ರೈಲು ಪ್ರವಾಸದೊಳ್ ಕಂಡ ಜಗತ್ತು
ಗುಂಪಾಗಿ ಪ್ರವಾಸ ಹೋದಾಗ ಎಲ್ಲರೂ ಒಂದೇ ಯೋಚನೆಗೆ ಸಿಂಕ್ ಆಗುವುದು ಮುಖ್ಯ. ಐದು ಜನ ಒಂದು ರೀತಿ ಯೋಚನೆ ಮಾಡಿ, ಒಬ್ಬ ಅದಕ್ಕೆ ವಿರೋಧ ವ್ಯಕ್ತಪಡಿಸಿದರೆ ಇಡೀ ಪ್ರವಾಸ ಹಾಳಾಗುವ ಸಾಧ್ಯತೆಯಿರುತ್ತದೆ. ಇನ್ನು ಸೋಲೋ ಟ್ರಿಪ್ ಹೋದಾಗ ನಮ್ಮ ಯೋಚನೆಗಳ ಜತೆಗೆ ನಮಗೆ ಸಮಯ ಕಳೆಯುವ ಅವಕಾಶವಿರುತ್ತದೆ. ಸೋಲೋ ಹೋಗುವಾಗ ಒಂದ ಚೂರು ಪ್ಲಾನ್ ಮಾಡಿಕೊಂಡರೆ ಒಳ್ಳೆಯದು. ಆದರೂ ಸೋಲೋ ಹೋದಾಗ ಒಂದಷ್ಟು ಸರ್‌ಪ್ರೈಸ್‌ಗಳಿರುತ್ತವೆ.
ಹೀರೋಗೂ ಸೈ, ವಿಲ್ಲನ್‌ಗೂ ಜೈ ಎಂದು ಕನ್ನಡ ಚಿತ್ರರಂಗದಲ್ಲಿ ಗಮನ ಸೆಳೆಯುತ್ತಿರುವ ನಟ ಅನಿರುದ್ಧ್ ಭಟ್. ಗುರುದೇವ್ ಹೊಯ್ಸಳ, ಮ್ಯಾಕ್ಸ್ ಸಿನಿಮಾಗಳಲ್ಲಿ ಇವರ ನಟನೆ ಒಂದು ಹಂತವಾದರೆ ಇತ್ತೀಚೆಗೆ ತೆರೆಕಂಡ ರಕ್ಕಸಪುರದೊಳ್ ಅಲ್ಲಿ ಇವರ ನಟನೆ ಇನ್ನೊಂದು ಸ್ತರದಲ್ಲಿತ್ತು. ಕಳೆದ ಕೆಲವು ತಿಂಗಳಿಂದ ಸುಮಾರು 35 ಕಥೆಗಳನ್ನು ಕೇಳಿ ಮೂರು ಹೊಸ ಸಿನಿಮಾಗಳಿಗೆ ನಾಂದಿ ಹಾಡಲು ಸಿದ್ಧವಾಗಿರುವ ಅನಿರುದ್ಧ್ ಪ್ರವಾಸಿ ಪ್ರಪಂಚದ ಜತೆಗೆ ಅವರ ಪ್ರವಾಸದ ಕುರಿತು ಮಾತನಾಡಿದ್ದಾರೆ.
ಇದನ್ನೂ ಓದಿ: ಸೀಗಲ್ಸ್ ಗರ್ಲ್‌ಫ್ರೆಂಡ್ ಸಂದರ್ಶನ
ಎದ್ದು ಹೊರಡೋದೆ
ನನಗೆ ಹೆಚ್ಚಾಗಿ ಅನ್‌ಪ್ಲಾನ್ಡ್ ಪ್ರವಾಸಗಳೇ ಹೆಚ್ಚು ಇಷ್ಟ. ಅದರಲ್ಲೂ ಬೈಕ್ ರೈಡ್, ಸೋಲೋ ಟ್ರಿಪ್ ಅಂದರೆ ಬಹಳ ಎಂಜಾಯ್ ಮಾಡುತ್ತೇನೆ. ಎಲ್ಲಿಗಾದರೂ ಹೋಗಬೇಕು ಎಂದೆನಿಸಿದ ಕೂಡಲೇ ಹೊರಡುವ ಟ್ರಿಪ್‌ಗಳು ಯಾವತ್ತೂ ಮಜವಾಗಿರುತ್ತವೆ ಎನ್ನುವುದು ನನ್ನ ನಂಬಿಕೆ. ಘಾಟ್ ಸೆಕ್ಷನ್ ಅಲ್ಲಿ ಬೈಕ್ ರೈಡ್ ಬಹಳ ಇಷ್ಟ. ಆಗುಂಬೆ, ಕೊಲ್ಲೂರ್ ಘಾಟ್, ಸಕಲೇಶಪುರ, ಶಿರಾಡಿ ಇವೆಲ್ಲ ಖುಷಿ ಕೊಡುತ್ತವೆ. ಅಅದರಲ್ಲೂ ಒಬ್ಬನೇ ಹಾಡು ಕೇಳಿಕೊಂಡು ಕಿರಿಕ್ ಪಾರ್ಟಿ ಚಿತ್ರದ ದೃಶ್ಯದ ಫೀಲ್ ಅಲ್ಲಿ ಗಾಡಿ ಓಡಿಸಿಕೊಂಡು ಹೋಗುವ ಮಜ ಸಕತ್! ನನಗೆ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್, ಬುಲೆಟ್ ತುಂಬಾ ಇಷ್ಟ.

