ಇಂಡಿಯಾ ಈಸ್ ಗ್ರೇಟ್...! ಬಟ್....
ಲಾಸ್ಟ್ ವಿ ಐನೆಸ್ ಎಂಬ ಖಾತೆಯ ಪೋಸ್ಟೊಂದು ವೈರಲ್ ಆಗಿದೆ. ವಿದೇಶಿ ಮಹಿಳೆಯ ಈ ಇನ್ ಸ್ಟಾ ಖಾತೆಯಲ್ಲಿ ಬರೆದದ್ದು ಓದಿದಾಗ ಇಂಡಿಯನ್ಸ್ ಆರ್ ನಾಟ್ ಗ್ರೇಟ್ ಎಂಬ ಉಪ್ಪಿಯ ಮಾತು ಸಾರ್ವಕಾಲಿಕ ಸತ್ಯವಾ ಅನಿಸಿಬಿಡುತ್ತದೆ. ನಡುರಾತ್ರಿಯಲ್ಲಿ ಹೆಣ್ಣುಮಗಳೊಬ್ಬಳು ನಿರ್ಭಯದಿಂದ ಓಡಾಡುವಂತಾದರೆ, ಸುರಕ್ಷಿತವಾಗಿ ಮನೆಸೇರುವಂತಾದರೆ ಅದು ರಾಮರಾಜ್ಯ ಎಂದು ಗಾಂಧಿ ರಾಮರಾಜ್ಯದ ಕನಸು ಕಂಡಿದ್ದರು.
ನಟ ಉಪೇಂದ್ರ ನಾಯಕತ್ವದ ಚೊಚ್ಚಲ ಚಿತ್ರ A ಯಾರಿಗೆ ತಾನೇ ಗೊತ್ತಿಲ್ಲ. ಆ ಚಿತ್ರದಲ್ಲೊಂದು ಸಂಭಾಷಣೆ ಇದೆ. ಇಂಡಿಯಾ ಈಸ್ ಗ್ರೇಟ್, ಇಂಡಿಯನ್ ಕಲ್ಚರ್ ಈಸ್ ಗ್ರೇಟ್, ಇಂಡಿಯನ್ ಹೆರಿಟೇಜ್ ಈಸ್ ಗ್ರೇಟ್, ಇಂಡಿಯನ್ ಟ್ರೆಡಿಷನ್ ಈಸ್ ಗ್ರೇಟ್, ಇಂಡಿಯನ್ ಸಾಯಿಲ್ ಈಸ್ ಗ್ರೇಟ್... ಬಟ್.... ಇಂಡಿಯನ್ಸ್ ಆರ್ ನಾಟ್ ಗ್ರೇಟ್! ಇಂಡಿಯನ್ಸ್ ಆರ್ ನಾಟ್ ಗ್ರೇಟ್ ಅಂತ ಆ ಸಂದರ್ಭದಲ್ಲಿ ಉಪೇಂದ್ರ ಹೇಳೋಕೆ ಅಲ್ಲೊಂದು ದೃಶ್ಯವಿತ್ತು. ನಡುರಾತ್ರಿಯಲ್ಲಿ ಹೆಣ್ಣೊಬ್ಬಳನ್ನು ಅತ್ಯಾಚಾರ ಎಸಗಲೆಂದು ಗುಂಪೊಂದು ಅಟ್ಟಾಡಿಸಿಕೊಂಡು ಹೋಗುತ್ತಿರುತ್ತದೆ. ಅವರನ್ನು ಕುರಿತು ಉಪೇಂದ್ರ ಮಾತನ್ನು ಹೇಳುತ್ತಾರೆ. ಆ ಸಂಭಾಷಣೆ ಇಂದಿಗೂ ಕಟುವಾಸ್ತವದಂತೆ ಕಾಡುತ್ತದೆ.
ಇದನ್ನೂ ಓದಿ: ಕಟ್ಟೋಕೆ ನಾನಾ ದಿನ ಕೆಡವೋಕೆ ಮೂರೇ ದಿನ!
ಲಾಸ್ಟ್ ವಿ ಐನೆಸ್ ಎಂಬ ಖಾತೆಯ ಪೋಸ್ಟೊಂದು ವೈರಲ್ ಆಗಿದೆ. ವಿದೇಶಿ ಮಹಿಳೆಯ ಈ ಇನ್ ಸ್ಟಾ ಖಾತೆಯಲ್ಲಿ ಬರೆದದ್ದು ಓದಿದಾಗ ಇಂಡಿಯನ್ಸ್ ಆರ್ ನಾಟ್ ಗ್ರೇಟ್ ಎಂಬ ಉಪ್ಪಿಯ ಮಾತು ಸಾರ್ವಕಾಲಿಕ ಸತ್ಯವಾ ಅನಿಸಿಬಿಡುತ್ತದೆ. ನಡುರಾತ್ರಿಯಲ್ಲಿ ಹೆಣ್ಣುಮಗಳೊಬ್ಬಳು ನಿರ್ಭಯದಿಂದ ಓಡಾಡುವಂತಾದರೆ, ಸುರಕ್ಷಿತವಾಗಿ ಮನೆಸೇರುವಂತಾದರೆ ಅದು ರಾಮರಾಜ್ಯ ಎಂದು ಗಾಂಧಿ ರಾಮರಾಜ್ಯದ ಕನಸು ಕಂಡಿದ್ದರು. ಆದರೆ ನಮ್ಮ ಕೆಲವು ಪುರುಷ ಸಿಂಹಗಳಿಗೆ ಈ ರಾಜ್ಯ ರಾಮರಾಜ್ಯವಾಗುವುದು ಬೇಕಿಲ್ಲ. ಅವರಿಂದಾಗಿ ದೇಶಕ್ಕೇ ಕೆಟ್ಟ ಹೆಸರು.

