ಧಾರವಾಡದಲ್ಲಿ ರೈಸಿಂಗ್ ಬ್ಲಿಸ್ ರಿಟ್ರೀಟ್ ರೆಸಾರ್ಟ್
ಹುಬ್ಬಳ್ಳಿ - ಧಾರವಾಡದ ಪ್ರವಾಸ ಎಲ್ಲರಿಗೂ ಪ್ರಿಯ. ಇಲ್ಲಿನ ಸಿದ್ಧಾರೂಡರ ಮಠ, ಹತ್ತಿರದ ಸವದತ್ತಿ ಎಲ್ಲಮ್ಮನ ಕ್ಷೇತ್ರ, ದಾಂಡೇಲಿ ಹೀಗೆ ಸಾಕಷ್ಟು ಸ್ಥಳಗಳು ಇಲ್ಲಿಗೆ ಹತ್ತಿರದಲ್ಲೇ ಇವೆ. ಅವುಗಳನ್ನೆಲ್ಲ ನೋಡಿಕೊಂಡು ಸಾಧನಕೇರಿಯ ದರಾ ಬೇಂದ್ರೆಯವರ ನಿವಾಸವನ್ನು ಕಾಣುವ ಕನಸು ಹಲವರದಾಗಿರುತ್ತದೆ. ಅವರೆಲ್ಲರಿಗೂ ಪ್ರಿಯವಾಗುವ ಮತ್ತು ಸ್ಥಳಿಯತೆಯ ನೈಜ ಅನುಭವ ನೀಡುವ ಒಂದು ರೆಸಾರ್ಟ್ ಪ್ರವಾಸದಲ್ಲಿ ನಿಮ್ಮ ಜತೆಯಾಗಬಹುದು. ಅದರ ಹೆಸರೇ ರೈಸಿಂಗ್ ಬ್ಲಿಸ್ ರಿಟ್ರೀಟ್ ರೆಸಾರ್ಟ್.
ರೆಸಾರ್ಟ್ ಒಳಗೆ ಅತ್ಯಂತ ಸುಸಜ್ಜಿತ ಲಾಡ್ಜ್ ಕೂಡ ಇದೆ. ಬಹಳ ಹಿತಕರ ವಾತಾವರಣ ಮತ್ತು ಸ್ವಚ್ಛತೆಗೆ ಆದ್ಯತೆ ನೀಡಿರುವ ಈ ಲಾಡ್ಜ್ ಸಕಲ ಸೌಲಭ್ಯಗಳನ್ನೂ ಹೊಂದಿದೆ. ಬೇರೆಡೆಯಂತೆ ಇಲ್ಲಿ ಚೆಕ್‌ಇನ್, ಚೆಕ್‌ಔಟ್‌ನ ಕಿರಿಕಿರಿಗಳು ನಿಮಗಿರುವುದಿಲ್ಲ. ಸದಾ ಇಲ್ಲಿ ಸಿಬ್ಬಂದಿ ಇದ್ದೇ ಇರುತ್ತಾರೆ. ಎಲ್ಲ ಫಾರ್ಮಾಲಿಟಿಗಳನ್ನು ಕೆಲವೇ ನಿಮಿಷಗಳಲ್ಲಿ ಮುಗಿಸಿಕೊಡುತ್ತಾರೆ. ಮಧ್ಯಾಹ್ನ 12:00 ಗಂಟೆಗೆ ಚೆಕ್ ಇನ್ ಮತ್ತು ಬೆಳಗ್ಗೆ 10:00 ಗಂಟೆಗೆ ಚೆಕ್ ಔಟ್ ಸಮಯ. ಈ ಲಾಡ್ಜ್‌ನ ಹೊರನೋಟ ಮತ್ತು ವಿನ್ಯಾಸ ನಿಮ್ಮ ಗಮನ ಸೆಳೆಯುತ್ತದೆ. ಇನ್ನು ನೀವು ರೀಲ್ಸ್ ಪ್ರಿಯರಾದರಂತೂ ದಿನವೊಂದರಲ್ಲಿ ಹತ್ತಾರು ರೀಲ್‌ಗಳನ್ನು ಇಲ್ಲಿ ಮಾಡಿಯೇ ಮಾಡುತ್ತೀರಿ. ಏಕೆಂದರೆ ಈ ಲಾಡ್ಜ್ ಹಾಗಿದೆ. ಇದರ ಆಕಾರವನ್ನು ಸುಲಭವಾಗಿ ಹೇಳೋದಾದರೆ ಆರು ಮೂಲೆಗಳಿರುವ ನಕ್ಷತ್ರ ಎನ್ನಬಹುದು. ತಾರಾಲಯ ಅಂದರೂ ತಪ್ಪಿಲ್ಲ. ಕೋಣೆಗಳೂ ಕೂಡ ಅಷ್ಟೇ ಆಕರ್ಷಕವಾಗಿವೆ. ಇಲ್ಲಿ ಒಟ್ಟು 18 ರೂಮ್‌ಗಳಿದ್ದು, ಅವುಗಳಲ್ಲಿ 12ಹವಾ ನಿಯಂತ್ರಿತ ಮತ್ತು 6 ಸಾಮಾನ್ಯ ರೂಮ್‌ಗಳು. 2026ರ ಜನವರಿಯಲ್ಲೇ ಇಲ್ಲಿ ವೈದ್ಯರ ಸಮೇತ ಎರಡು ಆಯುರ್ವೇದ ಸ್ಪಾ ಮಸಾಜ್ ಸೆಂಟರ್‌ಗಳೂ ಆರಂಭವಾಗಲಿವೆ. ಇಲ್ಲಿ ನಿಮಗೆ ಇಷ್ಟವಾದ ರೂಮ್‌ಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ. ಎಲ್ಲ ರೂಮ್‌ಗಳನ್ನು ಆಗಿಂದಾಗಲೇ ಶುಚಿಗೊಳಿಸಲಾಗುವುದರಿಂದ ಯಾವುದೇ ರೂಮ್ ಅನ್ನು ನೀವಿಲ್ಲಿ ಆಯ್ದುಕೊಳ್ಳಬಹುದು. ಪ್ರತೀ ರೂಮ್‌ನಲ್ಲೂ ಲ್ಯಾಂಡ್‌ಲೈನ್ ವ್ಯವಸ್ಥೆ ಇದ್ದು, ಊಟ ಮತ್ತಿತರ ಸೌಲಭ್ಯಗಳನ್ನು ಆರ್ಡರ್ ಮಾಡಬಹುದು. ಕ್ಷಣಮಾತ್ರದಲ್ಲಿ ಸಿಬ್ಬಂದಿ ಹಾಜರಾಗುತ್ತಾರೆ. ವೆಸ್ಟ್ರನ್ ಶೌಚಾಲಯ ಹಾಗೂ ಎಲ್ಲ ಅಗತ್ಯದ ಮೂಲಭೂತ ಸೌಕರ್ಯಗಳೊಂದಿಗೆ ಬಾಲ್ಕನಿ ಇದೆ.

ಕಣ್ಣ ಮುಂದೆ ಕಾರ್ ಪಾರ್ಕಿಂಗ್
ರೆಸಾರ್ಟ್‌ನಲ್ಲಿ ಉಳಿಯಲು ನೀವು ನಿಮ್ಮ ಸ್ವಂತ ವಾಹನದಲ್ಲಿಯೇ ಬಂದರೆ ಇಲ್ಲಿ ವಿಶಾಲ ಮತ್ತು ಸುವ್ಯವಸ್ಥಿತ ಪಾರ್ಕಿಂಗ್ ವ್ಯವಸ್ಥೆ ಇದೆ. ಪಾರ್ಕಿಂಗ್ ಮುಂದೆಯೇ ಒಂದು ಸುಂದರ ಲಾನ್ ನಂತರ ಲಾಡ್ಜ್ ಇದೆ. ನಿಮ್ಮ ಕಾರ್ ಅಥವಾ ಯಾವುದೇ ವಾಹನ ನಿಮ್ಮ ಕಣ್ಣ ಮುಂದೆಯೇ ಇರುತ್ತದೆ. ಅದರ ಕಣ್ಗಾವಲಿಗೆ ಇಲ್ಲಿ ಸಿಬ್ಬಂದಿಯೂ ಇದ್ದಾರೆ.
