Sunday, October 5, 2025
Sunday, October 5, 2025

ಆ ಅದೃಶ್ಯ ಹಸ್ತ

ಜಪಾನಿಯರು ತಮ್ಮ ಗ್ರಾಹಕರು ಸಂತೃಪ್ತಪಡಿಸಲು ಮತ್ತು ಸಮಾಜಕ್ಕೆ ಸೇವೆ ಸಲ್ಲಿಸಲು ತಮ್ಮ ಕೆಲಸದಲ್ಲಿ ಹೆಚ್ಚಿನದನ್ನು ನೀಡುತ್ತಾರೆ. ಅವರು ಯಾವತ್ತೂ ತಮ್ಮ ಕೆಲಸದಲ್ಲಿ ಶ್ರೇಷ್ಠತೆ ಮೆರೆಯಲು walking extra mile ನೀತಿಯನ್ನು ಅನುಸರಿಸುತ್ತಾರೆ. ಅಂದರೆ ಅಗತ್ಯಕ್ಕಿಂತ ಹೆಚ್ಚಿನ ಉತ್ಸಾಹ ತೋರಿಸುತ್ತಾರೆ.

ಜಪಾನಿನಲ್ಲಿದ್ದಾಗ ಸ್ನೇಹಿತರೊಬ್ಬರು, ಜಪಾನಿಯರಿದ್ದಾರಲ್ಲ, ಬಹಳ ವಿಚಿತ್ರ ಜನ. ಇವರು ಹೊರ ಜಗತ್ತಿಗೆ ಆಧುನಿಕರಂತೆ ಕಂಡರೂ, ಒಳಗೊಳಗೆ ಸಂಪ್ರದಾಯವಾದಿಗಳು. ಧರ್ಮ, ಆಚರಣೆಗಳಲ್ಲಿ ನಂಬಿಕೆಯುಳ್ಳವರು. ಅವರು ಇಂದಿಗೂ ಅಗೋಚರ ಶಕ್ತಿ (Invisible Hand) ಎಂಬುದು ಇದೆ ಎಂದು ನಂಬಿದ್ದಾರೆ’ ಎಂದು ಹೇಳಿದರು. ತಾವು ಒಳ್ಳೆಯವರು, ಹೀಗಾಗಿ ತಮಗೆ ಒಳ್ಳೆಯದೇ ಆಗುತ್ತದೆ ಎಂಬುದು ಅವರ ನಂಬಿಕೆ.

ಜಪಾನಿನ ಜನರು ತಮ್ಮ ಸಮುದಾಯ, ತಾವು ಕೆಲಸ ಮಾಡುವ ಕಂಪನಿ ಮತ್ತು ಅವರ ದೇಶಕ್ಕಾಗಿ ನಿಸ್ವಾರ್ಥವಾಗಿ ಕೆಲಸ ಮಾಡುತ್ತಾರೆ. ಖ್ಯಾತ ಲೇಖಕ ಆಡಮ್ ಸ್ಮಿತ್ ಅವರ ಕ್ಲಾಸಿಕ್ ಮೆಟಾ-ಫೋರ್’ನಲ್ಲಿ, ಒಬ್ಬ ವ್ಯಕ್ತಿಯು ಸ್ವ-ಆಸಕ್ತಿಯನ್ನು ಅನುಸರಿಸಿದಾಗ, ಅದೃಶ್ಯ ಹಸ್ತವು ಸಮಾಜದ ಹಿತಾಸಕ್ತಿಗಳೊಂದಿಗೆ ಸೇರಿ ಸ್ವಯಂಚಾಲಿತವಾಗಿ ಸಹಾಯ ಮಾಡುತ್ತದೆ’ ಎಂದು ಹೇಳಿದ್ದಾನೆ.

images

ಜಪಾನಿಯರು ತಮ್ಮ ಗ್ರಾಹಕರು ಸಂತೃಪ್ತಪಡಿಸಲು ಮತ್ತು ಸಮಾಜಕ್ಕೆ ಸೇವೆ ಸಲ್ಲಿಸಲು ತಮ್ಮ ಕೆಲಸದಲ್ಲಿ ಹೆಚ್ಚಿನದನ್ನು ನೀಡುತ್ತಾರೆ. ಅವರು ಯಾವತ್ತೂ ತಮ್ಮ ಕೆಲಸದಲ್ಲಿ ಶ್ರೇಷ್ಠತೆ ಮೆರೆಯಲು walking extra mile ನೀತಿಯನ್ನು ಅನುಸರಿಸುತ್ತಾರೆ. ಅಂದರೆ ಅಗತ್ಯಕ್ಕಿಂತ ಹೆಚ್ಚಿನ ಉತ್ಸಾಹ ತೋರಿಸುತ್ತಾರೆ. ಈ ರೀತಿಯಾಗಿ, ಅವರು ಸಮಾಜಕ್ಕೆ ತಮ್ಮ ವೈಯಕ್ತಿಕ ಗುರಿಗಳನ್ನು ಸಾಧಿಸಿ ತೋರಿಸುತ್ತಾರೆ.

