Saturday, September 13, 2025
Saturday, September 13, 2025

ಪ್ರವಾಸಿ ಪ್ರಪಂಚ ಇಂಗ್ಲಿಷ್‌ನಲ್ಲೂ ಬರಲಿ

ಸೌತ್‌ ಇಂಡಿಯಾ ವನ್‌ ಆಫ್‌ ದಿ ಬೆಸ್ಟ್‌ ಟೂರಿಸಂ ಸ್ಪಾಟ್.‌ ಅದರಲ್ಲೂ ಮಂಗಳೂರನ್ನು ಉದಾಹರಣೆಯಾಗಿ ತೆಗೆದುಕೊಂಡರೆ, ಇಲ್ಲಿ ಅನೇಕ ಅದ್ಭುತ ಬೀಜ್‌ ಗಳಿವೆ. ಆದರೆ ಅವುಗಳನ್ನು ಸರಿಯಾದ ರೀತಿಯಲ್ಲಿ ಅಭಿವೃದ್ಧಿಪಡಿಸಿಲ್ಲವಾದ್ದರಿಂದ ಬರಿಯ ಸ್ಥಳೀಯರಿಗಷ್ಟೇ ಸೀಮಿತವಾಗಿದೆ. ಕೆಲವು ಇತ್ತೀಚೆಗಷ್ಟೇ ಅಲ್ಪ ಸ್ವಲ್ಪ ಅಭಿವೃದ್ಧಿಗೊಂಡು ಸ್ಪೀಡ್‌ ಬೋಟ್‌ ನಂಥ ವಾಟರ್‌ ಗೇಮ್ಸ್‌ ಗಳಿಗೆ ಅವಕಾಶ ಕಲ್ಪಿಸಿದರೂ ಅಂತಾರಾಷ್ಟ್ರೀಯ ಮಟ್ಟಕ್ಕೆ ಗುರುತಿಸಿಕೊಳ್ಳುವಲ್ಲಿ ವಿಫಲವಾಗಿದೆ. ಈ ಬಗ್ಗೆ ಸರಕಾರ ಗಮನಹರಿಸುವ ಅಗತ್ಯವಿದೆ.

ಭಾರತೀಯ ಚಲನಚಿತ್ರ ನಿರ್ದೇಶಕ, ಗೀತರಚನೆಕಾರ, ಮತ್ತು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಲೇಖಕ ಸುಧೀರ್‌ ಅತ್ತಾವರ. ʻಪರಿʼ, ʻಮಡಿʼ, ʻಮೃತ್ಯೋರ್ಮʼ, ʻನವ್ರಿʼ ಚಿತ್ರಗಳಿಗೆ ಆ್ಯಕ್ಷನ್‌ ಕಟ್‌ ಹೇಳಿದ ಅವರು, ಬಿಗ್‌ ಬಜೆಟ್‌ ಪ್ಯಾನ್‌ ಇಂಡಿಯಾ ಸಿನಿಮಾ ʻಕೊರಗಜ್ಜʼ ನಿರ್ದೇಶನ ಮಾಡಿದ್ದಾರೆ. ಈ ಚಿತ್ರ ಬಿಡುಗಡೆಯ ಸಿದ್ಧತೆಯ ನಡುವೆಯೇ ಸಿನಿಮಾ ಶೂಟಿಂಗ್‌ ವೇಳೆ ತಮ್ಮ ಪ್ರಯಾಣದ ಅನುಭವಗಳು, ಪ್ರವಾಸದ ಕ್ಷಣಗಳು, ಪ್ರವಾಸೋದ್ಯಮ ಅಭಿವೃದ್ಧಿಗೆ ಯಾವ ನಡೆ ಉತ್ತಮ ಎಂಬ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದು ಹೀಗೆ.

