Saturday, September 27, 2025
Saturday, September 27, 2025

ಮೈಸೂರು ದಸರಾ... ಎಷ್ಟೊಂದು ಸುಂದರ...

ಕೆಎಸ್‌ಟಿಡಿಸಿಯ ಪ್ಯಾಕೇಜ್‌ ಬಜೆಟ್‌ ಸ್ನೇಹಿಯಾಗಿದ್ದು, ಬೇರೆಲ್ಲೂ ಸಿಗದ ಆರಾಮದಾಯಕ, ಸುರಕ್ಷಿತ ಮತ್ತು ಸುಸಜ್ಜಿತ ಯೋಜನೆಯ ಪ್ರವಾಸದ ಭರವಸೆಯನ್ನು ನೀಡುತ್ತದೆ.

ಕರುನಾಡಿನ ಪ್ರವಾಸಿಗರು ಈಗ ಸಂಭ್ರಮ ಮತ್ತು ಸಡಗರದಲ್ಲಿದ್ದಾರೆ. ತಮ್ಮ ವಿರಾಮದ ಸಮಯವನ್ನು ಕೆಎಸ್‌ಟಿಡಿಸಿ ಜತೆಗೆ ಕಳೆಯಲು ಇಚ್ಛಿಸಿದ್ದಾರೆ. ಪ್ರವಾಸವಿಲ್ಲವೆಂದರೆ ಬದುಕು ಪೂರಾ ಖಾಲಿ ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಂಡಿದ್ದಾರೆ. ಸುತ್ತುವುದನ್ನೇ ಪ್ರವೃತ್ತಿಯಾಗಿಸಿಕೊಳ್ಳಲು ತೀರ್ಮಾನಿಸಿದ್ದಾರೆ. ಪ್ರವಾಸಿಗರ ಸುತ್ತುವ ಖಯಾಲಿಗೆ ಕೆಎಸ್‌ಟಿಡಿಸಿ ಸಂಪೂರ್ಣವಾಗಿ ಸಾಥ್‌ ನೀಡಿದೆ. ಪ್ರವಾಸಿಗರ ಮನ ತಣಿಸಲೆಂದೇ ವಿಶೇಷವಾದ ಟೂರ್ ಪ್ಯಾಕೇಜ್ ಗಳನ್ನು ಘೋಷಿಸಿದೆ. ಕರ್ನಾಟಕ ಪ್ರವಾಸೋದ್ಯಮ ಇಲಾಖೆಯು ಪ್ರವಾಸಿಗರಿಗೆ ಹೊಸದೊಂದು ಜಗತ್ನನ್ನೇ ತೋರಿಸುತ್ತಿದೆ. ಅದ್ಭುತ ಮತ್ತು ವಿಸ್ಮಯವಾದ ತಾಣಗಳತ್ತ ಕೈ ಹಿಡಿದು ಕರೆದುಕೊಂಡು ಹೋಗುತ್ತಿದೆ. ಕೆಎಸ್‌ಟಿಡಿಸಿ ಪ್ರವಾಸೋದ್ಯಮದಲ್ಲಿ ಅಸಾಧಾರಣ ಸಾಧನೆ ಮಾಡುತ್ತಾ ಮುನ್ನುಗ್ಗುತ್ತಿದೆ. ಹೊಸ ಸಾಹಸಗಳಿಗೆ ತೆರೆದುಕೊಳ್ಳುತ್ತಾ ಬೆರಗು ಮೂಡಿಸಿದೆ. ಬಜೆಟ್ ಸ್ನೇಹಿ ಪ್ಯಾಕೇಜ್ ಗಳೊಂದಿಗೆ ಪ್ರವಾಸಿಗರಿಗೆ ಹಬ್ಬದೂಟ ಬಡಿಸಿದೆ. ಕೆಎಸ್‌ಟಿಡಿಸಿ ಹತ್ತಾರು ಪ್ಯಾಕೇಜ್ ಗಳನ್ನು ಘೋಷಿಸುವ ಮೂಲಕ ಬೇರೆಲ್ಲ ರಾಜ್ಯಗಳ ಪ್ರವಾಸೋದ್ಯಮಕ್ಕೂ ಸಡ್ಡು ಹೊಡೆಯುತ್ತಿದೆ. ನೈಸರ್ಗಿಕವಾಗಿ ಶ್ರೀಮಂತವಾಗಿರುವ ಕರ್ನಾಟಕವು ಪ್ರವಾಸೋದ್ಯಮದಲ್ಲಿಯೂ ಯಶಸ್ಸು ಸಾಧಿಸಲಿದೆ. ನವ ಚೈತನ್ಯದೊಂದಿಗೆ ಹಲವು ಯೋಜನೆಗಳನ್ನು ಹಮ್ಮಿಕೊಂಡಿರುವ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ(ಕೆಎಸ್‌ಟಿಡಿಸಿ) ಉತ್ತಮ ಕೆಲಸ ಮತ್ತು ಕಾರ್ಯಗಳನ್ನು ಮಾಡುತ್ತಿದೆ. ನಿಸರ್ಗ ಸೌಂದರ್ಯ ಸವಿಯಲು, ಗತ ಕಾಲದ ತಾಣಗಳಿಗೆ ಭೇಟಿ ನೀಡಲು, ಜಲಪಾತಕ್ಕೆ ಮೈಯೊಡ್ಡಲು, ಕಡಲ ಕಿನಾರೆಗೆ ಕಿವಿಗೊಟ್ಟು ಮುದಗೊಳ್ಳು ಕೆಎಸ್‌ಟಿಡಿಸಿ ಉತ್ತಮ ಅವಕಾಶ ಕಲ್ಪಿಸಿಕೊಟ್ಟಿದೆ. ಬಸ್ ಪ್ರಯಾಣ ಆರಾಮದಾಯಕವಾಗಿರುತ್ತದೆ. ಎಲ್ಲಿಯೂ ನಿರಾಶೆಯಾಗದಂತೆ ಅಚ್ಚುಕಟ್ಟಾಗಿ ಯೋಜನೆಯನ್ನು ರೂಪಿಸಿರಲಾಗುತ್ತದೆ. ಮತ್ಯಾಕೆ ತಡ? ಕೆಎಸ್‌ಟಿಡಿಸಿಯಲ್ಲಿ ಈಗಲೇ ನಿಮ್ಮ ಸೀಟುಗಳನ್ನು ಕಾಯ್ದಿರಿಸಿಕೊಳ್ಳಿ.

