ಕಾರ್ಮೋಡದ ನಡುವೆ ಅಲ್ಲ ಕಮೋಡಿನ ನಡುವೆ ಊಟ
ಜಗತ್ತಿನಲ್ಲಿ ಮಾರ್ಕೆಟಿಂಗ್‌ಗಾಗಿ ಎಂಥೆಂಥ ಆವಿಷ್ಕಾರಗಳೇ ಆಗಿಬಿಟ್ಟಿವೆ. ಸಿನಿಮಾ ನಟರು, ಸಿಟಿಯ ಹೆಸರು, ಸ್ಟ್ರಕ್ಚರ್, ಕಲರ್, ವಾಸನೆ, ಫ್ಯಾಷನ್ ಹೀಗೆ ಸಾಕಷ್ಟು ಹೆಸರುಗಳನ್ನೂ ಬಳಸಿಯಾಗಿದೆ. ಒಟ್ಟಾರೆ ಜನರಿಗೆ ಇದು ವಿಶೇಷ ಅನಿಸಬೇಕು ಇಲ್ಲವೇ ವಿಚಿತ್ರ ಅನಿಸಬೇಕು ಅಷ್ಟೆ. ಇಷ್ಟರಲ್ಲಿ ಈ ಕೆಫೆ ಆಯ್ಕೆ ಮಾಡಿಕೊಂಡಿದ್ದು ವಿಚಿತ್ರವನ್ನು. ಅಂದರೆ ಟಾಯ್ಲೆಟ್ ಅನ್ನು ಸ್ಟ್ರಾಟಜಿಯಾಗಿ ತೆಗೆದುಕೊಂಡಿದೆ ಅಷ್ಟೆ.
ತಿನ್ನೋವಾಗ ಯಾರಾದರು ಟರ್ ಅಂತ ಸದ್ದು ಮಾಡಿದ್ರೆ ಹೇಗಿರುತ್ತೆ. ಊಟದ ಮೂಡ್ ಎಲ್ಲಾ ಗಬ್ಬೆದ್ದು ಹೋಗುತ್ತೆ. ಅಲ್ಲಿ ತನಕ ಆಡು ಮುಟ್ಟದ ಸೊಪ್ಪಿಲ್ಲ ಅಂತ ತಟ್ಟೆಯಲ್ಲಿದ್ದ ಸರ್ವ ಭಕ್ಷ್ಯಗಳನ್ನು ಗಡತ್ತಾಗಿ ತಿನ್ನುತ್ತಿದ್ದವರೂ ನನಗಿಷ್ಟು ಸಾಕು ಅಂತ ಎದ್ದೂ ಹೋಗಬಹುದು. ಇನ್ಯಾರೋ ಊಟಕ್ಕೆ ಕೂತಾಗಲೇ ಸಂಡಾಸಿನ ಬಗ್ಗೆ ಮಾತನಾಡೋದಿದೆ. ಅಂತವರಿಗೆ ಹುಟ್ಟು ಹಬ್ಬವೋ ಮತ್ತೊಂದೋ ಕಾರಣಕ್ಕೆ ಟ್ರೀಟ್ ಕೊಡಬೇಕೆಂದಿದ್ದರೆ ಈ ಕೆಫೆ ದಿ ಬೆಸ್ಟ್. ತಮಾಷೆಗಷ್ಟೆ. ಆದ್ರೂ ಯಾಕೆ ಅನ್ನುವುದಾದರೆ…
ಮಾರುಕಟ್ಟೆಗಾಗಿ ಮಾಡಿದ್ದು
ಜಗತ್ತಿನಲ್ಲಿ ಮಾರ್ಕೆಟಿಂಗ್‌ಗಾಗಿ ಎಂಥೆಂಥ ಆವಿಷ್ಕಾರಗಳೇ ಆಗಿಬಿಟ್ಟಿವೆ. ಸಿನಿಮಾ ನಟರು, ಸಿಟಿಯ ಹೆಸರು, ಸ್ಟ್ರಕ್ಚರ್, ಕಲರ್, ವಾಸನೆ, ಫ್ಯಾಷನ್ ಹೀಗೆ ಸಾಕಷ್ಟು ಹೆಸರುಗಳನ್ನೂ ಬಳಸಿಯಾಗಿದೆ. ಒಟ್ಟಾರೆ ಜನರಿಗೆ ಇದು ವಿಶೇಷ ಅನಿಸಬೇಕು ಇಲ್ಲವೇ ವಿಚಿತ್ರ ಅನಿಸಬೇಕು ಅಷ್ಟೆ. ಇಷ್ಟರಲ್ಲಿ ಈ ಕೆಫೆ ಆಯ್ಕೆ ಮಾಡಿಕೊಂಡಿದ್ದು ವಿಚಿತ್ರವನ್ನು. ಅಂದರೆ ಟಾಯ್ಲೆಟ್ ಅನ್ನು ಸ್ಟ್ರಾಟಜಿಯಾಗಿ ತೆಗೆದುಕೊಂಡಿದೆ ಅಷ್ಟೆ.
