Wednesday, October 22, 2025
Wednesday, October 22, 2025

ವಿಮಾನದ ಇಂಧನ ಲೆಕ್ಕಾಚಾರ

ಗಂಟೆಗೆ 900 ಕಿ.ಮೀ. ವೇಗದಲ್ಲಿ ಕ್ರಮಿಸುವ ಈ ವಿಮಾನ ಪ್ರತಿ ಸೆಕೆಂಡ್‌ಗೆ ಸುಮಾರು 4 ಲೀಟರ್ ಇಂಧನವನ್ನು ಕುಡಿಯುತ್ತದೆ. ಇದೇ ಲೆಕ್ಕಾಚಾರದಲ್ಲಿ ಈ ವಿಮಾನಕ್ಕೆ ಪ್ರತಿ ಗಂಟೆಗೆ 14000 ಲೀಟರ್ (3700 ಗ್ಯಾಲನ್) ಇಂಧನ ಬೇಕು. ಈ ವಿಮಾನದ ಇಂಧನ ಬಳಕೆಯನ್ನು ಕಾರಿನೊಂದಿಗೆ ಹೋಲಿಕೆ ಮಾಡುವುದಾದರೆ, ಕಾರುಗಳು ಒಂದು ಲೀಟರ್‌ಗೆ ಸುಮಾರು 15 ರಿಂದ 20 ಕಿ.ಮಿ. ಓಡುತ್ತವೆ.

  • ವಿಶ್ವೇಶ್ವರ ಭಟ್‌

ವಿಶ್ವದ ಹೆಸರಾಂತ ಜಂಬೋ ಜೆಟ್ ಬೋಯಿಂಗ್ 747-400 ವಿಮಾನ ವೈಮಾನಿಕ ಲೋಕದಲ್ಲಿ ಒಂದು ಬೆರಗು. ಇದನ್ನು ‘ಕಡಿಮೆ ಇಂಧನ ಕುಡಿಯುವ ಲೋಹದ ಹಕ್ಕಿ’ ಎಂದೂ ಕರೆಯುತ್ತಾರೆ. ಈ ವಿಮಾನ ಸುಮಾರು 416 ಪ್ರಯಾಣಿಕರನ್ನು ಹೇರಿಕೊಂಡು ಹಾರುತ್ತದೆ. ಒಮ್ಮೆ ನೆಗೆದರೆ, 13,450 ಕಿ.ಮೀ. ದೂರ ಕ್ರಮಿಸಬಲ್ಲದು. ಇದು ತನ್ನ ಹೊಟ್ಟೆಯಲ್ಲಿ 216800 ಲೀಟರ್ (57,285 ಗ್ಯಾಲನ್) ಇಂಧನವನ್ನು ತುಂಬಿಕೊಳ್ಳಬಲ್ಲದು.

airplane fuel

ಗಂಟೆಗೆ 900 ಕಿ.ಮೀ. ವೇಗದಲ್ಲಿ ಕ್ರಮಿಸುವ ಈ ವಿಮಾನ ಪ್ರತಿ ಸೆಕೆಂಡ್‌ಗೆ ಸುಮಾರು 4 ಲೀಟರ್ ಇಂಧನವನ್ನು ಕುಡಿಯುತ್ತದೆ. ಇದೇ ಲೆಕ್ಕಾಚಾರದಲ್ಲಿ ಈ ವಿಮಾನಕ್ಕೆ ಪ್ರತಿ ಗಂಟೆಗೆ 14000 ಲೀಟರ್ (3700 ಗ್ಯಾಲನ್) ಇಂಧನ ಬೇಕು. ಈ ವಿಮಾನದ ಇಂಧನ ಬಳಕೆಯನ್ನು ಕಾರಿನೊಂದಿಗೆ ಹೋಲಿಕೆ ಮಾಡುವುದಾದರೆ, ಕಾರುಗಳು ಒಂದು ಲೀಟರ್‌ಗೆ ಸುಮಾರು 15 ರಿಂದ 20 ಕಿ.ಮಿ. ಓಡುತ್ತವೆ.

