ತುಪ್ಪದ ದೋಸೆಯ ಘಮ ಶುಚಿ-ರುಚಿಯ ಸಂಗಮ
ವಾರಾಂತ್ಯದಲ್ಲಿ ಒಂದೊಳ್ಳೆ ಹೊಟೇಲ್‌ಗೆ ವಿಸಿಟ್ ಮಾಡಿ, ವೆರೈಟಿ ಫುಡ್ಗಳನ್ನು ಟೇಸ್ಟ್ ಮಾಡಬೇಕು ಅಂದುಕೊಂಡಿದ್ದೀರಾ ? ಜಯನಗರದ ಆಸುಪಾಸಿನಲ್ಲಿ ನೀವಿದ್ದರೆ ತಪ್ಪದೆ ಭೇಟಿ ನೀಡಬೇಕಿರುವ ಹೊಟೇಲ್ ʼಆಚಾರ್ಯ ಕೆಫೆʼ. ಕೆಲವು ದಿನಗಳ ಹಿಂದಷ್ಟೇ ಗ್ರಾಹಕರಿಗೆ ಮುಕ್ತವಾದ ಈ ಹೊಟೇಲ್, ವಾರದೊಳಗೆ ಲೆಕ್ಕವಿಲ್ಲದಷ್ಟು ಗ್ರಾಹಕರ ಮೆಚ್ಚುಗೆ ಗಳಿಸಿದೆ.
ಬೆಂಗಳೂರು ದಕ್ಷಿಣ ಭಾಗವೆಂದರೆ ಆಹಾರಪ್ರಿಯರ ಹಾಟ್ ಸ್ಪಾಟ್. ಲೆಕ್ಕವಿಲ್ಲದಷ್ಟು ದರ್ಶಿನಿಗಳು, ಉಪಹಾರ ಮಂದಿರಗಳು, ಕೆಫೆಗಳು ಇಲ್ಲಿರುವುದರಿಂದ ವಾರಾಂತ್ಯ ಬಂದರೆ ಬೆಂಗಳೂರಿನ ಮೂಲೆ ಮೂಲೆಯಿಂದಲೂ ಸೌತ್ ಬೆಂಗಳೂರಿಗೆ ಬರುವವರೇ ಹೆಚ್ಚು. ಆದರೆ ಆಹಾರ ಸವಿಯುವುದಕ್ಕೆ ಇಷ್ಟೊಂದು ಆಯ್ಕೆಗಳಿರುವಾಗ ಬೆಸ್ಟ್ ಯಾವುದು ಎಂದು ಗುರುತಿಸುವುದು ಹೇಗೆ? ಒಂದಷ್ಟು ಹೊಟೇಲ್ ಗಳನ್ನು ಟ್ರೈ ಮಾಡಿದ್ದಾಗಿದೆ, ಹೊಸ ಹೊಟೇಲ್ ಯಾವುದಿದೆ ಎಂಬ ಪ್ರಶ್ನೆ ಹೊತ್ತು ಬರುವ ಆಹಾರ ಪ್ರಿಯರಿಗೆ ಉತ್ತರವೆಂಬಂತಿದೆ ಜಯನಗರದ ಆಚಾರ್ಯ ಕೆಫೆ.
ಜಯನಗರ 7ನೇ ಬ್ಲಾಕ್‌ನ ಕೃಷ್ಣ ರಾಜೇಂದ್ರ ರಸ್ತೆಯಲ್ಲಿರುವ ಉಮಾಮಹೇಶ್ವರ ದೇವಸ್ಥಾನದ ಪಕ್ಕದಲ್ಲಿ ಹೊಸದಾಗಿ ಪ್ರಾರಂಭವಾಗಿರುವುದೇ ಆಚಾರ್ಯ ಕೆಫೆ ಎಂಬ ಅತ್ಯದ್ಭುತ ಹೊಟೇಲ್. ಕೆ.ಆರ್ ರಸ್ತೆಯ ಪಕ್ಕದಲ್ಲಿ ಹಾದು ಹೋದರೆ, ಘೀ ಪುಡಿ ಮಸಾಲೆ ದೋಸೆಯ ಘಮ್ಮೆನ್ನುವ ಪರಿಮಳ ಎಂಥವರ ಬಾಯಲ್ಲೂ ನೀರು ತರಿಸುತ್ತದೆ. ಹೀಗೆ ಮಸಾಲೆಯ ಪರಿಮಳಕ್ಕೆ ಮನಸೋತು ʻಆಚಾರ್ಯ ಕೆಫೆʼಯ ಒಳಗೆ ಹೆಜ್ಜೆಯಿಟ್ಟರೆ ಟೆಂಪಲ್ ವೈಬ್ಸ್ ಹಾಗೂ ಟ್ರೆಡಿಷನಲ್ ಆಂಬಿಯನ್ಸ್‌ಗೆ ಮನಸೋಲದೇ ಇರಲಾಗದು. ಎದುರಿಗೆ ಕಾಣಸಿಗುವ ರಾಯರ ಮೂರ್ತಿ, ಶ್ರೀಕೃಷ್ಣನ ಕಲಾಕೃತಿಯಂತೂ ದೇಗುಲದಲ್ಲೇ ಇರುವ ಅನುಭವವನ್ನು ನೀಡುತ್ತದೆ. ಅಚ್ಚುಕಟ್ಟಾಗಿರುವ ಸೀಟಿಂಗ್ ವ್ಯವಸ್ಥೆಯ ನೋಡುವುದೇ ಕಣ್ಣಿಗೆ ಹಬ್ಬ. ಓಪನ್ ಕಿಚನ್ ಇಲ್ಲಿರುವುದರಿಂದ ಕ್ವಾಲಿಟಿಯ ಬಗ್ಗೆಯಂತೂ ಚಿಂತಿಸಬೇಕಾಗಿಯೇ ಇಲ್ಲ.

