840 ಭಾಷೆಗಳ ಗಿನಿಮಾತು!
ಭಾರತ ಚಿಕ್ಕದೊಂದು ದೇಶದಿಂದ ಕಲಿಯುವುದಿದೆ. ಪಪುವಾ ನ್ಯೂ ಗಿನೀ ಎಂಬ ದೇಶ ಇರೋದು ಭಾರತದ ಮುಂದೆ ಒಂದು ಚುಕ್ಕಿಯಂತೆ. ಅಲ್ಲಿನ ಜನಸಂಖ್ಯೆ ಒಂದು ಕೋಟಿಗಿಂತ ಅಧಿಕವಷ್ಟೆ. ಅಲ್ಲಿರುವ ಒಟ್ಟು ಭಾಷೆಗಳು ಎಂಟುನೂರಾ ನಲವತ್ತು! ಇರುವ ಒಂದು ಕೋಟಿ ಜನಸಂಖ್ಯೆಯಲ್ಲಿ 840 ಭಾಷೆ ಮಾತನಾಡುವವರಿದ್ದೂ ಅಲ್ಲಿ ಭಾಷಾ ಜಗಳವಿಲ್ಲ. ದ್ವೇಷವಿಲ್ಲ. ಅವರು ಭಾಷೆಯನ್ನು ಸಂವಹನಕ್ಕೊಂದು ಮಾಧ್ಯಮವಷ್ಟೇ ಎಂಬಂತೆ ನೋಡುತ್ತಾರೆ.
ವೈವಿಧ್ಯದಲ್ಲಿ ಏಕತೆ ಎಂಬ ಮಂತ್ರ ನಂಬಿದ್ದ ನಮ್ಮ ದೇಶದಲ್ಲಿ ಇತ್ತೀಚೆಗೆ ಅದೇ ದೊಡ್ಡ ತಲೆನೋವಾಗಿದೆ. ಭಾಷೆ ಮತ್ತು ಸಂಸ್ಕೃತಿ ಹೆಸರಲ್ಲಿ ಪರಸ್ಪರ ದ್ವೇಷಗಳು ತಾರಕಕ್ಕೇರುತ್ತಿವೆ. ಕರ್ನಾಟಕವನ್ನೇ ಉದಾಹರಣೆಯಾಗಿ ತಗೆದುಕೊಂಡರೂ, ಇಲ್ಲಿ ಹಿಂದಿ ವಿರುದ್ಧ, ತಮಿಳರ ವಿರುದ್ಧ ವಿಪರೀತ ಅಸಹನೆಯಿದೆ. ಭುಗಿಲೇಳಲು ಕಾಯುತ್ತಿರುವ ಆಕ್ರೋಶವಿದೆ. ಅದೇ ರೀತಿ ಹಿಂದಿ ಭಾಷಿಕರಿಗೆ ತಾವೇ ಶ್ರೇಷ್ಠರೆಂಬ ಭ್ರಮೆ ಮತ್ತು ಅಹಮಿಕೆಗಳಿವೆ. ಅವರ ಸುಪೀರಿಯರ್ ಕಾಂಪ್ಲೆಕ್ಸುಗಳು ಇತರ ಭಾಷಿಗರನ್ನು ಕೆಣಕುತ್ತಿವೆ. ನೂರಾ ಐವತ್ತು ಕೋಟಿ ಜನಸಂಖ್ಯೆಯ ನಮ್ಮ ದೇಶದಲ್ಲಿ ಅಧಿಕೃತ ಭಾಷೆ ಅಂತ ಇರೋದು ಇಪ್ಪತ್ತೆರಡು. ಮಾತಿಗೆ ಸೀಮಿತವಾಗಿರುವ ಅಧಿಕೃತ ಲಿಪಿ ಇಲ್ಲದ ಆದರೆ ಹೆಚ್ಚು ಜನರು ಮಾತನಾಡುವ ಸುಮಾರು ನೂರಾ ಇಪ್ಪತ್ತೊಂದು ಭಾಷೆಗಳಿವೆ. ಅದರ ಹೊರತಾಗಿ ಸುಮಾರು 19500 ಉಪಭಾಷೆಗಳು ಈ ದೇಶದಲ್ಲಿವೆ. ಅವುಗಳು ಕೇವಲ ಮಾತೃಭಾಷೆಗಳಾಗಿ, ಸಣ್ಣ ಪಂಗಡಗಳಿಗೆ ಸೀಮಿತವಾಗಿವೆ. ಭಾಷೆ ಭಾಷೆ ನಡುವೆ ಒಂದು ವೇಳೆ ಸಮರ ಗಂಭೀರವಾಗುತ್ತಾ ಹೋದರೆ ಈ ದೇಶ ಎಷ್ಟು ಹೋಳಾಗಬಹುದು? ಇಪ್ಪತ್ತು ಸಾವಿರ ತುಂಡುಗಳಾಗಬಹುದು.