ಇದನ್ನೂ ಓದಿ: ಹಂಪಿಯಲ್ಲಿ ಕ್ಯಾಮೆರಾಗಳಿಗಿಲ್ಲ ಎಂಟ್ರಿ ಫೀ
ಆರ್ಡರ್ ಮಾಡಿದ ಆಹಾರ ಹೀಗೆ ನೀಡುತ್ತಾರೆ
ಈ ಕೆಫೆಯ ಮೆನು ತುಂಬಾ ದೊಡ್ಡದಿದೆ. ಜನರು ಇಲ್ಲಿ ತಿಂಡಿ ಅಥವಾ ಪಾನಿಯಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಆದರೆ ಆ ಯಾವ ಆಹಾರವನ್ನು ಇಲ್ಲಿ ಯಥಾವತ್ತಾಗಿ ನೀಡುವುದಿಲ್ಲ. ಬದಲಿಗೆ ಅದನ್ನು ಪುಟ್ಟ ಟಾಯ್ಲೆಟ್ ಆಕಾರದ ಬಟ್ಟಲಿನಲ್ಲಿ ಹಾಕಿ, ಅದಕ್ಕೆ ಥೇಟ್ ಮಲವನ್ನು ಹೋಲುವ ಅಲಂಕಾರ ನೀಡಿ, ಈಗ ಸೇವಿಸಿ ಎನ್ನುತ್ತಾರೆ. ಪಾನಿಯವನ್ನೂ ಅಷ್ಟೆ ಮೂತ್ರ ವಿಸರ್ಜನೆ ಮಾಡುವ ಪುಟ್ಟ ಕಮೋಡ್ ಆಕಾರದ ಲೋಟಕ್ಕೆ ಸುರಿತ್ತಾರೆ. ಕೊಂಚ ಹಳದಿ ಬಣ್ಣಕ್ಕೆ ಅವುಗಳನ್ನು ಬದಲಿಸಿ, ಥೇಟ್ ಮೂತ್ರವೇನೋ ಅನಿಸುವಷ್ಟು ಅದ್ಭುತವಾಗಿ ಅಲಂಕರಿಸಿ ಆರ್ಡರ್ ಮಾಡಿದವರಿಗೆ ನೀಡುತ್ತಾರೆ. ಬೇಕಾದರೆ ಮದ್ಯವನ್ನೂ ಆರ್ಡರ್ ಮಾಡಬಹುದು ಅದೂ ಇದೇ ಅಲಂಕಾರದಲ್ಲಿರುತ್ತದೆ.

ಯುರೋಪ್‌ನಲ್ಲಿ ಮೊದಲ ಕೆಫೆ
ಯುರೋಪ್‌ನಲ್ಲಿ ಸಾಕಷ್ಟು ಕೆಫೆಗಳಿವೆ. ಆದರೆ, ಟಾಯ್ಲೆಟ್ ವಿಷಯ ವಸ್ತುವನ್ನು ಆಧರಿಸಿ ತಯಾರಾಗಿ ನಿಂತಿರುವ ವಿಚಿತ್ರ ಕೆಫೆ ಇರುವುದು ಇದೊಂದೆ. ಈ ವಿಷಯ ವಸ್ತುವೇ ಈಗ ಸಾಕಷ್ಟು ಸದ್ದು ಮಾಡುತ್ತಿದೆ. ಆದರೆ ಈ ಕೆಫೆಗೆ ಮತ್ತೆಮತ್ತೆ ಭೇಟಿ ನೀಡುವ ಗಿರಾಕಿಗಳ ಗುಂಪು ಇಲ್ಲ. ಹೆಸರು ಕೇಳಿಯೋ ದಾರಿಯಲ್ಲಿ ಓಡಾಡುವಾಗ ಕೆಫೆ ಅಲಂಕಾರ ಕಣ್ಣಿಗೆ ಬಿದ್ದೋ ಕುತೂಹಲದಿಂದ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗಿದೆಯಂತೆ.
ಮಾಲೀಕನೂ ವಿಚಿತ್ರ ಆಸಾಮಿ
ಈ ಕೆಫೆಯೇ ಇಷ್ಟು ವಿಚಿತ್ರವಾಗಿದೆ, ಇನ್ನೂ ಇದರ ಮಾಲೀಕ ಮತ್ತೆಷ್ಟು ವಿಚಿತ್ರವಾಗಿರಬೇಕು ಎನ್ನುವ ಆಲೋಚನೆ ಎಲ್ಲರಿಗೂ ಬರುವುದು ಸಹಜ. ಇದರ ಮಾಲೀಕ ಅಲೆಕ್ಸಾಂಡರ್ ಡೊನ್ಸ್‌ಕೋಯ್. ಅವರು ರಷ್ಯಾದ ಉತ್ತರ ಭಾಗದ ನಗರವೊಂದರ ಮೇಯರ್ ಆಗಿದ್ದರು. ಕಾಲಾ ನಂತರದಲ್ಲಿ ಅವರು ಸುಮಾರು 8 ತಿಂಗಳುಗಳ ಕಾಲ ಜೈಲು ಶಿಕ್ಷೆ ಅನುಭವಿಸಬೇಕಾಯಿತು. ಅದು ಬೇರೆಯ ವಿಷಯ. ಆದರೆ ಅದರ ನಂತರ ಅವರು ಆರಂಭಿಸಿದ್ದು ಜಿ ಸ್ಪಾಟ್ ಲೈಂಗಿಕ ವಸ್ತುಸಂಗ್ರಹಾಲಯವನ್ನು. ಇವುಗಳೆಲ್ಲದರ ಬಳಿಕೆ ಅವರು ಆರಂಭಿಸಿದ್ದು ಈ ದಿ ಕ್ರೇಜಿ ಟಾಯ್ಲೆಟ್ ಕೆಫೆ.
ಸಾಮಾನ್ಯರಿಗೆ ಈ ಕೆಫೆ ವಿಚಿತ್ರವೆನಿಸುವುದು ಸಹಜ. ಆದರೆ, ವಿಚಿತ್ರಗಳನ್ನು ಬಯಸುವವರಿಗೆ ಈ ಕ್ರೇಜಿ ಟಾಯ್ಲೆಟ್ ಕೆಫೆ ಸದಾ ತೆರೆದಿರುತ್ತದೆ. ಯಾರು ಬೇಕಾದರೂ ಈ ಕೆಫೆಗೆ ಎಂಟ್ರಿ ಕೊಡಬಹುದು. ಎಂದು ಹೊಟೇಲ್ ಮಾಲೀಕ ಹೇಳಿಕೊಂಡಿದ್ದಾರೆ.

ಜೈಲೂಟ, ರೈಲೂಟ, ಫ್ಲೈಟ್ ಊಟ, ನೀರಿನ ನಡುವೆ ಊಟ ಹೀಗೆ ಯಾವ್ಯಾವುದೋ ಸ್ಟೈಲ್‌ನಲ್ಲಿ ಊಟ ಸವಿದಿದ್ದನ್ನು ನೋಡಿದ್ದೆ ಕೇಳಿದ್ದೆ. ಆದರೆ, ಈ ಥರದ್ದು ಕೇಳಿದಾಗ ಶಾಕ್ ಆಗಲು ಸಾಕಷ್ಟು ಸಮಯ ಬೇಕಾಗಲಿಲ್ಲ. ನನಗಂತೂ ಈ ಊಟ ಬೇಡ. ನಿಮಗೆ?
ಟಾಯ್ಲೆಟ್‌ಮಯ ಈ ಕೆಫೆ
ಈ ಥರದ ಸರ್ವಿಸ್ ಸಿಸ್ಟಮ್ ರಷ್ಯಾದ ಮಾಸ್ಕೋ ನಗರದಲ್ಲಿನ ದಿ ಕ್ರೇಜಿ ಟಾಯ್ಲೆಟ್ ರೆಸ್ಟೋರೆಂಟ್‌ನಲ್ಲಿದೆ. ಇಲ್ಲಿ ನೀವು ಕಾಣುವುದೆಲ್ಲಾ ಕಕ್ಕಸು ಕೋಣೆಮಯ. ಕೂಡುವ ಕುರ್ಚಿ, ಟೇಬಲ್, ತಟ್ಟೆ, ಲೋಟ ಕಡೆಗೆ ಅಲಂಕಾರದಲ್ಲೂ ಟಾಯ್ಲೆಟ್ ಸ್ಟ್ರಕ್ಚರ್‌ಗಳನ್ನೇ ತುಂಬಿ ಬಿಟ್ಟಿದ್ದಾರೆ. ಇಲ್ಲಿ ಊಟವೇ ಆಗಲೀ ಚಹ-ತಿಂಡಿಗಳೇ ಆಗಲಿ, ಅವುಗಳನ್ನು ನೀವು ತಿನ್ನಲು ಬಳಸುವ ಎಲ್ಲಾ ವಸ್ತುಗಳನ್ನು ಟಾಯ್ಲೆಟ್‌ನಲ್ಲಿ ಬಳಸಿದ ನೆನಪು ಆಗಿಯೇ ಆಗುತ್ತದೆ.