Wednesday, February 4, 2026
Wednesday, February 4, 2026

ಪರಮಾತ್ಮ ಸಿನಿಮಾ ನೋಡಿ ಹೋಮ್‌ಸ್ಟೇ ಕಟ್ಟಿದ MYಸೂರು ಯುವಕ

ಮೈಕೈ ಮುರಿಯುತ್ತಾ,ಜೋರಾಗಿ ಆಕಳಿಸುತ್ತಾ ನಿದ್ದೆಗಣ್ಣಿನಿಂದ ಎದ್ದು ಹೊರಗೆ ಬಂದರೆ ಕೆಆರ್‌ಎಸ್‌ ಹಿನ್ನೀರು ಶಾಂತವಾಗಿ ಹರಿಯುತ್ತಿರುತ್ತದೆ. ಕಣ್ಣು ನೆಟ್ಟಷ್ಟು ದೂರಕ್ಕೂ ನೀರು. ಜೋಗುಳ ಹಾಡುವ ಗಾಳಿ, ಕಣ್ಣು ಹೊಡೆಯುವ ಕೆಂಬಣ್ಣದ ಸೂರ್ಯ, ಶುದ್ದ ಹಳ್ಳಿ ವಾತಾವರಣ. ನಗರದ ಸದ್ದು ಗದ್ದಲವಿಲ್ಲ. ಜಂಜಾಟವೂ ಇಲ್ಲ. ಅಮ್ಮನ ಕೈರುಚಿಯ ಊಟ ಮತ್ತು ಸ್ವಂತ ಮನೆಯವರಂತೆಯೇ ನೋಡಿಕೊಳ್ಳುವ ಸಿಬ್ಬಂದಿ. ಇಷ್ಟು ಸಾಕಲ್ಲವೇ ಒಂದು ಹೋಮ್‌ಸ್ಟೇನಲ್ಲಿ ಜಗದ ಗೊಡವೆಗಳೆಲ್ಲವನ್ನು ಮರೆತು ಸ್ಟೇ ಆಗಲು?

ʼಪರಮಾತ್ಮ ಸಿನಿಮಾ ನೋಡಿದಾಗಿನಿಂದ ಒಂದು ಕನಸಿತ್ತು. ಆ ಸಿನಿಮಾದಲ್ಲಿರುವ ಕಂಬದ ಮನೆ ಮತ್ತು ಅಂಥದ್ದೇ ವಾತಾವರಣವಿರುವ ಒಂದು ಹೋಮ್‌ಸ್ಟೇ ಕಟ್ಟಬೇಕು ಅಂತ. ಆ ಕನಸು ಕೋವಿಡ್‌ ದಿನಗಳಲ್ಲಿ ನನಸಾಯಿತು. ಯಾವ ಬಿಲ್ಡರ್‌ ಕೈಯಲ್ಲೂ ಕಟ್ಟಿಸದೆ, ಎಂಜಿನಿಯರ್‌ ಪ್ಲಾನ್‌ ಇಲ್ಲದೆ ಈ ಹೋಮ್‌ಸ್ಟೇಯನ್ನು ಸ್ವತಃ ನಾನು, ಕುಟುಂಬಸ್ಥರು ಮತ್ತು ಸ್ನೇಹಿತರು ಜತೆ ಸೇರಿಕೊಂಡು ಕಟ್ಟಿದ್ದೇವೆʼ ತಮ್ಮ ಕನಸಿನ ಕೂಸಾದ ರಾಕಿಸ್‌ ಹೋಮ್‌ಸ್ಟೇ ಅಂಗಳದಲ್ಲಿ ನಿಂತುಕೊಂಡು ಹೀಗೆ ಮಾತನಾಡುತ್ತಾರೆ ರಾಕೇಶ್.‌ ಡಾ. ರಾಕೇಶ್‌ ಸಿ ಅವರು ರಾಕಿಸ್‌ ಹೋಮ್‌ಸ್ಟೇ ಮಾಲೀಕ. ಹೈಸ್ಕೂಲ್‌ ಮತ್ತು ಕಾಲೇಜು ದಿನಗಳಲ್ಲಿ ಮೈಸೂರಿನ ಮೀನಾಕ್ಷಿಪುರಂ ಬ್ಯಾಕ್ ವಾಟರ್‌ನಲ್ಲಿ ತಮ್ಮ ಗೆಳೆಯರ ಬರ್ತ್‌ಡೇ ಸೆಲಿಬ್ರೇಷನ್‌ ಮತ್ತು ಪಾರ್ಟಿಗಳಿಗೆ ಹೋಗುತ್ತಿದ್ದ ಹುಡುಗ ಅಂದೇ ಹೋಮ್‌ಸ್ಟೇ ಕಟ್ಟುವ ಕನಸು ಕಂಡಿದ್ದ. ತಾನೇ ತಂದಿಟ್ಟುಕೊಂಡ ಕನಸನ್ನು ನಿರಂತರವಾಗಿ ಹಿಂಬಾಲಿಸಿದ. ಪರಮಾತ್ಮ ಸಿನಿಮಾ ನೋಡಿದ ಮೇಲೆ ತನ್ನ ಹೋಮ್‌ಸ್ಟೇನ ಬ್ಲೂ ಪ್ರಿಂಟ್‌ ಸಿದ್ಧಪಡಿಸಿಕೊಂಡ. ರಾಕೇಶ್‌ ಅವರಿಗೆ ನೀರಿರುವ ಜಾಗದಲ್ಲಿಯೇ ಒಂದು ಹೋಮ್‌ಸ್ಟೇ ಕಟ್ಟಬೇಕೆಂಬ ತುಡಿತವಿತ್ತು.