ಇದನ್ನು ಓದಿ: ವಿಮಾನಗಳಲ್ಲಿ ಬ್ರೇಕ್‌ ವ್ಯವಸ್ಥೆ

ಬೋಯಿಂಗ್ 747 ವಿಮಾನಕ್ಕೆ 100 ಪ್ಯಾಸೆಂಜರ್‌ಗಳನ್ನು ಒಂದು ಕಿ.ಮೀ ದೂರ ಹೊತ್ತೊಯ್ಯಲು 3 ಲೀಟರ್ ಇಂಧನ ಬೇಕು! ಅಂದರೆ, ಪ್ರತಿಯೊಬ್ಬ ಪ್ರಯಾಣಿಕನಿಗೆ ಪ್ರತಿ ಕಿ.ಮೀ.ಗೆ 30 ಮಿ.ಲೀ. ಇಂಧನ ಮಾತ್ರ ಸಾಕು! ಅಂದರೆ ಇದು ಕಾರುಗಳಿಗಿಂತ ಕಡಿಮೆ ಇಂಧನವನ್ನು ಕುಡಿಯುತ್ತದೆ. ಉದಾಹರಣೆಗೆ, ಲಂಡನ್‌ನಿಂದ ಸಿಂಗಾಪುರಕ್ಕೆ ಅಂತರ ಸುಮಾರು 10800 ಕಿ.ಮೀ. ಅಷ್ಟು ದೂರ ಕ್ರಮಿಸಲು ಅಂದಾಜು 120000- 140000 ಲೀಟರ್ ಇಂಧನ ಬೇಕು.

ವಿಮಾನದಲ್ಲಿ ಸರಾಸರಿ 400 ಪ್ರಯಾಣಿಕರು ಇದ್ದಾರೆಂದು ಭಾವಿಸಿದರೆ, ಪ್ರತಿ ಪ್ರಯಾಣಿಕನಿಗೆ ಸುಮಾರು 300ರಿಂದ 350 ಲೀಟರ್ ಬೇಕು. ಒಂದು ಲೀಟರ್ ಜೆಟ್ ಎ-1 ಇಂಧನ ತೂಕವು ಸುಮಾರು 0.8 ಕಿಲೋಗ್ರಾಂ ಆಗಿದೆ. 747-400ಗೆ ಸಂಪೂರ್ಣ ಟ್ಯಾಂಕ್ ಭರ್ತಿಯಾದಾಗ, ಅದರ ತೂಕ ಸುಮಾರು 174000 ಕಿಲೋಗ್ರಾಂ (174 ಟನ್) ಆಗುತ್ತದೆ.

ಬೋಯಿಂಗ್ 747-400 ಅಥವಾ 747-8 ಮಾದರಿಗಳು ಹೆಚ್ಚು ದಕ್ಷ. ಅವು ಜಿಇ ಮತ್ತು ರೋಲ್ಸ್-ರಾಯ್ಸ್ ಎಂಜಿನ್‌ಗಳನ್ನು ಬಳಸುತ್ತವೆ. ವಿಮಾನದ ರಚನೆ ( Winglets, streamline design) ಗಾಳಿಗೆ ಕಡಿಮೆ ಪ್ರತಿರೋಧ ಕೊಡುತ್ತದೆ. ಇದು ಇಂಧನವನ್ನು ಗಣನೀಯವಾಗಿ ಉಳಿಸುತ್ತದೆ. ‌

