Friday, October 3, 2025
Friday, October 3, 2025

ವಿಮಾನ ನೀರಿನ ಮೇಲಿಳಿದರೆ....?

‘ವಿಮಾನ ನೀರಿನ ಮೇಲೆ ಎಮರ್ಜೆನ್ಸಿ ಲ್ಯಾಂಡ್ ಆದರೆ ಏನು ಮಾಡಬೇಕು, ಅಂಥ ಸಂದರ್ಭದಲ್ಲಿ ಲೈಫ್ ಜಾಕೆಟ್ ಹೇಗೆ ಧರಿಸಬೇಕು’ ಎಂಬ ಸೂಚನೆ ನೀಡಿದಾಗ ಬಹುತೇಕ ಪ್ರಯಾಣಿಕರು ತುಸು ಗಲಿಬಿಲಿಗೊಳಗಾಗುತ್ತಾರೆ. ಕೆಲವು ಪ್ರಯಾಣಿಕರಿಗೆ ಈ ಸೂಚನೆ ತಕ್ಷಣವೇ ಉಸಿರಾಟ ತೊಂದರೆ‌ಯನ್ನುಂಟು ಮಾಡಬಹುದು. ಇನ್ನು ಕೆಲವರಿಗೆ ಬೆವರು ಕಿತ್ತುಕೊಂಡು ಬರಬಹುದು.

ವಿಮಾನ ಟೇಕಾಫ್ ಆಗಲು ರನ್‌ವೇಗೆ ಹೋಗುವುದಕ್ಕಿಂತ ಮುನ್ನ, ಗಗನಸಖಿಯರು ಪ್ರಯಾಣಿಕರಿಗೆ ಸುರಕ್ಷತಾ ಸೂಚನೆಗಳನ್ನು ನೀಡುತ್ತಾರೆ. ಯಾವ ರೀತಿ ಸೀಟ್ ಬೆಲ್ಟ್ ಕಟ್ಟಿಕೊಳ್ಳಬೇಕು, ತುರ್ತುಸ್ಥಿತಿ‌ಯಲ್ಲಿ ಏನು ಮಾಡಬೇಕು... ಮುಂತಾದ ಮಹತ್ವದ ವಿಷಯಗಳ ಬಗ್ಗೆ ಮಾಹಿತಿ ನೀಡುತ್ತಾರೆ.

‘ವಿಮಾನ ನೀರಿನ ಮೇಲೆ ಎಮರ್ಜೆನ್ಸಿ ಲ್ಯಾಂಡ್ ಆದರೆ ಏನು ಮಾಡಬೇಕು, ಅಂಥ ಸಂದರ್ಭದಲ್ಲಿ ಲೈಫ್ ಜಾಕೆಟ್ ಹೇಗೆ ಧರಿಸಬೇಕು’ ಎಂಬ ಸೂಚನೆ ನೀಡಿದಾಗ ಬಹುತೇಕ ಪ್ರಯಾಣಿಕರು ತುಸು ಗಲಿಬಿಲಿಗೊಳಗಾಗುತ್ತಾರೆ. ಕೆಲವು ಪ್ರಯಾಣಿಕರಿಗೆ ಈ ಸೂಚನೆ ತಕ್ಷಣವೇ ಉಸಿರಾಟ ತೊಂದರೆ‌ಯನ್ನುಂಟುಮಾಡಬಹುದು. ಇನ್ನು ಕೆಲವರಿಗೆ ಬೆವರು ಕಿತ್ತುಕೊಂಡು ಬರಬಹುದು. ‘ವಿಮಾನ ನೀರಿನಲ್ಲಿ ಬೀಳುತ್ತಾ? ಬಿದ್ದರೆ ಏನು ಮಾಡುವುದು?’ ಎಂಬ ಯೋಚನೆ ಅವರಲ್ಲಿ ಮತ್ತಷ್ಟು ಆತಂಕವನ್ನು ಹೆಚ್ಚಿಸುತ್ತದೆ. ಈ ಸೂಚನೆ ಅನಿವಾರ್ಯವಾಗಿದ್ದರೂ, ಅಗತ್ಯವಿಲ್ಲ ಎಂಬುದು ಅನೇಕರ ವಾದ. ಇದು ಪ್ರಯಾಣಿಕರಲ್ಲಿ ಅನಗತ್ಯ ಉದ್ವೇಗವನ್ನುಂಟು ಮಾಡುತ್ತದೆ ಎಂಬುದು ಅವರ ತರ್ಕ.