ಮುಂದಿನ ನಿಲ್ದಣ
ಕರ್ನಾಟಕದ ಎಲ್ಲ ಜಾಗಗಳೂ ಇಷ್ಟ. ಉಡುಪಿ, ಮಂಗಳೂರು, ಮಲೆನಾಡು ಎಲ್ಲವೂ ಇಷ್ಟ. ಈ ವರ್ಷ ಒಬ್ಬನೇ ಕಾಶಿ, ವಾರಾಣಸಿ ಹೋಗುವ ಪ್ಲಾನ್ ಇದೆ. ಅದಾದ ಬಳಿಕ ಒಂದು ಹಿಮಾಲಯ ಟ್ರೆಕ್ ಮಾಡಬೇಕು ಎಂದುಕೊಂಡಿದ್ದೇನೆ. ಇನ್ನೇನಾದರು ಅವಕಾಶ ಸಿಕ್ಕರೆ ನಾರ್ವೆ ಹೋಗಬೇಕು ಎಂಬ ಆಸೆಯಿದೆ. ನಾರ್ವೆ ನಾರ್ದರ್ನ್ ಲೈಟ್ಸ್ ಒಮ್ಮೆ ನೋಡಬೇಕು. ಹಾಗೇ ಮಾನಸ ಸರೋವರ ಹೋಗಬೇಕು. ಇನ್ನು ಬೈಕ್ ಅಲ್ಲಿ ಲಡಾಖ್ ಸುತ್ತಾಡಬೇಕು ಅಂದುಕೊಂಡಿದ್ದೇನೆ.
ಸಿನಿಮಾ ರೈಲು ಬಂಡಿ
ಸಿನಿಮಾದಲ್ಲಿ ಪಾತ್ರಗಳನ್ನು ಮಾಡಲು ಪ್ರವಾಸ ದೊಡ್ಡ ಶಕ್ತಿ ನೀಡುತ್ತದೆ. ನನಗೆ ಬಹುತೇಕ ಟ್ರೇನ್ ಜರ್ನಿ ಇಷ್ಟವಾಗುತ್ತದೆ. ಎಲ್ಲಿಗೇ ಹೋಗುವುದಾದರೂ ರೈಲಿನಲ್ಲಿ ಹೋಗುವುದನ್ನು ಇಷ್ಟಪಡುತ್ತೇನೆ. ರೈಲಿನಲ್ಲಿ ಎಲ್ಲ ರೀತಿಯ ಜನರನ್ನು ಕಾಣಬಹುದು. ವಿವಿಧ ರೀತಿಯ ಬದುಕುಗಳು ಒಂದೇ ಕಡೆ ಕಾಣಿಸುತ್ತದೆ. ಅವರೆಲ್ಲರನ್ನೂ ನೋಡಿದಾಗ ಅವರ ನಡವಳಿಕೆ, ಮಾತಿನ ಧಾಟಿ ಎಲ್ಲವನ್ನೂ ಗಮನಿಸಬಹುದು. ಎಲ್ಲಕ್ಕಿಂತ ಹೆಚ್ಚಾಗಿ ರೈಲು ಜರ್ನಿ ಬದುಕು ಕಲಿಸುತ್ತದೆ. ನಮ್ಮೊಳಗೆ ಎಷ್ಟು ಲೈಫ್ ತುಂಬಿಕೊಳ್ಳುತ್ತೇವೋ ಅಷ್ಟು ಚೆನ್ನಾಗಿ ತೆರೆಯ ಮೇಲೆ ನಟಿಸಲು ಸಾಧ್ಯ ಎನ್ನುವುದು ನನ್ನ ನಂಬಿಕೆ. ಪಾತ್ರಕ್ಕೆ ಇನ್ನೂ ನೈಜತೆ ತರಬಹುದು, ಜೀವ ತುಂಬಬಹುದು.
