ಹುಬ್ಬಳ್ಳಿ, ಬೆಳಗಾವಿ, ಚಿತ್ರದುರ್ಗ ಹೀಗೆ ರಾಜ್ಯದ ಅನೇಕ ನಗರಗಳನ್ನು ಸಂಪರ್ಕಿಸುವ ಪ್ರಮುಖ ಕೇಂದ್ರ ತುಮಕೂರು. ಸ್ಥಳೀಯರ ಹೊರತಾಗಿಯೂ ತುಮಕೂರು ಭಾಗವಾಗಿ ಹಾದು ಹೋಗುವ ಮಂದಿಯ ಅನುಕೂಲಕ್ಕಾಗಿ ಇಲ್ಲಿ ಸಾಕಷ್ಟು ಆಹಾರ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದೆ. ಒಂದಕ್ಕಿಂತ ಒಂದು ಭಿನ್ನ ರುಚಿ, ವಿಶೇಷ ಅನುಭವವನ್ನು ನೀಡುವ ಹೊಟೇಲ್‌ಗಳ ಸಾಲಿಗೆ ಇತ್ತೀಚೆಗಷ್ಟೇ ಸೇರ್ಪಡೆಗೊಂಡಿರುವುದು ತ್ರಿಕಾಲ್‌ ಕೆಫೆ.

ಇದನ್ನೂ ಓದಿ: ತುಪ್ಪದ ದೋಸೆಯ ಘಮ ಶುಚಿ-ರುಚಿಯ ಸಂಗಮ

ತುಮಕೂರಿನ ವಿದ್ಯಾನಗರ್‌ ಚಾಟ್‌ ಸ್ಟ್ರೀಟ್‌ನಲ್ಲಿ ಜಿಪಿಟಿ ಕಾಲೇಜು ರಸ್ತೆಯ ಪಕ್ಕದಲ್ಲೇ ಹೊಸತಾಗಿ ಪ್ರಾರಂಭವಾಗಿರುವ ಈ ಹೊಟೇಲ್‌, ‌ನೋಡುವುದಕ್ಕಂತೂ ಪಕ್ಕಾ ಟ್ರೆಡಿಶನಲ್‌ ಫೀಲ್‌ ನೀಡುತ್ತದೆ. ಜತೆಗೆ ಅಥೆಂಟಿಕ್‌ ಪ್ಯೂರ್‌ ವೆಜಿಟೇರಿಯನ್‌ ಫುಡ್‌ ಸರ್ವ್‌ ಮಾಡುತ್ತದೆ. ಬೆಳಗಿನ ಉಪಾಹಾರ, ಮಧ್ಯಾಹ್ನ ವಿಶೇಷ ಭೋಜನ ಮಾತ್ರವಲ್ಲದೆ ರಾತ್ರಿಯ ಊಟದಲ್ಲೂ ವಿಭಿನ್ನತೆಯನ್ನು ಕಾಯ್ದುಕೊಂಡಿದೆ. ಒಂದಕ್ಕಿಂತ ಒಂದು ಭಿನ್ನ ರುಚಿಯನ್ನು ನೀಡುವ ಈ ಹೊಟೇಲ್‌ಗೆ ಗ್ರಾಹಕರ ಹರಿವು ಹೆಚ್ಚಾಗಿಯೇ ಇದೆ.

ಬೆಳಗ್ಗೆ 7 ಗಂಟೆಯಿಂದ ರಾತ್ರಿ 11ರವೆರೆಗೆ ಆಹಾರಪ್ರಿಯರಿಂದ ಗಿಜಿಗುಡುವ ಈ ಹೊಟೇಲ್‌ನಲ್ಲಿ ಬ್ರೇಕ್‌ ಫಾಸ್ಟ್‌ ಐಟಂಗಳು ಬಹಳ ವಿಶೇಷವಾಗಿದೆ. ಎಲ್ಲ ಕಡೆಯೂ ಲಭ್ಯವಿರುವಂತೆ ಇಡ್ಲಿ ವಡೆ, ದೋಸೆ ವೆರೈಟೀಸ್‌, ಪೂರಿ ಸಾಗು, ಕೇಸರಿ ಬಾತ್‌- ಚೌ ಚೌ ಬಾತ್‌ ಹೀಗೆ ಎಲ್ಲವೂ ಸಿಗುವುದರ ಜತೆಗೆ ಡಯಟ್‌ ಕಾನ್ಶಿಯಸ್‌ ಇರುವ ಮಂದಿಗಾಗಿಯೇ ಪ್ರತ್ಯೇಕವಾಗಿ ಮಿಲೆಟ್‌ ಸ್ಪೆಶಲ್‌ ಐಟಂಗಳೂ ಲಭ್ಯವಿದೆ. ಇಲ್ಲಿನ ಆಹಾರಗಳ ರುಚಿಯ ಬಗ್ಗೆ ಹೇಳುವುದೇ ಬೇಕಿಲ್ಲ. ಮಿಲೆಟ್ಸ್‌ನಿಂದ ತಯಾರಿಸಿದ ಬಿಸಿಬೇಳೆಭಾತು, ಮಿಲೆಟ್‌ ಪೊಂಗಲ್ ಹೀಗೆ ಇಲ್ಲಿ ಎಲ್ಲವೂ ಹೆಲ್ದೀ ಫುಡ್‌. ಮಧ್ಯಾಹ್ನದ ಊಟ ಹಾಗೂ ಸಂಜೆ ಹೊತ್ತಿಗೆ ಸೌತ್‌ ಆಂಡ್‌ ನಾರ್ತ್‌ ಇಂಡಿಯಾ ಫೇಮಸ್‌ ಫುಡ್‌ ಆಂಡ್‌ ಚಾಟ್ಸ್‌ ಲಭ್ಯವಿದೆ. ಶುಚಿಯ ಬಗೆಗೂ ಹೆಚ್ಚಿನ ಕಾಳಜಿ ವಹಿಸುವುದರಿಂದಾಗಿ ಎಲ್ಲದರಲ್ಲೂ ಬೆಸ್ಟ್‌ ಎನಿಸಿಕೊಂಡಿದೆ.

Untitled design (38)

ಒಟ್ಟಿನಲ್ಲಿ ತುಮಕೂರಲ್ಲಿ ಸಾಕಷ್ಟು ಹೊಟೇಲ್‌, ರೆಸ್ಟೋರೆಂಟ್‌ಗಳಿವೆಯಾದರೂ ಸ್ನೇಹಿತರು, ಕುಟುಂಬದವರಷ್ಟೇ ಅಲ್ಲದೆ ಆಫೀಸ್ ಕಲೀಗ್ಸ್‌ ಜತೆಗೆ ಒಂದೊಳ್ಳೆ ಫುಡ್‌ ಟೇಸ್ಟ್‌ ಮಾಡಬೇಕೆಂದುಕೊಂಡವರಿಗಿದು ಉತ್ತಮ ಆಯ್ಕೆ.

ತುಮಕೂರಿನ ಆರ್‌ಟಿಓ ಆಫೀಸ್‌ ಹತ್ತಿರದಲ್ಲಿ ಆಹಾರಪ್ರಿಯರಿಗೆ ಸೂಕ್ತವೆನಿಸುವ ಗುಣಮಟ್ಟದ ಹೊಟೇಲ್‌ಗಳಿಗೆ ಆಯ್ಕೆಯಿರಲಿಲ್ಲ. ಆದ್ದರಿಂದ ಇಂಥ ಜಾಗದಲ್ಲಿಯೇ ಒಂದೊಳ್ಳೆ ಹೊಟೇಲ್‌ ನಿರ್ಮಾಣ ಮಾಡಬೇಕೆನಿಸಿತು. ಆದರೆ ಎಲ್ಲರಿಗಿಂತ ಭಿನ್ನವಾಗಿರಬೇಕೆಂಬ ಕಾರಣಕ್ಕಾಗಿ ಹೆಲ್ದೀಯಾಗಿರುವ ಡಯಟ್‌ ಫುಡ್‌ ಗಳನ್ನು ಇದರ ಜತೆಗೆ ಪ್ರಾರಂಭಿಸಿದೆವು. ಎಲ್ಲದಕ್ಕೂ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ. ಮುಂದಿನ ದಿನಗಳಲ್ಲಿ ನಮ್ಮ ಮೆನುವಿನಲ್ಲಿ ಮತ್ತೊಂದಷ್ಟು ಆಯ್ಕೆಗಳನ್ನು ನೀಡುವ ಯೋಜನೆಯಿದೆ. ಸದ್ಯದಲ್ಲೇ ಮಾಡಬೇಕು ಅಂದುಕೊಂಡಿದ್ದೇವೆ.

- ಹರ್ಷಿತಾ ಗಣೇಶ್, ಮಾಲೀಕರು

ವಿಳಾಸ:

RTO ಕಚೇರಿಯ ಹಿಂದೆ, ವಿದ್ಯಾನಗರ, ತುಮಕೂರು, ಕರ್ನಾಟಕ - 572102

ಮೊ: 82967 77333