Saturday, December 27, 2025
Saturday, December 27, 2025

ಹೊಸಕಳೆ ನೀಡುತ್ತಿದೆ ಹೊಸವರ್ಷಾಚರಣೆ

ಹುಬ್ಬಳ್ಳಿ-ಧಾರವಾಡ ಕಡೆ ಹೋದಾಗ ʻಇನ್ನೂ ಯಾಕಾ ಬರಲಿಲ್ಲ ಅವಾ ಹುಬ್ಬಳ್ಳಿಯಾವʼ ಎನ್ನುವ ದ.ರಾ ಬೇಂದ್ರೆಯವರ ಹಾಡಿನ ಗುಂಗು ಮನಸಲ್ಲೇ ಶುರುವಾಗುತ್ತದೆ. ಬೇಂದ್ರೆ ಅಜ್ಜಾರ ಸಾಧನಕೇರಿಯಿಂದ ಕೇವಲ 5-6ಕಿಮೀ ದೂರದಲ್ಲಿ ಅವರ ಆ ಹಾಡಿನ ಸೊಗಡನ್ನು ನಿಮಗೆ ಕಟ್ಟಿಕೊಡಬಲ್ಲ ಒಂದು ರೆಸಾರ್ಟ್‌ ಸೃಷ್ಟಿಯಾಗಿದೆ. ಸುತ್ತಲೂ ಹೊಲಗಳು, ಹಿತವಾದ ವಾತಾವರಣ, ಆಗೊಮ್ಮೆ ಈಗೊಮ್ಮೆ ದನ-ಕುರಿ ಕಾಯುವ ಜನರೂ ಸಿಗುತ್ತಾರೆ. ಅವರ ಮಾತಿನ ಧಾಟಿಯು ಘಾಟಿಯಾದರೂ ಆತ್ಮೀಯವಾಗಿರುತ್ತದೆ. ಸುತ್ತಲೂ ಸಾಹಿತ್ಯಿಕ ಅಲೆಗಳು ಸುತ್ತುತ್ತಲೇ ಇರುತ್ತವೆ. ಇವುಗಳ ಮಧ್ಯೆ ನಿಮ್ಮನ್ನು ಮಂತ್ರಮುಗ್ಧ ಮಾಡಬಲ್ಲ ರೆಸಾರ್ಟ್‌ ಹೆಸರೇ ರೈಸಿಂಗ್ ಬ್ಲಿಸ್‌ ರಿಟ್ರೀಟ್ ರೆಸಾರ್ಟ್.