ಟ್ರಾವೆಲ್‌ ಪ್ಲ್ಯಾನ್ ಫ್ಲಾಪ್‌

ಚಿಕ್ಕಂದಿನಿಂದ ಅನೇಕ ಬಾರಿ ಶಾಲಾ ಪ್ರವಾಸಗಳಿಗೆ ಹೋಗಿದ್ದೆ. ಆದರೆ 9ನೇ ತರಗತಿಯಲ್ಲಿದ್ದಾಗ ಶಾಲೆಯಿಂದ ಜೋಗಕ್ಕೆ ಪ್ರವಾಸ ಹೋಗುವ ಪ್ಲ್ಯಾನ್‌ ಆಗಿತ್ತು. ಅದರಂತೆ ಬೆಳಗ್ಗೆ 6 ಗಂಟೆಗೆ ಎಲ್ಲ ಮಕ್ಕಳು ಶಾಲೆಯ ಆವರಣದಲ್ಲಿರಬೇಕೆಂದು ಕಟ್ಟುನಿಟ್ಟಿನ ಆದೇಶವಾಗಿತ್ತು. ಪ್ರವಾಸಕ್ಕಾಗಿ ನಾನು ಸಕಲ ಸಿದ್ಧತೆ ಮಾಡಿಕೊಂಡಿದ್ದೆ. ಆದರೆ ಅದರ ಹಿಂದಿನ ದಿನ ಮಂಗಳೂರಿನ ಪಾಂಡೇಶ್ವರದಲ್ಲಿ ಲಕ್ಷದ್ವೀಪೋತ್ಸವಕ್ಕೆ ಹೋಗಿದ್ದೆ. ಲಕ್ಷದ್ವೀಪೋತ್ಸವ, ಸಾಸ್ಕೃತಿಕ ಕಾರ್ಯಕ್ರಮಗಳನ್ನು ನೋಡಿ ಮನೆಗೆ ಬರುವ ವೇಳೆ ಬೆಳಗಿನ ಜಾವ 4 ಗಂಟೆ ಆಗಿತ್ತು. ಬಂದು ಮಲಗಿದ್ದಷ್ಟೇ ಗೊತ್ತು, ಎದ್ದಾಗ ಒಂಭತ್ತು ದಾಟಿತ್ತು. ತಡವಾಗಿ ಎದ್ದ ತಪ್ಪಿಗೆ ನಾನೊಬ್ಬನೇ ಟೂರ್‌ ಹೋಗದೆ ಉಳಿಯಬೇಕಾದ ಅನುಭವ ಇಂದಿಗೂ ನೆನಪಿದೆ.

ಎಲ್ಲವೂ ರಂಗಭೂಮಿಯಿಂದಲೇ

ನಾನು ಹಿಂದಿನಿಂದಲೂ ರಂಗಭೂಮಿ ಕಲಾವಿದ. ಹವ್ಯಾಸಿ ರಂಗಭೂಮಿಯಲ್ಲಿದ್ದರಿಂದ ನಾಟಕಗಳ ಶೋಗಳಿಗಾಗಿ ಸಾಕಷ್ಟು ಪ್ರಯಾಣ ಮಾಡುತ್ತಿದ್ದೆ.ಮಂಗಳೂರಿನ ತಂಡಗಳೊಂದಿಗೆ ಸುತ್ತಾಟಕ್ಕೆ ಹೋಗುತ್ತಿದ್ದೆ. ರಂಗಕಲಾಕ್ಷೇತ್ರ, ರಂಗಮಂದಿರ, ರಟ್ಟೆಹಳ್ಳಿ, ಚಿತ್ರದುರ್ಗ, ದಾವಣಗೆರೆ ಅಂತ ಓಡಾಡುತ್ತಲೇ ಇದ್ದೆ. ಡೆಲ್ಲಿ ಶೋ, ಅಸ್ಸಾಂ, ಮೇಘಾಲಯ ಹೀಗೆ ..ಥಿಯೇಟರ್‌ ಟ್ರಾವೆಲಿಂಗ್‌ ಮಾಡಿರುವುದೇ ಹೆಚ್ಚು. 75ಕ್ಕೂ ಹೆಚ್ಚು ನಾಟಕಗಳಲ್ಲಿ ಬಣ್ಣ ಹಚ್ಚಿದ್ದೇನೆ. ಸುತ್ತುವ ಹುಚ್ಚು ಹಿಡಿಸಿರುವುದೇ ರಂಗಭೂಮಿಯೆಂದರೂ ತಪ್ಪಾಗುವುದಿಲ್ಲ.