ಸಸ್ಯಾಹಾರಿಗೂ ಮಾಂಸಾಹಾರಿಗೂ ಬೇರೆ ಬೇರೆ ರೆಸ್ಟೋರೆಂಟ್
ಈ ರೆಸಾರ್ಟ್‌ನ ಮತ್ತೊಂದು ವಿಶೇಷವೆಂದರೆ ಇಲ್ಲಿರುವ ರೆಸ್ಟೋರೆಂಟ್. ಇಲ್ಲಿ ಸಸ್ಯಾಹಾರ ಮತ್ತು ಮಾಂಸಾಹಾರಗಳೆರಡೂ ದೊರೆಯುತ್ತವೆ. ಆದರೆ, ಸಸ್ಯಾಹಾರ ಮತ್ತು ಮಾಂಸಾಹಾರ ಎರಡೂ ಬೇರೆ ಬೇರೆ ಅಡುಗೆ ಮನೆಯಲ್ಲಿ ತಯಾರಾಗುತ್ತವೆ. ಇಲ್ಲಿನ ಮೆನು ನೋಡಿದರಂತೂ ಕಳೆದುಹೋಗುತ್ತೀರಿ. ಜತೆಗೆ ವೈವಿಧ್ಯಮಯ ಪಾನೀಯಗಳು, ಮಿಲ್ಕ್‌ಶೇಕ್‌ಗಳು, ಜ್ಯೂಸ್‌ಗಳು, ಡೆಸರ್ಟ್‌ಗಳು, ಚೈನೀಸ್ ನಾನ್‌ವೆಜ್, ಸೌತ್ ಸ್ಪೆಷಲ್ ನಾನ್‌ವೆಜ್ ಮೊದಲಾದವನ್ನು ಆಗಿಂದಾಗಲೇ ಮಾಡಿ ಬಡಿಸಲಾಗುತ್ತದೆ. ಸುಂದರ ಡೈನಿಗ್ ಹಾಲ್ ಇದೆ, ರೂಮ್ ಸರ್ವಿಸ್ ಸಹ ನೀಡುತ್ತಾರೆ. ಇರುವಲ್ಲಿಗೆ ಆರ್ಡರ್‌ಮಾಡಿ ತರಿಸಿಕೊಳ್ಳಬಹುದು. ಒಮ್ಮೆ ಇಲ್ಲಿನ ಅಡುಗೆ ಸವಿದು ನೋಡಿದರೆ, ಮತ್ತೆ ಮತ್ತೆ ತಿನ್ನುವಂತೆ ಮನ ಹಠಮಾಡುತ್ತದೆ. ಮುಗುಳ್ನಗುತ್ತ ಕುಶಲೋಪರಿ ಮಾತನಾಡಿಸುತ್ತಾ ಇಲ್ಲಿನ ಸಿಬ್ಬಂದಿ ಆಹಾರ ಬಡಿಸುತ್ತಿರುವಾಗ ಸ್ನೇಹಿತರೊಟ್ಟಿಗೆ ಕಳೆದ ಹಿಂದಿನ ದಿನಗಳ ನೆನಪಾಗಲೂಬಹುದು.

ಬಳಕೆಯಲ್ಲಿರುವುದು ಶುದ್ಧ ಗಾಣದ ಎಣ್ಣೆ
ಈ ರೆಸಾರ್ಟ್‌ನಲ್ಲಿ ಅಡುಗೆಗೆ ಬಳಸಲಾಗುವ ಎಣ್ಣೆಗೂ ಒಂದು ವಿಶೇಷವಿದೆ. ಇದನ್ನು 100 ಪರ್ಸೆಂಟ್ ಶುದ್ಧ ಎನ್ನಬಹುದು. ಏಕೆಂದರೆ ಈ ಎಣ್ಣೆಯನ್ನು ಇದೇ ರೆಸಾರ್ಟ್‌ನಲ್ಲಿ ತಯಾರಿಸಲಾಗುತ್ತದೆ. ಸ್ಥಳೀಯ ರೈತರಿಂದಲೇ ನೇರವಾಗಿ ಕುಶುಬೆ, ಶೇಂಗಾ ಇನ್ನಿತರ ಎಣ್ಣೆಕಾಳುಗಳನ್ನು ಖರಿದಿಸಿ, ಇಲ್ಲಿನ ಶ್ರೀ ಸಿದ್ದೇಶ್ವರ ಎಣ್ಣೆ ಘಟಕದಲ್ಲಿ ಎಣ್ಣೆ ತಯಾರಿಸಲಾಗುತ್ತದೆ. ಈ ಎಣ್ಣೆಗೂ ಸುತ್ತಮತ್ತ ಸಾಕಷ್ಟು ಬೇಡಿಕೆ ಇದ್ದು, ಉತ್ತಮ ಪ್ಯಾಕಿಂಗ್‌ನೊಂದಿಗೆ ಬಾಟಲಿಗಳಲ್ಲಿ ನೀಡಲಾಗುತ್ತದೆ. ಈ ಎಣ್ಣೆಯ ತಯಾರಿಯನ್ನು ಅಲ್ಲಿ ನೇರವಾಗಿಯೇ ಕಂಡು ಖರೀದಿಸಬಹುದು. ನೇರವಾಗಿ ರೈತರಿಂದಲೇ ಎಣ್ಣೆಕಾಳುಗಳನ್ನು ಖರೀದಿಸುವುದರಿಂದ ರೈತರಿಗೂ ಲಾಭ, ಅದರಿಂದ ತಯಾರಾಗುವ ಎಣ್ಣೆ ಊಟ ಮಾಡುವುದರಿಂದ ನಿಮ್ಮ ಆರೋಗ್ಯಕ್ಕೂ ಲಾಭ.
ಉತ್ತರ ಕರ್ನಾಟಕದಲ್ಲೇ ಇದು ವಿಶಾಲ ಈಜುಕೊಳ
ಹುಬ್ಬಳ್ಳಿ ಮತ್ತು ಧಾರವಾಡಗಳಲ್ಲಿ ನೀವು ಅಡ್ಡಾಡುತ್ತಿದ್ದು, ವಿಶಾಲ ಈಜುಕೊಳದಲ್ಲಿ ಮಿಂದೇಳುವ ಆಸೆ ನಿಮಗಿದ್ದರೂ ಈ ರೈಸಿಂಗ್ ಬ್ಲಿಸ್ ರೆಟ್ರೀಟ್ ರೆಸಾರ್ಟ್ ನಿಮ್ಮ ಪಟ್ಟಿಯ ಅಗ್ರ ಸ್ಥಾನದಲ್ಲಿರಲಿ. ಏಕೆಂದರೆ ಈ ರೆಸಾರ್ಟ್‌ನಲ್ಲೇ ಉತ್ತರ ಕರ್ನಾಟಕದ ರೆಸಾರ್ಟ್‌ಗಳ ಪರಿಧಿಯಲ್ಲಿನ ಅತಿದೊಡ್ಡ ಈಜುಕೊಳವಿದೆ. ನೀರನ್ನೂ ಪುನಃಪುನಃ ಬದಲಿಸುವ ಕಾರ್ಯಗಳು ಆಗುತ್ತಲೇ ಇರುತ್ತವೆ. ಬೇರೆಡೆಯಂತೆ ಇಲ್ಲಿ ನೀರನ್ನು ನೀಲಿಯಾಗಿಸಲು ರಾಸಾಯನಿಕಗಳನ್ನು ಬಳಸುವುದಿಲ್ಲ. ಈ ಈಜುಕೊಳದಲ್ಲಿ ಮಕ್ಕಳು ವಯಸ್ಕರು ಬಳಸಲು ಸುರಕ್ಷತೆ ಕ್ರಮಗಳನ್ನು ಯೋಜಿಸಿಯೇ ರೂಪಿಸಲಾಗಿದೆ. ಜತೆಗೆ ಸಿಬ್ಬಂದಿಯೂ ಇರುತ್ತಾರೆ.

ವಾಟರ್ ಪಾರ್ಕ್ ಶೀಘ್ರದಲ್ಲೇ!
