Monday, January 19, 2026
Monday, January 19, 2026

2025ರಲ್ಲಿ ಪ್ರಾರಂಭವಾದ ಬೆಂಗಳೂರಿನ ದಿ ಬೆಸ್ಟ್ ಹೊಟೇಲ್ ಆಂಡ್ ರೆಸ್ಟೋರೆಂಟ್‌ಗಳು

ಮಾಯಾನಗರಿ ಬೆಂಗಳೂರಿನಲ್ಲಿ 2025ರಲ್ಲಿ ಲೆಕ್ಕವಿಲ್ಲದಷ್ಟು ಆಹಾರ ತಾಣಗಳು ಹುಟ್ಟಿಕೊಂಡಿವೆ. ಗ್ರಾಹಕರ ಬೇಡಿಕೆಗೆ ತಕ್ಕಂತೆ ಹೊಟೇಲ್‌, ರೆಸ್ಟೊರೆಂಟ್ಸ್‌, ಪಬ್‌- ಬಾರ್‌ಗಳು ಪ್ರಾರಂಭವಾಗಿದ್ದು, ಅವುಗಳಲ್ಲಿ ವಿಶೇಷವಾದ ಆಯ್ಕೆಗಳು ನಿಮ್ಮ ಓದಿಗೆ.

ಆಲ್‌ ಓಕೆ.. ಆದರೂ ಸಹಕಾರನಗರದಲ್ಲೇ ‘ಯಾಕೆ’..!

yakaya

ರೆಟ್ರೋ ಸ್ಟೈಲ್‌ನ ಬಾರ್‌ ಹಾಗೂ ಕ್ಯಾಂಟೀನ್‌ನಲ್ಲಿ ಕುಳಿತು ನಾಟಿ ಸ್ಟೈಲ್‌ ಫುಡ್‌ ಸವಿಯುವ ಆಸೆ ನಿಮಗಿದ್ದರೆ ಇತ್ತೀಚೆಗಷ್ಟೇ ಬೆಂಗಳೂರಿನ ಸಹಕಾರನಗರದಲ್ಲಿ ಬಾಬ್ಸ್‌ ಬಾರ್‌ ಸಿದ್ಧಪಡಿಸಿರುವ ʻಯಾಕೆ ಬಾರ್‌ ಆ್ಯಡ್‌ ರೆಸ್ಟೋರೆಂಟ್‌ʼಗೆ ನೀವು ಭೇಟಿನೀಡಲೇ ಬೇಕು. 