Saturday, March 28, 2026
Saturday, March 28, 2026

ಮುದಗೊಳಿಸುವ ಮಂಡಲದಲ್ಲಿ ಮಸ್ತ್‌ ವಾಸ್ತವ್ಯ

ವೀಕ್ಷಣಾ ಗೋಪುರದಂಥ ಎತ್ತರದ ಟವರ್‌ಗಳಲ್ಲಿ ನೀವು ನಿಮ್ಮ ಊಟ ಸವಿಯಬಹುದು. ಸಿಪ್‌ ಬೈ ಸಿಪ್‌ ವೈನ್‌ ಸ್ವೀಕರಿಸಲು ಇಲ್ಲಿ ಯಾವ ಅಡೆತಡೆಗಳೂ ಇಲ್ಲ. ಸುತ್ತಲೂ ಸ್ವಚ್ಛಂದ ವಾತಾವರಣ, ಕೈಯಲ್ಲಿ ನಿಮ್ಮಿಷ್ಟದ ವೈನ್‌, ಮತ್ತೊಂದೆಡೆ ನಿಮ್ಮ ನೆಚ್ಚಿನ ಮತ್ತು ರುಚಿಕರ ಆಹಾರವಿರುತ್ತದೆ. ಆಗ ʻಬೆಚ್ಚನಾ ಮನೆಯಿರಲು ವೆಚ್ಚಕ್ಕೆ ಹೊನ್ನಿರಲು, ಇಚ್ಛೆಯನ್ನರಿವ ಸಿಬ್ಬಂದಿ ಇರಲು ಸ್ವರ್ಗಕ್ಕೆ ಕಿಚ್ಚು ಹಚ್ಚುʼ ಅಂತೀರೇನೋ!

ಬೆಂಗಳೂರಿನಲ್ಲೇ ಉಳಿಯಬೇಕು. ಆದರೆ, ಇಲ್ಲಿನ ವಾಸ್ತವ್ಯ ಕೇವಲ ವಾಸ್ತವ್ಯದಂತಲ್ಲದೆ ಒಂದು ಸುಂದರ ನೆನಪಾಗಿ ಇರಬೇಕು ಎನ್ನುವವರಿಗೆ ಮಂಡಲ ರೆಸಾರ್ಟ್‌ ಒಂದು ಉತ್ತಮ ಆಯ್ಕೆ. ಮಂಡಲ, ಹೆಸರಿನಲ್ಲಿ ಚೌಕಟ್ಟು ಇದ್ದರೂ ಇಲ್ಲಿ ನಿಮ್ಮ ಎಂಜಾಯ್‌ಮೆಂಟ್‌ಗಳಿಗೆ ಯಾವುದೇ ಚೌಕಟ್ಟುಗಳಿಲ್ಲ. ನೀವಿಲ್ಲಿ ಥೇಟ್‌ ರೆಕ್ಕೆ ಬಲಿತ ಹಕ್ಕಿಯಂತೆ ಸ್ವತಂತ್ರವಾಗಿರಬಹುದು. ಇನ್ನೂ ಏನೇನಿದೆ ಅನ್ನುವವರಿಗಾಗಿಯೇ ಇಲ್ಲೊಂದಿಷ್ಟು ಮಾಹಿತಿ ಇದೆ.

ಐಷಾರಾಮಿ ವಾಸ್ತವ್ಯ

ಜೆಎಲ್ಆ‌ರ್ ಲಲಿತ್ ಮಹಲ್ ಪ್ಯಾಲೇಸ್

ಐಷಾರಾಮಿ ಹೆಸರು ಕೇಳಿ ಹಣವೂ ಅಷ್ಟೇ ಖರ್ಚಾಗಬಹುದು ಎನ್ನುವ ಆಲೋಚನೆಗೆ ನೀವು ಬೀಳಬೇಕಿಲ್ಲ. ಇಲ್ಲಿ 1500 ರುಪಾಯಿಯಿಂದ ವಾಸ್ತವ್ಯಕ್ಕೆ ಪ್ಯಾಕೇಜ್‌ಗಳು ಆರಂಭವಾಗುತ್ತವೆ. ಆದರೆ ಫೀಲ್‌ ಮಾತ್ರ ಥೇಟ್‌ ಐಷಾರಾಮಿ. ಸಿಬ್ಬಂದಿಯೂ ತುಂಬಾ ಸ್ನೇಹ ಪರರಾಗಿದ್ದು, ಅತಿಥಿಗಳತ್ತ ಹೆಚ್ಚು ಗಮನ ನೀಡುತ್ತಾರೆ. ಸರಳವಾಗಿ ಹೇಳಬೇಕೆಂದರೆ ಒಂದು ಕರೆ ದೂರದಲ್ಲೇ ಸಿಬ್ಬಂದಿ ಇರುತ್ತಾರೆ. ಹಸಿರುಹೊದ್ದಿರುವ ಇಲ್ಲಿನ ನೆಲ, ತೆಂಗಿನ ಮರಗಳು, ವಿಶಾಲ ಸ್ಥಳಾವಕಾಶ ಇಕ್ಕೆಲಗಳಲ್ಲಿ ಥರಥರದ ಗಿಡ-ಮರಗಳು ಎಲ್ಲವೂ ಸೇರಿ ಹಳ್ಳಿಯ ಸೊಗಡನ್ನು ಅನುಭವಕ್ಕೆ ತರುತ್ತವೆ. ಹಳ್ಳಿಯಲ್ಲಿಐಷಾರಾಮಿ ಜೀವನ ಹೇಗಿತ್ತದೆ ಎಂದು ತಿಳಿಯಲಿಕ್ಕಾದರೂ ನೀವೊಮ್ಮೆ ಇಲ್ಲಿಗೆ ಹೋಗಬೇಕು.

