ಮುದ್ದೇಬಿಹಾಳದ ಮುತ್ತು ಶ್ರೀ ಪಂಜುರ್ಲಿ ಹೊಟೇಲ್
ಮುದ್ದೇಬಿಹಾಳದಲ್ಲಿ ಯಶಸ್ವಿಯಾಗಿ ಜನಪ್ರಿಯತೆ ಪಡೆದು ಸಾಗುತ್ತಿರುವ ಒಂದು ಅತ್ಯುತ್ತಮ ಹೊಟೇಲ್ ಅಂದರೆ ಅದು ಶ್ರೀ ಪಂಜುರ್ಲಿ ಹೊಟೇಲ್. ಹೆಸರಿನಲ್ಲೇ ಅರ್ಥವಾಗುವಂತೆ ಇದು ಕರಾವಳಿ ಭಾಗದವರ ಮಾಲೀಕತ್ವದ ಹೊಟೇಲ್. ಹೀಗಾಗಿ ನಿಮಗೆ ಇಲ್ಲಿ ವಿಶೇಷವಾಗಿ ಕರಾವಳಿಯ ತರಹೇವಾರಿ ಮೀನು ಊಟದ ರುಚಿ ದೊರಕುತ್ತದೆ.
- ಬಸವರಾಜ ಹುಲಗಣ್ಣಿ
ವಿಜಯಪುರ ಜಿಲ್ಲೆಯಲ್ಲಿ ಪ್ರಮುಖ ವ್ಯಾಪಾರಿ ಕೇಂದ್ರವಾಗಿ ಬೃಹತ್ತಾಗಿ ಬೆಳೆಯುತ್ತಿರುವ ಪಟ್ಟಣ ಅಂದ್ರೆ ಅದು ಮುದ್ದೇಬಿಹಾಳ. ಪ್ರತಿ ಪಟ್ಟಣದಲ್ಲೂ ನಗರಗಳಲ್ಲೂ ಈಗ ಹೊಟೇಲ್ ಉದ್ಯಮ ಎಂಬುದು ಲಾಭದಾಯಕ ಉದ್ದಿಮೆ. ಜನರಿಗೆ ರುಚಿಕರ ಆಹಾರ ನೀಡಿ ಅವರ ಹೊಟ್ಟೆ ತಣ್ಣಗಿರಿಸಿ ಹಸಿವು ನೀಗಿಸಿ ಬದುಕಿನಲ್ಲಿ ಸಾರ್ಥಕತೆ ಪಡೆಯುವ ಉದ್ಯಮವೊಂದಿದ್ದರೆ ಅದು ಹೊಟೇಲ್ ಉದ್ಯಮ.
ಮುದ್ದೇಬಿಹಾಳದಂಥ ಊರಿನಲ್ಲಿ ವ್ಯಾಪಾರ ವಹಿವಾಟುಗಳಿಗಾಗಿ ಇತರ ಊರುಗಳಿಂದ ಬರುವವರ ಸಂಖ್ಯೆ ಅಧಿಕ. ಅದೇ ರೀತಿ ಮುದ್ದೇಬಿಹಾಳದ ಸ್ಥಳೀಯರೂ ರುಚಿಕಟ್ಟಾದ ಆಹಾರಕ್ಕಾಗಿ ಸದಾ ಒಂದೊಳ್ಳೆ ಹೊಟೇಲ್ ಗಾಗಿ ಹಂಬಲಿಸುತ್ತಲೇ ಇರುತ್ತಾರೆ. ಇಂಥ ಮಂದಿಗೆ ರುಚಿಕಟ್ಟಾಗಿರುವ ಶಾಕಾಹಾರಿ ಮತ್ತು ಮಾಂಸಾಹಾರಿ ಊಟ ಬಡಿಸಿ ಉಪಚರಿಸುತ್ತಿದೆ ಶ್ರೀ ಪಂಜುರ್ಲಿ ಹೊಟೇಲ್.
