Wednesday, October 29, 2025
Wednesday, October 29, 2025

ಮಾಯಾ ಲೋಕದ ಮಾಯನ್ಸ್‌ ರೆಸಾರ್ಟ್‌

ಬಾಲಿಗೆ ಹೋಗಲಾಗುವುದಿಲ್ಲ. ಆದರೆ ಬಾಲಿಯ ಅನುಭವ ಬೆಂಗಳೂರಿನ ಆಸುಪಾಸಿನಲ್ಲೇ ಸಿಗುವಂತಿದ್ದರೆ..? ಬಿದಿರಿನ ಕಾಟೇಜುಗಳಲ್ಲಿ ವಾಸಿಸುವ ಅವಕಾಶ ಸಿಕ್ಕಿದರೆ ..? ಹೀಗೆ ಒಂದಷ್ಟು ಪ್ರಶ್ನೆಗಳೊಂದಿಗೆ ಹೊಸ ಬಗೆಯ ರೆಸಾರ್ಟ್‌ ಗಳನ್ನು ಹುಡುಕುವವರು ನೀವಾದರೆ ʻಮಾಯನ್ಸ್‌ ರೆಸಾರ್ಟ್‌ʼ ನಿಮ್ಮನ್ನು ಸ್ವಾಗತಿಸುತ್ತದೆ.

ರೆಸಾರ್ಟ್ ವಾಸವೆಂಬುದು ಸದ್ಯ ಹೊಸ ಟ್ರೆಂಡ್‌ ಕ್ರಿಯೇಟ್‌ ಮಾಡಿದೆ. ಕೆಲಸದ ಒತ್ತಡದಿಂದ ಹೊರಬರಲು ಮನೆಯ ವಾತಾವರಣದಿಂದಲೂ ದೂರವಿದ್ದು, ಪ್ರಕೃತಿಯೊಂದಿಗೆ ಬೆರೆಯುವುದಕ್ಕೆ ರೆಸಾರ್ಟ್‌ ಮೊರೆ ಹೊಗುವ ಮಂದಿಯೇ ಇಂದು ಹಲವರು. ಆದರೆ ಒಂದೇ ತೆರನಾದ ರೆಸಾರ್ಟ್‌ಗಳನ್ನು ನೋಡಿ ಬೇಸರವಾಗಿದ್ಯಾ? ವಿಶೇಷವಾದ ರೆಸಾರ್ಟ್‌ಗಾಗಿ ಹುಡುಕಾಟ ನಡೆಸುತ್ತಿದ್ದೀರಾ..? ಬೆಂಗಳೂರಿನಿಂದ 1 ಗಂಟೆಯ ಪ್ರಯಾಣ ಮಾಡಿದರೆ ಸಾಕು ಅಂಥ ವಿಶೇಷ ರೆಸಾರ್ಟ್‌ ಅನುಭವವನ್ನು ನೀವೂ ಪಡೆಯಬಹುದು.

ಹೌದು, ಬೆಂಗಳೂರಿನಿಂದ ಸುಮಾರು 40ಕಿಮೀ ದೂರದಲ್ಲಿರುವ ಕನಕಪುರ ಸದ್ಯಕ್ಕೆ ಬಹು ಬೇಡಿಕೆ ಹೊಂದಿರುವ ಹಲವು ರೆಸಾರ್ಟ್‌ ಗಳ ತಾಣವಾಗಿದೆ. ಇಲ್ಲಿ ಹತ್ತಾರು ರೆಸಾರ್ಟ್‌ ಗಳಿದ್ದು, ಅವುಗಳ ಪೈಕಿ ಇತ್ತೀಚೆಗಷ್ಟೇ ನಿರ್ಮಾಣಗೊಂಡಿರುವ ಮಾಯನ್ಸ್‌ ರೆಸಾರ್ಟ್‌, ಯುನೀಕ್‌ ಥೀಮ್‌ ನ ಮೂಲಕವೇ ಎಲ್ಲರ ಮನಗೆದ್ದಿದೆ. ಬಿದಿರಿನ ಬಳಕೆಯ ಮೂಲಕವೇ ನಿರ್ಮಾಣಗೊಂಡಿರುವ ಇಲ್ಲಿನ ಡೈನಿಂಗ್‌ ಹಾಲ್‌, ರೂಮ್ಸ್‌ನ ವಿಶೇಷ ವಿನ್ಯಾಸಗಳು, ಅಚ್ಚುಕಟ್ಟಾದ ಪರಿಸರ ಎಂಥವರನ್ನೂ ಬೆರಗುಗೊಳಿಸುತ್ತದೆ.