plane

ವಿಮಾನ ಪ್ರಯಾಣ ಎಷ್ಟೇ ಸುರಕ್ಷಿತವಾಗಿರಲಿ, ಪ್ರತಿಯೊಂದು ವಿಮಾನ ಕಂಪನಿಗೂ ತನ್ನ ಪ್ರಯಾಣಿಕರ ಸುರಕ್ಷತೆ ಅತ್ಯಂತ ಮುಖ್ಯ. ಈ ಕಾರಣದಿಂದಲೇ, ಸಾಧ್ಯತೆ ಇರುವ ಅಪಾಯಗಳನ್ನು ವಿವರಿಸಬೇಕಾದುದು ಕರ್ತವ್ಯ ಎಂದು ಭಾವಿಸುತ್ತವೆ. ನೀರಿನಲ್ಲಿ ಲ್ಯಾಂಡ್ ಮಾಡುವ ಸಾಧ್ಯತೆ ಇದ್ದರೂ ಅದು ಬಹಳ ಕಡಿಮೆ, ಆದರೆ ಅದನ್ನು ಸಂಪೂರ್ಣ ತಳ್ಳಿ ಹಾಕುವಂತಿಲ್ಲ.

ಈ ಸೂಚನೆಗಳ ಉದ್ದೇಶ ಸ್ಪಷ್ಟ. ವಿಮಾನ ಪ್ರಯಾಣದಲ್ಲಿ ಯಾವತ್ತೂ ಪೂರ್ವಸಿದ್ಧತೆಗೆ ಹೆಚ್ಚಿನ ಪ್ರಾಮುಖ್ಯ. ವಿಮಾನ ದುರಂತ ಸಂಭವಿಸಿದರೆ, ಪ್ರಯಾಣಿಕರು ತುರ್ತು ಪರಿಸ್ಥಿತಿಯಲ್ಲಿ ಎಂಥ ಕಾರ್ಯ ಕೈಗೊಳ್ಳಬೇಕು ಎಂಬ ವಿಷಯದಲ್ಲಿ ಸನ್ನದ್ಧರಾಗಿರಲೇಬೇಕು. ತುರ್ತುಸ್ಥಿತಿಯಲ್ಲಿ ಆತಂಕ ಅಥವಾ ಗೊಂದಲವನ್ನು ಕಡಿಮೆ ಮಾಡುವುದು ಸಹ ಈ ಸೂಚನೆಯ ಉದ್ದೇಶ.

ಇದು ತುರ್ತುಸ್ಥಿತಿಯಲ್ಲಿ ಪ್ರಯಾಣಿಕರು ಕಂಗಾಲಾಗದೆ, ತಾಳ್ಮೆಯಿಂದ ನಿರ್ದಿಷ್ಟ ಕ್ರಮ ಅನುಸರಿಸಲು ನೆರವಾಗುತ್ತದೆ. ಹೀಗಾಗಿ, ಗಗನಸಖಿಯರು ನೀಡುವ ಈ ನೀರಿನಲ್ಲಿ ಲ್ಯಾಂಡಿಂಗ್ ಕುರಿತ ಸೂಚನೆಗಳು ಭಯ ಹುಟ್ಟಿಸಲು ಅಲ್ಲ, ಬದಲು ಸುರಕ್ಷತೆಗಾಗಿ. ಮನುಷ್ಯನಿಗೆ ಅಜ್ಞಾತದ ಭಯ (fear of the unknown) ಸಾಮಾನ್ಯ. ವಿಮಾನ ಪ್ರಯಾಣವೆಂಬುದು ಅನೇಕರಿಗೆ ಅದೇ ತಾನೇ? ಭೂಮಿಯಿಂದ ಎತ್ತರಕ್ಕೆ ಹೋಗುವುದು, ನೈಸರ್ಗಿಕ ನಿಯಮಗಳನ್ನು ಮೀರಿ ಆಕಾಶದಲ್ಲಿ ಸಾಗು ವುದು ಅನೇಕರಿಗೆ ದಿಗಿಲು ಹುಟ್ಟಿಸುವ ಸಂಗತಿಯೇ.

ಯಾವತ್ತೂ ಬೆಂಕಿ ಬಿದ್ದ ನಂತರ ಬಾವಿ ತೊಡುವುದಕ್ಕಿಂತ, ಬೆಂಕಿ ಬಿದ್ದರೆ ಏನು ಮಾಡಬೇಕು ಎಂಬುದನ್ನು ಮೊದಲೇ ತಿಳಿಸುವುದು ಜಾಣತನ. ಆ ಸೂಚನೆ ನೀಡಲು ಇದು ಮುಖ್ಯ ಕಾರಣ. ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳು (ICAO, IATA) ಹಾಗೂ ಪ್ರತಿ ದೇಶದ ನಾಗರಿಕ ವಿಮಾನಯಾನ ಇಲಾಖೆ, ವಿಮಾನಗಳ ಭದ್ರತಾ ಮಾನದಂಡಗಳನ್ನು ಕಟ್ಟುನಿಟ್ಟಾಗಿ ನಿರ್ವಹಿಸುತ್ತವೆ.