ವಿದೇಶದಿಂದ ಬಂದಿರುವ ಯುವತಿಯೊಬ್ಬಳು ಸುರಕ್ಷತೆಯ ದೃಷ್ಟಿಯಿಂದ, ಐಷಾರಾಮಿ ಎಸಿ ಕೋಚ್ ನಲ್ಲಿ ಪ್ರಯಾಣಿಸಿದ್ದಾಳೆ. ಆದರೆ ಆಕೆಯನ್ನು ಕಾಮದ ಕಣ್ಣಿನಿಂದ ನೋಡಿ ದೃಷ್ಟಿಯುದ್ಧಕ್ಕಿಳಿದು ಯುವಕನೊಬ್ಬ ಮುಜುಗರಕ್ಕೀಡುಮಾಡಿದ್ದಾನೆ. ಅಷ್ಟೇ ಅಲ್ಲದೆ ಆಕೆಯನ್ನು ನೆಮ್ಮದಿಯಿಂದ ಶೌಚಗೃಹಕ್ಕೂ ಹೋಗಲು ಬಿಡದಂತೆ ಫಾಲೋ ಮಾಡಿದ್ದಾನೆ. ಸಾಲದೆಂಬಂತೆ ಆಕೆ ಒಳಗಿದ್ದಾಗ ಶೌಚಾಲಯದ ಬಾಗಿಲು ತೆರೆಯುವ ಪ್ರಯತ್ನ ಮಾಡಿದ್ದಾನೆ. ಅದೃಷ್ಟವಶಾತ್ ಆ ವಿದೇಶಿ ಯುವತಿಯ ಗೆಳೆಯ ಸಕಾಲದಲ್ಲಿ ಈ ಪಾಪಿಯನ್ನು ಕಂಡು ಗದರಿದ್ದರಿಂದ ಹೆದರಿ ಹೆಜ್ಜೆ ಹಿಂದಿಟ್ಟಿದ್ದಾನೆ.
ಈ ಘಟನೆಯನ್ನು ಆಕೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಳ್ಳುವಾಗ ವ್ಯಕ್ತಿಯ ಹೆಸರನ್ನಾಗಲೀ, ಕೇವಲ ವಿಕೃತ ಪುರುಷ ಎಂದಾಗಲೀ ಬರೆಯುವುದಿಲ್ಲ. ಬದಲಿಗೆ ತನಗೆ ಭಾರತದಲ್ಲಿ ಇಂಥ ಕೆಟ್ಟ ಅನುಭವವಾಯ್ತು ಎಂದು ಬರೆದುಕೊಳ್ಳುತ್ತಾಳೆ. ಭಾರತೀಯರಿಂದ ಇಂಥ ಅಪಾಯವಾಯ್ತು ಎಂದು ಬರೆದುಕೊಳ್ಳುತ್ತಾಳೆ. ಒಬ್ಬ ಇಂಥ ವ್ಯಕ್ತಿಯಿಂದ ಇಡೀ ದೇಶಕ್ಕೆ ಕಳಂಕ. ಭಾರತ ವಿದೇಶಿಯರಿಗೆ ಸುರಕ್ಷಿತವಲ್ಲ, ಪ್ರವಾಸಿಗರಿಗೆ ಸೇಫ್ ಅಲ್ಲ ಎಂಬ ಅಭಿಪ್ರಾಯ ಜಗತ್ತಿನಾದ್ಯಂತ ಹಬ್ಬುತ್ತದೆ. ಇಮೇಜ್ ಹಾಳಾಗುವುದು ಭಾರತದ್ದು. ನಷ್ಟ ಭಾರತೀಯ ಪ್ರವಾಸೋದ್ಯಮಕ್ಕೆ. ಆರ್ಥಿಕ ನಷ್ಟ ಇಲ್ಲಿ ಗಣ್ಯವಲ್ಲ. ಆದರೆ ಇಮೇಜಿಗೆ ಆಗುವ ಹಾನಿ, ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದೆಂಬಂತೆ ಶಾಶ್ವತವಾದ ಕಲೆಯಾಗಿಬಿಡುತ್ತದೆ. ಪ್ರತಿ ವರ್ಷ ಒಂದಲ್ಲಾ ಒಂದು ಇಂಥ ಘಟನೆ ಕೇಳುವಂತಾಗುತ್ತಿದೆ. ಉಗ್ರಶಿಕ್ಷೆಯಾಗದ ಹೊರತು ಇವರು ಪಾಠ ಕಲಿಯುವುದಿಲ್ಲ. ಆದರೆ ಕಲಿಸುವರಾರು?