ಇವೆಂಟ್‌ಗಳಿಗೆ

New Project (45)

ಒಂದು ಸುಂದರ ತಾಣದಲ್ಲಿ ನಮ್ಮ ಮೊದಲ ವಿವಾಹ ವಾರ್ಷಿಕೋತ್ಸವ ಮಾಡಬೇಕು ಎನ್ನುವ ಆಲೋಚನೆ ಯಾರಿಗೆ ಇರುವುದಿಲ್ಲ ಹೇಳಿ. ವಾರ್ಷಿಕೋತ್ಸವವನ್ನು ಹಳ್ಳಿ ಸೊಗಡಿನಲ್ಲಿ ಆಚರಿಸಬೇಕು, ವಿವಾಹ ಪೂರ್ವ ಕ್ಷಣಗಳನ್ನು ನೆನೆಯಬೇಕು ಎಂದಾದರೂ ಹಲವರು ಇಂಥ ಆಯ್ಕೆಗಳನ್ನು ಇಷ್ಟ ಪಡುತ್ತಾರೆ. ಹುಟ್ಟುಹಬ್ಬ, ಪಾರ್ಟಿ ಇವೆಂಟ್‌, ವಿವಾಹಗಳನ್ನೂ ಇಲ್ಲಿ ಆಯೋಜಿಸಬಹುದು. ಆದರೆ ಮೊದಲೇ ಬುಕಿಂಗ್‌ ಮಾಡುವುದನ್ನು ಮಾತ್ರ ಮರೆಯಬೇಡಿ.

ವಾಸ್ತವ್ಯಕ್ಕೆ

ಮಂಡಲ ರೆಸಾರ್ಟ್‌ನಲ್ಲಿ ವಾಸ್ತವ್ಯಕ್ಕೆ ಒಟ್ಟು 12 ಕೊಠಡಿಗಳಿವೆ. ಇವುಗಳಲ್ಲಿ ವೈವಿಧ್ಯಮಯ ಆಯ್ಕೆಗಳಿವೆ. ಪ್ರೈವೇಟ್‌ ವಿಲ್ಲಾ (ತೊಟ್ಟಿಮನೆ)ದಿಂದ ಹಿಡಿದು ಪ್ರೀಮಿಯಂ ಫ್ಯಾಮಿಲಿ ಕಾಟೇಜ್‌ಗಳು, ಪ್ರೀಮಿಯಂ ಕಾಟೇಜ್‌ಗಳು, ಡಾರ್ಮೆಟರಿ ಆಯ್ಕೆಗಳೂ ಈ ರೆಸಾರ್ಟ್‌ನಲ್ಲಿವೆ. ಆಯ್ಕೆಗಳು ನಿಮ್ಮವು, ಆದರೆ ಆತಿಥ್ಯ ಅಚ್ಚಳಿಯದಂತೆ ಮಾಡುವ ಹೊಣೆ ನಮ್ಮದು ಎನ್ನುವುದನ್ನು ಇಲ್ಲಿ ನಿಯಮದಂತೆ ಪಾಲಿಸುತ್ತಿದ್ದಾರೆ. ಹಾಗಾಗಿಯೇ ಇಲ್ಲಿನ ಪ್ರತಿ ಕೊಠಡಿಯೂ ಸದಾ ಶುಚಿಯಾಗಿರುತ್ತದೆ. ಹೊರಗಿನಿಂದ ನೋಡುವಾಗಲೇ ಹಳ್ಳಿಮನೆಯ ನೋಟ ನೀಡುವ ಇವು ಒಳಹೊಕ್ಕರೆ ಅದರ ಅನುಭವ ಮಾಡಿಸುತ್ತವೆ. ಪ್ರತಿ ಕಾಟೇಜ್‌ಗಳನ್ನೂ ಇಲ್ಲಿ ಕಟ್ಟಿಗೆಗಳಿಂದ ನಿರ್ಮಿಸಲಾಗಿದೆ. ಇಲ್ಲಿನ ಎಲ್ಲಾ ಫರ್ನಿಚರ್‌ಗಳೂ ವುಡನ್‌ ಆಗಿದ್ದು, ಉತ್ತಮ ಫೀಲ್‌ ನೀಡುತ್ತವೆ. ಎಲ್ಲವೂ ಡಾರ್ಮೆಟರಿ ಬಿಟ್ಟರೆ ಉಳಿದೆಲ್ಲವೂ ಡಬಲ್‌ ಬೆಡ್‌ ಆಯ್ಕೆ ಇರುವ ರೂಮ್‌ಗಳು.

