ದುಬೈ ಹೂಡಿಕೆಗೆ ಪರ್ವ ಗ್ರೂಪ್ ನಿಂದ ಬೆಂಗಳೂರಲ್ಲಿ ಎಕ್ಸ್‌ಪೋ
ನೀಲೆಶ್ ಹಾಗೂ ಶಶಿಧರ ಅವರು ಸ್ಥಾಪಿಸಿರುವ ಪರ್ವ ಗ್ರೂಪ್‌ನ ಅಂಗಸಂಸ್ಥೆಯಾಗಿರುವ ಪರ್ವ ರಿಯಾಲಿಟಿಯಿಂದ ಈ ಅಭಿಯಾನವನ್ನು ಆಯೋಜಿಸಲಾಗಿದೆ. ಬೆಂಗಳೂರಿನಲ್ಲಿ ಆಯೋಜಿಸಿರುವ ‘ದುಬೈ ಪ್ರಾಪರ್ಟಿ ರೋಡ್ ಶೋ’ದಲ್ಲಿ ದುಬೈನಲ್ಲಿ ಹೂಡಿಕೆದಾರರಿಗೆ ಇರುವ ಅವಕಾಶ? ಎಷ್ಟು ಪ್ರಮಾಣದಲ್ಲಿ ಹೂಡಿಕೆ ಮಾಡಿದರೆ ಉತ್ತಮ ಲಾಭಾಂಶ ಸಿಗಲಿದೆ? ಖರೀದಿಸಿದ ಫ್ಲಾಟ್ ಅಥವಾ ಪ್ರಾಪರ್ಟಿಗಳ ಬಾಡಿಗೆಯಿಂದ ಬರುವ ಲಾಭವೆಷ್ಟು? ವಾಪಸು ಮಾರಬೇಕೆಂದರೆ ಇರುವ ಅವಕಾಶಗಳೇನು ಎನ್ನುವ ವಿಷಯದ ಬಗ್ಗೆ ವಿಶೇಷ ಸಂವಾದವನ್ನು ಹಮ್ಮಿಕೊಳ್ಳಲಾಗಿದೆ.
ವಿಶ್ವದ ಅತಿ ಸುರಕ್ಷಿತ ದೇಶ ಹಾಗೂ ವಿಶ್ವದ ಬಹುತೇಕ ರಾಷ್ಟ್ರದ ಜನರಿರುವ ದೇಶ ಎನಿಸಿರುವ ದುಬೈನಲ್ಲಿ ಹೂಡಿಕೆ ಮಾಡಲು ಉತ್ಸಾಹವಿದ್ದರೂ, ಸರಿಯಾದ ದಾರಿ ಕಾಣದೇ ಸುಮ್ಮನಿರುವ ರಾಜ್ಯದ ಜನರಿಗೆ ಇದೀಗ ದುಬೈನಲ್ಲಿನ ಹೂಡಿಕೆಗೆ ‘ಸುರಕ್ಷಿತ’ ಗೇಟ್‌ವೇ ಒಂದು ಸಿಕ್ಕಿದೆ.
ಹೌದು, ರಾಜ್ಯದ ಇಬ್ಬರು ಯುವ ಉತ್ಸಾಹಿ ಉದ್ದಿಮೆದಾರರು ಆರಂಭಿಸಿರುವ ಪರ್ವ ಗ್ರೂಪ್ ಇದೀಗ ಬೆಂಗಳೂರಿನ ತಾಜ್‌ವೆಸ್ಟ್ ಎಂಡ್‌ನಲ್ಲಿ ಎರಡು ದಿನಗಳ ಎಕ್ಸ್‌ಪೋವನ್ನು ಆಯೋಜಿಸಿದ್ದು, ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಹೂಡಿಕೆ ಮಾಡುವವರಿಗೆ ಹತ್ತಾರು ಸೌಲಭ್ಯ ಹಾಗೂ ರಿಯಾಯಿತಿಯನ್ನು ನೀಡುವುದಾಗಿ ಪರ್ವ ಗ್ರೂಪ್ ಘೋಷಿಸಿದೆ. ದುಬೈನ ರೇರಾ ಏಜೆನ್ಸಿಯಿಂದ ಪರ್ವ ಗ್ರೂಪ್‌ಗೆ ಅಧಿಕೃತ ಮಾನ್ಯತೆ ಸಿಕ್ಕಿರುವುದರಿಂದ ಕಾನೂನಾತ್ಮಕವಾಗಿ ಯಾವುದೇ ಸಮಸ್ಯೆಯಿಲ್ಲ.