ನೀವು ಜಪಾನಿನ ಅಂಗಡಿಗೆ ಹೋದಾಗಲೆ ಅವರು ‘ಇರಸ್ಶೈಮಾಸೆ’ ಎಂಬ ಘೋಷಣೆಯೊಂದಿಗೆ ನಿಮ್ಮನ್ನು ಸ್ವಾಗತಿಸುತ್ತಾರೆ ಮತ್ತು ನೀವು ಹೊರಡುವಾಗ, ಸಂಪೂರ್ಣ ತೃಪ್ತರಾಗಿದ್ದೀರಾ ಎಂಬುದನ್ನು ಖಾತ್ರಿಪಡಿಸಿಕೊಳ್ಳುತ್ತಾರೆ. ಒಂದು ವೇಳೆ ನಿಮಗೆ ಸಮಾಧಾನವಾಗದಿದ್ದರೆ, ಅವರು ತಮ್ಮ ಸೇವೆಯನ್ನು ಸುಧಾರಿಸಿಕೊಂಡು ಗ್ರಾಹಕರನ್ನು ಸಂಪ್ರೀತಗೊಳಿಸುವ ತನಕ ಸುಮ್ಮನಾಗುವು ದಿಲ್ಲ.

ಖ್ಯಾತ ಪ್ರವಾಸಿ ಲೇಖಕ ಹೆಕ್ಟರ್ ಗಾರ್ಸಿಯಾ ಒಂದು ಅನುಭವವನ್ನು ಹಂಚಿಕೊಂಡಿದ್ದಾರೆ - ‘ಒಂದು ದಿನ ನಾನು ಬೆಳಗ್ಗೆ ಪೋ ಆಫೀಸಿಗೆ ಹೋಗಿದ್ದೆ. ಅದು ತೆರೆಯಲು ಇನ್ನೂ ಹತ್ತು ನಿಮಿಷ ಸಮಯವಿತ್ತು. ಪೋ ಆಫೀಸಿನ ಮೆಟ್ಟಿಲ ಮೇಲೆ ಕುಳಿತು ಬಾಗಿಲು ತೆರೆಯುವುದನ್ನೇ ಎದುರು ನೋಡುತ್ತಿದ್ದೆ. ಇನ್ನೇನು ಸಿಬ್ಬಂದಿ ಕಚೇರಿಯನ್ನು ತೆರೆಯಲು ಸಿದ್ಧವಾಗಿದ್ದರು, ಈ ಸಂದರ್ಭದಲ್ಲೂ ನನ್ನ ಸನಿಹ ನಿಂತಿದ್ದ ಐದಾರು ಮಂದಿ ನನ್ನನ್ನು ನೋಡಿ ತಮ್ಮತಮ್ಮಲ್ಲಿ ಮಾತಾಡಿ ಕೊಳ್ಳುತ್ತಿದ್ದರು.

istockphoto-1200298759-612x612

ಇದ್ದಕ್ಕಿದ್ದಂತೆ, ಅವರಲ್ಲಿ ಒಬ್ಬರು ಹೊರಗೆ ಬಂದು, ನನಗೆ ನಮಸ್ಕರಿಸಿ, ನನ್ನನ್ನು ಸ್ವಾಗತಿಸಿದರು. ನಾನು ಹಿಡಿದಿರುವ ಕಾಗದವನ್ನು ತೋರಿಸಿ, ಇದು ವಿಶೇಷ ಡೆಲಿವರಿ ಪೇಪರ್ ಎಂದು ನನಗೆ ಹೇಳಿದ. ಈ ಕಟ್ಟಡದ ಹಿಂಭಾಗದಲ್ಲಿ 24 ಗಂಟೆಯ ಕಚೇರಿ ಎಂಬುದಿದೆ. ಅಲ್ಲಿಗೆ ಹೋಗಿ. ಕಾರಣ ನನ್ನ ಕಾಗದವು ವಿಶೇಷವಾಗಿದೆ ಎಂದು ಹೇಳಿದ. ಆ ಸಂಗತಿ ನನಗೆ ಗೊತ್ತಿರಲಿಲ್ಲ.