dasara 1

ಅಂದಹಾಗೆ ಸಾಂಸ್ಕೃತಿಕ ನಗರಿ ಮೈಸೂರು ಈಗಾಗಲೇ ಕಳೆಕಟ್ಟಿದೆ. ನಾಡ ಹಬ್ಬ ದಸರಾಗೆ ಇಡೀ ನಗರ ಸಿಂಗಾರಗೊಂಡ ವಧುವಿನಂತೆ ಸಜ್ಜಾಗಿದೆ. ರಾಜ್ಯ, ದೇಶ ಮತ್ತು ವಿದೇಶದಿಂದ ಪ್ರವಾಸಿಗರು ದಸರಾ ಹಬ್ಬವನ್ನು ಕಣ್ತುಂಬಿಕೊಳ್ಳಲು ಬರುತ್ತಿದ್ದಾರೆ. ಮೈಸೂರು ಇನ್ನು ಒಂದು ತಿಂಗಳು ಅಕ್ಷರಶಃ ಬೆಳಕಿನ ನಗರಿ. ದಸರಾ ಹಬ್ಬದ ಸಡಗರದಲ್ಲಿ ಮೈಸೂರು ಅರಮನೆ, ಮೃಗಾಲಯ, ಚಾಮುಂಡಿ ಬೆಟ್ಟ ಸೇರಿದಂತೆ ಇನ್ನು ಹತ್ತು ಹಲವು ತಾಣಗಳಿಗೆ ಪ್ರವಾಸಿಗರ ದಂಡೇ ಹೋಗುತ್ತದೆ. ಈ ಸಂದರ್ಭದಲ್ಲಿ ರಾಜ್ಯ ಪ್ರವಾಸೋದ್ಯಮ ಇಲಾಖೆಗೂ ಹೆಚ್ಚಿನ ಜವಾಬ್ದಾರಿಯಿದೆ. ಜಗತ್ತಿನ ಪ್ರವಾಸಿಗರನ್ನು ಆಕರ್ಷಿಸಬೇಕಿದೆ. ಪ್ರವಾಸ ಕ್ಷೇತ್ರದಲ್ಲಿ ಮೈಸೂರಿಗಿರುವ ಸ್ಥಾನಮಾನವನ್ನು ತೋರಗೊಡಬೇಕಿದೆ. ಎಷ್ಟೇ ಆದರೂ ಮೈಸೂರು ನಗರವು ಪ್ರವಾಸೋದ್ಯಮಕ್ಕೆ ಅಪಾರ ಕೊಡುಗೆ ನೀಡಿದೆ. ಇಡೀ ರಾಜ್ಯ ಒಂದು ತೂಕವಾದರೆ ಮೈಸೂರು ಮತ್ತೊಂದು ತೂಕ. ಇದೀಗ ಕೆಎಸ್‌ಟಿಡಿಸಿ ಯು ದಸರಾ ಹಬ್ಬದಲ್ಲಿ ಕಂಗೊಳಿಸುತ್ತಿರುವ ಮೈಸೂರಿನತ್ತ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ನಗರ ವೀಕ್ಷಣೆಗೆ ವಿಶೇಷ ಟೂರ್‌ ಪ್ಯಾಕೇಜ್‌ ಅನ್ನು ಘೋಷಿಸಿದೆ. ಮೈಸೂರಿನ ಮಹತ್ವದ ಮತ್ತು ಪಾರಂಪರಿಕ ತಾಣಗಳಿಗೆ ಕರೆದೊಯ್ದು ಅಲ್ಲಿನ ಮಾಹಿತಿ ನೀಡಲು ಕೆಎಸ್‌ಟಿಡಿಸಿ ತಯಾರಿ ನಡೆಸಿದೆ. ದೇಶ ವಿದೇಶದ ಪ್ರವಾಸಿಗರನ್ನು ಸಂತಸಪಡಿಸಲು ಅಂಬಾರಿ ಡಬಲ್ ಡೆಕ್ಕರ್ ಬಸ್ಸನ್ನು ಮೀಸಲಿಟ್ಟಿದೆ. ಪ್ರವಾಸಿಗರೆಲ್ಲರೂ ಆ ಬಸ್ಸಿನಲ್ಲಿ ಆರಾಮವಾಗಿ ಕೂತು ಸಿಟಿಯನ್ನು ಸುತ್ತಬಹುದು. ದಸರಾ ನೋಡ ಬಯಸುವ ಪ್ರವಾಸಿಗರು ಕೆಎಸ್‌ಟಿಡಿಸಿಯ ಈ ಪ್ಯಾಕೇಜ್‌ ಅನ್ನು ಸದುಪಯೋಗಪಡಿಸಿಕೊಳ್ಳಿ. ಬಿಟ್ಟನೆಂದರೂ ಬಿಡದ ಮಾಯೆಯಂತೆ ಸದಾ ಆಕರ್ಷಿಸುವ ಅರಮನೆ ನಗರಿಯ ಬೆರಗುಗಳನ್ನು ನಿಮ್ಮೊಳಗೆ ತಂದಿಟ್ಟುಕೊಳ್ಳಿ. ಸೂರು ಬಿಟ್ಟು ಮೈಸೂರಿಗೆ ಬನ್ನಿ. ಈ ದಿನ ನಿಮ್ಮದು. ಈ ಕ್ಷಣವೂ ನಿಮ್ಮದು. ಸುತ್ತುವುದನ್ನು ಮೊದಲು ಖಯಾಲಿ ಮಾಡಿಕೊಳ್ಳಿ. ಪ್ರವಾಸದಿಂದ ದೇಹ ಮತ್ತು ಮನಸ್ಸು ಎರಡಕ್ಕೂ ಹಿತ!

ಪ್ಯಾಕೇಜ್

ಕೆಎಸ್‌ಟಿಡಿಸಿಯಲ್ಲಿ ಬುಕ್‌ ಮಾಡುವವರಿಗೆ ವಿಶೇಷ ಅವಕಾಶಗಳಿವೆ.

ಡಿಲಕ್ಸ್‌ ಎಸಿ ಬಸ್‌ನಲ್ಲಿ ಆರಾಮದಾಯಕ ಸುಖ ಪ್ರಯಾಣ.

ಆಯ್ಕೆ ಮಾಡಿಕೊಂಡ ಪ್ಯಾಕೇಜ್‌ ಅನ್ವಯ ಪ್ರವಾಸ

ರಾಜ್ಯ, ಕೇಂದ್ರ ಮತ್ತು ಸಾರ್ವಜನಿಕ ವಲಯದ ಉದ್ಯೋಗಿಗಳಿಗೆ ಎಲ್‌ಟಿಸಿ ಸೌಲಭ್ಯ

ಕೆಎಸ್‌ಟಿಡಿಸಿ ನಿಮ್ಮ ಆಯ್ಕೆಯಾಗಲಿ

ಕೆಎಸ್‌ಟಿಡಿಸಿಯ ಪ್ಯಾಕೇಜ್‌ ಬಜೆಟ್‌ ಸ್ನೇಹಿಯಾಗಿದ್ದು, ಬೇರೆಲ್ಲೂ ಸಿಗದ ಆರಾಮದಾಯಕ, ಸುರಕ್ಷಿತ ಮತ್ತು ಸುಸಜ್ಜಿತ ಯೋಜನೆಯ ಪ್ರವಾಸದ ಭರವಸೆಯನ್ನು ನೀಡುತ್ತದೆ.