90ರ ದಶಕದ ಬಾರ್‌ಗಳನ್ನು ನೆನಪಿಸುವ ವಿಭಿನ್ನ ಇಂಟೀರಿಯರ್‌ ಹಾಗೂ ಸೀಟಿಂಗ್‌ ವ್ಯವಸ್ಥೆ ಯಾಕೆಯ ಹೈಲೈಟ್ಸ್. ಇಲ್ಲಿ ಕ್ಯಾಂಟೀನ್‌ ಸೆಟ್‌ಅಪ್‌ ಮಾತ್ರವಲ್ಲದೆ ಫ್ಯಾಮಿಲಿ ಜತೆ ಬಂದು ಎಂಜಾಯ್‌ ಮಾಡಬೇಕೆಂದರೆ ಸೂಪರ್‌ ಕ್ಲಾಸೀ ಮಾಡರ್ನ್‌ ಸ್ಪೇಸ್‌ ಸಹ ಲಭ್ಯವಿದೆ. ಬೆಂಗಳೂರಿನ ಬೆಸ್ಟ್‌ ಲೋಕಲ್‌ ಹಾಗೂ ಸ್ಟ್ರೀಟ್‌ ಫುಡ್‌ಗಳನ್ನು ಮಾತ್ರವಲ್ಲ, ಸೌತ್‌ ಇಂಡಿಯಾದ ಪ್ರಮುಖ ಫುಡ್‌ಗಳನ್ನೂ ಇಲ್ಲಿ ಟೇಸ್ಟ್‌ ಮಾಡಬಹುದು. ಆಟೋ ರಾಜ ಚಿಕನ್‌ ಕಬಾಬ್‌, ಬ್ರೂಸ್ಲಿ ಚಿಕನ್‌, ಡಿಸ್ಕೋ ಶಾಂತಿ ಮಿಕ್ಸ್, ರೆಬಲ್‌ ಸ್ಟಾರ್‌ ಮಟನ್‌ ಫ್ರೈ, ಕವಾಸಾಕಿ ಮಶ್ರೂಮ್‌, ಪಿಕಲ್‌ ಪುಡಿ ಚಿಪ್ಸ್‌, ‌ನಾಟಿ ಕೋಳಿ ಫ್ರೈ, ಸ್ಪೆಷಲ್‌ ಮೊಟ್ಟೆ ಹಾಗೂ ಬ್ರೆಡ್‌ ಮಿಕ್ಸ್‌, ಬನಾನಾ ಲೀಫ್‌ ಚಿಕನ್‌, ರವ ಫ್ರೈಡ್‌ ಚಿಕನ್‌, ಪ್ರಾನ್‌ ವಡಾ ಇಲ್ಲಿನ ಹೈಲೀ ಡಿಮ್ಯಾಂಡ್‌ ಡಿಶ್‌ಗಳು. ಎಣ್ಣೆಬೇಕು ಅಣ್ಣಾ ಅನ್ನುವರಿಗಾಗಿ ಬಿಯರ್‌, ಕಾಕ್‌ಟೇಲ್‌ ಸೇರಿದಂತೆ ಎಲ್ಲ ಡ್ರಿಂಕ್ಸ್‌ ಮೇಲೂ ವಿಶೇಷ ರಿಯಾಯಿತಿ ಇಲ್ಲಿ ಲಭ್ಯವಿದ್ದು, ಪಾಕೆಟ್‌ ಫ್ರೆಂಡ್ಲಿಯಾಗಿದೆ.

