ಒಂದು ಹೊಸ ಸೌಲಭ್ಯ ಈಗ ಜಗತ್ತಿನಾದ್ಯಂತ ಸದ್ದು ಮತ್ತು ಸುದ್ದಿ ಮಾಡಿದೆ. ಅದುವೇ ’ಶೇಕ್ ಶಾಕ್ ಬರ್ಗ್ರರ್’.

ಹಾಗಾದರೆ ಏನಿದು ಶೇಕ್ ಶಾಕ್ ಎಂಬುದನ್ನು ತಿಳಿಯೋಣ. ಶೇಕ್ ಶಾಕ್ ಎಂದರೆ ಅಮೆರಿಕದ ಒಂದು ಜನಪ್ರಿಯ ಮತ್ತು ಪ್ರೀಮಿಯಂ ಫಾಸ್ಟ್-ಫುಡ್ ಕಂಪನಿ. ಇದು ತನ್ನ ಉತ್ತಮ ಗುಣಮಟ್ಟದ ಬರ್ಗರ್‌ಗಳು, ಮಿಲ್ಕ್‌ಶೇಕ್‌ಗಳು ಮತ್ತು ಬೆಲೆಗಳಿಗೆ ಹೆಸರುವಾಸಿ. ಮೆಕ್‌ಡೊನಾಲ್ಸ್ ಅಥವಾ ಬರ್ಗರ ಕಿಂಗ್‌ಗೆ ಹೋಲಿಸಿದರೆ, ಶೇಕ್ ಶಾಕ್ ಹೆಚ್ಚು ದುಬಾರಿ ಮತ್ತು ಉತ್ತಮ ಗುಣಮಟ್ಟದ ಪದಾರ್ಥ ಗಳನ್ನು ಬಳಸುತ್ತದೆ.
ಇದನ್ನೂ ಓದಿ: ಪಾಸ್ ಪೋರ್ಟ್ ನಲ್ಲೂ ವರ್ಣಭೇದ ನೀತಿ!?
ಡೆಲ್ಟಾ ಏರ್‌ಲೈನ್ಸ್ ತನ್ನ ಪ್ರಥಮ ದರ್ಜೆ ಪ್ರಯಾಣಿಕರಿಗಾಗಿ, ಆಯ್ದ ದೀರ್ಘಾವಧಿಯ ವಿಮಾನಗಳಲ್ಲಿ ಶೇಕ್ ಶಾಕ್‌ನ ಪ್ರಸಿದ್ಧ ‘ಶಾಕ್‌ಬರ್ಗರ್’ ಅನ್ನು ಪರಿಚಯಿಸಿದೆ. ಇದು ಕೇವಲ ಒಂದು ಪ್ರಚಾರದ ತಂತ್ರವಲ್ಲ. ಬದಲಿಗೆ ಇದೊಂದು ದೊಡ್ಡ ಯಶಸ್ಸನ್ನು ಕಂಡಿದೆ. ಈ ಬರ್ಗರ್ ಯಾಕೆ ಅಷ್ಟು ವಿಶೇಷ? ವಿಮಾನವು 35 ಸಾವಿರ ಅಡಿ ಎತ್ತರದಲ್ಲಿ ಹಾರುವಾಗ, ನಮ್ಮ ರುಚಿ ಗ್ರಹಿಸುವ ಸಾಮರ್ಥ್ಯ ಕಡಿಮೆಯಾಗುತ್ತದೆ. ಹೀಗಾಗಿ ವಿಮಾನದಲ್ಲಿ ನೀಡುವ ಆಹಾರ ಸಾಮಾನ್ಯವಾಗಿ ರುಚಿಸುವುದಿಲ್ಲ. ಆದರೆ ಈ ಶಾಕ್ ಬರ್ಗರ್ ಅನ್ನು ಎತ್ತರದ ವಾತಾವರಣಕ್ಕಾಗಿಯೇ ವಿಶೇಷವಾಗಿ ಸಿದ್ಧಪಡಿಸಲಾಗಿದೆ. ಮೃದುವಾದ ಆಲೂಗಡ್ಡೆ ಬನ್ ( soft potato bun), ರಸಭರಿತವಾದ ಆಂಗಸ್ ಗೋಮಾಂಸದ ಪ್ಯಾಟಿ ( juicy Angus patty ) ಟೊಮ್ಯಾಟೊ ಮತ್ತು ಲೆಟಿಸ್‌ನಂಥ ಟಾಪಿಂಗ್ ಗಳನ್ನು ಪ್ರತ್ಯೇಕವಾಗಿ ಪ್ಯಾಕ್ ಮಾಡಿ ನೀಡಲಾಗುತ್ತದೆ.
ಜತೆಗೆ, ಎತ್ತರದಲ್ಲಿಯೂ ನಿಜವಾದ ಚಾಕೊಲೇಟ್‌ನ ರುಚಿ ಕೊಡುವ ಬ್ರೌನಿ ಕೂಡ ಇರುತ್ತದೆ. ಪ್ರಯಾಣಿಕರು ಇದನ್ನು ಮುಂಚಿತವಾಗಿ, ಅಂದರೆ ವಿಮಾನ ಹತ್ತುವ ಮೊದಲೇ ಆನ್‌ಲೈನ್‌ನಲ್ಲಿ ಆರ್ಡರ ಮಾಡಬೇಕು. ವಿಮಾನದಲ್ಲಿ ನೇರವಾಗಿ ಕೇಳಿದರೆ ಇದು ಲಭ್ಯವಿರುವುದಿಲ್ಲ. ಇದರ ಯಶಸ್ಸಿನ ಹಿಂದಿನ ದೊಡ್ಡ ಕಾರಣವೆಂದರೆ ಅದರ ಲಾಜಿಸ್ಟಿಕ್ಸ್ ಅಥವಾ ಪೂರೈಕೆಯ ವ್ಯವಸ್ಥೆ. ಪ್ರತಿ ಬರ್ಗರ್ ಅನ್ನು ವಿಶೇಷವಾಗಿ ಪ್ಯಾಕ್ ಮಾಡಲಾಗುತ್ತದೆ.