mayans

ಸ್ವಿಮ್ಮಿಂಗ್ ಪೂಲ್‌ನಲ್ಲಿ ಮಿಂದೇಳಲೇ ಬೇಕು

ಸಾಮಾನ್ಯವಾಗಿ ರೆಸಾರ್ಟ್‌ಗಳಲ್ಲಿ ನೀರಾಟವಾಡಲು, ಈಜುತ್ತಾ ಮನಸು ಹಗುರಾಗಿಸಿಕೊಳ್ಳಲು ಈಜು ಕೊಳಗಳಿಗೆ ಇಳಿದುಬಿಡುತ್ತಾರೆ. ಆದರೆ ಇಲ್ಲಿರುವ ಸ್ವಿಮ್ಮಿಂಗ್‌ ಪೂಲ್‌ಗಳಲ್ಲಿ ಹಾಗಲ್ಲ. ಅದಕ್ಕೂ ಹೆಚ್ಚಿನದಾಗಿ ಪೂಲ್‌ಗಳ ಸೌಂದರ್ಯವನ್ನು ಕಣ್ತುಂಬಿಕೊಳ್ಳುವ ಮುಖ್ಯ ಉದ್ದೇಶದೊಂದಿಗೆ ಈ ಈಜುಕೊಳಕ್ಕಿಳಿದರೆ ಮಿಂದೇಳುವುದಕ್ಕೆ ಮನಸ್ಸಾಗುವುದೇ ಇಲ್ಲ. ಯಾಕೆಂದರೆ ಇಲ್ಲಿ ಬಾಲಿ ವೈಬ್ಸ್‌ನ ನಡುವೆ ವಾಟರ್‌ ಫಾಲ್ಸ್‌ ಜಕ್ಕೂಸಿಯ ಅನುಭವವನ್ನೂ ಪಡೆದುಕೊಳ್ಳಬಹುದಾಗಿದ್ದು, ಸಮಯ ಕಳೆಯುವುದು ತಿಳಿಯುವುದೇ ಇಲ್ಲ.

ಹಸಿರಿನ ವಾತಾವರಣದ ನಡುವೆ ನಿರ್ಮಾಣಗೊಂಡಿರುವ ಈ ರೆಸಾರ್ಟ್‌ ನಲ್ಲಿ ಓಪನ್‌ ಸ್ಪೇಸ್‌ ಸಹ ಹೆಚ್ಚಿಗೆಯಿದ್ದು, ಇಂಡೋರ್‌ ಹಾಗೂ ಔಟ್‌ ಡೋರ್‌ ಗೇಮ್ಸ್‌ ಗೂ ಸಾಕಷ್ಟು ಅವಕಾಶಗಳಿವೆ. 999 ರು ನಿಂದ 1200 ರು.ಗೆ ಡೇ ಔಟ್‌ ಪ್ಯಾಕೇಜ್‌ ಲಭ್ಯವಿದೆ.