ಮುದ್ದೇಬಿಹಾಳದಲ್ಲಿ ಯಶಸ್ವಿಯಾಗಿ ಜನಪ್ರಿಯತೆ ಪಡೆದು ಸಾಗುತ್ತಿರುವ ಒಂದು ಅತ್ಯುತ್ತಮ ಹೊಟೇಲ್ ಅಂದರೆ ಅದು ಶ್ರೀ ಪಂಜುರ್ಲಿ ಹೊಟೇಲ್. ಹೆಸರಿನಲ್ಲೇ ಅರ್ಥವಾಗುವಂತೆ ಇದು ಕರಾವಳಿ ಭಾಗದವರ ಮಾಲೀಕತ್ವದ ಹೊಟೇಲ್. ಹೀಗಾಗಿ ನಿಮಗೆ ಇಲ್ಲಿ ವಿಶೇಷವಾಗಿ ಕರಾವಳಿಯ ತರಹೇವಾರಿ ಮೀನು ಊಟದ ರುಚಿ ದೊರಕುತ್ತದೆ.
ಮುದ್ದೇಬಿಹಾಳದ ಹುಡ್ಕೋ ಬಡಾವಣೆಯ ತಾಲೂಕ್ ಆಡಳಿತ ಸೌಧದ ಪಕ್ಕವಿರುವ ಹೇಮರೆಡ್ಡಿ ಮಲ್ಲಮ್ಮ ವೃತ್ತದಲ್ಲಿ ಶ್ರೀ ಪಂಜುರ್ಲಿ ಹೊಟೇಲ್ ತಲೆ ಎತ್ತಿ ನಿಂತಿದೆ. ಉಡುಪಿ ಮೂಲದ ಹೊಟೇಲ್ ಇದಾಗಿದ್ದು ಮಾಡರ್ನ್ ಬಾಣಸಿಗರು ತಯಾರಿಸುವ ಸೀ ಪುಡ್ ಹುಡುಕಿಕೊಂಡು ಇಲ್ಲಿಗೆ ಕುಟುಂಬ ಸಮೇತ ಬರುವುದು ವಾಡಿಕೆಯಾಗಿಬಿಟ್ಟಿದೆ.

ಇಲ್ಲಿನ ಅಡುಗೆಯ ವಿಶೇಷವೇನೆಂದರೆ ಇಲ್ಲಿ ಅಡುಗೆಗೆ ಯಾವುದೇ ಬಣ್ಣ ಬಳಸುವುದಿಲ್ಲ. ರುಚಿಗಾಗಿ ರಾಸಾಯನಿಕಗಳನ್ನು ಬಳಸುವುದಿಲ್ಲ. ಥೇಟ್ ಮನೆಯ ಊಟದಷ್ಟು ರುಚಿಕಟ್ಟಾಗಿ ಇಲ್ಲಿ ಅಡುಗೆ ಮಾಡಲಾಗುತ್ತದೆ. ಹೀಗಾಗಿ ಇದು ಕುಟುಂಬಗಳಿಗೆ ಅಚ್ಚುಮೆಚ್ಚಿನ ಆಹಾರತಾಣ.
ಇಲ್ಲಿ ಸೀ ಪುಡ್ ಮತ್ತು ಮಂಗಳೂರು ಫಿಶ್ ಖಾದ್ಯಗಳನ್ನು ವಿಶೇಷವಾಗಿ ತಯಾರಿಸುತ್ತಾರೆ. ಮಾಂಸಾಹಾರಿಗಳಂತೂ ಇಲ್ಲಿ ವಿಶೇಷ ಮಾಂಸಾಹಾರದ ಊಟ ಸವಿಯಲು ಹಿಂಡುಹಿಂಡಾಗಿ ಬರುತ್ತಾರೆ. ಮುದ್ದೇಬಿಹಾಳಕ್ಕೆ ಭೇಟಿ ಕೊಡುವ ಯಾರೇ ಇದ್ದರೂ ಮಾಂಸಾಹಾರ ಪ್ರಿಯರಿದ್ದಲ್ಲಿ ಈ ಹೊಟೇಲಿನಲ್ಲಿ ಒಮ್ಮೆ ಊಟ ಸವಿಯಲೇಬೇಕು. ಇಲ್ಲಿಗೆ ಬಂದಾಗ ಬೇರೆ ಹುಡುಕಾಟದ ಅಗತ್ಯ ಇಲ್ಲವೇ ಇಲ್ಲ. ಸೀದಾ ಪಂಜುರ್ಲಿ ಹೊಟೇಲಿಗೆ ತೆರಳಿ ಚಿಕನ್‌ಫ್ರೈ, ಲೆಗ್‌ಪೀಸ್, ಫಿಶ್‌ಫ್ರೈ, ಆರ್ಡರ್ ಮಾಡಿಬಿಡಬಹುದು.