ನೀಲೆಶ್ ಹಾಗೂ ಶಶಿಧರ ಅವರು ಸ್ಥಾಪಿಸಿರುವ ಪರ್ವ ಗ್ರೂಪ್‌ನ ಅಂಗಸಂಸ್ಥೆಯಾಗಿರುವ ಪರ್ವ ರಿಯಾಲಿಟಿಯಿಂದ ಈ ಅಭಿಯಾನವನ್ನು ಆಯೋಜಿಸಲಾಗಿದೆ. ಬೆಂಗಳೂರಿನಲ್ಲಿ ಆಯೋಜಿಸಿರುವ ‘ದುಬೈ ಪ್ರಾಪರ್ಟಿ ರೋಡ್ ಶೋ’ದಲ್ಲಿ ದುಬೈನಲ್ಲಿ ಹೂಡಿಕೆದಾರರಿಗೆ ಇರುವ ಅವಕಾಶ? ಎಷ್ಟು ಪ್ರಮಾಣದಲ್ಲಿ ಹೂಡಿಕೆ ಮಾಡಿದರೆ ಉತ್ತಮ ಲಾಭಾಂಶ ಸಿಗಲಿದೆ? ಖರೀದಿಸಿದ ಫ್ಲಾಟ್ ಅಥವಾ ಪ್ರಾಪರ್ಟಿಗಳ ಬಾಡಿಗೆಯಿಂದ ಬರುವ ಲಾಭವೆಷ್ಟು? ವಾಪಸು ಮಾರಬೇಕೆಂದರೆ ಇರುವ ಅವಕಾಶಗಳೇನು ಎನ್ನುವ ವಿಷಯದ ಬಗ್ಗೆ ವಿಶೇಷ ಸಂವಾದವನ್ನು ಹಮ್ಮಿಕೊಳ್ಳಲಾಗಿದೆ.

ಈಗಾಗಲೇ ನೋಂದಣಿ ಕಾರ್ಯ ಆರಂಭವಾಗಿದ್ದು, ಜೂ.20ರಂದು 10 ಲಕ್ಷ ಪಾವತಿಸುವುದರೊಂದಿಗೆ ಎಕ್ಸ್‌ಪ್ರೆಷನ್ ಆಫ್ ಇಂಟರೆಸ್ಟ್‌ಗೆ ಸಹಿ ಹಾಕಬೇಕಿದೆ. ಬಳಿಕ 2 ಬಿಎಚ್‌ಕೆ ಅಥವಾ ಅದಕ್ಕಿಂತ ದೊಡ್ಡ ಫ್ಲಾಟ್ ಖರೀದಿಗೆ, ಖರೀದಿ ಮೊತ್ತದ ಶೇ.24ರಷ್ಟು ಹಣವನ್ನು ದಿನಾಂಕ 23, 24ರಂದು ಪಾವತಿಸಬೇಕು. ಬಳಿಕ ಒಟ್ಟು ಮೌಲ್ಯದ ಶೇ.40ರಷ್ಟು ಹಣವನ್ನು ಪಾವತಿಸಬೇಕು. ಜೂನ್ 26, 27ರಂದು ಕೌಂಟ್ ಡೌನ್ ಇರಲಿದ್ದು, 28ರಂದು ಬೆಂಗಳೂರಿನ ತಾಜ್ ವೆಸ್ಟ್ ಎಂಡ್‌ನಲ್ಲಿ ಎಕ್ಸ್‌ಪೋ ನಡೆಯಲಿದೆ.