ಆರಾಮದಾಯಕ ಪ್ರಯಾಣ: ಆಧುನಿಕ ಬಸ್‌ಗಳು ಮತ್ತು ಅನುಭವಿ ಚಾಲಕರೊಂದಿಗೆ ಇಡೀ ದಿನ ಸುರಕ್ಷಿತ ಪ್ರಯಾಣ ಮಾಡಬಹುದು.

ವಿಶೇಷ ಗೈಡ್‌ಗಳು: ತಾಣಗಳ ಇತಿಹಾಸ ಮತ್ತು ಮಹತ್ವವನ್ನು ವಿವರಿಸುವ ತಜ್ಞ ಗೈಡ್‌ಗಳು ಪ್ರವಾಸಿಗರೊಂದಿಗೆ ಇರುತ್ತಾರೆ.

ಸಮಗ್ರ ಯೋಜನೆ: ಪ್ಯಾಕೇಜ್‌ ನಲ್ಲಿ ಇರುವ ಎಲ್ಲ ತಾಣಗಳನ್ನೂ ಮನಸ್ಸಿಗೆ ಸಮಾಧಾನ ಆಗುವವರೆಗೂ ನೋಡಬಹುದು. ಹಿತಾನುಭವ ಪಡೆಯಬಹುದು. ಸಮಯದ ಪ್ಲ್ಯಾನಿಂಗ್‌ ಕೂಡ ಅತ್ಯಂತ ಶಿಸ್ತಿನಿಂದ ರೂಪಿಸಿರಲಾಗುತ್ತದೆ.

ಕೈಗೆಟುಕುವ ಬೆಲೆ: ಎಲ್ಲರಿಗೂ ಒಗ್ಗುವ, ಮಧ್ಯಮ ವರ್ಗದವರ ಕನಸು ನನಸು ಮಾಡುವ, ಕೈಗೆಟುಕುವ ದರದಲ್ಲಿ ಪ್ರಯಾಣ ಸೇವೆ ಸಿಗುತ್ತದೆ. ಮತ್ತೇನು ಯೋಚನೆ ಮಾಡ್ತಿದ್ದೀರಿ? ಕೆಎಸ್‌ಟಿಡಿಸಿ ನಿಮ್ಮ ಸಂಗಾತಿ. ಈಗಲೇ ಬುಕ್‌ ಮಾಡಿ. ಹೊರಡಿ. ಜಗತ್ತು ಕೈ ಬೀಸಿ ಕರೆಯುತ್ತಿದೆ.

ambari

ಅಂಬಾರಿ ದಸರಾ ಇಲ್ಯುಮಿನೇಷನ್ ರೌಂಡ್ ಟ್ರಿಪ್

ಕೆ ಎಸ್‌ ಟಿ ಡಿ ಸಿ ಮಯೂರ ಹೊಯ್ಸಳ ಆವರಣದಲ್ಲಿರುವ ಕೆ ಎಸ್‌ ಟಿ ಡಿ ಸಿ ಮೈಸೂರು ಸಾರಿಗೆ ವಿಭಾಗದಿಂದ ನಿಗದಿತ ಸಮಯದಲ್ಲಿ ಅಂಬಾರಿ ಡಬಲ್ ಡೆಕ್ಕರ್ ಬಸ್ ಮೂಲಕ ಮೈಸೂರು ನಗರ ದೃಶ್ಯವೀಕ್ಷಣೆಯ ಪ್ರವಾಸಕ್ಕೆ ಹೊರಡಲಾಗುತ್ತದೆ ಸರಿಯಾದ ಸಮಯಕ್ಕೆ ಹೊರಟು ಒಂದು ಗಂಟೆಯ ಮೈಸೂರು ನಗರ ವೀಕ್ಷಣೆ ಪ್ರವಾಸ ಕೈಗೊಳ್ಳಲಾಗುತ್ತದೆ. ಪ್ರವಾಸಿಗರನ್ನು ಡಬಲ್‌ ಡೆಕ್ಕರ್‌ ಬಸ್‌ ನಲ್ಲಿ ಕರೆದುಕೊಂಡು ಹೋಗಲಾಗುತ್ತದೆ.