ಹಾಗಂತ ಸಸ್ಯಾಹಾರಿಗಳಿಗೆ ಈ ಹೊಟೇಲ್ ಸೂಕ್ತ ಅಲ್ಲವಾ? ಈ ಪ್ರಶ್ನೆಗೆ ಆಸ್ಪದವೇ ಇಲ್ಲ. ಪಂಜುರ್ಲಿ ಹೊಟೇಲ್ ನಲ್ಲಿ ಸಸ್ಯಹಾರಿಗಳಿಗೆಂದೇ ರುಚಿಶುಚಿಯಾದ, ಪರೋಟ, ದಾಲ್ ಫ್ರೈ, ಜೀರಾ ರೈಸ್, ಘೀ ರೈಸ್, ಪನೀರ್ ಬಿರ್ಯಾನಿ, ಗೋಬಿ ಮಂಚೂರಿ, ಮುದ್ದೇಬಿಹಾಳದ ವಿಶೇಷ ಖಡಕ್‌ರೊಟ್ಟಿ, ಮಶ್ರೂಮ್ ಬಿರ್ಯಾನಿ, ವೆಜ್ ಬಿರಿಯಾನಿ ತಯಾರಿಸಿ ಉಣಬಡಿಸುವ ಹೊಟೇಲ್ ಇದು.
ಶ್ರೀ ಪಂಜುರ್ಲಿ ಹೊಟೇಲಿನ ರುಚಿ ಎಷ್ಟು ಆಕರ್ಷಕ ಅಂದರೆ, ಇಲ್ಲಿನ ಊಟದ ರುಚಿಯನ್ನು ಸವಿದವರು ಬೇರೆ ಬೇರೆ ನಗರಗಳಲ್ಲಿ ತಾವು ಎಲ್ಲಿಯೇ ಹೋದರೂ ಅಲ್ಲಿ ಪಂಜುರ್ಲಿ ಹೊಟೇಲ್ ಇದೆಯಾ ಎಂದು ಹುಡುಕುತ್ತಾರೆ. ರಾಜ್ಯಾದ್ಯಂತ ಹಲವು ಶಾಖೆಗಳಾಗಿ ಬೆಳೆದಿರುವ ಪಂಜುರ್ಲಿ ಹೊಟೇಲ್ ಎಲ್ಲೆಡೆಯೂ ಒಂದೇ ಥರದ ರುಚಿಯನ್ನು ಮೇಂಟೇನ್ ಮಾಡಿದ್ದಾರೆ ಎಂಬುದು ಇಲ್ಲಿ ವಿಶೇಷವಾಗಿ ಗಮನಿಸಬೇಕು. ಇದೇ ಕಾರಣಕ್ಕಾಗಿ ಈ ಹೊಟೇಲಿಗೆ ಹೋಗಿ ಒಮ್ಮೆ ಊಟ ಮಾಡಿ ಬಂದವರು ಮತ್ತೆಂದೂ ಬೇರೆ ಹೊಟೇಲ್ ಕಡೆ ನೋಡುವುದಿಲ್ಲ. ಇಂಪಾದ ಸಂಗೀತ ಆಲಿಸುತ್ತಾ ತಂಪಾದ ಗಾಳಿಯ ಮಧ್ಯೆ ಕುಳಿತು ಸೊಂಪಾಗಿ ಊಟ ಮಾಡುವವರು ಪಂಜುರ್ಲಿ ಹೊಟೇಲನ್ನೇ ಆಯ್ಕೆ ಮಾಡುಕೊಳ್ಳುತ್ತಿರುವದಕ್ಕೆ, ಈ ಪಂಜುರ್ಲಿ ಹೊಟೇಲ್ ಗ್ರೂಪ್ ನ ಮಾಲೀಕರ ಪರಿಶ್ರಮ ಮತ್ತು ಉತ್ತಮ ಊಟ ಕೊಡಬೇಕು ಎನ್ನುವ ಛಲ ಎದ್ದು ಕಾಣುತ್ತದೆ. ಇಲ್ಲಿನ ರುಚಿ ಸವಿದವರು ಈ ಹೊಟೇಲಿನ ಬಗ್ಗೆ ಒಂದೇ ಮಾತಿನ ವರ್ಣನೆ ಮಾಡುವುದೇನೆಂದರೆ, ಶ್ರೀ ಪಂಜುರ್ಲಿ ಹೊಟೇಲು ಎಂದರೆ ಮುದ್ದೇಬಿಹಾಳದ ಮುತ್ತು!
2007ರಲ್ಲಿ ವಿಜಯ ಪಿಣಿಯ ಪೂಜಾರಿ ಎಂಬುವವರು ಯಾವುದೇ ಕೆಮಿಕಲ್ ಮಿಶ್ರಿತವಲ್ಲದ ಅಪ್ಪಟ ಗ್ರಾಮೀಣ ಮತ್ತು ಕರಾವಳಿ ಸೊಗಡಿನ ಉತ್ತಮ ಆಹಾರವನ್ನು ನಾಡಿನ ಜನತೆಗೆ ನೀಡಬೇಕು ಎಂಬ ಗುರಿ ಇಟ್ಟುಕೊಂಡು ಮೊದಲು ಹುಬ್ಬಳ್ಳಿಯಲ್ಲಿ ಶ್ರೀ ಪಂಜುರ್ಲಿ ಹೊಟೇಲನ್ನು ಆರಂಭಿಸಿದರು. ರುಚಿಗೆ ಮನಸೋತ ಗ್ರಾಹಕರ ಅಪೇಕ್ಷೆಯಂತೆ ದೊಡ್ಡ ಊರುಗಳಲ್ಲಿ ಶ್ರೀ ಪಂಜುರ್ಲಿ ಹೊಟೇಲುಗಳನು ಆರಂಭಿಸತೊಡಗಿದರು. ಗ್ರಾಹಕರ ಬೇಡಿಕೆಗೆ ಸ್ಪಂದಿಸಿ ಮುದ್ದೇಬಿಹಾಳದಲ್ಲಿ ಕೂಡ ಹೊಟೇಲನ್ನು ಪ್ರಾರಂಭಿಸಿ ಈಗ ಜನಮನ ಗೆದ್ದು ಸಂಭ್ರಮಿಸುತ್ತಿದೆ ಪಂಜುರ್ಲಿ ಹೊಟೇಲ್.
ವೈಶಿಷ್ಟಗಳು
ಬಗೆಬಗೆಯ ಮೀನಿನ ಭಕ್ಷ್ಯ- ಬಂಗಡಾ, ಪ್ರೌನ್ಸ್, ಬೆಳಂಜಿ, ಪಾಂಫ್ರೆಟ್, ಸುರ್ಮಾ, ತವಾ ಫ್ರೈ, ರವಾ ಫ್ರೈ, ಫಿಶ್ ಫ್ರೈ ಮಸಾಲಾ
ಚಿಕನ್ ಆಹಾರ: ಚಿಕನ್ ಲಾಲಿಪಾಪ್, ಸಾವಜಿ ಸ್ಪೆಷಲ್, ಚಿಕನ್ ಮಹಾರಾಜ, ಚಿಕನ್ ಟಿಕ್ಕಾ, ಮಸಾಲಾ ಚಿಕನ್ ಮಂಚೂರಿ, ಎಗ್ ಮಹಾರಾಜ, ಇಲ್ಲಿನ ಅತ್ಯಂತ ಫೇಮಸ್ ತಿನಿಸುಗಳು. ಅಲ್ಲದೆ ಚಿಕನ್. ಮಟನ್, ಎಗ್ ಬಿರಿಯಾನಿ ಕೂಡ ಲಭ್ಯ ಇರುತ್ತದೆ.