ಆದರೆ ಕಚೇರಿಯೊಳಗೆ ಅವರು ನನ್ನ ಬಗ್ಗೆ ಚಿಂತಿಸುತ್ತಿದ್ದರು, ನಾನು ದೂರದಿಂದ ಹಿಡಿದು ಕೊಂಡಿದ್ದನ್ನು ಪರಿಶೀಲಿಸಿ, ನಾನು 24 ಗಂಟೆಗಳ ಕಚೇರಿಯನ್ನು ಬಳಸಬಹುದೆಂದು ಅರಿತು ಕೊಂಡು ನನಗೆ ಸಹಾಯ ಮಾಡಲು ನಿರ್ಧರಿಸಿದರು. ಅವರು ನನ್ನನ್ನು ಹಿಂಬಾಗಿಲಿನ ಮೂಲಕ ಕಚೇರಿಗೆ ಕರೆದೊಯ್ದರು ಮತ್ತು ನನ್ನ ಪ್ಯಾಕೇಜ್ ಪಡೆಯುವವರೆಗೂ ನನಗೆ ಸಹಾಯ ಮಾಡಿದರು. ಕೊನೆಯಲ್ಲಿ, ಅವರು ನನ್ನನ್ನು ಬಾಗಿಲ ತನಕ ಬಂದು ವಿದಾಯ ಹೇಳಿ ನಮಸ್ಕರಿಸಿದರು.

ಇವ್ಯಾವುದನ್ನೂ ಅವರು ಮಾಡಬೇಕಿರಲಿಲ್ಲ. ಇದು ನನಗೊಂದೇ ಅಲ್ಲ, ಯಾರೇ ಹೋದರೂ ಇದೇ ರೀತಿ ಆ ಕ್ಷಣದಲ್ಲಿ ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನದನ್ನು ಮಾಡುತ್ತಾರೆ. ಜಪಾನಿನಲ್ಲಿ ಈ ರೀತಿಯ ಪ್ರಸಂಗಗಳು ನಿಮಗೆ ಪ್ರತಿದಿನವೂ ಸಂಭವಿಸುತ್ತಿರುತ್ತವೆ. ಇದು ಜಪಾನಿನ ಅದೃಶ್ಯ ಹಸ್ತದ ಪರಿಣಾಮ! ಅದು ನಿಮಗೆ ಸುಲಭವಾದ ಅನುಭವವನ್ನು ಹೊಂದಲು ಸಹಾಯ ಮಾಡುತ್ತದೆ. ಯಾರಾದರೂ ತೀರ ಮುಜುಗರದ ಪ್ರಸಂಗವನ್ನು ಎದುರಿಸಿದರೆ, ಅದನ್ನು ಸ್ನೇಹಿತರ ಮುಂದೆ ಹೇಳಿದರೆ, ನಿಮಗೆ ಅದೃಶ್ಯ ಹಸ್ತವೂ ನೆರವಾಗಲಿಲ್ಲವೇ?’ ಎಂದು ಕೇಳುವುದುಂಟು.

Bhagya Divana

Bhagya Divana

Bhagya Divana is a Professional Journalist. Working in Pravasi Prapancha.

ಜಪಾನಿನಲ್ಲಿ ಬೀದಿಯಲ್ಲಿಟ್ಟ ಕಸದ ತೊಟ್ಟಿಗಳೂ ಮಾತಾಡುತ್ತವೆ!

Read Previous

ಜಪಾನಿನಲ್ಲಿ ಬೀದಿಯಲ್ಲಿಟ್ಟ ಕಸದ ತೊಟ್ಟಿಗಳೂ ಮಾತಾಡುತ್ತವೆ!

ಒಂದು ಮರದ ಕೊಂಬೆ ಅಲ್ಲಾಡಿಸಿದ್ದಕ್ಕೆ ಕ್ಯಾತೆ ತೆಗೆದಿದ್ದ ಜಪಾನಿಯರು!

Read Next

ಒಂದು ಮರದ ಕೊಂಬೆ ಅಲ್ಲಾಡಿಸಿದ್ದಕ್ಕೆ ಕ್ಯಾತೆ ತೆಗೆದಿದ್ದ ಜಪಾನಿಯರು!