ಮೈಸೂರು ನಗರ ವೀಕ್ಷಣೆಯ ಪ್ರವಾಸವನ್ನು ಮೂರು ವೇಳಾಪಟ್ಟಿಯಲ್ಲಿ ನಿಗದಿ ಮಾಡಲಾಗಿದೆ. ಸಂಜೆ 6.30ಕ್ಕೆ ಮೊದಲ ಟ್ರಿಪ್‌ , ರಾತ್ರಿ 8:00 ಗಂಟೆಗೆ ಎರಡನೇ ಮತ್ತು ರಾತ್ರಿ 9:30 ಗಂಟೆಗೆ ಮೂರನೇ ರೌಡ್‌ ಟ್ರಿಪ್‌ ಇರುತ್ತದೆ. ಸೀಮಿತ ಪ್ರವಾಸಿಗರನ್ನು ಬಸ್‌ ನಲ್ಲಿ ತುಂಬಿಕೊಂಡು ಅರಮನೆ ನಗರಿಯಲ್ಲಿ ಸುತ್ತಾಡಿಸಲಾಗುತ್ತದೆ

ಹೊಟೇಲ್ ಮಯೂರ ಹೊಯ್ಸಳದಲ್ಲಿ ವಾಸ್ತವ್ಯ

ಪ್ರವಾಸದ ಅವಧಿ: 1 ಗಂಟೆ

ಹಳೆಯ ಡಿಸಿ ಆಫೀಸ್ ವೀಕ್ಷಣೆ
ಕ್ರಾಫಾರ್ಡ್ ಹಾಲ್
ಒರಿಂಟಲ್ ರಿಸರ್ಚ್
ರಾಮಸ್ವಾಮಿ ಸರ್ಕಲ್
ಸಂಸ್ಕೃತ ಪಾಠಶಾಲಾ
ಅರಮನೆ ದಕ್ಷಿಣ ದ್ವಾರ
ಜಯ ಮಾರ್ತಾಂಡ ಸರ್ಕಲ್ ದ್ವಾರ
ಹಾರ್ಡಿಂಗ್ ಸರ್ಕಲ್
ಟೌನ್ ಹಾಲ್
ಗಾಂಧಿ ಚೌಕ
ದೊಡ್ಡ ಗಡಿಯಾರ
ಕೆಆರ್ ಸರ್ಕಲ್- ಸಯಾಜಿ ರಾವ್ ರಸ್ತೆ ಮೂಲಕ
ಆಯುರ್ವೇದ ವೈದ್ಯಕೀಯ ಕಾಲೇಜು
ರೈಲ್ವೆ ನಿಲ್ದಾಣ ಮತ್ತು ಮ್ಯೂಸಿಯಂ
ಹೊಟೇಲ್‌ ಮಯೂರಗೆ ಹಿಂತಿರುಗಲಾಗುವುದು.

ಸಂಪರ್ಕ:
Yogesh. MK

Manager (Tours)
Mob No: +91 960 6987 822 | Email ID: tour.manager@kstdc.co
Karnataka State Tourism Development Corporation Ltd. (KSTDC)
Corporate Office: 5th Floor | Indhana Bhavan|Race Cource Road |
Opposite to Renaissance Hotel,
Bangalore- 560009 | Karnataka | India
Office: 080-43344334 | Fax: 080-43344376
Email:
feedback@kstdc.co | info@kstdc.co | website: www.kstdc.co |www.goldenchariot.org

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಪ್ರವಾಸಿಗರ ನೆಚ್ಚಿನ ಎವರ್ ಗ್ರೀನ್ ಕೌಂಟಿ...

Read Previous

ಪ್ರವಾಸಿಗರ ನೆಚ್ಚಿನ ಎವರ್ ಗ್ರೀನ್ ಕೌಂಟಿ...

ಪ್ರಕೃತಿಯ ಮೈಮಾಟವನ್ನು ನೋಡಬೇಕೆ? ಸಮತಗೆ ಬನ್ನಿ

Read Next

ಪ್ರಕೃತಿಯ ಮೈಮಾಟವನ್ನು ನೋಡಬೇಕೆ? ಸಮತಗೆ ಬನ್ನಿ