ಧಾರವಾಡದಿಂದ ಕೇವಲ 5ಕಿಮೀ ದೂರದಲ್ಲಿರುವ ಚಿಕ್ಕ ಮಲ್ಲಿಗವಾಡಕ್ಕೊಂದು ಮೆರುಗು ಬಂದಿದೆ. ಹೊಸ ವರ್ಷದ ಹೊಸ್ತಿಲಲ್ಲಿ ಧಾರವಾಡದ ಹೊರವಲಯದಲ್ಲಿ ರಂಗು ಮೂಡಿದೆ. ಅದಕ್ಕೆ ಕಾರಣ ರೈಸಿಂಗ್‌ ಬ್ಲಿಸ್‌ ರಿಟ್ರೀಟ್‌ ರೆಸಾರ್ಟ್‌! ಹೊಸರೂಪದಲ್ಲಿ ಹೊಸ ಮಾಲೀಕತ್ವದಲ್ಲಿ ಹೊಸ ನಿರ್ವಹಣೆಯಲ್ಲಿ ನವೀಕರಣಗೊಂಡು ಅತಿಥಿಗಳನ್ನು ಎದುರುಗೊಳ್ಳಲು ಸಜ್ಜಾಗಿರುವ ರೈಸಿಂಗ್ ಬ್ಲಿಸ್ ರಿಟ್ರೀಟ್ ರೆಸಾರ್ಟ್ ಕೇವಲ ಒಂದೇ ತಿಂಗಳಲ್ಲಿ ರಾಜ್ಯದೆಲ್ಲೆಡೆ ತನ್ನ ಹೆಸರನ್ನು ಪಸರಿಸುತ್ತಿದೆ. ಧಾರವಾಡಕ್ಕೆ ಅತ್ಯಗತ್ಯವಿದ್ದ ಐಷಾರಾಮಿ ರೆಸಾರ್ಟ್‌ನ ಕೊರತೆಯನ್ನು ಈ ರೆಸಾರ್ಟ್ ಪೂರೈಸುತ್ತಿದೆ ಅಂದರೆ ತಪ್ಪಾಗಲಿಕ್ಕಿಲ್ಲ. ಅತ್ಯಾಕರ್ಷಕ ವಿನ್ಯಾಸ, ಕ್ಯಾಂಪಸ್, ಉತ್ಕೃಷ್ಟ ಸೌಲಭ್ಯಗಳು ಮತ್ತು ಆಹಾರ ಇವೆಲ್ಲವುಗಳ ಜತೆಗೆ ಸಿಬ್ಬಂದಿಗಳ ಹಾಗೂ ಮಾಲೀಕರ ಆದರದ ಆತಿಥ್ಯದಿಂದಾಗಿ ಧಾರವಾಡದ ಮನೆಮಾತಾಗುತ್ತಿದೆ ಈ ನವೀಕೃತ ರೆಸಾರ್ಟ್. ಧಾರವಾಡ ಅಥವಾ ಸುತ್ತಲಿನ ಯಾವ ಊರುಗಳಲ್ಲಿ ಇಳಿದರೂ ಒಂದು ಕರೆಯಲ್ಲಿ ಈ ರೆಸಾರ್ಟ್‌ ಸಿಬ್ಬಂದಿ ಅತಿಥಿಗಳ ಬಳಿ ತಲುಪುತ್ತಾರೆ. ಅಷ್ಟು ಅತ್ಯುತ್ತಮ ಕಸ್ಟಮರ್ ಕೇರ್ ಹೊಂದಿರುವ ಈ ರೆಸಾರ್ಟ್ ಇನ್ನಷ್ಟು ಜನಪ್ರಿಯವಾಗುವ ಎಲ್ಲ ಲಕ್ಷಣಗಳು ಕಾಣುತ್ತಿವೆ.

ಆತ್ಮೀಯ ಸ್ವಾಗತ, ಆತ್ಮೀಯ ವಾಸ್ತವ್ಯ, ನಗುಮೊಗದ ಸಿಬ್ಬಂದಿ ಸೇವೆ, ಶುಚಿರುಚಿ ಆಹಾರ ಸಿಗುತ್ತದೆ ಎಂಬ ಅತಿಥಿಗಳ ಅನುಭವದ ಮಾತುಗಳೇ ಈ ರೆಸಾರ್ಟ್‌ ಬಗ್ಗೆ ಗಟ್ಟಿ ನಂಬಿಕೆ ಮೂಡಿಸಿವೆ. ಇದಕ್ಕೆ ಪೂರಕವಾಗಿ ಎಂಬಂತೆ ಅಲ್ಲಿ ಹಲವು ಅದ್ದೂರಿ ಬರ್ತ್‌ ಡೇ, ವೆಡ್ಡಿಂಗ್‌, ಕಾರ್ಪೋರೇಟ್‌ ಈವೆಂಟ್‌ಗಳೂ ನಡೆಯುತ್ತಿವೆ. ಇದೀಗ ರೈಸಿಂಗ್ ಬ್ಲಿಸ್ ರಿಟ್ರೀಟ್ ರೆಸಾರ್ಟ್ ಒಂದು ಅಪರೂಪದ ವರ್ಷದ ಸಂಭ್ರಮಕ್ಕೆ ಸಡಗರದಿಂದ ಸಜ್ಜುಗೊಂಡಿದೆ. ವಿಭಿನ್ನವಾಗಿ ಮತ್ತು ಅದ್ದೂರಿಯಾಗಿ ಹೊಸವರ್ಷವನ್ನು ಸ್ವಾಗತಿಸಲು ತಯಾರಾಗಿರುವ ರೈಸಿಂಗ್‌ ಬ್ಲಿಸ್‌ ರಿಟ್ರೀಟ್‌ ರೆಸಾರ್ಟ್‌ ನತ್ತ ಪ್ರವಾಸಿಗರು ದೌಡಾಯಿಸುತ್ತಿದ್ದಾರೆ.