ಎರಡು ದಿನ ಆಪ್ತ ಸಮಾಲೋಚನೆ
ಬೆಂಗಳೂರಿನ ತಾಜ್ ವೆಸ್ಟ್ ಎಂಡ್‌ನಲ್ಲಿ 28 ಹಾಗೂ 29ರಂದು ಪರ್ವ ರಿಯಾಲ್ಟಿಯ ತಜ್ಞರ ತಂಡ ಲಭ್ಯವಿರಲಿದೆ. ಈ ತಂಡ ದುಬೈನಲ್ಲಿ ಹೂಡಿಕೆಗೆ ಸಂಬಂಧಿಸಿದಂತೆ ಇರುವ ಹಲವು ಅನುಮಾನಗಳಿಗೆ ಸೂಕ್ತ ಮಾರ್ಗದರ್ಶನ ಹಾಗೂ ಸಲಹೆಯನ್ನು ನೀಡಲಿದೆ.
ಬಾಕ್ಸ್
10 ವರ್ಷ ಉಚಿತ ದುಬೈ ಗೋಲ್ಡ್ ವೀಸಾ ಸೌಲಭ್ಯ
ಇನ್ನು ಪರ್ವ ಗ್ರೂಪ್ ಆಯೋಜಿಸಿರುವ ಈ ಎಕ್ಸ್‌ಪೋದಲ್ಲಿ ಭಾಗವಹಿಸಿ, ಮನೆ ಅಥವಾ ಭೂಮಿ ಖರೀದಿ ಮಾಡಿದರೆ 10 ವರ್ಷದ ಅವಧಿಗೆ ದುಬೈನ ಗೋಲ್ಡ್ ವೀಸಾವನ್ನು ನೀಡಲಾಗುತ್ತಿದೆ. ಈ ವೀಸಾವನ್ನು ಪಡೆದರೆ ಇತರೆ ವೀಸಾಗಳಿಗೆ ಇರುವ ಹಲವು ನಿರ್ಬಂಧಗಳಿರುವುದಿಲ್ಲ. ದುಬೈನಲ್ಲಿ ಹೂಡಿಕೆ ಮಾಡಲು, ಕುಟುಂಬ ಸದಸ್ಯರಿಗೆ ವೀಸಾ ಪಡೆಯಲು, ಸೌದಿ ರಾಷ್ಟ್ರಗಳಿಗೆ ಹೋಗಲು ಸೇರಿದಂತೆ ಹಲವು ಲಾಭಗಳಿವೆ. ದುಬೈ ಗೋಲ್ಡ್ ವೀಸಾದೊಂದಿಗೆ 10 ಗ್ರಾಮ್ ಬಂಗಾರ, ದುಬೈಗೆ ಮೂರು ದಿನ ಪ್ರವಾಸ ಸೇರಿದಂತೆ ಹಲವು ಸೌಲಭ್ಯಗಳನ್ನು ನೀಡಲಾಗುತ್ತಿದೆ.
ಪರ್ವ ಗ್ರೂಪ್
ಕೆಲ ವರ್ಷಗಳ ಹಿಂದೆ ದುಬೈನಲ್ಲಿಸ್ಥಾಪನೆಯಾಗಿರುವ ಪರ್ವ ಗ್ರೂಪ್ ಸಮೂಹ ಸಂಸ್ಥೆಯಾಗಿದೆ. ಇದರಲ್ಲಿ, ರಿಯಲ್ ಎಸ್ಟೇಟ್, ಆನ್‌ಲೈನ್ ಫೊರೆಕ್ಸ್ ಮತ್ತು ಕಮಾಡಿಟಿ ಟ್ರೇಡಿಂಗ್, ಇವೆಂಟ್ ಮ್ಯಾನೇಜ್‌ಮೆಂಟ್, ಸೆಕ್ಯುರಿಟಿ ಸೇವೆ ಮತ್ತು ಫಿಲ್ಮ್ ಆರ್ಟ್ ಮತ್ತು ತಂತ್ರಜ್ಞಾನ ತರಬೇತಿಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದೆ. ವಿಶ್ವಾದ್ಯಂತ ಗ್ರಾಹಕರನ್ನು ಒಳಗೊಂಡಿರುವ ಪರ್ವ ಗ್ರೂಪ್‌ನಲ್ಲಿ ಪ್ರತಿಯೊಂದು ಕ್ಷೇತ್ರಕ್ಕೂ ಪ್ರತ್ಯೇಕ ಸಂಸ್ಥೆಗಳು ಸೇವೆ ನೀಡುತ್ತಿವೆ.