ಬ್ರೇಕ್‌ಫಾಸ್ಟ್ ಬೆಸ್ಟ್
ಬೆಳಗ್ಗೆ 7 ಗಂಟೆಯಿಂದಲೇ ಆಚಾರ್ಯ ಕೆಫೆಯಲ್ಲಿ ರುಚಿಕರವಾದ ಬಿಸಿಬಿಸಿ ಬ್ರೇಕ್‌ಫಾಸ್ಟ್ ಲಭ್ಯವಾಗುತ್ತದೆ. ಘೀ ಪುಡಿ ಮಸಾಲೆ ದೋಸೆ ಇಲ್ಲಿ ಬಹು ಬೇಡಿಕೆಯನ್ನು ಪಡೆದಿರುವ ಐಟಂ. ಅದಕ್ಕೆ ಹೊರತಾಗಿ ವೆರೈಟಿ ದೋಸೆಗಳು, ಪೂರಿ ಸಾಗು, ಇಡ್ಲಿ ವಡಾ, ಶಾವಿಗೆ ಉಪ್ಪಿಟ್ಟು, ಸಕ್ರೆ ಪೊಂಗಲ್ ಹೀಗೆ ಬೆಸ್ಟ್ ಆಪ್ಶನ್‌ಗಳಿವೆ. ಸ್ಪೆಷಲ್ ಬ್ರೇಕ್‌ಫಾಸ್ಟ್ ಆದಮೇಲೆ ಇಲ್ಲಿ ಸಿಗುವ ಹೊಗೆಯಾಡುವ ಬಿಸಿ ಬಿಸಿ ಫಿಲ್ಟರ್ ಕಾಫಿ ಕುಡಿಯದೇ ಹೋದರೆ ಬೆಳಗಿನ ಉಪಹಾರ ಪೂರ್ಣವೆನಿಸದು.
ಸೌತ್ ಹಾಗೂ ಆಂಧ್ರ ಮೀಲ್ಸ್
ಸುಡು ಬಿಸಿಲಿನಲ್ಲಿ ದಣಿದು ಮಧ್ಯಾಹ್ನದ ಊಟಕ್ಕಾಗಿ ಆಚಾರ್ಯ ಕೆಫೆಗೆ ನೀವು ಬರುವಿರಾದರೆ ಸೌತ್ ಇಂಡಿಯನ್ ಮೀಲ್ಸ್ ಹಾಗೂ ಆಂಧ್ರ ಮೀಲ್ಸ್ ನಿಮ್ಮನ್ನು ಸ್ವಾಗತಿಸುತ್ತದೆ. ಇಲ್ಲಿ 99 ರು. ಗೆ ಬಟ್ಟಲು ಪೂರ್ತಿ ಸಿಗುವ ಆರೋಗ್ಯಕರ ಥಾಲಿಯನ್ನು ಒಮ್ಮೆ ರುಚಿ ನೋಡಲೇ ಬೇಕು. ಅಲ್ಲದೆ ರೋಟಿ ವಿತ್ ವೆಜ್ ಕೊಲ್ಹಾಪುರಿಗಂತೂ ಮಧ್ಯಾಹ್ನ ಹಾಗೂ ರಾತ್ರಿಯ ಊಟದ ವೇಳೆಯಲ್ಲೂ ಹೈ ಡಿಮ್ಯಾಂಡ್ ಇದೆ. ಅಕ್ಕಿ ರೊಟ್ಟಿ ಊಟಕ್ಕಾಗಿಯೇ ಇಲ್ಲಿಗೆ ಭೇಟಿ ನೀಡುವ ಗ್ರಾಹಕರ ಸಂಖ್ಯೆಯೂ ಹೆಚ್ಚುತ್ತಲೇ ಇದೆ. ಚೈನೀಸ್ ಫುಡ್ ಬೇಕೆನ್ನುವ ಮಂದಿ ಇಂದಿನ ದಿನಗಳಲ್ಲಿ ಹೆಚ್ಚಿಗೆ ಇರುವುದರಿಂದ ವಿಭಿನ್ನವಾದ ಚೈನೀಸ್ ಡಿಶ್‌ಗಳನ್ನೂ ಇಲ್ಲಿ ಟೇಸ್ಟ್ ಮಾಡಬಹುದು.

ಖುಷಿಯ ವಿಚಾರವೇನು ಗೊತ್ತಾ? ಬೆಳಗ್ಗೆ 7ಕ್ಕೆ ತೆರೆಯುವ ಹೊಟೇಲ್ ಮಧ್ಯರಾತ್ರಿ 1 ಗಂಟೆಯವರೆಗೂ ಆಚಾರ್ಯ ಗ್ರಾಹಕರನ್ನು ಸ್ವಾಗತಿಸುತ್ತಲೇ ಇರುತ್ತದೆ. ಅಲ್ಲದೆ ತಾಜಾ ಆಹಾರವನ್ನು ಉಣಬಡಿಸುತ್ತದೆ. ಇನ್ಯಾಕೆ ತಡ, ಆಚಾರ್ಯಕ್ಕೊಮ್ಮೆ ಹೋಗಿಬನ್ನಿ.
ವಿಳಾಸ: ಹೆಚ್‌ಡಿಎಫ್‌ಸಿ ಬ್ಯಾಂಕ್ ಮುಂಭಾಗ, 493/ಕೆ, ಕೃಷ್ಣ ರಾಜೇಂದ್ರ ರಸ್ತೆ, 7ನೇ ಬ್ಲಾಕ್, ಜಯನಗರ, ಬೆಂಗಳೂರು,ಕರ್ನಾಟಕ 560070