ಇದರ ಪಕ್ಕದಲ್ಲೇ ನೀರಿನ ಜತೆಗೆ ವಿವಿಧ ಚಟುವಟಿಕೆಗಳನ್ನು ಆರಂಭಿಸಲು ವಾಟರ್ ಪಾರ್ಕ್ ನಿರ್ಮಾಣಕ್ಕೂ ಯೋಜನೆ ಸಿದ್ಧವಾಗಿದೆ. ನಿರ್ಮಾಣ ಕಾರ್ಯಗಳೂ ಆರಂಭಿಕ ಹಂತದಲ್ಲಿವೆ. 2026ರ ವರ್ಷಾರಂಭದೊಂದಿಗೆ ಈ ಕಾರ್ಯಗಳ ಆರಂಭವೂ ಆಗಲಿವೆ ಎನ್ನುತ್ತಾರೆ ರೆಸಾರ್ಟ್‌ನ ಮಾಲಿಕರಾದ ದುಂಡಪ್ಪ. ಬಿ. ಗಾಣಿಗೇರ.
ಬೇಕೆಂದರೆ ಬಾರೊಂದಿದೆ
ಅಡ್ಡಾಡಲು ಬಂದಾಗ ಅಥವಾ ಊರಿಂದ ದೂರ ಬಂದಾಗ ಖುಷಿಗಾಗಿ ಮದ್ಯಬೇಕು ಎನ್ನುವ ಹಲವರಿದ್ದಾರೆ. ಅವರಿಗಾಗಿಯೂ ಈ ರೆಸಾರ್ಟ್ ಒಂದು ಉತ್ತಮ ಆಯ್ಕೆ. ಈ ರೆಸಾರ್ಟ್‌ನ ಮುಂಭಾಗದ ಎಡಮಗ್ಗುಲಿನಲ್ಲಿ ಒಂದು ಬಾರ್ ಇದೆ. ಮದ್ಯದ ಜತೆ ರಾತ್ರಿಯ ಹೊತ್ತಿಗೆ ವಿದ್ಯುತ್ ದೀಪಾಲಂಕಾರಗಳಿಂದ ಕೂಡಿದ ರೆಸಾರ್ಟ್‌ನ ನೋಟ ನಿಮ್ಮ ಸಂಗಾತಿಯಾಗುತ್ತದೆ.
ಪಿಕ್ ಅಪ್ ಮತ್ತು ಡ್ರಾಪ್
ಈ ರೆಸಾರ್ಟ್‌ನಲ್ಲಿ ಪಿಕ್‌ಅಪ್ ಮತ್ತು ಡ್ರಾಪ್ ವ್ಯವಸ್ಥೆ ಇದೆ. ಇದಕ್ಕಾಗಿ ರೆಸಾರ್ಟ್ ಬಳಿಯೇ ಸದಾ ಮೂರು ಕಾರ್‌ಗಳು ಸಿದ್ಧವಾಗಿರುತ್ತವೆ. ನೀವು ಸವದತ್ತಿ, ಹುಬ್ಬಳ್ಳಿ, ಧಾರವಾಡ ಅಥವಾ ಸಾಧನಕೇರಿ ಹೀಗೆ ಎಲ್ಲಿ ಉಳಿದಿದ್ದರೂ ಒಂದು ಕರೆ ಮಾಡಿದರೆ ರೆಸಾರ್ಟ್‌ಗೆ ಕರೆದೊಯ್ಯಲು ವಾಹನ ನೀವಿರುವ ಬಳಿಗೇ ಬರುತ್ತದೆ. ಸ್ಥಳ ಹುಡುಕುವುದು, ಸಾರಿಗೆ ಸಂಪರ್ಕ ಹುಡುಕುವುದು ಯಾವ ಗೋಜುಗಳೂ ಇರುವುದಿಲ್ಲ. ವಾಹನ ಚಾಲಕರೂ ನಿಮ್ಮನ್ನು ನಿಮಿಷಗಳ ಮಾತ್ರದಲ್ಲಿಯೇ ತಲುಪುತ್ತಾರೆ.