ಸಂಪರ್ಕ

ಯಾಕೆ ಬಾರ್‌ ಆಂಡ್‌ ರೆಸ್ಟೋರೆಂಟ್‌, 3ನೇ ಫ್ಲೋರ್‌, ಸ್ವಾನ್‌, ಕೊಡಿಗೆಹಳ್ಳಿ ಮುಖ್ಯರಸ್ತೆ, ಸಹಕಾರನಗರ, ಬ್ಯಾಟರಾಯನಪುರ, ಕರ್ನಾಟಕ – 560092

ಇಲ್ಲಿ ಸಿಗೋದು ಕ್ವಾರ್ಟರ್‌ ಅಷ್ಟೇ!

quater house

ಪಬ್‌ನಲ್ಲಿ ಕುಳಿತು ಕುಡಿಯುವುದೆಂದರೆ, ಜೇಬಿಗೆ ಭಾರ. ಎಂಥ ಪಬ್‌ಗೆ ಹೋದರೂ ಸಿಕ್ಕಾಪಟ್ಟೆ ಖರ್ಚಾಗುತ್ತೆ, ಸೈಡ್ಸ್‌ದ್ದೂ ಖರ್ಚು ಜಾಸ್ತಿ. ಕಡಿಮೆ ಖರ್ಚಿನ ಪಬ್‌ಗೆ ಹೋಗಬೇಕೆಂದರೆ ಅಲ್ಲಿ ವೈಬ್‌ ಸಹ ಇರಲ್ಲ. ಕಡಿಮೆ ಖರ್ಚಲ್ಲಿ ಒಳ್ಳೆ ವೈಬ್‌ ಇರುವ ಬಾರ್‌ ಬೇಕೆಂದರೆ, ನೀವು ಕ್ವಾರ್ಟರ್‌ ಹೌಸ್‌ಗೆ ಬರಬೇಕು ಅಷ್ಟೇ. ಒಳ್ಳೆಯ ಸಂಗೀತ, ಮಸ್ತ್‌ ಮಸ್ತ್‌ ಸೈಡ್ಸ್‌, ಮತ್ತು ಒಳ್ಳೆ ವೈಬ್‌ಗಳು ಇಲ್ಲಿ ಸಿಗುತ್ತವೆ. ಸ್ನೇಹಿತರು ಬಂದು ಚಿಲ್‌ ಮಾಡಬಹುದು. ಇಲ್ಲಿ ಸಿಗುವ ಸೈಡ್ಸ್‌ ಸಹ ಹಾಗೇ ತುಂಬಾ ಸಿಂಪಲ್‌ ಚಿಕನ್‌ 65, ಘೀ ರೋಸ್ಟ್‌, ಪನೀರ್‌ 65, ಪೊಡಿ ಘೀ ಟಾಸ್ಡ್‌ ಬೇಬಿ ಪೊಟ್ಯಾಟೋ, ಮೈಸೂರ್‌ ಬೋಂಡಾ, ಕುರುಕುರೆ ಭಿಂಡಿ, ಮಸಾಲಾ ಸಂಡಲ್‌, ಗೋಬಿ 65, ಬಾಳೇಕಾಯಿ ವಾರುವಲ್‌, ಗೋಬಿ ಪೆಪ್ಪರ್‌ ಫ್ರೈ, ಮಸಾಲಾ ಪಾಪಡ್‌, ಚನಾ ಜೊರ್‌ ಮಸಾಲಾ, ಮೀನ್‌ 65, ಇಗ್‌ ಖೀಮಾ ಪಾವ್‌, ಎಗ್‌ ಪಕೋಡಾ, ಎಗ್‌ ಚಾಟ್‌, ಕೋಳಿ ರಸ, ಕರ್ನಾಟಕ ಫ್ರೈಡ್‌ ಚಿಕೆನ್‌ ಜತೆಗೆ ಇನ್ನೂ ಹಲವಾರು ಖಾದ್ಯಗಳು ನಿಮ್ಮ ಹೊಟ್ಟೆ ಸೇರುತ್ತವೆ. ಹಾಗೆ ಮತ್ತೇರಿಸಲು ಹಲವಾರು ರೀತಿಯ ಗುಂಡುಗಳು. ಇಲ್ಲಿ ಸಿಗುವ ಕ್ವಾರ್ಟರ್‌ ವರ್ಲ್ಡ್‌ ಫೇಮಸ್‌.

ಸಂಪರ್ಕ

ಕ್ವಾರ್ಟರ್‌ ಹೌಸ್‌, ಗ್ರೌಂಡ್‌ ಫ್ಲೋರ್‌, ನಂ.148 ಕೆಂಚೇನಹಳ್ಳಿ ರೋಡ್‌. ಕೆಂಗೇರಿ ಹೋಬ್ಳಿ, ಆರ್‌ಆರ್‌ನಗರ ಮೆಟ್ರೋ ಸ್ಟೇಷನ್‌ ಹತ್ತಿರ ಬೆಂಗಳೂರು.

ಆಕಾಶದಲ್ಲಿ ತೇಲಾಡಿ!