sudheer attavar

ದೈವಿಕ ಅನುಭವಕ್ಕಾಗಿ ಕದ್ರಿ ದೇವಸ್ಥಾನ

ಮಂಗಳೂರಿನಲ್ಲಿ ಹೆಚ್ಚಿಗೆ ಭೇಟಿ ನೀಡುವ ತಾಣವೆಂದರೆ ಕದ್ರಿ ಮಂಜುನಾಥ ದೇವಸ್ಥಾನ. ಇಲ್ಲಿ ಏಳು ಕೆರೆಗಳಿವೆ. ಸಮೀಪದಲ್ಲೇ ದೇವಾಲಯ. ಈ ಏಳು ಕೆರೆಗಳಲ್ಲಿ ಎಂದಿಗೂ ನೀರು ಬತ್ತುವುದಿಲ್ಲ. ಪ್ರವಾಹವೇ ಬಂದರೂ ನೀವು ಉಕ್ಕಿ ಹರಿಯುವುದೂ ಇಲ್ಲ. ದೇವರ ಇರುವಿಕೆಯಿದೆ ಎಂದು ನಂಬುವವರು ಇಲ್ಲಿಗೊಮ್ಮೆ ಭೇಟಿ ನೀಡಲೇಬೇಕು. ಸಂದೀಪ್‌ ಸೋಪರ್ಕರ್‌, ಹಿರಿಯ ನಟಿಯರಾದ ಶ್ರುತಿ, ಭವ್ಯ ಸೇರಿದಂತೆ ಅನೇಕರನ್ನು ಕದ್ರಿ ದೇಗುಲಕ್ಕೆ ಕರೆದುಕೊಂಡು ಹೋಗಿದ್ದೇನೆ. ಇದೇ ಅನುಭವವಾದ ಬಗ್ಗೆ ಅವರೂ ಹೇಳಿಕೊಂಡಿರುವುದಿದೆ.

ಕೊರಗಜ್ಜ ಶೂಟಿಂಗ್‌ ನೆನಪು

ಕೊರಗಜ್ಜ ಬಿಗ್‌ ಬಜೆಟ್‌ ಚಿತ್ರ. ಅದರ ಚಿತ್ರೀಕರಣದ ಅನುಭವವಂತೂ ಹೇಳಲೇಬೇಕು. ಯಾರೂ ಮಾಡದ ಅನೇಕ ಸಾಹಸಗಳನ್ನು ಮಾಡಿದ್ದೆ. ಅಂದರೆ, ಗಗನಚುಕ್ಕಿಯಲ್ಲಿ ನೀರು ಧುಮ್ಮಿಕ್ಕಿ ಬೀಳುವ ಆ ಡೇಂಜರಸ್‌ ಪ್ಲೇಸ್‌ ನಲ್ಲಿ ಶೂಟಿಂಗ್‌ ಮಾಡಿದ್ದೆ. ಈ ತನಕ ಅಲ್ಲಿ ಯಾರೂ ಚಿತ್ರೀಕರಣ ಮಾಡಿಲ್ಲವಂತೆ. ರಿಸ್ಕ್‌ ಎನಿಸಿದರೂ ಟೀಂ ಜತೆ ಧೈರ್ಯದಿಂದ ಶೂಟಿಂಗ್‌ ಮಾಡಿದ್ದೆವು. ಆದರೆ ಆ ಚಿತ್ರೀಕರಣದ ವೇಳೆ ನಮ್ಮ ತಂಡದ ಸದಸ್ಯರೊಬ್ಬರು ಕಾಲು ಜಾರಿ ನೀರಿನ ಸಣ್ಣ ತೊರೆಯಲ್ಲಿ ಕೊಚ್ಚಿಕೊಂಡು ಹೋಗಿದ್ದರು. ಎಲ್ಲ ಸೇರಿ ಹೇಗೋ ಬಚಾವ್‌ ಮಾಡಿದ್ದೆವು. ಗಗನಚುಕ್ಕಯೆಂದರೆ ನನಗೆ ಈ ಘಟನೆಯೇ ನೆನಪಾಗುತ್ತದೆ.

sudheer attavar 4

ಮಾರಿಷಸ್‌ನಲ್ಲಿದೆ ಭಾರತದ ಘಮ..