ಸವದತ್ತಿಯ ಆಸುಪಾಸಿನಲ್ಲಿ ಪ್ರವಾಸಿಗರಿಗೆ ಮೆಚ್ಚುಗೆಯಾಗುವಂಥ ರೆಸಾರ್ಟ್‌ಗಳಿರಲಿಲ್ಲ. ಆಕಾರಣಕ್ಕೆ ಇಲ್ಲಿನವರು 60 ಕಿಮೀ. ಪ್ರಯಾಣ ಮಾಡಿ, ದಾಂಡೇಲಿಗೆ ಹೋಗುವ ಅನಿವಾರ್ಯತೆ ಇತ್ತು. ಆದರೆ ರೆಸಾರ್ಟ್ ಅನುಭವಕ್ಕಾಗಿ ಇಲ್ಲಿನ ಅನೇಕರು ಅಷ್ಟು ದೂರ ಪ್ರಯಾಣಿಸುವುದಕ್ಕೂ ಸಿದ್ಧರಿದ್ದರು. ಆದರೆ ನಮ್ಮೂರಿನಲ್ಲೇ ಇಂಥ ರೆಸಾರ್ಟ್ ಸಿದ್ಧಪಡಿಸಿದರೆ ಈ ಸಮಸ್ಯೆಯಿಂದ ಮುಕ್ತಿಹೊಂದಬಹುದು ಎನಿಸಿತು. ಇದರಿಂದ ಸವದತ್ತಿ, ಧಾರವಾಡ, ಹುಬ್ಬಳ್ಳಿ, ಬೆಳಗಾವಿ ಸೇರಿದಂತೆ ಹತ್ತಿರದ ಅನೇಕ ನಗರಗಳ ಜನರಿಗೂ ಸಹಕಾರಿಯಾಗಲಿದೆ ಎಂದೆನಿಸಿ ಈ ರೆಸಾರ್ಟ್ ಹುಟ್ಟುಹಾಕಿದೆ. ಇದು ಫ್ಯಾಮಿಲಿ, ಫ್ರೆಂಡ್ಸ್ ಗಷ್ಟೇ ಸೀಮಿತವಾದ ರೆಸಾರ್ಟ್ ಅಲ್ಲ, ಯಾರೇ ಬಂದರೂ ಗುಣಮಟ್ಟದ ಆತಿಥ್ಯ ನೀಡುವ ಮೂಲಕ ಹೊಸ ಅನುಭವಗಳನ್ನು ನೀಡುವ ಬೆಸ್ಟ್ ರೆಸಾರ್ಟ್.
ದುಂಡಪ್ಪ ಬಸಪ್ಪ ಗಾಣಿಗೇರ, ಮಾಲೀಕರು
ಎರಡು ಎಕರೆ ಪ್ರದೇಶದಲ್ಲಿ 18 ರೂಮ್‌ಗಳಿರುವ ವಿಶಾಲವಾದ ರೆಸಾರ್ಟ್ ಇದು. ಅವುಗಳಲ್ಲಿ 12 ಎಸಿ ,6 ನಾನ್ ಎಸಿ ರೂಮ್‌ಗಳಿವೆ. ಆನ್ ಲೈನ್ ಅಷ್ಟೇ ಅಲ್ಲದೆ ಆಫ್ ಲೈನ್ ಮೂಲಕವೂ ಬುಕಿಂಗ್ ಮಾಡಿಕೊಳ್ಳುವ ಸೌಲಭ್ಯವಿರುವುದರಿಂದ ವಿಸಿಟರ್ಸ್ ಫ್ರೆಂಡ್ಲೀ ಎನಿಸಿಕೊಂಡಿದೆ. ಇನ್ನು ಮುಂಚಿತವಾಗಿ ಬುಕಿಂಗ್ ಮಾಡಿಕೊಂಡಿದ್ದರೆ ಪಿಕ್ ಅಪ್ ಹಾಗೂ ಡ್ರಾಪ್ ಸೌಲಭ್ಯವನ್ನೂ ರೆಸಾರ್ಟ್ ಕಡೆಯಿಂದಲೇ ಮಾಡುವುದರಿಂದ ಪ್ರಯಾಣದ ಬಗೆಗೂ ಚಿಂತಿಸಬೇಕಿಲ್ಲ. ಅಲ್ಲದೆ ಹುಬ್ಬಳ್ಳಿ, ಧಾರವಾಡದಲ್ಲೇ ಅತಿದೊಡ್ಡ ಸ್ವಿಮ್ಮಿಂಗ್ ಪೂಲ್ ಇರುವುದು ನಮ್ಮ ರೆಸಾರ್ಟ್‌ನಲ್ಲಿ. ಸಧ್ಯದಲ್ಲೇ ವಿಶೇಷವಾದ ವಾಟರ್ ಪಾರ್ಕ್ ತಯಾರಿಯ ಹಂತದಲ್ಲಿದ್ದು, ಸಕಲ ಸೌಕರ್ಯಗಳನ್ನೂ ಗ್ರಾಹಕರಿಗಾಗಿ ಸಿದ್ಧಗೊಳಿಸಲಾಗಿದೆ.