sky d

ಸ್ಕೈಡೆಕ್‌ ಅಂತ ಮೈಸೂರಿನಲ್ಲಿ ಒಂದು ಫೇಮಸ್‌ ಪಬ್‌ ಇದೆ. ಅದೇ ಪಬ್‌ ಈಗ ಬೆಂಗಳೂರಿಗೂ ಬಂದಿದೆ. ತುಂಬಾ ಲಕ್ಸೂರಿಯಸ್‌ ಹಾಗೂ ಇನ್‌ಸ್ಟಾಗ್ರಾಮ್ಮೇಬಲ್‌ ಆಗಿರುವ ಈ ಪಬ್‌ನಲ್ಲಿ 600 ಸೀಟ್‌ಗಳಿವೆ. ಇದು ಬೆಂಗಳೂರಿನಲ್ಲೇ ಅತಿ ದೊಡ್ಡ ಪಬ್‌. ಫುಡ್‌ ವಿಷಯಕ್ಕೆ ಬಂದರೆ, ಸಕತ್‌ ಯುನಿಕ್‌ ಆಗಿರುವ ಆಹಾರಗಳು ಇಲ್ಲಿ ಸಿಗುತ್ತವೆ. ಒಳ್ಳೊಳ್ಳೆ ಮಾಕ್‌ಟೇಲ್‌-ಕಾಕ್‌ಟೇಲ್‌ಗಳನ್ನು ಸರ್ವ್‌ ಮಾಡುತ್ತಾರೆ. ಇಲ್ಲಿ ಸಿಗುವ ರಷ್ಯನ್‌ ಹನಿ ಕೇಕ್‌ನ್ನು ಟೇಸ್ಟ್‌ ಮಾಡಲು ಮರೆಯಲೇಬೇಡಿ. ಅದರ ಜತೆಗೆ ಇಲ್ಲಿ ಅಲೂ ಗೋಬಿ ಅದ್ರಕಿ, ದಾಲ್‌ ಫ್ರೈ, ಕಾಜು ಮಸಾಲಾ, ಸಾಬ್‌ ನಿಜಾಮಿ ಹಂಡಿ, ಸಾಬ್‌ ಮೆಲೊನಿ ಮಸಾಲಾ, ಮಕೈ ಕುಂಭ್‌ ಪಾಲಕ್‌, ದಾಲ್‌ ಥಡ್ಕಾ, ಪನೀರ್‌ ಮಖನಿ, ಕಡೈ ಪನೀರ್‌, ಎಗ್‌ ಮಸಾಲ, ಮುರ್ಗ್‌ ಕಾಲಿ ಮಿರ್ಚ್‌, ಮುರ್ಗ್‌ ಮುರ್ಗ್‌ ಮಸಾಲಾ, ದರ್ಬಾರಿ ಮುರ್ಗ್‌, ಕಡೈ ಮುರ್ಗ್‌, ಮೇಥಿ ಚಿಕೆನ್‌, ಮೇಥಿ ಗೋಸ್ಟ್‌, ಫಿಶ್‌ ಟಿಕ್ಕಾ ಮಸಾಲಾ, ಚೈನೀಸ್‌, ರೈಸ್‌, ಬ್ರೆಡ್‌ಗಳು, ಮೋಮೋಸ್‌, ಥಾಯ್‌, ಡಿಸರ್ಟ್ಸ್‌, ಸುಶಿ, ಪಿಜ್ಜಾ, ಪಾಸ್ತಾ ಹೀಗೆ ಹಲವಾರು ರೀತಿಯ ಖಾದ್ಯಗಳು ಸಿಗುತ್ತವೆ. ಮನಸಿಗೆ ಹತ್ತಿರವಾಗುವ ಮಾಕ್‌ಟೇಲ್‌ ಕಾಕ್‌ಟೇಲ್‌ಗಳು, ನಾವೆಂದೂ ಬಿಟ್ಟಿರದ ನಮ್ಮ ಬ್ರ್ಯಾಂಡ್‌ಗಳು ಹೀಗೆ ಒಳಗಡೆ ಹೋದರೆ ಹೊರಗಡೆ ಬರಲಾಗದಂಥ ಆಂಬಿಯನ್ಸ್‌ ಸೇರಿ ನಿಮ್ಮನ್ನು ಮೋಡಿಗೊಳಿಸುತ್ತವೆ. ಈ ಪಬ್‌ ಖಂಡಿತ ನಿಮ್ಮ ಅಡ್ಡಾ ಆಗಬಹುದು.