Sky companion

ವಿಮಾನ ಹಾರುವ ಮೊದಲು ಎಲ್ಲ ತುರ್ತು ಸ್ಥಿತಿಗಳ ಬಗ್ಗೆ ಪ್ರಯಾಣಿಕರಿಗೆ ಸೂಚನೆ ನೀಡಲೇಬೇಕು. ಇದರಲ್ಲಿ ನೀರಿನಲ್ಲಿ ಲ್ಯಾಂಡ್ ಆಗುವ ಸಂದರ್ಭವೂ ಸೇರಿರಬೇಕು. ವಿಡಿಯೋ ಅಥವಾ ಗಗನಸಖಿಯರು ಆಂಗಿಕವಾಗಿ ಇದನ್ನು ವಿವರಿಸಬೇಕು. ಹೀಗಾಗಿ ಈ ಸೂಚನೆಗಳನ್ನು ಏರ್‌ಲೈನ್ಸ್ ಕಂಪನಿಗಳು ಬಿಡುವಂತಿಲ್ಲ. ‌

ಹಾಗಾದರೆ ವಿಮಾನ ನೀರಿನಲ್ಲಿ ಲ್ಯಾಂಡ್ ಆಗುವ ಸಂಭವವಿದೆಯೇ? ಹೌದು, ಆದರೆ ಬಹಳ ಅಪರೂಪ. ಇದನ್ನು ’ditch landing’ ಅಥವಾ ’water ditching’ ಎನ್ನುತ್ತಾರೆ. 2009ರಲ್ಲಿ ಯುಎಸ್ ಏರ್‌ವೇಸ್ ವಿಮಾನ 1549 ನ್ಯೂಯಾರ್ಕ್ ನಗರದ ಹಡ್ಸನ್ ನದಿಯಲ್ಲಿ ಲ್ಯಾಂಡ್ ಆಯಿತು. ಪೈಲಟ್ ಸುನ್ಬರ್ಗರ್ ಅವರ ಸಾಹಸದಿಂದ ಎಲ್ಲ ಪ್ರಯಾಣಿಕರು ಬಚಾವಾದರು.

ಆಗ ಲೈಫ್ ಜಾಕೆಟ್, ಎಮರ್ಜೆನ್ಸಿ ಸ್ಲೈಡ್ ಬೋಟ್ ಹಾಗೂ ನುರಿತ ಸಿಬ್ಬಂದಿ ಇದ್ದಿದ್ದರಿಂದ ಏನೂ ಆಗಲಿಲ್ಲ. ಇತ್ತೀಚಿನ ದಿನಗಳಲ್ಲಿ ವಿಮಾನ ಕಂಪನಿಗಳು ತಂತ್ರಜ್ಞಾನ, ವಿಡಿಯೋ, ಅನಿಮೇಷನ್ ಮತ್ತು ತಿಳಿ ಹಾಸ್ಯದೊಂದಿಗೆ ಸುರಕ್ಷತಾ ಸಂದೇಶಗಳನ್ನು ನೀಡುತ್ತಿವೆ. ಇದರಿಂದ ಭಯದ ಬದಲು ಆಸಕ್ತಿ ಹುಟ್ಟುವಂತಾಗಿದೆ. ವಿಮಾನ ಪ್ರಯಾಣ ಅತ್ಯಂತ ಸುರಕ್ಷಿತ ಪ್ರಯಾಣ. ಎಮರ್ಜೆನ್ಸಿ ಸೂಚನೆಗಳು ಕೆಲವರಿಗೆ ಗಲಿಬಿಲಿಯಾಗಬಹುದು, ಆದರೆ ಅವುಗಳ ಉದ್ದೇಶ ಪ್ರಯಾಣಿಕರಿಗೆ ‘ಹೆಚ್ಚಿನ ಭದ್ರತೆ’ ನೀಡುವುದು ಎಂಬುದನ್ನು ಮನಗಾಣಬೇಕು.

Bhagya Divana

Bhagya Divana

Bhagya Divana is a Professional Journalist. Working in Pravasi Prapancha.

ಜಪಾನಿನಲ್ಲಿ ಬೀದಿಯಲ್ಲಿಟ್ಟ ಕಸದ ತೊಟ್ಟಿಗಳೂ ಮಾತಾಡುತ್ತವೆ!

Read Previous

ಜಪಾನಿನಲ್ಲಿ ಬೀದಿಯಲ್ಲಿಟ್ಟ ಕಸದ ತೊಟ್ಟಿಗಳೂ ಮಾತಾಡುತ್ತವೆ!

ಒಂದು ಮರದ ಕೊಂಬೆ ಅಲ್ಲಾಡಿಸಿದ್ದಕ್ಕೆ ಕ್ಯಾತೆ ತೆಗೆದಿದ್ದ ಜಪಾನಿಯರು!

Read Next

ಒಂದು ಮರದ ಕೊಂಬೆ ಅಲ್ಲಾಡಿಸಿದ್ದಕ್ಕೆ ಕ್ಯಾತೆ ತೆಗೆದಿದ್ದ ಜಪಾನಿಯರು!