Friday, October 3, 2025
Friday, October 3, 2025

ವಿಮಾನದಲ್ಲಿ ಲಗೇಜ್‌ ನಿರ್ವಹಣೆ

ಜಪಾನಿನ ಕಾನ್ಸೈ ವಿಮಾನ ನಿಲ್ದಾಣ. ಅಲ್ಲಿ ಕಳೆದ ಮೂವತ್ತು ವರ್ಷಗಳಿಂದ ಪ್ರಯಾಣಿಕರ ಒಂದೇ ಒಂದು ಲಗೇಜ್ ಕಾಣೆಯಾಗಿಲ್ಲ ಅಥವಾ ತಡವಾಗಿ ಬಟವಾಡೆ ಆಗಿಲ್ಲ. ಅಷ್ಟು ಕರಾರುವಾಕ್ಕಾಗಿ ಅಲ್ಲಿ ಲಗೇಜುಗಳನ್ನು ನಿರ್ವಹಿಸಲಾಗುತ್ತದೆ. ಅದೊಂದೇ ಕಾರಣಕ್ಕೆ ಆ ವಿಮಾನ ನಿಲ್ದಾಣ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿದೆ.

ಒಂದು ವಿಮಾನ ನಿಲ್ದಾಣದ ಉತ್ಕೃಷ್ಟತೆ ಅಥವಾ ಉತ್ತಮ ಗುಣಮಟ್ಟಕ್ಕೆ ಆ ನಿಲ್ದಾಣ ಪ್ರಯಾಣಿಕರ ಲಗೇಜುಗಳನ್ನು ಹೇಗೆ ನಿರ್ವಹಿಸುತ್ತದೆ ಎಂಬುದೂ ಮಾನದಂಡ. ಕೆಲವು ವಿಮಾನ ನಿಲ್ದಾಣಗಳು ಇದೊಂದೇ ಸಂಗತಿಯಿಂದ ಹೆಸರು ಮಾಡಿದ ನಿದರ್ಶನವೂ ಇದೆ. ಉದಾಹರಣೆಗೆ ಜಪಾನಿನ ಕಾನ್ಸೈ ವಿಮಾನ ನಿಲ್ದಾಣ. ಅಲ್ಲಿ ಕಳೆದ ಮೂವತ್ತು ವರ್ಷಗಳಿಂದ ಪ್ರಯಾಣಿಕರ ಒಂದೇ ಒಂದು ಲಗೇಜ್ ಕಾಣೆಯಾಗಿಲ್ಲ ಅಥವಾ ತಡವಾಗಿ ಬಟವಾಡೆ ಆಗಿಲ್ಲ. ಅಷ್ಟು ಕರಾರುವಾಕ್ಕಾಗಿ ಅಲ್ಲಿ ಲಗೇಜುಗಳನ್ನು ನಿರ್ವಹಿಸಲಾಗುತ್ತದೆ. ಅದೊಂದೇ ಕಾರಣಕ್ಕೆ ಆ ವಿಮಾನ ನಿಲ್ದಾಣ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿದೆ.

ವಿಮಾನ ನಿಲ್ದಾಣಗಳಲ್ಲಿ ಲಗೇಜು ಹ್ಯಾಂಡ್ಲಿಂಗ್ (Luggage Handling) ಅಥವಾ ಚೆಕ್-ಇನ್ ಸಾಮಾನು ನಿರ್ವಹಣೆಯ ಪ್ರಕ್ರಿಯೆ ಅತ್ಯಂತ ಸಂಘಟಿತವಾದ ಹಾಗೂ ತಂತ್ರಜ್ಞಾನದ ಸಹಾಯದಿಂದ ನಡೆಸುವ ಪ್ರಕ್ರಿಯೆಯಾಗಿದೆ.

ಈ ಪ್ರಕ್ರಿಯೆ ಹತ್ತಾರು ಸಾವಿರಾರು ಪ್ರಯಾಣಿಕರ ಲಗೇಜುಗಳನ್ನು ನಿಖರವಾಗಿ, ಸುರಕ್ಷಿತವಾಗಿ, ನಿಗದಿತವಾಗಿ ಹಾಗೂ ಸಮಯಕ್ಕೆ ಸರಿಯಾಗಿ ಗಮ್ಯಸ್ಥಾನಕ್ಕೆ ತಲುಪಿಸುವ ಉದ್ದೇಶವನ್ನು ಹೊಂದಿ ರುತ್ತದೆ. ಲಗೇಜು ಹ್ಯಾಂಡ್ಲಿಂಗ್ ಎಂದರೆ ಪ್ರಯಾಣಿಕರ ಬ್ಯಾಗ್ ಅಥವಾ ಲಗೇಜನ್ನು ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗಿನಿಂದ ಹಿಡಿದು, ವಿಮಾನದಲ್ಲಿ ಸಾಗಿಸುವವರೆಗೆ ಮತ್ತು ಗಮ್ಯಸ್ಥಾನದಲ್ಲಿ ಪ್ರಯಾಣಿಕರಿಗೆ ತಲುಪುವವರೆಗೆ ನಡೆಯುವ ಒಂದು ವ್ಯವಸ್ಥಿತ ಮತ್ತು ಸಂಪೂರ್ಣ ಪ್ರಕ್ರಿಯೆ.