ಹೊಸವರ್ಷಾಚರಣೆಗೆ ಹೊಸ ಹೊಸ ಅವಕಾಶಗಳು

photo pea

2026ರ ವರ್ಷದ ಆರಂಭದೊಂದಿಗೆ ರೈಸಿಂಗ್‌ ಬ್ಲಿಸ್‌ ರಿಟ್ರೀಟ್‌ ರೆಸಾರ್ಟ್‌ ಕಾರ್ಯ ಆರಂಭಿಸಿ ಒಂದು ತಿಂಗಳು ತುಂಬುತ್ತಿದೆ. ಬರ್ತ್‌ ಡೇ, ವೆಡ್ಡಿಂಗ್‌ ಶೂಟ್‌, ಸಭಾ ಕಾರ್ಯಕ್ರಮ, ಮೊದಲಾದ ಈವೆಂಟ್‌ಗಳಿಗಾಗಿ ಈಗಾಗಲೇ ಜನರು ಇಲ್ಲಿಗೆ ಬರುತ್ತಿದ್ದಾರೆ. ಆದರೆ, ಈ ಬಾರಿಯ ಹೊಸವರ್ಷದ ಭಾಗವಾಗಿ ರೆಸಾರ್ಟ್‌ ಒಂದು ದೊಡ್ಡ ಈವೆಂಟ್‌ ಆಯೋಜಿಸಿದ್ದು, ರೆಸಾರ್ಟ್‌ ಒಳಗೆ ಹೆಜ್ಜೆ ಇಡುತ್ತಿದ್ದಂತೆ ಕಣ್ಣಿಗೆ ಬೀಳುವ ಹುಲ್ಲು ಹಾಸಿನ ಲಾನ್‌ನಲ್ಲಿ ʻಡಿಜೆ ನೈಟ್‌ʼ ಕಾರ್ಯಕ್ರಮವನ್ನು ಡಿ.31ರಂದು ಹಮ್ಮಿಕೊಳ್ಳಲಾಗಿದೆ. ರಾತ್ರಿ 6:00 ಗಂಟೆಯಿಂದ ʻಡಿಜೆ ನೈಟ್‌ʼ ಕಾರ್ಯಕ್ರಮ ಶುರುವಾಗಲಿದ್ದು, ಕುಟುಂಬ ಸಮೇತರಾಗಿ ಬಂದರೂ ಕಪಲ್‌ಗಳು ಬಂದರೂ ಈ ಕಾರ್ಯಕ್ರಮಕ್ಕೆ ಎಲ್ಲರೂ ಉಚಿತ ಎಂಟ್ರಿ ಪಡೆಯಬಹುದು. ಉಳಿದಂತೆ ವಿಐಪಿ ಕಪಲ್‌, ಸ್ಟ್ಯಾಗ್‌, ಸ್ಪೆಷಲ್‌ ಅಟ್ರ್ಯಾಕ್ಷನ್ಸ್‌ ಹೀಗೆ ವಿವಿಧ ಆಯ್ಕೆಗಳ ಪ್ಯಾಕೇಜ್‌ಗಳೂ ಇವೆ. ಇವುಗಳ ಜತೆಗೆ ಬೇಕಾದ ಸೇವೆ, ಸೌಲಭ್ಯಗಳು ಲಭ್ಯವಿವೆ. ಗ್ರಾಹಕರನ್ನು ಅತಿಥಿ ದೇವೋಭವ ಎಂಬಂತೆ ಉಪಚರಿಸುವ ಈ ರೆಸಾರ್ಟ್ ಎಲ್ಲ ಬೇಡಿಕೆಗಳನ್ನೂ ಈಡೇರಿಸಿಕೊಡುತ್ತಿದೆ. ಹೊಸವರ್ಷದ ಹರ್ಷ ಈ ಮೂಲಕ ಹೆಚ್ಚಲಿ ಎಂಬ ಕಾರಣಕ್ಕೆ ವಿಶೇಷ ರಿಯಾಯಿತಿ ದರದಲ್ಲಿ ಪ್ಯಾಕೇಜ್‌ಗಳನ್ನು ಸಿದ್ಧಪಡಿಸಲಾಗಿದ್ದು, ಅತಿಥಿಗಳ ಪಾಲಿಗೆ ಬಜೆಟ್‌ ಸ್ನೇಹಿಯೂ ಆಗಿವೆ. ಡಿಜೆ ನೈಟ್‌ ಜತೆಗೆ ಕುಣಿತ- ಹಿತಮಿತವಾದ ಕುಡಿತ, ಸ್ವಿಮ್ಮಿಂಗ್‌ ಪೂಲ್‌, ವೈವಿಧ್ಯ ಊಟೋಪಚಾರ ಎಲ್ಲವನ್ನೂ ಅನುಭವಿಸಿ ಬರಲು ಇದು ಅತ್ಯುತ್ತಮ ಆತಿಥ್ಯತಾಣ. ಕುಟುಂಬ ಸಮೇತ ಹೋಗುವುದಾದರೂ, ಕಪಲ್ ಗಳು ಹೋಗುವುದಾದರೂ, ಗೆಳೆಯರ ಬಳಗದೊಂದಿಗೆ ಹೋಗುವುದಾದರೂ ಇದು ಪ್ರಶಸ್ತ ಜಾಗ ಎಂಬುದರಲ್ಲಿ ಅನುಮಾನವೇ ಇಲ್ಲ. ಇದೊಂದು ಸುಂದರ ಅವಕಾಶ. ಧಾರವಾಡದಂಥ ಸಾಂಸ್ಕೃತಿಕ ಹಾಗೂ ಸಾಹಿತ್ಯನಗರಿಯ ಬಳಿ ಇರುವ ಈ ರೆಸಾರ್ಟ್ ಪ್ರವಾಸಿಗರ ಪಾಲಿಗೆ ಹೊಸ ಅನುಭವ ನೀಡುವುದು ಖಚಿತ. ಒಮ್ಮೆ ಭೇಟಿಕೊಟ್ಟರೆ ಈ ರೆಸಾರ್ಟ್ ಖಂಡಿತ ಮತ್ತೊಮ್ಮೆ ಕರೆಸಿಕೊಳ್ಳುತ್ತದೆ.