ಸಂಪರ್ಕ

ಬಸ್‌ಸ್ಟಾಪ್‌, 21/1, ಡಾ.ವಿಷ್ಣುವರ್ಧನ್‌ ರೋಡ್‌, ಶ್ರೀನಿವಾಸಪುರ, ಬೆಂಗಳೂರು. ಫೋನ್‌: 98455 56080

ಕ್ಯಾವೋರ್‌ನಲ್ಲಿ ಕಳೆಯದಿರಿ!

kavor

ಬೆಂಗಳೂರಿನಲ್ಲಿ ನೈಟ್‌ಲೈಫ್‌ಗೆ ಒಳ್ಳೆಯ ಸ್ಥಳ. ಹಾಗೆ ಬೆಂಗಳೂರಿನಲ್ಲಿ ಹಲವಾರು ಪಬ್‌ಗಳಿವೆ. ಆದರೆ ಇಂಥ ಲಕ್ಸುರಿಯಸ್‌ ಪಬ್‌ ಸಿಗುವುದು ಕಡಿಮೆ. ಜಗಮಗ ಲೈಟ್‌ಗಳು ದೊಡ್ಡ ದೊಡ್ಡ ಶಾಂಡೆಲಿಯರ್‌ಗಳು, ದೊಡ್ಡ ಬಾರ್‌, ಡ್ಯಾನ್ಸ್‌ ಫ್ಲೋರ್‌, ವಿಐಪಿ ಸೀಟ್‌ಗಳು ಹೀಗೆ ಹಲವಾರು ವೈವಿಧ್ಯಗಳನ್ನು ತನ್ನಲ್ಲಿಟ್ಟುಕೊಂಡಿರುವ ಈ ಸ್ಥಳ ಬೆಂಗಳೂರಿನ ಹೃದಯ ಭಾಗದಲ್ಲಿದೆ. ಆಗಾಗ ಇಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಡಿಜೆಗಳು, ಸಿಂಗರ್‌ಗಳು ಬಂದು ಇಲ್ಲಿಗೆ ಬಂದವರ ಮನ ತಣಿಸುತ್ತಾರೆ. ಪ್ರತಿ ವೀಕೆಂಡ್‌ನಲ್ಲಿ ಇಲ್ಲಿ ಹಲವಾರು ಪಾರ್ಟಿಗಳಿರುತ್ತವೆ. ಫುಡ್‌, ತಲೆ ತಿರುಗಿಸುವ ಕಾಕ್‌ಟೇಲ್‌ ಮಾಕ್‌ಟೇಲ್‌ಗಳು, ಸುಮ್ಮನೇ ನಿಂತರೂ ಕುಣಿದಾಡಿಸುವ ಮ್ಯೂಸಿಕ್‌, ಡ್ಯಾನ್ಸ್‌ ಫ್ಲೋರ್‌, ವೈಬ್‌ ಮತ್ತು ಆಂಬಿಯೆನ್ಸ್‌ ಇಲ್ಲಿನ ಹೈಲೈಟ್ಸ್. ಚಿಲ್‌ ಮಾಡಲು ಇದು ಪರ್ಫೆಕ್ಟ್‌ ಸ್ಥಳ. ನೀವು ಇಲ್ಲಿ ನಿಮ್ಮ ಪಾರ್ಟ್ನ ರ್‌ನ್ನು ಡೇಟ್‌ಗೆ ಕರೆದುಕೊಂಡು ಹೋದರೆ, ನಿಮ್ಮ ಟೇಸ್ಟ್‌ ನೋಡಿ ಅವರು ನಿಮಗೆ ಫಿದಾ ಆಗಬಹುದು.