ಮಹಾವೀರ, ಮ್ಯಾನೇಜರ್
ದುಂಡಪ್ಪ ಬಸಪ್ಪ ಗಾಣಿಗೇರ ಅವರು ರಿಯಲ್ ಎಸ್ಟೇಟ್ ಉದ್ಯಮಿ. ಮೊದಲಿನಿಂದಲೇ ಅನೇಕ ಬಾರಿ ಈ ಪ್ರಾಪರ್ಟಿಗೆ ಬಂದುಹೋಗಿದ್ದಾರೆ. ಲಾಡ್ಜ್ ಆಗಿ ಗುರುತಿಸಿಕೊಂಡಿದ್ದ ಈ ಪ್ರಾಪರ್ಟಿಯನ್ನು ರೆಸಾರ್ಟ್ ಆಗಿ ರೂಪಾಂತರಗೊಳಿಸುವಲ್ಲಿ ಅವರ ಪಾತ್ರ ಪ್ರಮುಖವಾದುದು. ಧಾರವಾಡ- ಹುಬ್ಬಳ್ಳಿಯ ಜನತೆಗೆ ರೆಸಾರ್ಟ್ ಅನುಭವ ಏನು ಎಂಬುದನ್ನು ತಿಳಿಸಿಕೊಟ್ಟ ಹಿರಿಮೆ ಇವರಿಗೆ ಸಲ್ಲುತ್ತದೆ. ಲಕ್ಸೂರಿಯಸ್ ರೂಮ್‌ಗಳು, ರೆಸ್ಟೋರೆಂಟ್, ಬಾರ್, ಸ್ವಿಮ್ಮಿಂಗ್ ಪೂಲ್ ಹೀಗೆ ಎಲ್ಲ ಸೌಕರ್ಯಗಳನ್ನೂ ನೀಡಲಾಗಿದೆ.
ಸಚಿನ್, ದುಂಡಪ್ಪ ಬಸಪ್ಪ ಗಾಣಿಗೇರರ ಸ್ನೇಹಿತ
ನಾನು ವೃತ್ತಿಯಲ್ಲಿ ಸಿವಿಲ್ ಎಂಜಿನಿಯರ್. ವರ್ಕ್ ಫ್ರಂ ಹೋಮ್ ಅವಕಾಶವಿದ್ದರಿಂದ ಮನೆಯಿಂದಲೇ ಕೆಲಸ ಮಾಡುತ್ತಿದ್ದೆ. ಕೆಲಸದ ಒತ್ತಡದಿಂದ ಹೊರಬರಲು ಸಮೀಪದ ರೆಸಾರ್ಟ್‌ಗಳನ್ನು ಹುಡುಕಾಡಿದಾಗ ಸಿಕ್ಕಿರುವುದು ಈ ರೆಸಾರ್ಟ್. ಇಲ್ಲಿನ ಪರಿಸರ, ಯುನೀಕ್ ಸ್ಟ್ರಕ್ಚರ್, ವಿಶೇಷವಾದ ಆಹಾರ, ವಾಟರ್ ಆಕ್ಟಿವಿಟೀಸ್, ಸ್ಟಾಫ್ ಹಾಗೂ ಸರ್ವಿಸ್ ಸಹ ಅದ್ಭುತವಾಗಿದೆ. ಬಜೆಟ್ ಫ್ರೆಂಡ್ಲಿ ಆಗಿರುವ ಈ ರೆಸಾರ್ಟ್ ನನಗಂತೂ ತುಂಬಾ ಮೆಚ್ಚುಗೆಯಾಗಿದೆ.
ಅಭಿನಂದನ್, ರೆಸಾರ್ಟ್ ಅತಿಥಿ