ಅವರವರ ಭಾಷೆಯದ್ದೇ ಒಂದೊಂದು ದೇಶವಾಗುತ್ತಾ ಹೋದರೆ ಭಾರತ ಭಾರತವಾಗಿ ಉಳಿಯುವುದೆಂತು?
ಭಾರತ ಚಿಕ್ಕದೊಂದು ದೇಶದಿಂದ ಕಲಿಯುವುದಿದೆ. ಪಪುವಾ ನ್ಯೂ ಗಿನೀ ಎಂಬ ದೇಶ ಇರೋದು ಭಾರತದ ಮುಂದೆ ಒಂದು ಚುಕ್ಕಿಯಂತೆ. ಅಲ್ಲಿನ ಜನಸಂಖ್ಯೆ ಒಂದು ಕೋಟಿಗಿಂತ ಅಧಿಕವಷ್ಟೆ. ಅಲ್ಲಿರುವ ಒಟ್ಟು ಭಾಷೆಗಳು ಎಂಟುನೂರಾ ನಲವತ್ತು! ಇರುವ ಒಂದು ಕೋಟಿ ಜನಸಂಖ್ಯೆಯಲ್ಲಿ 840 ಭಾಷೆ ಮಾತನಾಡುವವರಿದ್ದೂ ಅಲ್ಲಿ ಭಾಷಾ ಜಗಳವಿಲ್ಲ. ದ್ವೇಷವಿಲ್ಲ. ಅವರು ಭಾಷೆಯನ್ನು ಸಂವಹನಕ್ಕೊಂದು ಮಾಧ್ಯಮವಷ್ಟೇ ಎಂಬಂತೆ ನೋಡುತ್ತಾರೆ. ಆದರೆ ಭಾರತದಲ್ಲಿ ಭಾಷೆ ಅಂದರೆ ಭಾವನೆ. ಅದಕ್ಕೆ ತಾಯಿ, ದೇವರು ಹೀಗೆ ಹಲವು ಸ್ವರೂಪ ಕೊಡಲಾಗುತ್ತದೆ. ವೈವಿಧ್ಯದಲ್ಲಿ ಏಕತೆ ಪಪುವಾ ನ್ಯೂಗಿನಿಯಲ್ಲಿ ಕಾಣುತ್ತದೆ. ನಮ್ಮಲ್ಲಿ ಮಾತ್ರ ವೈವಿಧ್ಯದಲ್ಲಿ ಭಿನ್ನತೆಯನ್ನೇ ಹುಡುಕಲಾಗುತ್ತದೆ. ಇಲ್ಲಿ ಯಾರು ಸರಿ ಯಾರು ತಪ್ಪು ಅನ್ನುವುದಲ್ಲ ವಿಶ್ಲೇಷಣೆಗಿಂತ, ನಾವಿರುವುದೇ ಹೀಗೆ ಎಂಬುದನ್ನು ಅನಿವಾರ್ಯವಾಗಿ ಒಪ್ಪಬೇಕಾಗಿದೆ!