ಸಂಪರ್ಕ

ನಂ 5, ಫೀಲ್ಡ್‌ ಮಾರ್ಷಲ್‌ ಕಾರಿಯಪ್ಪ ರೋಡ್‌, ಶಾಂತಲಾ ನಗರ, ಅಶೋಕ್‌ ನಗರ, ಬೆಂಗಳೂರು ಕರ್ನಾಟಕ

ಫೋನ್‌ ನಂಬರ್‌: 88672 27772

ಸಿಡಿಬಡಿ ಸಿಬಿಡಿ!

cbd

ಚರ್ಚ್‌ ಸ್ಟ್ರೀಟ್‌ಗೆ ಹೋದಾಗ ಯಾವ ಪಬ್‌ ಒಳಗೆ ಕಾಲಿಡಬೇಕು ಎನ್ನುವುದೇ ಗೊತ್ತಾಗುವುದಿಲ್ಲ, ಹಲವಾರು ಪಬ್‌ಗಳು ಹಲವಾರು ವಿಧಗಳು. ಅಂಥವುಗಳಲ್ಲಿ ತುಂಬಾ ವಿಶಿಷ್ಟವಾಗಿ ಯುವಜನರನ್ನು ತನ್ನತ್ತ ಸೆಳೆಯುತ್ತಿರುವ ಪಬ್‌ ಸಿಬಿಡಿ. ಸಿಬಿಡಿ ಅಂದರೆ ಸೆಂಟ್ರಲ್‌ ಬಾರ್‌ ಡಿಸ್ಟ್ರಿಕ್ಟ್‌. ಫುಡೀ ಅಜಿತ್‌ರಿಂದ ನಡೆಯುತ್ತಿರುವ ಈ ಬಾರ್‌ ನ ಮೆನು ತಯಾರಿಸಲು ಅವರು ದೇಶದ ಹಲವಾರುಕಡೆಗಳಲ್ಲಿ ಸುತ್ತಿದ್ದಾರೆ. ಇಲ್ಲಿ ಹಲವಾರು ಸ್ಪೆಷಾಲಿಟಿಗಳಿವೆ. ಕೆಲವು ಫುಡ್‌ ಐಟಮ್‌ಗಳನ್ನಂತೂ ನೀವು ಇಲ್ಲಿಯವರೆಗೂ ತಿಂದಿರುವುದಿಲ್ಲ. ಹಾಗೆ ಕಾಕ್‌ಟೇಲ್‌ ಕೂಡಾ, ಹೀಗೂ ಇರುತ್ತಾ ಎಂದು ಹುಬ್ಬೇರಿಸುವಂತಿದೆ. ಇಲ್ಲಿ ಸ್ಪೆಷಲ್‌ ಆಗಿ ಸಿಗೋದು ಟಫಲ್‌ ಚೀಸ್‌ ಮಶ್ರೂಮ್‌ ಮಿನಿ ಕುಲ್ಚಾ, ಚೋಲೆ ಚಾವಲ್‌ ಬೈಟ್ಸ್‌, ಅಮೃತ್‌ಸರಿ ಚೋಲೆ ಕುಲ್ಚಾ, ಗನ್‌ ಪೌಡರ್‌ ಪೊಟ್ಯಾಟೋ, ಪನೀರ್‌ ಮಖಾನಿ ನಾನ್ಝಾ, ಮಾರ್ಗರೆಟಾ ಪಿಜ್ಜಾ, ಬಟರ್‌ ಚಿಕನ್‌ ನಾನ್ಝಾ, ಮಿಡ್‌ನೈಟ್‌ ಸನ್‌ ಪಿಜ್ಜಾ, ಮಶ್ರೂಮ್‌ ಚಿಲ್ಲಿ ಕ್ರಾಕ್ವೆಟ್ಟೀಸ್‌, ಬಟರ್‌ ಚಿಕನ್‌ ಕ್ರಾಕ್ವೆಟಿಸ್‌, ಕ್ಲಾಸಿಕ್‌ ವೆಜ್‌ ಮೊಮೊ, ಮ್ಯಾಕ್‌ ಎನ್‌ ಚೀಜ್‌ ಪಾಪ್ಸ್‌, ಪನೀರ್‌ ಘೀರೋಸ್ಟ್‌ ಸೇರಿದಂತೆ ಕಾಕ್‌ಟೇಲ್‌ನಲ್ಲಿ ಗುಂಗುರಾ ಬಟರ್‌ಮಿಲ್ಕ್‌, ಫಿಲ್ಟರ್‌ ಕಾಫಿ ವಿತ್‌ ಎಣ್ಣೆ, ಟಾಮಿಸ್‌ ಮಾರ್ಗರಿಟಾ, ಪಿಕಾಂಟೆ, ನಿಂಬೂ ಪಾನಿ, ನನ್ನಾರಿ, ಎನ್‌ ಇವನಿಂಗ್‌ ಇನ್‌ ಥೈಲ್ಯಾಂಡ್‌ ಸೇರಿದಂತೆ ರಮ್‌, ವಿಸ್ಕಿ ಹೀಗೆ ಹಲವಾರು ರೀತಿಯ ಗುಂಡುಗಳು ಸಿಗುತ್ತದೆ.