ಕೆಲವು ದಿನಗಳ ಹಿಂದಷ್ಟೇ ಕೆಲಸದ ನಿಮಿತ್ತ ಮಾರಿಷಸ್ ಗೆ ಹೋಗಬೇಕಾಗಿಬಂತು. ಅದೊಂದು ಸಣ್ಣ ದೇಶ, ಬರೀ ಒಂದೂ ಕಾಲು ಕೋಟಿ ಜನಸಂಖ್ಯೆ ಇರುವುದಷ್ಟೇ. ಇಲ್ಲಿ ರಾಜ್ಯಗಳಿಲ್ಲ. ಬರೀ ಒಂಭತ್ತು ಜಿಲ್ಲೆಗಳಿವೆ. ಮತ್ತೊಂದೆರಡು ಐಲ್ಯಾಂಡ್‌ ಸೇರಿದರೆ ಮಾರಿಷಸ್ ದೇಶವಾಗುತ್ತದೆ. ಇಲ್ಲಿ ಎಲ್ಲಿ ಹೋದರೂ ಭಾರತೀಯರೇ ಸಿಗುತ್ತಾರೆ. ಕನ್ನಡಿಗರು, ತಮಿಳರು, ತೆಲುಗು ಮಾತನಾಡುವವರು, ಯುಪಿ, ಬಿಹಾರ್‌ ನವರೂ ಇಲ್ಲಿದ್ದಾರೆ. ಭಾರತದಂತೆ ಹೆಚ್ಚಿನ ಸಂಖ್ಯೆಯಲ್ಲಿ ದೇವಾಲಯಗಳಿವೆ. ನಮ್ಮದೇ ನೆಲದಲ್ಲಿದ್ದೇನೆ ಎಂದೆನಿಸಿತ್ತು.

ಗೋವಾ ಫಿಲಂ ಫೆಸ್ಟಿವಲ್‌ ನನಗಿಷ್ಟ

ಜೈಪುರ, ರಾಜಸ್ಥಾನ, ಗೋವಾ ಸೇರಿದಂತೆ ಅನೇಕ ಕಡೆಗಳಲ್ಲಿ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾಗಿಯಾಗಿ ನಿರ್ದೇಶನ ಸೇರಿ ಅನೇಕ ವಿಷಯಗಳಿಗೆ ಪ್ರಶಸ್ತಿಗಳನ್ನು ಗೆದ್ದಿದ್ದೇನೆ. ಅವುಗಳಲ್ಲಿ ಗೋವಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾಗಿಯಾದ ಅನುಭವ ನನಗೆ ವಿಶೇಷವಾದುದು. ಗುರುಗಳಾದ ಎಂ.ಎಸ್.‌ ಸತ್ಯು ಅವರು ತಮ್ಮ 82 ರ ವಯಸ್ಸಿನಲ್ಲೂ ಬೆಂಗಳೂರು ಟು ಗೋವಾ ಡ್ರೈವ್‌ ಮಾಡಿಕೊಂಡು ಅಲ್ಲಿಗೆ ಹೋದಾಗ ಅವರಿಗೆ ಜತೆಯಾಗಿದ್ದೆ. ಆ ರೋಡ್‌ ಟ್ರಿಪ್‌ ಮರೆಯಲು ಸಾಧ್ಯವೇ ಇಲ್ಲ.