luggage handle

ಈ ಕಾರ್ಯದಲ್ಲಿ ಹಲವು ಹಂತಗಳು, ಯಂತ್ರಗಳು ಹಾಗೂ ಸಿಬ್ಬಂದಿ ತೊಡಗಿರುತ್ತಾರೆ. ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ಬರುವ ತಕ್ಷಣವೇ ತಮ್ಮ ಲಗೇಜುಗಳನ್ನು ಚೆಕ್-ಇನ್ ಕೌಂಟರ್‌ಗೆ ಒಯ್ಯುತ್ತಾರೆ. ಇಲ್ಲಿ ಸಿಬ್ಬಂದಿ ಅವರ ಟಿಕೆಟ್ ಪರಿಶೀಲಿಸಿ, ಲಗೇಜಿನ ಭಾರವನ್ನು ತೂಕದ ಅಳತೆ ಯಂತ್ರದಲ್ಲಿ ಅಳೆಯುತ್ತಾರೆ. ತೂಕ ಮಿತಿಯ ಮೀರುವ ಲಗೇಜುಗಳಿಗೆ ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ. ಲಗೇಜು ಮೇಲೆ ಒಂದು ಟ್ಯಾಗ್ ಅಂಟಿಸಲಾಗುತ್ತದೆ.

ಇದು ಬಾರ್ಕೋಡ್ ಅಥವಾ RFID ಟ್ಯಾಗ್ ಅನ್ನು ಹೊಂದಿರುತ್ತದೆ. ಚೆಕ್-ಇನ್ ಆದ ನಂತರ, ಲಗೇಜುಗಳನ್ನು ಬೆಲ್ಟ್ ನಲ್ಲಿ ಹಾಕಲಾಗುತ್ತದೆ. ಈ ಸಿಸ್ಟಮ್, ಲಗೇಜುಗಳನ್ನು ವಿಮಾನ ನಿಲ್ದಾಣದ ಒಳಗಿನ ಸಂಚಾರಿ ಮಾರ್ಗಗಳಲ್ಲಿ ಸಾಗಿಸುತ್ತದೆ. ಈ ಬೆಲ್ಟ್ ಸಿಸ್ಟಮ್ ಹಲವು ಗುರುತುಗಳನ್ನು, ರೋಬೊಟಿಕ್ ಆರ್ಮ್ ಹಾಗೂ ಸೆನ್ಸರ್‌ಗಳನ್ನು ಹೊಂದಿರುತ್ತದೆ. ನಂತರ ಲಗೇಜುಗಳು ಎಕ್ಸ್-ರೇ ಸ್ಕ್ಯಾನರ್ ಗಳ ಮೂಲಕ ಸಾಗುತ್ತವೆ. ‌

ಈ ಸ್ಕ್ಯಾನಿಂಗ್ ಪ್ರಕ್ರಿಯೆಯಲ್ಲಿ ಪ್ರತಿ ಲಗೇಜಿನಲ್ಲಿ ಹಾನಿಕರ, ಸ್ಫೋಟಕ ಅಥವಾ ನಿರ್ಬಂಧಿತ ವಸ್ತುಗಳ ಪರಿಶೀಲನೆ ನಡೆಯುತ್ತದೆ. ಸಂಶಯಾಸ್ಪದ ಲಗೇಜುಗಳನ್ನು ಮ್ಯಾನುಯಲ್ ತಪಾಸಣೆಗೆ ತೆಗೆದುಕೊಳ್ಳಲಾಗುತ್ತದೆ. ಸ್ಕ್ಯಾನಿಂಗ್ ನಂತರ ಲಗೇಜುಗಳನ್ನು ವಿಮಾನದ ಗಮ್ಯಸ್ಥಾನವನ್ನು ಅನುಸರಿಸಿ ಪ್ರತ್ಯೇಕಿಸಲಾಗುತ್ತದೆ. ಈ ಭಾಗದಲ್ಲಿ ಸ್ಮಾರ್ಟ್ ಟ್ಯಾಗ್‌ಗಳು ಮತ್ತು RFID ರೀಡರ್‌ಗಳು ಸಹಾಯದಿಂದ ಲಗೇಜು ಯಾವ ವಿಮಾನಕ್ಕೆ ಸೇರಬೇಕೋ ಅಲ್ಲಿಗೆ ಕಳುಹಿಸಲಾಗುತ್ತದೆ.