ಮೈಂಡ್‌ ಫ್ರೀ ಗೇಮ್ಸ್‌

ಇಲ್ಲಿನ ಇಂಡೋರ್‌ ಗೇಮ್ಸ್‌ ಯುನೀಕ್‌ ಹಾಗೂ ಡಿಫರೆಂಟ್‌ ಆಗಿದ್ದು, ಕ್ಯಾಚ್‌ ಫಾಲಿಂಗ್‌ ಸ್ಟಿಕ್ಸ್‌, ಬಝ್‌ ವಯರ್‌ ಗೇಮ್ಸ್‌, ಕೇರಂ, ಚೆಸ್‌ ಮತ್ತು ಆರ್ಚರಿ, ರೆಸಾರ್ಟ್‌ ಪ್ರೇಮಿಗಳನ್ನು ಆಕರ್ಷಿಸುತ್ತವೆ. ಔಟ್‌ ಡೋರ್‌ ನಲ್ಲಿ ಝಿಪ್‌ ಲೈನ್‌ , ಸ್ಕೈ ಸೈಕ್ಲಿಂಗ್‌, ಏರ್‌ ಗನ್‌ ಶೂಟ್‌, ಕ್ರಿಕೆಟ್, ರೋಪ್‌ ಆಕ್ಟಿವಿಟೀಸ್‌, ಶಟಲ್‌ ಬ್ಯಾಡ್ಮಿಂಟನ್‌ ನಂಥ ಅನೇಕ ಆಯ್ಕೆಗಳಿವೆ.

ಇನ್ನು ಗೇಮ್ಸ್‌ ಸಾಕು, ವಾಕ್‌ ಹಾಗೂ ಟ್ರೆಕ್ಕಿಂಗ್ ಮಾಡಬೇಕು, ಬೆಟ್ಟವೇರಿ ಸೂರ್ಯೋದಯ, ಸೂರ್ಯಾಸ್ತವನ್ನು ಕಣ್ತುಂಬಿಕೊಳ್ಳಬೇಕು ಎಂದುಕೊಳ್ಳುವವರನ್ನು ಅಲ್ಲೇ ಪಕ್ಕದಲ್ಲಿರುವ ಬೆಟ್ಟಕ್ಕೆ ರೆಸಾರ್ಟ್‌ ನವರೇ ಕರೆದುಕೊಂಡು ಹೋಗುತ್ತಾರೆ.

mayans resort 1

ಮಾಯನ್ಸ್ ಥೀಮ್ ಕಾಟೇಜ್‌ ಸ್ಟೇ

ಡೇ ಔಟ್‌ ಪ್ಯಾಕೇಜಿನ ಹೊರತಾಗಿ ಸ್ಟೇ ಮಾಡಲು ಬಯಸುವವರಿಗಾಗಿ ಮಾಯನ್ಸ್ ಥೀಮ್ ಕಾಟೇಜಸ್‌ ಜತೆಗೆ ಕಪಲ್‌ ರೂಮ್ಸ್‌, ಡಾರ್ಮೆಟ್ರಿಗಳೂ ಇಲ್ಲಿದ್ದು, ವೀಕ್‌ ಡೇಸ್‌ ನಲ್ಲಿ 2499 ರು ನಿಂದ ಪ್ಯಾಕೇಜ್‌ ಪ್ರಾರಂಭವಾಗುತ್ತದೆ. ಮೂರು ಹೊತ್ತೂ ರುಚಿಕರವಾದ ಬಫೆಟ್‌ ಉಣಬಡಿಸುತ್ತಾರೆ. 15ಕ್ಕೂ ಹೆಚ್ಚು ಬಗೆ ಖಾದ್ಯಗಳನ್ನು ಆಹಾರ ಪ್ರಿಯರಿಗಾಗಿಯೇ ಸಜ್ಜುಗೊಳಿಸಿರುತ್ತಾರೆ. ಬಾರ್ಬೆಕ್ಯೂ ಸೆಟ್‌ಅಪ್‌ ಕೂಡ ಇರಲಿದ್ದು, ಇದಕ್ಕೆ ಸ್ವಲ್ಪ ಹೆಚ್ಚುವರಿ ಮೊತ್ತವನ್ನು ನೀಡಬೇಕಾಗುತ್ತದೆ. ರೆಸಾರ್ಟ್‌ ನಲ್ಲಿ ಸ್ಟೇ ಅಂದಮೇಲೆ ರಾತ್ರಿಯ ವೇಳೆ ಫೈರ್‌ ಕ್ಯಾಂಪ್‌ ಇಲ್ಲವಾದರೆ ಹೇಗೆ ? ಫ್ರೆಂಡ್ಸ್‌ ಜತೆ ಒಳ್ಳೆಯ ನೆನಪುಗಳನ್ನು ಹಂಚಿಕೊಂಡು ಡೇ ಎಂಡ್‌ ಮಾಡುವುದಕ್ಕಾಗಿಯೇ ಇಲ್ಲಿ ಫೈರ್‌ ಕ್ಯಾಂಪ್ ಸಹ ಸಜ್ಜುಗೊಳಿಸಿಕೊಡುತ್ತಾರೆ. ತಣ್ಣನೆಯ ವಾತಾವರಣದ ನಡುವೆ, ಫೈರ್‌ ಕ್ಯಾಂಪ್‌ ನಲ್ಲಿ ಬಿಸಿ ಕಾಯಿಸಿಕೊಳ್ಳುವ ಖುಷಿ ಅನುಭವಿಸಿದವರಿಗೇ ಗೊತ್ತು. ಈ ರೆಸಾರ್ಟ್‌ ನ ನೈಟ್‌ ಆಂಬಿಯನ್ಸ್‌ ನೋಡುವ ಸಲುವಾಗಿಯೇ ಇಲ್ಲಿ ಉಳಿದುಕೊಳ್ಳಲು ಬರುವವರು ಹೆಚ್ಚಿಗೆಯಾಗಿದ್ದಾರೆಂದರೆ ತಪ್ಪಾಗುವುದಿಲ್ಲ.

