ತಂಜಾವೂರಿನಲ್ಲಿ 'ಗ್ರ್ಯಾಂಡ್ ಚೋಳ ಮ್ಯೂಸಿಯಂʼ
ಗ್ರಾಂಡ್ ಚೋಳ ಮ್ಯೂಸಿಯಂ ನಿರ್ಮಾಣ ಕಾರ್ಯವು ಎರಡು ವರ್ಷಗಳೊಳಗೆ ಪೂರ್ಣಗೊಳ್ಳಲಿದೆ. ಚೋಳರ ಕಾಲದ ಕಲಾಕೃತಿಗಳು, ಶಿಲ್ಪಗಳು, ಶಾಸನಗಳು, ವರ್ಣಚಿತ್ರಗಳು ಮುಂತಾದ ಅನೇಕ ಐತಿಹಾಸಿಕ ಸಂಪತ್ತನ್ನು ಈ ಮ್ಯೂಸಿಯಂನಲ್ಲಿ ಪ್ರದರ್ಶನಕ್ಕೆ ಇಡಲಾಗುವುದು.
ಸಾಂಸ್ಕ್ರತಿಕ ರಂಗಕ್ಕೆ ಚೋಳರು ನೀಡಿರುವ ಕೊಡುಗೆಗಳನ್ನು ಜಗತ್ತಿಗೆ ಪರಿಚಯಿಸಲು ಹಾಗೂ ಅಂದಿನ ಇತಿಹಾಸ ಸಾರುವ ಅವಶೇಷಗಳನ್ನು ಸಂರಕ್ಷಿಸಲು, ತಂಜಾವೂರಿನಲ್ಲಿ 'ಗ್ರ್ಯಾಂಡ್ ಚೋಳ ವಸ್ತುಸಂಗ್ರಹಾಲಯ'ವನ್ನು ಸ್ಥಾಪಿಸಲು ತಮಿಳುನಾಡು ಸರಕಾರ ಮುಂದಾಗಿದೆ. ತಂಜಾವೂರಿನಲ್ಲಿ 51.08 ಕೋಟಿ ರುಪಾಯಿ ವೆಚ್ಚದಲ್ಲಿ ಈ ಮ್ಯೂಸಿಯಂ ನಿರ್ಮಾಣಕ್ಕೆ ಡಿಪಿಆರ್ ಸಿದ್ಧಪಡಿಸಲಾಗಿದೆ. ತಂಜಾವೂರಿನ ವೈದ್ಯಕೀಯ ಕಾಲೇಜು ಬಳಿಯೇ ಸರಕಾರಿ ಸ್ವಾಮ್ಯದ ಸ್ಥಳವನ್ನು ಇದಕ್ಕಾಗಿ ಗುರುತಿಸಲಾಗಿದ್ದು, ನಿರ್ಮಾಣ ಕಾರ್ಯಕ್ಕೆ ಸಲಹೆಗಾರರನ್ನು ನೇಮಿಸಿದೆ.
ಟೆಂಡರ್‌ನಲ್ಲಿ ಸೂಚಿಸಿರುವ ಪ್ರಕಾರ, ಗ್ರಾಂಡ್ ಚೋಳ ಮ್ಯೂಸಿಯಂ ನಿರ್ಮಾಣ ಕಾರ್ಯವು ಎರಡು ವರ್ಷಗಳೊಳಗೆ ಪೂರ್ಣಗೊಳ್ಳಲಿದೆ. ಚೋಳರ ಕಾಲದ ಕಲಾಕೃತಿಗಳು, ಶಿಲ್ಪಗಳು, ಶಾಸನಗಳು, ವರ್ಣಚಿತ್ರಗಳು ಮುಂತಾದ ಅನೇಕ ಐತಿಹಾಸಿಕ ಸಂಪತ್ತನ್ನು ಈ ಮ್ಯೂಸಿಯಂನಲ್ಲಿ ಪ್ರದರ್ಶನಕ್ಕೆ ಇಡಲಾಗುವುದು. ಇದು ವಿದ್ಯಾರ್ಥಿಗಳು, ಇತಿಹಾಸ ಪ್ರಿಯರು ಮತ್ತು ಇತಿಹಾಸದ ಅಧ್ಯಯನಕಾರರಿಗೆ ಸಹಕಾರಿಯಾಗಿರಲಿದೆ.