ಅದನ್ನು ಸೀಲ್ ಮಾಡಿ, ವಿಮಾನದ ಗ್ಯಾಲಿಯಲ್ಲಿರುವ ವಿಶೇಷ ಓವನ್‌ಗಳಲ್ಲಿ ನಿಖರ ತಾಪಮಾನಕ್ಕೆ ಬಿಸಿ ಮಾಡಲಾಗುತ್ತದೆ. ಪ್ರಯಾಣಿಕರಿಗೆ ಬಡಿಸುವ ಕೆಲವೇ ನಿಮಿಷಗಳ ಮೊದಲು ಬನ್, ಪ್ಯಾಟಿ ಮತ್ತು ಟಾಪಿಂಗ್‌ಗಳನ್ನು ಜೋಡಿಸಿ, ತಾಜಾ ಬರ್ಗರ್ ಅನ್ನು ನೀಡಲಾಗುತ್ತದೆ. ಇದರಿಂದ ಬರ್ಗರ್ ಮೆತ್ತಗಾಗಿ ಹಾಳಾಗುವುದಿಲ್ಲ.
2025ರ ಮಧ್ಯದ ವೇಳೆಗೆ, ಹತ್ತು ಸಾವಿರಕ್ಕೂ ಹೆಚ್ಚು ಬರ್ಗರ್‌ಗಳನ್ನು ವಿಮಾನದಲ್ಲಿ ಬಡಿಸಲಾಗಿದೆ. ಈ ಸೌಲಭ್ಯವನ್ನು ಈಗ ಲಾಸ್ ಏಂಜಲೀಸ್ (LAX), ಅಟ್ಲಾಂಟಾ (ATL), ಸಿಯಾಟಲ್ (SEA) ಮತ್ತು ನ್ಯೂಯಾರ್ಕ್‌ನ ಲರ್ಗಾಡಿಯಾ (LGA) ಸೇರಿದಂತೆ 12 ನಗರಗಳಿಂದ ಹೊರಡುವ ವಿಮಾನಗಳಿಗೆ ವಿಸ್ತರಿಸಲಾಗಿದೆ.

ಇದಕ್ಕಾಗಿ ಡೆಲ್ಟಾ ತನ್ನ ವಿಮಾನದ ಗ್ಯಾಲಿ ಓವನ್‌ಗಳನ್ನು ಮಾರ್ಪಡಿಸಿದೆ ಮತ್ತು ಅಡುಗೆ ಸಿಬ್ಬಂದಿಗೆ ವಿಶೇಷ ತರಬೇತಿಯನ್ನು ನೀಡಿದೆ. ಇದನ್ನು ಪ್ರಯಾಣಿಕರು ’ಇತ್ತೀಚಿನ ವರ್ಷಗಳಲ್ಲಿ ಡೆಲ್ಟಾ ಮಾಡಿದ ಅತ್ಯುತ್ತಮ ಕೆಲಸ’ ಎಂದು ಹೊಗಳುತ್ತಿದ್ದಾರೆ. ಇದನ್ನು ಮುಂಚಿತವಾಗಿ ಆರ್ಡರ್ ಮಾಡಲೇಬೇಕು.
ತಪ್ಪಿದರೆ ಸಿಗುವುದಿಲ್ಲ. ಸದ್ಯಕ್ಕೆ ಸಸ್ಯಾಹಾರಿ (veggie) ಆಯ್ಕೆ ಲಭ್ಯವಿಲ್ಲ. ಬರ್ಗರ ಜತೆ ಫ್ರೆಂಚ್ ಫ್ರೈಸ್ ಅಥವಾ ಮಿಲ್ಕ್‌ಶೇಕ್ ನೀಡುವುದಿಲ್ಲ. ಇದು ಕೇವಲ ಪ್ರಥಮ ದರ್ಜೆ ಪ್ರಯಾಣಿಕರಿಗೆ ಮಾತ್ರ ಸೀಮಿತ. ವಿಮಾನದಲ್ಲಿ ಶೇಕ್ ಶಾಕ್ ಬರ್ಗರ್ ನೀಡುವುದು ಕೇವಲ ಒಂದು ಹೊಸತನವಲ್ಲ. ಇದು ವಿಮಾನಯಾನ ಉದ್ಯಮದಲ್ಲಿ ಪ್ರೀಮಿಯಂ ದರ್ಜೆಯ ಆಹಾರ ಹೇಗಿರಬೇಕು ಎಂಬುದಕ್ಕೆ ಒಂದು ಹೊಸ ಮಾನದಂಡವನ್ನೇ ಸ್ಥಾಪಿಸಿದೆ. ಪ್ರಯಾಣಿಕರಿಗೆ ಉತ್ತಮ ಅನುಭವ ನೀಡಲು ಕಂಪನಿಗಳು ಎಷ್ಟು ಶ್ರಮ ವಹಿಸುತ್ತವೆ ಎಂಬುದಕ್ಕೆ ಇದೊಂದು ಉತ್ತಮ ನಿದರ್ಶನ.