sudheer attavar 6

ತಾಜ್‌ ಫಲಕ್ನುಮಾ ಪ್ಯಾಲೇಸ್ ಎಂಬ ನಿಜಾಮರ ಅರಮನೆ

ಪ್ರಯಾಣವಷ್ಟೇ ಅಲ್ಲ, ಸ್ಟೇ ಕೂಡ ನನಗೆ ಬಹಳ ಮುಖ್ಯ. ಇಂಟರ್‌ ನ್ಯಾಚನಲ್‌ ಹಾಲಿಡೇ‌ ಇನ್ ಗ್ರೂಪ್‌ ನ ಪ್ಲಾಟಿನಂ ಮೆಂಬರ್‌ ನಾನು. ಈ ಕಾರಣದಿಂದ ಪ್ರಯಾಣದ ವೇಳೆ ಸ್ಟೇ ಬಗ್ಗೆ ನನಗೆ ಚಿಂತೆ ಇರೋದಿಲ್ಲ. ರೆಂಟ್‌ನಲ್ಲೂ ಕನ್ಸಿಷನ್‌ ಇದೆ. ಎಲ್ಲದಕ್ಕೂ ಹೆಚ್ಚಾಗಿ ಅಲ್ಲಿನ ಹಾಸ್ಪಿಟಾಲಿಟಿ ತುಂಬಾ ಮೆಚ್ಚುಕೊಳ್ಳುವಂಥದ್ದು. ಇನ್ನು ನನ್ನ ಓವರ್‌ ಲಕ್ಷುರಿ ಸ್ಟೇ ಅಂದರೆ ತಾಜ್‌ ಫಲಕ್ನುಮಾ ಪ್ಯಾಲೇಸ್ ನಲ್ಲಿ.‌ ಇದು ನಿಜಾಮರ ಕಾಲದ ಅರಮನೆಯಾದರೂ ಈಗ ಫೈವ್ ಸ್ಟಾರ್‌ ಪ್ಲಸ್‌ ಹೊಟೇಲ್‌. ಇಲ್ಲಿನ ಅನುಭವವಂತೂ ಜೀವನದಲ್ಲಿ ಒಮ್ಮೆಯಾದರೂ ಮಾಡಲೇಬೇಕಾದ್ದು. ನಿಮಗಾಗಿ ಬರುವ ಕುದುರೆ ರಥವನ್ನೇರಿ ಅರಮನೆಯ ಬಾಗಿಲಿ ಬರುತ್ತಿದ್ದಂತೆ ಹೂವಿನ ಮಳೆ ಸುರಿಸುತ್ತಾರೆ. 50-60 ಬಗೆಯ ಜ್ಯೂಸ್‌ ಗಳು ನಿಮ್ಮನ್ನು ಸ್ವಾಗತಿಸುತ್ತವೆ. ಎಲ್ಲವೂ ರಾಜ ವೈಭೋಗವೇ. ಬರವಣಿಗೆಯ ಸಂದರ್ಭದಲ್ಲಂತೂ ನಾನು ಒಬ್ಬಂಟಿಯಾಗಿರಬಯಸುತ್ತೇನೆ. ಮನಸ್ಸಿಗೆ ನೆಮ್ಮದಿ ತರುವ ಇಂಥ ಪರಿಸರವನ್ನೇ ಅರಸಿ ಹೋಗುತ್ತೇನೆ.

ಆಲ್ಕೋಹಾಲ್‌ ದಾಸ ನಾನಲ್ಲ..

ಯಾವುದೇ ಪ್ರದೇಶಕ್ಕೆ ಪ್ರಯಾಣ ಮಾಡಿದರು ಅಲ್ಲಿನ ಸ್ಥಳೀಯ ಆಹಾರವನ್ನು ಟೇಸ್ಟ್‌ ಮಾಡುತ್ತೇನೆ. ಆದರೆ ಆಲ್ಕೋಹಾಲ್‌ ಕುಡಿಯುವ ಅಭ್ಯಾಸ ನನಗಿಲ್ಲ. ಕುಡಿದೇ ಇಲ್ವಾ ಅಂತ ಕೇಳಿದರೆ, ಸುಳ್ಳುಹೇಳುವುದಿಲ್ಲ, ಟೇಸ್ಟ್‌ ಮಾಡಿದ್ದೇನೆ. ಆದರೆ ನಾನು ಅದರ ದಾಸನಾಗಿಲ್ಲ ಅಷ್ಟೇ. ಫುಡ್‌ ವಿಚಾರಕ್ಕೆ ಬಂದರೆ ಭಾರತ ಬಿಟ್ಟು ಎಲ್ಲೇ ಹೋದರೂ ಮೊಟ್ಟೆಯನ್ನು ವೆಜ್‌ ಎಂಬ ರೀತಿಯಲ್ಲೇ ಬಿಂಬಿಸುತ್ತಾರೆ. ಆದರೆ ನಿಮ್ಮ ಆಯ್ಕೆ ಏನು ಎಂಬುದನ್ನು ಸರಿಯಾಗಿ ನೋಡಿಕೊಂಡು ಆರ್ಡರ್‌ ಮಾಡಿಕೊಳ್ಳುವುದು ಉತ್ತಮ.