ವಿಂಗಡಿಸುವ (ಸಾರ್ಟಿಂಗ್) ವ್ಯವಸ್ಥೆ ಸಂಪೂರ್ಣವಾಗಿ ಆಟೋಮೇಷನ್ ಆಧಾರಿತವಾಗಿರುತ್ತದೆ. ಗೇಜು ಸಾರ್ಟಿಂಗ್ ಪ್ರದೇಶದಿಂದ ಹೊರಬಂದು, ಲೋಡಿಂಗ್ ವಿಭಾಗಕ್ಕೆ ಬರುತ್ತದೆ. ಇಲ್ಲಿ ಲೋಡರ್‌ ಗಳು ಅಥವಾ ಬಾಗೇಜು ಹ್ಯಾಂಡ್ಲರ್‌ಗಳು ಲಗೇಜುಗಳನ್ನು ಸಿದ್ಧಪಡಿಸುತ್ತಾರೆ. ಲಗೇಜುಗಳನ್ನು ULDs (Unit Load Devices) ಅಥವಾ ಟ್ರಾಲಿಗಳಲ್ಲಿ ಸಾಗಿಸಲಾಗುತ್ತದೆ. ಈ ULDಗಳನ್ನು ವಿಮಾನದ ಕಾರ್ಗೋ ವಿಭಾಗಕ್ಕೆ ನಿಯಮಿತ ರೀತಿಯಲ್ಲಿ ಲೋಡ್ ಮಾಡಲಾಗುತ್ತದೆ.

luggage

ವಿಮಾನದ ತೂಕ ಮತ್ತು ಸಮತೋಲನ (Weight and Balance) ನಿಯಮಾನುಸಾರ ಲಗೇಜು ಗಳನ್ನು ತುಂಬಲಾಗುತ್ತದೆ. ಲಗೇಜು ಹ್ಯಾಂಡ್ಲಿಂಗ್ ಸಿಬ್ಬಂದಿ, ಪೈಲಟ್‌ಗಳಿಗೆ ಅಥವಾ ಲೋಡ್ ಮಾಸ್ಟರ್‌ಗಳಿಗೆ ಲಗೇಜಿನ ಸಂಪೂರ್ಣ ಮಾಹಿತಿ ನೀಡುತ್ತಾರೆ. ವಿಮಾನ ತಲುಪಿದ ನಂತರ ಲಗೇಜು ಗಳನ್ನು ಕಾರ್ಗೋ ವಿಭಾಗದಿಂದ ಹೊರತೆಗೆದುಕೊಳ್ಳಲಾಗುತ್ತದೆ. ಈ ಲಗೇಜುಗಳು ಮತ್ತೆ ವಿಮಾನ ನಿಲ್ದಾಣದ ಒಳಗಿನ ಲಗೇಜು ಸಂಚಾರಿ ಮಾರ್ಗದಲ್ಲಿ ಸಾಗುತ್ತವೆ.

ಪ್ರಯಾಣಿಕರು ವಿಮಾನದಿಂದ ಇಳಿದು ಲಗೇಜು ಪಿಕಪ್ ಮಾಡಲು ಬ್ಯಾಗೇಜ್ ಕ್ಲೈಮ್ ಬೆಲ್ಟ್‌ ಪ್ರದೇಶಕ್ಕೆ ಬರುತ್ತಾರೆ. ಲಗೇಜುಗಳನ್ನು ಕನ್ವೆಯರ್ ಬೆಲ್ಟ್ ಮೂಲಕ ಹೊರ ತಂದು ಪ್ರಯಾಣಿಕರಿಗೆ ನೀಡಲಾಗುತ್ತದೆ. ಲಗೇಜಿನ ವಿಳಾಸ ತಪ್ಪಾಗಿ ಟ್ಯಾಗ್ ಆಗಿದ್ದರೆ, ಅದು ಬೇರೆ ನಿಲ್ದಾಣಕ್ಕೋ ಅಥವಾ ಬೇರೆ ವಿಮಾನಕ್ಕೋ ಹೋಗಬಹುದು. ಒಂದು ಬ್ಯಾಗ್ ನಿರ್ವಹಣೆಯಲ್ಲಿ ನೂರಾರು ಜನರ ಪಾತ್ರ‌ ವಿರುವುದು ಗಮನಾರ್ಹ.

Bhagya Divana

Bhagya Divana

Bhagya Divana is a Professional Journalist. Working in Pravasi Prapancha.

ಜಪಾನಿನಲ್ಲಿ ಬೀದಿಯಲ್ಲಿಟ್ಟ ಕಸದ ತೊಟ್ಟಿಗಳೂ ಮಾತಾಡುತ್ತವೆ!

Read Previous

ಜಪಾನಿನಲ್ಲಿ ಬೀದಿಯಲ್ಲಿಟ್ಟ ಕಸದ ತೊಟ್ಟಿಗಳೂ ಮಾತಾಡುತ್ತವೆ!

ಒಂದು ಮರದ ಕೊಂಬೆ ಅಲ್ಲಾಡಿಸಿದ್ದಕ್ಕೆ ಕ್ಯಾತೆ ತೆಗೆದಿದ್ದ ಜಪಾನಿಯರು!

Read Next

ಒಂದು ಮರದ ಕೊಂಬೆ ಅಲ್ಲಾಡಿಸಿದ್ದಕ್ಕೆ ಕ್ಯಾತೆ ತೆಗೆದಿದ್ದ ಜಪಾನಿಯರು!