ವಿವಿಧ ಬಗೆಯ ಸೂಪ್ ಹಾಗೂ ಐಸ್ ಕ್ರೀಮ್
ಹೋಮ್ ಡೆಲಿವರಿ:
ಮುದ್ದೇಬಿಹಾಳ ನಗರದ ಬಡಾವಣೆಗಳಿಗೆ ಗ್ರಾಹಕರ ಬೇಡಿಕೆಯಂತೆ ಹೊಟೇಲ್ ಪಂಜುರ್ಲಿಯಿಂದಲೇ ನೇರ ಬಿಸಿ ಬಿಸಿಯಾದ ರುಚಿ ರುಚಿಯಾದ ಊಟವನ್ನು ಕೂಡಾ ಸರಬರಾಜು ಮಾಡುವ ವಿಶೇಷ ಸೌಲಭ್ಯವೂ ಇಲ್ಲಿದೆ. ಫ್ಯಾಮಿಲಿ ರೆಸ್ಟೋರೆಂಟ್ ಎಂದೇ ಖ್ಯಾತವಾಗಿರುವ ಈ ಹೊಟೇಲ್ ನೇರವಾಗಿ ಫ್ಯಾಮಿಲಿಗಳಿಗೆ ಸಮಯಕ್ಕೆ ಮುನ್ನವೇ ಊಟ ಸರಬರಾಜು ಮಾಡುತ್ತಿರುವುದು ಇವರ ಗ್ರಾಹಕ ಸೇವೆ ಮತ್ತು ಸಮಯ ಪ್ರಜ್ಞೆಯನ್ನು ಎತ್ತಿ ತೋರಿಸುತ್ತದೆ.
- ಇತರ ಸೌಲಭ್ಯಗಳು
- ಇಲ್ಲಿ ರುಚಿಕರ ಊಟದ ಜೊತೆಗೆ ವಿವಿಧ ಕಾರ್ಯಕ್ರಮಗಳನ್ನು ಮಾಡಲು, ಚಿಕ್ಕ ಪುಟ್ಟ ಸಭೆಗಳನ್ನು ಮಾಡಲು ಸುಸಜ್ಜಿತ ಫಂಕ್ಷನ್ ಹಾಲ್ ಕೂಡಾ ಇದೆ.
- ಉತ್ತಮ ಗುಣಮಟ್ಟದ ಹವಾನಿಯಂತ್ರಿತ, ಹಾಗೂ ಡಿಲಕ್ಸ್ ರೂಮುಗಳ ವ್ಯವಸ್ಥೆ ಇರುವ ಲಾಡ್ಜ್ ಕೂಡಾ ಇಲ್ಲಿದೆ.
ಸಂಪರ್ಕ: ವಿಜಯ ಪಿಣಿಯ ಪೂಜಾರಿ, ಮಾಲೀಕರು: ಹೊಟೇಲ್ ಶ್ರೀ ಪಂಜುರ್ಲಿ ಫ್ಯಾಮಿಲಿ ರೆಸ್ಟೋರೆಂಟ್, ಹೊಟೇಲ್ ಪಲ್ಲವಿ ಬಿಲ್ಡಿಂಗ್, ತಹಶೀಲ್ದಾರ ಕಛೇರಿ ಹತ್ತಿರ, ಹುಡ್ಕೋ ಕಾಲನಿ ಮುದ್ದೇಬಿಹಾಳ. ಫೋನ್: 9845341867