ಶೂನ್ಯದಿಂದ ಶಿಖರವೇರಿದ ಸಾಧಕ ದುಂಡಪ್ಪ ಬಸಪ್ಪ ಗಾಣಿಗೇರ

photo pea 2

ದುಂಡಪ್ಪ ಬಸಪ್ಪ ಗಾಣಿಗೇರ. ನಿಜಾರ್ಥದಲ್ಲಿ ಕನಸುಗಾರ ಮತ್ತು ಶ್ರಮಜೀವಿ‌ ಹಾಗೂ ಸಾಧಕ. ಮೂಲತಃ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಗುರ್ಲಹೊಸೂರಿನವರು. ಹತ್ತನೆಯ ತರಗತಿ ಓದಿರುವ ಇವರಿಗೆ ಹೆತ್ತವರ ಸಾವು, ಬಡತನದ ಅನಿವಾರ್ಯದ ನೋವುಗಳು ಮುಂದಿನ ಓದಿಗೆ ಅವಕಾಶ ನೀಡಲಿಲ್ಲ. ಜೀವನೋಪಾಯಕ್ಕಾಗಿ ಸಿಲಿಕಾನ್‌ ಸಿಟಿ ಬೆಂಗಳೂರಿನ ಅಂಗಳ ಸೇರಲೇಬೇಕಾದ ಪರಿಸ್ಥಿತಿ ಅವರಿಗಿತ್ತು. ಅಂದಿನವರೆಗೆ ಅಪರಿಚಿತವಾಗಿದ್ದ ಬೆಂಗಳೂರಿಗೆ ಬಂದು ಸಾಕಷ್ಟು ಕಡೆಗಳಲ್ಲಿ ಕ್ಯಾಬ್ ಡ್ರೈವರ್ ಆಗಿಯೂ ದುಂಡಪ್ಪ ಅವರು ಹಗಲಿರುಳು ದುಡಿದಿದ್ದಾರೆ. ವರ್ಷಗಳ ಬಳಿಕ ರಿಯಲ್‌ ಎಸ್ಟೇಟ್‌ ಉದ್ಯಮಕ್ಕೆ ‌ಇಳಿದು ಅಲ್ಲಿ ಸಾಕಷ್ಟು‌ ಅನುಭವ ಗಳಿಸಿದರು. ಈ ಸಮಯದಲ್ಲಿ ಸಾಕಷ್ಟು ನಿವೇಶನಗಳನ್ನು ಇವರೇ ಓಡಾಡಿ ಖುದ್ದಾಗಿ ಕೊಂಡಿದ್ದಾರೆ. ಹಲವು ನಿವೇಶನಗಳನ್ನು ಕೊಡಿಸಿ ಅದರಿಂದ ಬಂದ ಆದಾಯವನ್ನು ತಮ್ಮ ಕನಸಿನ ಕೂಸಾದ ಈ ರೆಸಾರ್ಟ್‌ಗಾಗಿ ಒಟ್ಟುಮಾಡಿದ್ದಾರೆ. ಇಷ್ಟು ವರ್ಷಗಳ ಅನುಭವ, ಆದಾಯಗಳನ್ನು ಒಟ್ಟುಮಾಡಿಕೊಂಡು ಹಲವು ವರ್ಷಗಳು ಹುಡುಕಾಡಿ ರೆಸಾರ್ಟ್‌ ಖರೀದಿಸಿದ್ದಾರೆ. ಆಗ ಆರಂಭವಾದದ್ದೇ ರೈಸಿಂಗ್‌ ಬ್ಲಿಸ್‌ ರಿಟ್ರೀಟ್‌ ರೆಸಾರ್ಟ್‌. ಎರಡುಮೂರು ದಶಕಗಳ ಸ್ನೇಹಿತರ ಜತೆಗೆ ರೆಸಾರ್ಟ್‌ ಆರಂಭಿಸಿದ ಇವರು ಅಂದಿನಿಂದ ಇಂದಿನವರೆಗೂ ಪ್ರತಿದಿನ ಇಲ್ಲಿಗೆ ಭೇಟಿ ನೀಡುತ್ತಾರೆ. ಪ್ರತಿ ಅತಿಥಿಯನ್ನೂ ಇವರು ಮಾತನಾಡಿಸುತ್ತಾರೆ. ಅವರ ಬೇಕು-ಬೇಡ, ಅನಿಸಿಕೆಗಳು, ಸಲಹೆಗಳನ್ನು ಆಲಿಸಿ ಮತ್ತೆ ಮತ್ತೆ ನವೀನತೆಯನ್ನು ಈ ರೆಸಾರ್ಟ್‌ಗೆ ನೀಡಿದ್ದಾರೆ.