ಇದನ್ನೂ ಓದಿ: ಕಹಳೆ ಫಿಲ್ಟರ್ ಕಾಫಿ ಬಾರ್

ಅದೃಷ್ಟವೋ ಅಥವಾ ಆಕಸ್ಮಿಕವೋ ಎಂಬಂತೆ ಅವರ ತಂದೆ ಕೆಆರ್‌ಎಸ್‌ ಹಿನ್ನೀರು ಹರಿಯುವ ಜಾಗದಲ್ಲಿಯೇ ವಿಶಾಲವಾದ ಜಮೀನು ಖರೀದಿಸಿದರು. ತಾವೇ ವಾಸಿಸಲು ಒಂದು ಫಾರ್ಮ್‌ ಹೌಸ್‌ ಕಟ್ಟಿದರು. 2019-20 ಕೋವಿಡ್‌ ಮತ್ತು ಲಾಕ್‌ಡೌನ್‌ ಬಾಧಿಸುತ್ತಿದ್ದ ದಿನಗಳು. ಆಗಲೇ ಫಾರ್ಮ್‌ ಹೌಸ್‌ ಅನ್ನು ಹೋಮ್‌ಸ್ಟೇ ಆಗಿ ಬದಲು ಮಾಡುವ ಕೆಲಸಕ್ಕೆ ನಿಂತರು. ಸ್ನೇಹಿತರು ಮತ್ತು ಕುಟುಂಬಸ್ಥರನ್ನು ಕಟ್ಟಿಕೊಂಡು ಒಬ್ಬ ಗಾರೆ ಮೇಸ್ತ್ರಿಯ ಕೈ ಆಳುಗಳಾಗಿ ಸ್ವತಃ ತಾವೇ ಸಿಮೆಂಟು ಬಳಿದರು. ಇಟ್ಟಿಗೆ ಕಟ್ಟಿದರು. ಹೋಮ್‌ಸ್ಟೇಯಲ್ಲಿ ಬಳಕೆಯಾಗಿರುವ ಪ್ರತಿ ಹಂಚಿಗೂ ಬಣ್ಣ ಬಳಿದರು. ಶುದ್ಧ ಹಳ್ಳಿ ವೈಬ್‌ನ ಹೋಮ್‌ಸ್ಟೇ ಸಿದ್ಧವಾಯಿತು. ತಮ್ಮ ಹೆಸರನ್ನೇ ಬ್ರಾಂಡ್‌ ಆಗಿಸುವ ಸಲವಾಗಿ ರಾಕೇಶ್‌ ತಮ್ಮ ಕನಸಿನ ಕೂಸಿಗೆ ರಾಕಿಸ್‌ ಹೋಮ್‌ಸ್ಟೇ ಎಂದೇ ನಾಮಕರಣ ಮಾಡಿದರು. ʼಹಣವಷ್ಟೇ ಅಲ್ಲ. ನನ್ನದೇ ಬೆವರನ್ನು ಸುರಿಸಿ ಕಟ್ಟಿರುವ ಹೋಮ್‌ಸ್ಟೇ ಇದು ಎಂಬ ಖುಷಿ ಮತ್ತು ಆತ್ಮತೃಪ್ತಿಯಿದೆʼ ಎನ್ನುತ್ತಾರೆ ರಾಕೇಶ್.‌

ಫೀಲ್‌ ಲೈಕ್‌ ಎ ಹೋಮ್

New Project - 2026-01-31T153748.618

‌’Feel Like a home’ ಇದು ರಾಕಿಸ್‌ ಹೋಮ್‌ ಸ್ಟೇ ಟ್ಯಾಗ್‌ಲೈನ್.‌ ಇಲ್ಲಿಗೆ ಬರುವ ಪ್ರತಿಯೊಬ್ಬರೂ ಅತಿಥಿಗಳಾಗಿ ಬಂದು ಕೊನೆಗೆ ಹೋಗುವಾಗ ಮನೆಯವರಂತೆ ಬೆರೆತು ಹೋಗುತ್ತಾರೆ. ರಾಕೇಶ್‌ ಅವರ ಆಪ್ತತೆ ಮತ್ತು ಆತಿಥ್ಯ ಹೋಮ್‌ಸ್ಟೇಗೆ ಬರುವ ಅತಿಥಿಗಳಲ್ಲಿ ಸಂತಸವನ್ನು ತಂದಿರುತ್ತದೆ. ರೆಸಾರ್ಟ್‌ ಕಲ್ಚರ್‌ ಅಷ್ಟೇ ಇದ್ದ ಮೈಸೂರಿನಲ್ಲಿ, ಅಷ್ಟಾಗಿ ಹೋಮ್‌ಸ್ಟೇಗಳಿಲ್ಲದ ಕಾಲದಲ್ಲಿ ಒಂದು ಸುಸಜ್ಜಿತವಾದ ಮತ್ತು ನೋಡುಗರನ್ನು ಆಕರ್ಷಿಸುವ ಹೋಮ್‌ಸ್ಟೇಯನ್ನು ಕಟ್ಟಿದ ಕೀರ್ತಿ ರಾಕೇಶ್‌ ಅವರದ್ದು. ಮೈಕೈ ಮುರಿಯುತ್ತಾ,ಜೋರಾಗಿ ಆಕಳಿಸುತ್ತಾ ನಿದ್ದೆಗಣ್ಣಿನಿಂದ ಎದ್ದು ಹೊರಗೆ ಬಂದರೆ ಕೆಆರ್‌ಎಸ್‌ ಹಿನ್ನೀರು ಶಾಂತವಾಗಿ ಹರಿಯುತ್ತಿರುತ್ತದೆ. ಕಣ್ಣು ನೆಟ್ಟಷ್ಟು ದೂರಕ್ಕೂ ನೀರು. ಜೋಗುಳ ಹಾಡುವ ಗಾಳಿ, ಕಣ್ಣು ಹೊಡೆಯುವ ಕೆಂಬಣ್ಣದ ಸೂರ್ಯ, ಶುದ್ದ ಹಳ್ಳಿ ವಾತಾವರಣ. ನಗರದ ಸದ್ದು ಗದ್ದಲವಿಲ್ಲ. ಜಂಜಾಟವೂ ಇಲ್ಲ. ಅಮ್ಮನ ಕೈರುಚಿಯ ಊಟ ಮತ್ತು ಸ್ವಂತ ಮನೆಯವರಂತೆಯೇ ನೋಡಿಕೊಳ್ಳುವ ಸಿಬ್ಬಂದಿ. ಇಷ್ಟು ಸಾಕಲ್ಲವೇ ಒಂದು ಹೋಮ್‌ಸ್ಟೇನಲ್ಲಿ ಜಗದ ಗೊಡವೆಗಳೆಲ್ಲವನ್ನು ಮರೆತು ಸ್ಟೇ ಆಗಲು? ರಾಕಿಸ್‌ ಹೋಮ್ ಸ್ಟೇಯಲ್ಲಿ ಇದೆಲ್ಲಾ ಇದೆ. ಹೋಮ್‌ಸ್ಟೇಯಿಂದ ಹತ್ತಾರು ಹೆಜ್ಜೆಯಿಟ್ಟರೆ ಸಾಕು ಕೆಆರ್‌ಎಸ್‌ ಹಿನ್ನೀರನ್ನು ಕಣ್ತುಂಬಿಕೊಳ್ಳಬಹುದು. ಸೂರ್ಯೋದಯ ಮತ್ತು ಸೂರ್ಯಾಸ್ತವನ್ನು ಸಂಭ್ರಮಿಸಬಹುದು. ಕೋಗಿಲೆಯ ಗಾನ ಮತ್ತು ನವಿಲುಗಳ ನೃತ್ಯ ಕಂಡು ಮುದಗೊಳ್ಳಬಹುದು. ರಾಕೇಶ್‌ ಅವರು ತಮ್ಮ ಇಡೀ ಹೋಮ್‌ಸ್ಟೇನಲ್ಲಿ ಒಂದು ದೇಸಿತನವನ್ನು ಬಿತ್ತಿದ್ದಾರೆ. ಇಂಚು ಇಂಚನ್ನೂ ಚಂದಗಾಣಿಸಿದ್ದಾರೆ.