sudheer attavar 2

ಸೌತ್‌ ಇಂಡಿಯಾ ಬೆಸ್ಟ್‌ ಟೂರಿಸಂ ಸ್ಪಾಟ್

ನಾನು ಅನೇಕ ಬಾರಿ ಕೇರಳದ ಕೊಚ್ಚಿಗೆ ಹೋಗಿದ್ದೇನೆ. ಕೇರಳದ ಪ್ರವಾಸೋದ್ಯಮಕ್ಕೆ ಹೋಲಿಸಿದರೆ ಕರ್ನಾಟಕದ ಪ್ರವಾಸೋದ್ಯಮ ತುಂಬ ಹಿಂದುಳಿದಿದೆ. ಸೌತ್‌ ಇಂಡಿಯಾ ವನ್‌ ಆಫ್‌ ದಿ ಬೆಸ್ಟ್‌ ಟೂರಿಸಂ ಸ್ಪಾಟ್.‌ ಅದರಲ್ಲೂ ಮಂಗಳೂರನ್ನು ಉದಾಹರಣೆಯಾಗಿ ತೆಗೆದುಕೊಂಡರೆ, ಇಲ್ಲಿ ಅನೇಕ ಅದ್ಭುತ ಬೀಜ್‌ ಗಳಿವೆ. ಆದರೆ ಅವುಗಳನ್ನು ಸರಿಯಾದ ರೀತಿಯಲ್ಲಿ ಅಭಿವೃದ್ಧಿಪಡಿಸಿಲ್ಲವಾದ್ದರಿಂದ ಬರಿಯ ಸ್ಥಳೀಯರಿಗಷ್ಟೇ ಸೀಮಿತವಾಗಿದೆ. ಕೆಲವು ಇತ್ತೀಚೆಗಷ್ಟೇ ಅಲ್ಪ ಸ್ವಲ್ಪ ಅಭಿವೃದ್ಧಿಗೊಂಡು ಸ್ಪೀಡ್‌ ಬೋಟ್‌ ನಂಥ ವಾಟರ್‌ ಗೇಮ್ಸ್‌ ಗಳಿಗೆ ಅವಕಾಶ ಕಲ್ಪಿಸಿದರೂ ಅಂತಾರಾಷ್ಟ್ರೀಯ ಮಟ್ಟಕ್ಕೆ ಗುರುತಿಸಿಕೊಳ್ಳುವಲ್ಲಿ ವಿಫಲವಾಗಿದೆ. ಈ ಬಗ್ಗೆ ಸರಕಾರ ಗಮನಹರಿಸುವ ಅಗತ್ಯವಿದೆ. ಅಲ್ಲದೆ ಪ್ರವಾಸೊಧ್ಯಮದಲ್ಲಿ ಸಾರಿಗೆ ವ್ಯವಸ್ಥೆ ಅದರಲ್ಲೂ ರಸ್ತೆ ಸಮರ್ಪಕವಾಗಿರಬೇಕು. ನಮ್ಮಲ್ಲಿ ಅದೂ ಸರಿಯಾಗಿಲ್ಲ.ರಾಜ್ಯ, ಜಿಲ್ಲೆ, ತಾಲ್ಲೂಕು ರಸ್ತೆಗಳಂತೂ ಹಳ್ಳ ಕೊಳ್ಳಗಳಂತಾಗಿಬಿಟ್ಟಿದ್ದು, ಅಭಿವೃದ್ಧಿ ಮರೀಚಿಕೆಯಾಗಿದೆ. ಇದರಿಂದ ಪ್ರವಾಸೋದ್ಯಮದ ಮೇಲೆ ಹೊಡೆತ ಬೀಳುತ್ತದೆ.

ಬೀಚ್‌ ಗಳ ಅಭಿವೃದ್ಧಿಗೆ...