ಸಂಪರ್ಕ

ನಂ 3, ಚರ್ಚ್‌ ಸ್ಟ್ರೀಟ್‌, ಶಾಂತಲಾ ನಗರ್‌, ಎಮ್‌ಎಸ್‌ಆರ್‌, ಬೆಂಗಳೂರು

ಫೋನ್‌: 85469 99966

ಕಾಡಿನಲ್ಲಿ ಅಡುಗೆ ಮನೆ

suka

ಬೆಂಗಳೂರಿನ ನಾಗರಬಾವಿಯಲ್ಲಿ ಒಂದು ಹೊಸ ಜಗತ್ತಿದೆ. ಅದರ ಹೆಸರೇ ಸುಖ. ನಿಜವಾಗಲೂ ಸುಖ ನೀಡುವ ಈ ಸ್ಥಳಕ್ಕೆ ನೀವು ಒಮ್ಮೆಯಾದರೂ ಭೇಟಿ ನೀಡಲೇಬೇಕು. ನಾಗರಬಾವಿಯಂಥ ಗಿಜಿಗುಟ್ಟುವ ಸ್ಥಳದಲ್ಲೂ ಕಾಡಿನ ನೆನಪು ತರುವ ಹಸಿರು, ನಿಸರ್ಗ, ವಾಸ್ತುಶಿಲ್ಪದ ಜತೆಗೆ ಮನಸ್ಸಿಗೂ ಮುದ ನೀಡುವ ಸ್ಥಳವಿದು. ಇಲ್ಲಿ ಒಳಗಡೆ ಕಾಲಿಟ್ಟ ತಕ್ಷಣವೇ ನಿಮ್ಮ ಮೂಡ್‌ ಬದಲಾಗುತ್ತದೆ. ಇಲ್ಲಿನ ಶಾಂತಿಯುತ ಹಸಿರು ಪರಿಸರ ನೀವು ಯಾವುದೋ ದ್ವೀಪದಲ್ಲಿರುವಂತೆ ಮಾಡುತ್ತದೆ. 1.85 ಲಕ್ಷ ಸ್ಕೇರ್‌ ಫೀಟ್‌ನಲ್ಲಿರುವ ಈ ಸ್ಥಳ ಮನಮೋಹನವಾಗಿದೆ. ಇಲ್ಲಿ ಫುಡ್‌ನಲ್ಲಿ ಅಜಂತಾ ಫಿಶ್‌ ಕೇಕ್‌, ಕುನೆಫೆ ಡೆವಿಲ್‌ ಪ್ರಾನ್ಸ್‌, ಅಜ್ವೈನ್‌ ತಂದೂರಿ ಪ್ರಾನ್ಸ್‌, ಮಿಡಿಟೇರಿಯನ್‌ ಫಿಶ್‌ ಟಿಕ್ಕಾ, ಆಂಧ್ರ ಚಿಲ್ಲಿ ಬಜ್ಜಿ, ಬೆಂಡಕಾಯ ಮುರುಮುರು, ಆಂಧ್ರ ಚಿಲ್ಲಿ ಪರೋಟಾ, ಸೀಸರ್‌ ಚಿಕನ್‌ ಸಲಾಡ್‌, ಪೆರಿಪೆರಿ ಬೌಲ್‌ ಸಲಾಡ್‌, ಕ್ರೀಮ್‌ ಆಫ್‌ ಮಶ್ರೂಮ್‌ ಸೂಪ್‌, ಹಾಟ್‌ ಆಂಡ್‌ ಸಾರ್‌ ವೆಜಿಟೆಬಲ್‌ ಸೂಪ್‌, ಟಾಮ್‌ ಯೆಮ್‌ ವೆಜ್‌, ಫೈರಿ ಬಾರ್ಬೆಕ್ಯೂ ಚಿಕನ್‌ ಪಿಜ್ಜಾ, ಚಿಕ್ಕನ್‌ ಟಿಕ್ಕಾ ಪಿಜ್ಜಾ, ಸುಮಾಕ್‌ ಹರ್ಬ್‌ ಚಿಕನ್‌ ಪಿಜ್ಜಾ, ಚಿಲೀ ಕಾರ್ನ್‌ ಚೀಸ್‌ ಪುಲ್‌ ಅಪಾರ್ಟ್‌ ಸೇರಿದಂತೆ ಹಲವಾರು ಶಾಕಾಹಾರಿ ಮತ್ತು ಮಾಂಸಾಹಾರಿ ಖಾದ್ಯಗಳು ನಿಮ್ಮ ಬಾಯಲ್ಲಿ ನೀರೂರಿಸಲಿದೆ. ಹಾಗೆ ನಿಮಗೆ ಗುಂಡು ಹಾಕುವ ಹವ್ಯಾಸವಿದ್ದರೆ ಅದಕ್ಕೂ ಇಲ್ಲಿ ಹಲವಾರು ಚಾಯ್ಸ್‌ಗಳಿವೆ. ಮನಮೆಚ್ಚಿಸುವಂಥ ಕಾಕ್‌ಟೇಲ್‌ಗಳು, ಮಾಕ್‌ಟೇಲ್‌ಗಳು, ವಿಸ್ಕೀ, ಬ್ರ್ಯಾಂಡಿ, ಡ್ರಾಟ್‌ ಬಿಯರ್‌ಗಳು ಹೀಗೆ, ಇಲ್ಲಿಗೆ ಬಂದರೆ ನೀವು ಕಳೆದು ಹೋಗಬೇಕು, ಅಂಥ ಸ್ಥಳವಿದು.