ಟ್ರಾವೆಲ್ ಸಿನಿಮಾ
ಕಳೆದ ವಾರವೊಂದು ಹಿಟ್ ದ ರೋಡ್ ಅಂತ ಇರಾನಿ ಸಿನಿಮಾ ನೋಡಿದ್ದೆ. ಎರಡು ಲೇಯರ್ ಅಲ್ಲಿ ಕಥೆ ಸಾಗುವ ಸಿನಿಮಾ. ಬಹಳ ಮಜ ಕೊಟ್ಟ ಸಿನಿಮಾ. ಇನ್ನೊಂದು ಸೀಕ್ರೆಟ್ ಲೈಫ್ ಆಫ್ ವಾಲ್ಟರ್ ಮಿಟ್ಟಿ ಕೂಡ ನನಗೆ ಬಹಳ ಖುಷಿ ಕೊಟ್ಟ ಸಿನಿಮಾ.
ಟ್ರೇನ್ ಮಿಸ್
ಒಮ್ಮೆ ದೆಹಲಿಗೆ ಹೋದಾಗ ಅಲ್ಲಿ ಒಂದು ಮಜವಾದ ಘಟನೆ ಆಗಿತ್ತು. ನನಗೆ ಆಗ ಟ್ರೇನ್ ಜರ್ನಿ ಹೊಸತು. ಒಂದು ಸ್ಟೇಷನ್ ಅಲ್ಲಿ ಟ್ರೇನ್ ಮಿಸ್ ಮಾಡಿಕೊಂಡಿದ್ದೆ. ನಂತರ ಏನೇನೋ ಸರ್ಕಸ್ ಮಾಡಿ ಮುಂದಿನ ಜಾಗಕ್ಕೆ ತಲುಪುವಂತಾಗಿತ್ತು. ಇದೊಂದು ಘಟನೆ ಯಾವಾಗಲೂ ನೆನಪಿನಲ್ಲಿರುತ್ತದೆ. ಆದರೆ, ಜಬ್ ವಿ ಮೆಟ್ ಸಿನಿಮಾದಲ್ಲಿ ಶಾಹಿದ್ ಕಪೂರ್‌ಗೆ ಕರೀನಾ ಸಿಗುವ ಹಾಗೆ ಯಾರು ಸಿಗಲಿಲ್ಲ ನನಗೆ ಅಷ್ಟೇ.

ಹೊಸತನ್ನು ಕಲಿಸುತ್ತದೆ
ಗುಂಪಾಗಿ ಪ್ರವಾಸ ಹೋದಾಗ ಎಲ್ಲರೂ ಒಂದೇ ಯೋಚನೆಗೆ ಸಿಂಕ್ ಆಗುವುದು ಮುಖ್ಯ. ಐದು ಜನ ಒಂದು ರೀತಿ ಯೋಚನೆ ಮಾಡಿ, ಒಬ್ಬ ಅದಕ್ಕೆ ವಿರೋಧ ವ್ಯಕ್ತಪಡಿಸಿದರೆ ಇಡೀ ಪ್ರವಾಸ ಹಾಳಾಗುವ ಸಾಧ್ಯತೆಯಿರುತ್ತದೆ. ಇನ್ನು ಸೋಲೋ ಟ್ರಿಪ್ ಹೋದಾಗ ನಮ್ಮ ಯೋಚನೆಗಳ ಜತೆಗೆ ನಮಗೆ ಸಮಯ ಕಳೆಯುವ ಅವಕಾಶವಿರುತ್ತದೆ. ಸೋಲೋ ಹೋಗುವಾಗ ಒಂದ ಚೂರು ಪ್ಲಾನ್ ಮಾಡಿಕೊಂಡರೆ ಒಳ್ಳೆಯದು. ಆದರೂ ಸೋಲೋ ಹೋದಾಗ ಒಂದಷ್ಟು ಸರ್‌ಪ್ರೈಸ್‌ಗಳಿರುತ್ತವೆ.
ಫುಡ್ಡೀ ಏನಲ್ಲ ಆದರೆ..
ನನಗೆ ಎಲ್ಲಿಗೇ ಪ್ರವಾಸ ಹೋದರೂ ಅಲ್ಲಿನ ಲೋಕಲ್ ತಿಂಡಿ ತಿನ್ನಲು ಇಷ್ಟಪಡುತ್ತೇನೆ. ನಮ್ಮ ಊರುಗಳಲ್ಲೇ ಬಗೆಬಗೆಯ ಫ್ಲೇವರ್‌ಗಳಿರುತ್ತವೆ. ಆದರೆ, ಅವುಗಳನ್ನು ಎಕ್ಸ್‌ಪ್ಲೋರ್ ಮಾಡಿರುವುದಿಲ್ಲ. ಉತ್ತರ ಕರ್ನಾಟಕದ ರುಚಿ ಕೂಡ ನನಗಿಷ್ಟ. ಹಾಗಂತ ನಾನೇನು ಫುಡ್ಡೀ ಅಲ್ಲ. ಆದರೆ, ಆಹಾರ ಎಂಜಾಯ್ ಮಾಡುತ್ತೇನೆ.