ರಾಕಿಸ್‌ನಲ್ಲಿ ಏನೆಲ್ಲಾ ಇದೆ?

New Project - 2026-01-31T153627.905

ಹೋಮ್‌ಸ್ಟೇಯಲ್ಲಿ ಸ್ಟೇ ಆಗಬೇಕೆಂದರೆ ಬೆಸ್ಟ್‌ ಕಾರಣಗಳಿರಲೇಬೇಕು. ರಾಕಿಸ್‌ ಹೋಮ್‌ಸ್ಟೇ ನಲ್ಲಿ ಉಳಿಯಲು ಒಂದಷ್ಟು ಕಾರಣಗಳಿವೆ. ವಿಶಾಲವಾದ ಜಾಗ ಮತ್ತು ಶಾಂತಿಯುತ ಪರಿಸರ. ಹಳ್ಳಿಯ ವಾತಾವರಣ. ಈ ಮೊದಲೇ ಹೇಳಿದಂತೆ ಕೆಆರ್‌ಎಸ್‌ ಹಿನ್ನೀರು ಹರಿಯುವ ಜಾಗ ಎಂಬ ಕಾರಣವೊಂದೇ ಸಾಕು. ಕ್ಯಾಂಪ್‌ ಫೈರ್‌ ಇದೆ. ಬರ್ತ್‌ಡೇ ಪಾರ್ಟಿ, ನ್ಯೂಇಯರ್‌ ಪಾರ್ಟಿ, ಸಕ್ಸಸ್‌ ಪಾರ್ಟಿಗಳಿಗೆ ಹೇಳಿ ಮಾಡಿಸಿದ ಹೋಮ್‌ಸ್ಟೇ. ಮೈಸೂರಿಗೆ ಪ್ರವಾಸಕ್ಕೆ ಬಂದವರೂ ಇಲ್ಲಿ ಆರಾಮವಾಗಿ ವಾಸ್ತವ್ಯ ಹೂಡಬಹುದು. ಸ್ವಿಮ್ಮಿಂಗ್‌ ಪೂಲ್‌ ಇದೆ. ಟೇಬಲ್‌ ಟೆನಿಸ್‌, ಬ್ಯಾಡ್ಮಿಟನ್‌, ಕೇರಂ ಸೇರಿದಂತೆ ಹತ್ತಾರು ಒಳಾಂಗಣ ಮತ್ತು ಹೊರಾಂಗಣ ಆಟವಾಡಲು ಅವಕಾಶವಿದೆ. ಮೈಸೂರು ನಗರದಿಂದ ಸ್ವಲ್ಪ ದೂರವಿದ್ದರೂ ಇಲ್ಲಿಗೆ ಹೈದರಾಬಾದ್‌, ಅಸ್ಸಾಂ, ದೆಹಲಿ, ಕೇರಳ, ತಮಿಳುನಾಡು, ಇತ್ತ ಹಾಸನ, ಬೆಂಗಳೂರು ಮತ್ತು ಶಿವಮೊಗ್ಗದಿಂದ ಅತಿಥಿಗಳು ಬರುತ್ತಾರೆ. ಹೆಚ್ಚು ಪ್ರಚಾರವಿಲ್ಲದಿದ್ದರೂ ಇಲ್ಲಿ ಆತಿಥ್ಯ ಪಡೆಯುವ ಅತಿಥಿಗಳ ಮೌತ್‌ ಟು ಮೌತ್‌ ಪ್ರಚಾರದಿಂದಲೇ ಇಂದು ರಾಕಿಸ್‌ ಹೋಮ್‌ಸ್ಟೇ ಮೈಸೂರಿನಲ್ಲಿ ಪ್ರಸಿದ್ಧಿಪಡೆದಿದೆ. ಪ್ರತಿ ವೀಕೆಂಡ್‌ನಲ್ಲೂ ಇಲ್ಲಿ ಅತಿಥಿಗಳು ತುಂಬಿರುತ್ತಾರೆ. ತಮ್ಮ ವೀಕೆಂಡ್ ದಿನಗಳನ್ನು ಸಂಭ್ರಮ ಮತ್ತು ಸಡಗರದಿಂದ ಕಳೆಯುತ್ತಾರೆ.