New Project (48)

ಟವರ್‌ ಡೈನಿಂಗ್‌

ಕೇವ್ ಎನ್ ಡೈನ್ ಎಂಬ ಗವಿಯಲ್ಲಿ ಸವಿಯೂಟ

ವೀಕ್ಷಣಾ ಗೋಪುರದಂಥ ಎತ್ತರದ ಟವರ್‌ಗಳಲ್ಲಿ ನೀವು ನಿಮ್ಮ ಊಟ ಸವಿಯಬಹುದು. ಸಿಪ್‌ ಬೈ ಸಿಪ್‌ ವೈನ್‌ ಸ್ವೀಕರಿಸಲು ಇಲ್ಲಿ ಯಾವ ಅಡೆತಡೆಗಳೂ ಇಲ್ಲ. ಸುತ್ತಲೂ ಸ್ವಚ್ಛಂದ ವಾತಾವರಣ, ಕೈಯಲ್ಲಿ ನಿಮ್ಮಿಷ್ಟದ ವೈನ್‌, ಮತ್ತೊಂದೆಡೆ ನಿಮ್ಮ ನೆಚ್ಚಿನ ಮತ್ತು ರುಚಿಕರ ಆಹಾರವಿರುತ್ತದೆ. ಆಗ ʻಬೆಚ್ಚನಾ ಮನೆಯಿರಲು ವೆಚ್ಚಕ್ಕೆ ಹೊನ್ನಿರಲು, ಇಚ್ಛೆಯನ್ನರಿವ ಸಿಬ್ಬಂದಿ ಇರಲು ಸ್ವರ್ಗಕ್ಕೆ ಕಿಚ್ಚು ಹಚ್ಚುʼ ಅಂತೀರೇನೋ!

ಇನ್ನೇನಿವೆ?

New Project (46)

ವಾಸ್ತವ್ಯದ ಮಧ್ಯೆ ಕೆಲವರಿಗಾದರೂ ಆಟವಾಡುವ ಆಸೆ ಇದ್ದೇ ಇರುತ್ತದೆ. ಗುಂಪು ಆಟಗಳಿಗೆಂದೇ ಔಟಿಂಗ್‌ ಹೋಗುವುದು ಹಲವರ ಹವ್ಯಾಸ. ಅಂಥವರಿಗೂ ಈ ರೆಸಾರ್ಟ್‌ ಉತ್ತಮ ಆಯ್ಕೆ ಎನ್ನುಬಹುದು. ಇಲ್ಲಿ ಇಂಡೋರ್‌ ಮತ್ತು ಔಟ್‌ಡೋರ್‌ ಆಟಗಳನ್ನು ಆಡಲು ಅವಕಾಶವಿದೆ. ಈಜುಕೊಳ ಮತ್ತು ರಾತ್ರಿಗೆ ಫೈರ್‌ ಬಾನ್‌ ಇದೆ ಹಾಗಾಗಿ ಮನೋರಂಜನೆ ಮತ್ತು ಎಂಜಾಯ್‌ಮೆಂಟ್‌ಗೆ ಯಾವ ಕುಂದು-ಕೊರತೆಯೂ ಇಲ್ಲಿಲ್ಲ.

ಬುಕಿಂಗ್‌ಗಾಗಿ

ಮೊ. ನಂ : +91 63663 83939

ಇ-ಮೇಲ್‌ : admin@mandalaresorts.com

ಮಂಡಲ ರೆಸಾರ್ಟ್ ಬೆಂಗಳೂರು, X986+6FG, ಮಾಗಡಿ ಮುಖ್ಯ ರಸ್ತೆ, ಚಿಕ್ಕನಹಳ್ಳಿ, ಕರ್ನಾಟಕ 562120

Jadesha Emmiganur

Jadesha Emmiganur

Jadesha Emmiganur Is a Passionate Journalist from Ballari

ಪ್ರವಾಸಿಗರ ನೆಚ್ಚಿನ ಎವರ್ ಗ್ರೀನ್ ಕೌಂಟಿ...

Read Previous

ಪ್ರವಾಸಿಗರ ನೆಚ್ಚಿನ ಎವರ್ ಗ್ರೀನ್ ಕೌಂಟಿ...

ಪ್ರಕೃತಿಯ ಮೈಮಾಟವನ್ನು ನೋಡಬೇಕೆ? ಸಮತಗೆ ಬನ್ನಿ

Read Next

ಪ್ರಕೃತಿಯ ಮೈಮಾಟವನ್ನು ನೋಡಬೇಕೆ? ಸಮತಗೆ ಬನ್ನಿ