ಇನ್ನು ಈ ಸಮೂಹದ ಮತ್ತೊಂದು ವಿಶೇಷತೆ ಎಂದರೆ, ಇದನ್ನು ಕರ್ನಾಟಕ ಮೂಲದ ಉದ್ಯಮಿಗಳೇ ಕಟ್ಟಿರುವ ಸಂಸ್ಥೆಯಾಗಿದೆ. ಕರ್ನಾಟಕದ ಉದ್ಯಮಿಗಳಾದ ನೀಲೆಶ್ ಹಾಗೂ ಶಶಿಧರ್ ನಾಗರಾಜಪ್ಪ ಅವರು ಪರ್ವ ಗ್ರೂಪಿನ ಸಂಸ್ಥಾಪಕರಾಗಿದ್ದಾರೆ. ಈ ಇಬ್ಬರು ಯುವ ಉತ್ಸಾಹಿ ಉದ್ಯಮಿಗಳ ನೇತೃತ್ವದಲ್ಲಿ ಪರ್ವ ಗ್ರೂಪ್, ವಿಶೇಷ ಎನಿಸುವ ಸೇವೆಯನ್ನು ಹೂಡಿಕೆದಾರರಿಗೆ ನೀಡುತ್ತಿದೆ. ನವೀನ ಸಂಶೋಧನೆ, ನುರಿತ ವೃತ್ತಿಪರ ಅನುಭವ ಗ್ರಾಹಕ ಕೇಂದ್ರಿತ ಸೇವೆಗಳ ಮೂಲಕ ಪರ್ವ ಗ್ರೂಪ್ ಹಲವಾರು ಹೂಡಿಕೆದಾರರ ವಿಶ್ವಾಸ ಗಳಿಸಿದೆ ಜನಮನ್ನಣೆ ಗಳಿಸಿದೆ.

ಗ್ರಾಹಕರಿಗೆ ಸಿಗುವ ಸೌಲಭ್ಯಗಳೇನು?
* 10 ವರ್ಷದ ಅವಧಿಗೆ ಶೇ.10ರಷ್ಟು ಬಾಡಿಗೆ ಆದಾಯ ನಿಶ್ಚಿತ
* ವಾಪಸು ಖರೀದಿಗೆ ಶೇ.100ರಷ್ಟು ಖರೀದಿಯ ಗ್ಯಾರಂಟಿ
* ಪಾವತಿಯ ವಿಶೇಷ ಯೋಜನೆಗಳು ಲಭ್ಯ
* ಶೂನ್ಯ ಆದಾಯ ತೆರಿಗೆ
* ಶೇ.8ರಿಂದ 15ರಷ್ಟು ಬಾಡಿಗೆ ವಾಪಸಿನ ಭರವಸೆ
ಯಾವೆಲ್ಲ ಸಂಸ್ಥೆಗಳು ಭಾಗಿ
* ಡಮ್ಯಾಕ್
* ಆಝೀಜಿ
* ಶೋಭಾ ರಿಯಾಲಿಟಿ
* ಡನ್ಯೂಬ್ ಪ್ರಾಪರ್ಟಿಸ್
* ಸಮನ ಡೆವಲಪರ್ಸ್
* ಎಮ್ಮಾರ್
ಪರ್ವ ಗ್ರೂಪ್‌ನ ಸಹಸಂಸ್ಥೆೆಗಳು
* ಪರ್ವ ರಿಯಾಲಿಟಿ
* ಡಿಯಾಗೊ ಫೈನಾನ್ಸ್
* ಪರ್ವ ಇವೆಂಟ್ಸ್
* ಗ್ರೇ ಟೈಗರ್ಸ್ ಸೆಕ್ಯೂರಿಟಿ
* ಫಿಲ್ಮ್ ಆರ್ಟ್ ಮತ್ತು ತಂತ್ರಜ್ಞಾನ ತರಬೇತಿ