ಅಮ್ಮನ ಕೈರುಚಿಯ ಗಮ್ಮತ್ತು

ರಾಕಿಸ್‌ ಹೋಮ್‌ಸ್ಟೇಗೆ ಬಂದು ಹೋದ ಅತಿಥಿಗಳೇ ಪದೇಪದೆ ಬರಲು ಕಾರಣವೊಂದಿದೆ. ಅದು ರಾಕೇಶ್‌ ಅವರ ಅಮ್ಮನ ಕೈರುಚಿಯ ಗಮ್ಮತ್ತು. ಮನೆಯಲ್ಲಿ ತಯಾರಿಸಿದ ಮಸಾಲೆ ಪದಾರ್ಥಗಳಿಂದ ರುಚಿಕಟ್ಟಾಗಿ ವೆಜ್‌ ಮತ್ತು ನಾನ್‌ವೆಜ್‌ ಅಡುಗೆ ಮಾಡಿ ಬಡಿಸುವ ರಾಕೇಶ್‌ ಅವರ ಅಮ್ಮ ಹೋಮ್‌ಸ್ಟೇಗೆ ಬರುವ ಅತಿಥಿಗಳ ಪಾಲಿನ ಅನ್ನಪೂರ್ಣೇಶ್ವರಿ. ಹದವಾದ ಮಸಾಲೆಯಿಂದ ಬಾಯಲ್ಲಿ ನೀರೂರಿಸುವಂಥ ರುಚಿಯಾದ ಅಡುಗೆ ಎಲ್ಲ ಅತಿಥಿಗಳನ್ನು ಆಕರ್ಷಿಸಿದೆ. ಪ್ರತಿಯೊಬ್ಬರೂ ಅಡುಗೆಯನ್ನು ಹೊಗಳುತ್ತಾರೆ. ನೂರಾರು ಅತಿಥಿಗಳು ಗೂಗಲ್‌ ರಿವ್ಯೂನಲ್ಲೂ ಫುಡ್‌ ಬಗ್ಗೆಯೇ ಒಳ್ಳೆಯ ರಿವ್ಯೂ ಬರೆದಿದ್ದಾರೆ. ಹೊಟ್ಟೆ ತುಂಬಾ ರುಚಿಯಾದ ಊಟ ಮತ್ತು ಉಳಿದುಕೊಳ್ಳಲು ಅಚ್ಚುಕಟ್ಟಾದ ಜಾಗ ಸಿಕ್ಕರೆ ಸಾಕಲ್ಲವೇ? ಅಲ್ಲಿ ಕೆಆರ್‌ಎಸ್‌ ಹಿನ್ನೀರು ಜುಳುಜುಳು ಹರಿಯುತ್ತಿದೆ. ಸೂರ್ಯ ಆಗಸಕ್ಕೆ ಮುತ್ತಿಡುತ್ತಿದ್ದಾನೆ. ಪಕ್ಷಿಗಳು ಗಾನಮೇಳ ಶುರುಮಾಡಿವೆ. ಅಮ್ಮನ ಅಡುಗೆಯ ಘಮ ಮೂಗಿಗೆ ಬಡಿಯುತ್ತಿದೆ. ನಿಮ್ಮ ಮುಂದಿನ ವೀಕೆಂಡ್‌ ಅನ್ನು ರಾಕಿಸ್‌ ಹೋಮ್‌ಸ್ಟೇನಲ್ಲಿ ಕಳೆಯುವುದನ್ನು ಮರೆಯಬೇಡಿ.

New Project - 2026-01-31T153543.913

ದಾರಿ ಹೇಗೆ?

ಬೆಂಗಳೂರು ಎಕ್ಸ್‌ಪ್ರೆಸ್‌ ಹೈವೇ ಮೂಲಕ ಮೈಸೂರು ತಲುಪಬೇಕು. ಶ್ರೀರಂಗಪಟ್ಟಣ ಮಾರ್ಗ ಮಧ್ಯೆ ದಾರಿ ಬದಲಾಯಿಸಿ, ಇಲವಾಲ ಮಾರ್ಗದಲ್ಲಿ ಹೋಮ್‌ಸ್ಟೇ ತಲುಪಬಹುದು. ಕೆಆರ್‌ಎಸ್‌ ಡ್ಯಾಮ್‌ನಿಂದ ಕೇವಲ ಐದು ಕಿಮೀ ದೂರದಲ್ಲಿದೆ. ಹಾಸನ ಮತ್ತು ಚಿಕ್ಕಮಗಳೂರು ಮಾರ್ಗವಾಗಿ ಬರುವವರೂ ಇಲವಾಲ ಮಾರ್ಗದಲ್ಲಿ ಹೋಗಬಹದು. ಸ್ವಂತ ಕಾರು ಮತ್ತು ಬೈಕುಗಳಿದ್ದರೆ ಪ್ರಯಾಣ ಸುಗಮ.