ಸಂಪರ್ಕ

ನಂ1755, 1ನೇ ಮಹಡಿ, ಮುದ್ದಿನಪಾಲಯ ಮುಖ್ಯ ರಸ್ತೆ, 60 ಅಡಿ ರಸ್ತೆ, 8ನೇ ಬ್ಲಾಕ್, ವಿಶ್ವೇಶ್ವರಯ್ಯ ಲೇಔಟ್, ಬೆಂಗಳೂರು, ಕರ್ನಾಟಕ 560110

ಫೋನ್‌: 080 4736 1820

Bhagya Divana

Bhagya Divana

Bhagya Divana is a Professional Journalist. Working in Pravasi Prapancha.

ಪ್ರವಾಸಿಗರ ನೆಚ್ಚಿನ ಎವರ್ ಗ್ರೀನ್ ಕೌಂಟಿ...

Read Previous

ಪ್ರವಾಸಿಗರ ನೆಚ್ಚಿನ ಎವರ್ ಗ್ರೀನ್ ಕೌಂಟಿ...

ಪ್ರಕೃತಿಯ ಮೈಮಾಟವನ್ನು ನೋಡಬೇಕೆ? ಸಮತಗೆ ಬನ್ನಿ

Read Next

ಪ್ರಕೃತಿಯ ಮೈಮಾಟವನ್ನು ನೋಡಬೇಕೆ? ಸಮತಗೆ ಬನ್ನಿ