ಪ್ರಯಾಣಿಕರ ಸಂಖ್ಯೆ ಜಾಸ್ತಿಯಾದಷ್ಟೂ ಇಂಧನ ವೆಚ್ಚ ಕಮ್ಮಿಯಾಗುತ್ತದೆ. ಕಾರ್ಬನ್ ಫೈಬರ್ ಮತ್ತು ಟೊಳ್ಳು ಅಲ್ಯೂಮಿನಿಯಂ ಮೂಲದ ಭಾಗಗಳು, ತೂಕ ಕಡಿಮೆ ಮಾಡುವ ಮೂಲಕ ಇಂಧನ ಖರ್ಚನ್ನು ಕಡಿಮೆ ಮಾಡುತ್ತವೆ. ಬೋಯಿಂಗ್ 747 ಸಾಮಾನ್ಯವಾಗಿ ಪ್ರತಿ ಕಿ.ಮೀ.ಗೆ ಉತ್ಪಾದಿಸುವ ಕಾರ್ಬನ್ ಡೈಆಕ್ಸೈಡ್ ಪ್ರಮಾಣವೂ ಕಮ್ಮಿ. ಹೆಚ್ಚು ಜನ ಪ್ರಯಾಣಿಸಿದರೆ, ಪ್ರತಿ ವ್ಯಕ್ತಿಗೆ ಇದು ಇನ್ನಷ್ಟು ಕಮ್ಮಿಯಾಗುತ್ತದೆ. ಆದ್ದರಿಂದ ಹೆಚ್ಚು ಜನ ವಿಮಾನದಲ್ಲಿ ಪ್ರಯಾಣಿಸಿ ದಾಗ, ಹಂಚಿಕೆಯ ಆಧಾರದ ಮೇಲೆ ‘ಪರಿಸರ ಲಾಭ’ವೂ ಇದೆ. ಬೋಯಿಂಗ್ 747-400 ವಿಮಾನಕ್ಕೆ ಇಂಧನ ತುಂಬುವುದು ಹೇಗೆ? ವಿಮಾನ ಟರ್ಮ್ಯಾಕ್‌ನಲ್ಲಿದ್ದಾಗ (ಮೈದಾನದಲ್ಲಿ ನಿಲ್ಲಿಸಿ ಇದ್ದಾಗ), ಅದರ ಮೇಲ್ಭಾಗದಲ್ಲಿ ಇಂಧನ ಟ್ಯಾಂಕ್‌ಗೆ ಪ್ರವೇಶ ಇರುವ ಫ್ಯುಯೆಲ್ ಪ್ಯಾನೆಲ್ ಇರುತ್ತದೆ. ಗ್ರೌಂಡ್ ಕ್ರ್ಯೂ (ಸಿಬ್ಬಂದಿ) ಅಥವಾ ಇಂಧನ ಪೂರೈಕೆದಾರರು ಹೆವಿ-ಡ್ಯೂಟಿ ಫ್ಯೂಯಲ್ ಟ್ರಕ್ ಅಥವಾ ಫ್ಯೂಯಲ್ ಹೈಡ್ರಾಂಟ್ ಮೂಲಕ ವಿಮಾನದ ಇಂಧನ ಟ್ಯಾಂಕ್‌ಗೆ ಇಂಧನ ಹಾಕುತ್ತಾರೆ.

fuel new

ಇಂಧನ ಪೈಪುಗಳನ್ನು ವಿಮಾನದ ರೀಫ್ಯೂಯಲ್ಲಿಂಗ್ ಪೋರ್ಟಿಗೆ ಕನೆಕ್ಟ್ ಮಾಡುತ್ತಾರೆ. ಡಿಜಿಟಲ್ ಮತ್ತು ಮೆಕಾನಿಕಲ್ ಗೇಜ್ ಗಳನ್ನು ಬಳಸಿಕೊಂಡು ನಿಖರ ಪ್ರಮಾಣದಲ್ಲಿ ಎಷ್ಟು ಇಂಧನ ಬೇಕು ಎಂಬುದನ್ನು ನಿರ್ಧರಿಸಲಾಗುತ್ತದೆ. ಸಾಮಾನ್ಯವಾಗಿ ಫ್ಯುಯೆಲ್ ಪ್ಯಾನೆಲ್ ನಿಂದ ಟ್ಯಾಂಕ್‌ಗಳಿಗೆ ಇಂಧನ ವಿತರಣೆಯ ವೇಗ ಮತ್ತು ಪ್ರಮಾಣವನ್ನು ನಿಯಂತ್ರಿಸಲಾಗುತ್ತದೆ. ಯಾವುದೇ ಕಿಡಿ, ಸೆಳೆತ ಅಥವಾ ಬೆಂಕಿ ಸಾಧ್ಯತೆ ಇರದಂತೆ ಅತ್ಯಂತ ಸುರಕ್ಷಿತ ವಾತಾವರಣದಲ್ಲಿ ಇಂಧನ ತುಂಬಲಾಗು ತ್ತದೆ. ‌