ಸದಾ ಹಸನ್ಮುಖಿಯಾಗಿರುವ ದುಂಡಪ್ಪನವರು ಇಡೀ ರೆಸಾರ್ಟ್‌ನಲ್ಲಿ ನಡೆಯುವ, ನಡೆಯಬೇಕಾದ ಕೆಲಸಗಳ ಉಸ್ತುವಾರಿ ವಹಿಸಿ ಓಡಾಡುತ್ತಲೇ ಇರುತ್ತಾರೆ. ಪ್ರತಿ ಅತಿಥಿಗೂ ಇವರು ಆಪ್ತತೆಯಿಂದ ಉಪಚರಿಸುತ್ತಾರೆ . ಅಚ್ಚ ಹುಬ್ಬಳ್ಳಿ ಸೊಗಡಿನ ಮಾತು, ಹಸನ್ಮುಖಿಯಾಗಿ ಕುಶಲೋಪರಿ ವಿಚಾರಿಸುವ ಸ್ನೇಹಜೀವಿ ದುಂಡಪ್ಪನವರು. ಸಿಬ್ಬಂದಿಯನ್ನು ಬಾಂಧವರಂತೆ ನೋಡಿಕೊಳ್ಳುತ್ತಾರೆ ಎಂಬುದು ಈ ರೆಸಾರ್ಟ್‌ಗೆ ಭೇಟಿ ನೀಡಿದ ಹಲವು ಅತಿಥಿಗಳ‌ ಮಾತು. ತಮ್ಮ ರೆಸಾರ್ಟ್‌ಗೆ ಭೇಟಿ ನೀಡುವ ಪ್ರತಿಯೊಬ್ಬರಿಂದಲೂ ಇಲ್ಲಿನ ಸಲಹೆ‌ ಸ್ವೀಕರಿಸಿ ಸಣ್ಣಪುಟ್ಟ ಅಗತ್ಯಗಳನ್ನೂ ಪೂರೈಸುತ್ತಾರೆ. ಧಾರವಾಡದಿಂದ ದೂರದೂರದವರೆಗೆ ಈ ಥರದ ರೆಸಾರ್ಟ್‌ಗಳು ಇರಲಿಲ್ಲ. ಇದರ ಅಗತ್ಯವಿತ್ತು. ಆದ್ದರಿಂದ ಈ‌‌ ಸುಸಜ್ಜಿತ ರೆಸಾರ್ಟ್ ಮಾಡಿದ್ದೇನೆ. ಇಲ್ಲಿಗೆ ಬರುವ ಅತಿಥಿಗಳು ಆನಂದದಿಂದ ಸಮಯ ಕಳೆದು, ಸುತ್ತಲಿನ ಪ್ರವಾಸಿ ತಾಣಗಳನ್ನು ಕಂಡು ಸಂತಸದಿಂದ ಹಾರೈಸುವಂತಾಗಬೇಕು ಎನ್ನುತ್ತಾರೆ ದುಂಡಪ್ಪ ಗಾಣಿಗೇರ.

ಸಂಪರ್ಕ

ವೆಬ್: www.risingblissretreatresort.com

ಸಂಪರ್ಕ ಸಂಖ್ಯೆ : 8951578555

ರೆಸಾರ್ಟ್‌ ಮ್ಯಾನೇಜರ್,‌ ಶ್ರೀ ಮಹಾವೀರ ಮತ್ತು ಶ್ರೀ ಪ್ರವೀಣ : 8310334608 / 7996346815

ಮಾಲೀಕರು : ಶ್ರೀ ದುಂಡಪ್ಪ. ಬಿ. ಗಾಣಿಗೇರ / 8660258860

Jadesha Emmiganur

Jadesha Emmiganur

Jadesha Emmiganur Is a Passionate Journalist from Ballari

ಪ್ರವಾಸಿಗರ ನೆಚ್ಚಿನ ಎವರ್ ಗ್ರೀನ್ ಕೌಂಟಿ...

Read Previous

ಪ್ರವಾಸಿಗರ ನೆಚ್ಚಿನ ಎವರ್ ಗ್ರೀನ್ ಕೌಂಟಿ...

ಪ್ರಕೃತಿಯ ಮೈಮಾಟವನ್ನು ನೋಡಬೇಕೆ? ಸಮತಗೆ ಬನ್ನಿ

Read Next

ಪ್ರಕೃತಿಯ ಮೈಮಾಟವನ್ನು ನೋಡಬೇಕೆ? ಸಮತಗೆ ಬನ್ನಿ