ಪ್ರವಾಸೋದ್ಯಮ ಇಲಾಖೆಗೆ ನನ್ನದೊಂದು ಸಲಹೆಯಿದೆ. ಪ್ರವಾಸಿಗರು ಯಾವುದೇ ಪ್ರವಾಸಿ ತಾಣಕ್ಕೆ ಬರುವುದು ಆ ಪರಿಸರವನ್ನು ಅನುಭವಿಸುವುದಕ್ಕಾಗಿ. ಇದನ್ನು ಮನಗಂಡು ನಮ್ಮ ನಾಡಿನ ಪ್ರವಾಸೋದ್ಯಮವನ್ನು ಪ್ರತಿಬಿಂಬಿಸುವ ವಿಶೇಷ ಯೋಜನೆಗಳನ್ನು ಇಲಾಖೆ ಹಮ್ಮಿಕೊಳ್ಳಬೇಕಿದೆ. ಕರ್ನಾಟಕದ ಕರಾವಳಿ ಬರಿಯ ಪರದೇಶೀಯರ ಸ್ಪೀಡ್‌ ಬೋಟ್‌ ಪ್ರಮೋಟ್‌ ಮಾಡಿದರೆ ಸಾಲದು. ಬದಲಾಗಿ ನಮ್ಮ ಮಣ್ಣಿನ, ನಾಡಿನ ಸುಗಂಧವನ್ನು ಬೀರುವ ನಮ್ಮ ಜನಪದ ಕಲಾಪ್ರಕಾರಗಳಾದ ಯಕ್ಷಗಾನ, ಡೊಳ್ಳುಕುಣಿತ, ಭೂತ ನೃತ್ಯ, ಕಂಗೀಲು, ಆಟಿ ಕಳಂಜ ಇಂಥ ಜನಪದ ಕಲಾ ಪ್ರಕಾರಗಳ ಪ್ರದರ್ಶನ ಇಡಬೇಕು. ಮ್ಯೂಸಿಯಂ ತೆರೆಯಬೇಕು. ನಮ್ಮ ಆಹಾರ ಪದ್ಧತಿಗಳನ್ನು ಪರಿಚಯಿಸುವ ಖಾದ್ಯ ಮೇಳಗಳನ್ನು ದೊಡ್ಡ ಮಟ್ಟದಲ್ಲಿ ನಡೆಸಬೇಕು. ಸ್ಪೀಡ್‌ ಬೋಟ್‌ ಎಲ್ಲಿ ಹೋದರೂ ಇದ್ದೇಇರುತ್ತದೆ.. ಅದಕ್ಕೆ ಮಂಗಳೂರು ಕರಾವಳಿಗೆ ಹೋಗುವ ಅಗತ್ಯ ಏನು ? ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವಲ್ಲಿ ಸರಿಯಾದ ರೀತಿಯ ಕಾರ್ಯಯೋಜನೆಗಳ ಕೊರತೆ ಎದ್ದು ಕಾಣುತ್ತಿದೆ.

ಪ್ರವಾಸಿ ಪ್ರಪಂಚ ಇಂಗ್ಲೀಷ್‌ ನಲ್ಲೂ ಬರಲಿ

ಪ್ರವಾಸಿ ಪ್ರಪಂಚ ಒಂದು ಉತ್ತಮ ಪ್ರಯತ್ನ. ನನಗಂತೂ ಮೆಚ್ಚುಗೆಯಾಯಿತು. ಕ್ರಿಯೇಟಿವ್‌ ಆಗಿರುವ ಇಂಥ ಯೋಜನೆಯನ್ನು ಯಾರೂ ರೂಪಿಸಿಲ್ಲ, ಕಾರ್ಯರೂಪಕ್ಕೂ ತಂದಿಲ್ಲ. ಆದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇದು ಮನ್ನಣೆ ಪಡೆಯಬೇಕಾದರೆ ಇಂಗ್ಲಿಷ್‌ ನಲ್ಲೂ ಈ ವಾರ ಪತ್ರಿಕೆ ಮುದ್ರಣವಾಗಬೇಕು.

Bhagyalakshmi N

Bhagyalakshmi N

Travel blogger and adventurer passionate about exploring new cultures and sharing travel experiences.

ಟ್ರೆಕ್ಕಿಂಗ್‌ ಮಾಡುವುದೆಂದರೆ ನನಗಿಷ್ಟ: ರಂಜನಿ ರಾಘವನ್‌

Read Previous

ಟ್ರೆಕ್ಕಿಂಗ್‌ ಮಾಡುವುದೆಂದರೆ ನನಗಿಷ್ಟ: ರಂಜನಿ ರಾಘವನ್‌

ಅವಿಸ್ಮರಣೀಯ ಅನುಭವ ನೀಡಿದ ಮಾಸೈ ಮರಾ ; ರಮೇಶ್ ಅರವಿಂದ್

Read Next

ಅವಿಸ್ಮರಣೀಯ ಅನುಭವ ನೀಡಿದ ಮಾಸೈ ಮರಾ ; ರಮೇಶ್ ಅರವಿಂದ್