ವಿಮಾನಕ್ಕೆ ಇಡೀ ಟ್ಯಾಂಕ್ ಭರ್ತಿ ಮಾಡಲು 30 ರಿಂದ 90 ನಿಮಿಷಗಳ ಅವಧಿ ಬೇಕು. ಹೆಚ್ಚಿನ ವಿಮಾನ ನಿಲ್ದಾಣಗಳಲ್ಲಿ ಇಂಧನ ಪಂಪಿಂಗ್ ವೇಗ ಪ್ರತಿ ನಿಮಿಷಕ್ಕೆ 3000 ದಿಂದ 5000 ಲೀಟರ್ ಇರುತ್ತದೆ. ಬೋಯಿಂಗ್ 747-400 ಟ್ಯಾಂಕ್ ಸಾಮರ್ಥ್ಯ 216,840 ಲೀಟರ್ ಆಗಿರುವುದರಿಂದ, ಒಂದು ಫ್ಯುಲ್ ಟ್ಯಾಂಕ್ ತುಂಬಿಸಲು ಸರಾಸರಿ 45-60 ನಿಮಿಷ ಬೇಕಾಗಬಹುದು.

ವಿಮಾನಗಳಲ್ಲಿ ಬಳಸುವ ಇಂಧನವು ಜೆಟ್ ಎ-1 ಅಥವಾ ಏವಿ ಯೇಷನ್ ಟರ್ಬೈನ್ ಫ್ಯುಯೆಲ್ (ಅSಊ). ಇದು ಸಾಮಾನ್ಯ ಕಾರ್ ಪೆಟ್ರೋಲ್ ಅಥವಾ ಡೀಸೆಲ್‌ಗಿಂತ ಹೆಚ್ಚು ಶುದ್ಧ. ಇದು ಕಡಿಮೆ ತಾಪಮಾನದಲ್ಲಿ ಸಹ ಸುಲಭವಾಗಿ ಹರಿಯುತ್ತದೆ ಮತ್ತು ಇದರ ಉಷ್ಣ ಶಕ್ತಿ ಹೆಚ್ಚು.

Bhagya Divana

Bhagya Divana

Bhagya Divana is a Professional Journalist. Working in Pravasi Prapancha.

ಜಪಾನಿನಲ್ಲಿ ಬೀದಿಯಲ್ಲಿಟ್ಟ ಕಸದ ತೊಟ್ಟಿಗಳೂ ಮಾತಾಡುತ್ತವೆ!

Read Previous

ಜಪಾನಿನಲ್ಲಿ ಬೀದಿಯಲ್ಲಿಟ್ಟ ಕಸದ ತೊಟ್ಟಿಗಳೂ ಮಾತಾಡುತ್ತವೆ!

ಒಂದು ಮರದ ಕೊಂಬೆ ಅಲ್ಲಾಡಿಸಿದ್ದಕ್ಕೆ ಕ್ಯಾತೆ ತೆಗೆದಿದ್ದ ಜಪಾನಿಯರು!

Read Next

ಒಂದು ಮರದ ಕೊಂಬೆ ಅಲ್ಲಾಡಿಸಿದ್ದಕ್ಕೆ ಕ್ಯಾತೆ ತೆಗೆದಿದ್ದ ಜಪಾನಿಯರು!