PP Rate: 4.5(STARS)

ವಿಳಾಸ ಮತ್ತು ಸಂಪರ್ಕ:
ರಾಕಿಸ್‌ ಹೋಮ್‌ಸ್ಟೇ
ಬೋರೆ ಆನಂದೂರು, ಇಲವಾಲ ಹೋಬಳಿ
ಮೈಸೂರು, ಕರ್ನಾಟಕ
PIN: 571130
PH: 8951671456

ಸ್ನೇಹಿತರ ಬರ್ತ್‌ಡೇ ಇದ್ದಾಗ ಮೀನಾಕ್ಷಿಪುರಂ ಬ್ಯಾಕ್ ವಾಟರ್‌ಗೆ ಹೋಗುತ್ತಿದ್ದೆವು. ಹೈಸ್ಕೂಲ್‌ ಮತ್ತು ಕಾಲೇಜು ದಿನಗಳಲ್ಲಿ ನನ್ನದೇ ಪರಿಕಲ್ಪನೆಯಲ್ಲಿ ಒಂದು ಹೋಮ್‌ಸ್ಟೇ ಮಾಡಬೇಕೆಂಬ ಕನಸು ಕಂಡಿದ್ದೆ. ಕೋವಿಡ್‌ ದಿನಗಳಲ್ಲಿ ನನ್ನ ಕನಸು ನನಸಾಯಿತು. ಗೆಳೆಯರು ಮತ್ತು ಕುಟುಂಬಸ್ಥರ ಒತ್ತಾಸೆ ಮತ್ತು ಪ್ರೋತ್ಸಾಹದಿಂದಾಗಿ ʼರಾಕಿಸ್‌ʼ ತಲೆಯೆತ್ತಿತು. ನಮ್ಮ ಹೋಮ್‌ಸ್ಟೇ ಪಕ್ಕದಲ್ಲೇ ಕೆಆರ್‌ಎಸ್‌ ಬ್ಯಾಕ್‌ ವಾಟರ್‌ ಹರಿಯುತ್ತದೆ. ನಮ್ಮ ಹೋಮ್‌ಸ್ಟೇಯ ಪ್ರಮುಖ ಆಕರ್ಷಣೆಯೇ ಅದು. ಮೈಸೂರಿನ ಪ್ರಸಿದ್ಧ ಪ್ರವಾಸಿ ತಾಣಗಳಿಗೂ ನಮ್ಮ ಹೋಮ್‌ಸ್ಟೇ ಸಮೀಪದಲ್ಲಿದೆ. ಸಾಂಪ್ರದಾಯಿಕ ಶೈಲಿಯ ಅಡುಗೆ, ಹಿತವಾದ ಮತ್ತು ಶಾಂತಿಯುತವಾದ ವಾತವಾರಣವಿರುವುದರಿಂದ ಆರಾಮವಾಗಿ ಇಲ್ಲಿ ವೀಕೆಂಡ್‌ ಕಳೆಯಬಹುದು.

-ಡಾ. ರಾಕೇಶ್‌ ಸಿ
ಮಾಲೀಕರು, ರಾಕಿಸ್‌ ಹೋಮ್‌ಸ್ಟೇ

Deekshith Nair

Deekshith Nair

Travel blogger and adventurer passionate about exploring new cultures and sharing travel experiences.

ಪ್ರವಾಸಿಗರ ನೆಚ್ಚಿನ ಎವರ್ ಗ್ರೀನ್ ಕೌಂಟಿ...

Read Previous

ಪ್ರವಾಸಿಗರ ನೆಚ್ಚಿನ ಎವರ್ ಗ್ರೀನ್ ಕೌಂಟಿ...

ಪ್ರಕೃತಿಯ ಮೈಮಾಟವನ್ನು ನೋಡಬೇಕೆ? ಸಮತಗೆ ಬನ್ನಿ

Read Next

ಪ್ರಕೃತಿಯ ಮೈಮಾಟವನ್ನು ನೋಡಬೇಕೆ? ಸಮತಗೆ ಬನ್ನಿ