ಒಟ್ಟಿನಲ್ಲಿ ನಗರ ಜೀವನದಿಂದ ದೂರ ಉಳಿದು ಕ್ವಾಲಿಟಿ ಟೈಮ್‌ ಕಳೆಯಬೇಕು ಎಂದುಕೊಂಡವರಿಗೆ ಇದು ಪರ್ಫೆಕ್ಟ್‌ ಔಟಿಂಗ್‌ ಸ್ಪಾಟ್.‌

ಡೇ ಔಟ್‌ ಪ್ಯಾಕೇಜಸ್‌

ಸ್ವಿಮ್ಮಿಂಗ್‌ ಪೂಲ್

ಔಟ್‌ ಡೋರ್‌ ಮತ್ತು ಇಂಡೋರ್‌ ಗೇಮ್ಸ್‌

ಅನ್‌ ಲಿಮಿಟೆಡ್‌ ಬಫೆಟ್ ಲಂಚ್‌, ಹೈ ಟೀ

ಜೆಯಾಂಗ್‌ ಸ್ವಿಂಗ್‌

ಫೊಟೋಗ್ರಾಫಿ, ವಿಡಿಯೋಗ್ರಾಫಿ ಸ್ಪಾಟ್

ಸಂಪರ್ಕಿಸಿ

ಮಾಯನ್ಸ್‌ ರೆಸಾರ್ಟ್‌, ಕನಕಪುರ, ಕರ್ನಾಟಕ- 562117

78991 92277, 78995 19202

Bhagya Divana

Bhagya Divana

Bhagya Divana is a Professional Journalist. Working in Pravasi Prapancha.

ಪ್ರವಾಸಿಗರ ನೆಚ್ಚಿನ ಎವರ್ ಗ್ರೀನ್ ಕೌಂಟಿ...

Read Previous

ಪ್ರವಾಸಿಗರ ನೆಚ್ಚಿನ ಎವರ್ ಗ್ರೀನ್ ಕೌಂಟಿ...

ಪ್ರಕೃತಿಯ ಮೈಮಾಟವನ್ನು ನೋಡಬೇಕೆ? ಸಮತಗೆ ಬನ್ನಿ

Read Next

ಪ್ರಕೃತಿಯ ಮೈಮಾಟವನ್ನು ನೋಡಬೇಕೆ? ಸಮತಗೆ ಬನ್ನಿ