ಕೆಮ್ಮಣ್ಣು ಗುಂಡಿಯ ಮೈಮಾಟಕ್ಕೆ ಬೀಳುವುದು ಖಚಿತ!
ಕೆಮ್ಮಣ್ಣುಗುಂಡಿ ಅಂದರೆ ಯಾರಿಗೆ ಗೊತ್ತಿಲ್ಲ ಹೇಳಿ? ಆ ಪ್ರಶಾಂತ ಚೆಲುವು, ಎಷ್ಟು ನೋಡಿದರೂ ಮುಗಿಯದ ಹಸಿರಿನ ಮೈಮಾಟ. ಗಿರಿಧಾಮಗಳ ರಾಣಿ ಎಂಬ ಬಿರುದು ಸುಮ್ಮನೆ ಬಂದಿಲ್ಲ ಬಿಡಿ. ಅಂಥ ಕೆಮ್ಮಣ್ಣುಗುಂಡಿ ಸಿನಿಮಾದವರ ಫೇವರಿಟ್ ಶೂಟಿಂಗ್ ಲೊಕೇಶನ್ ಆಗಿದ್ದು, ಆ ಸಿನಿಮಾಗಳ ಮೂಲಕ ಮತ್ತಷ್ಟು ಪ್ರವಾಸಿ ಪ್ರಿಯರು ಕೆಮ್ಮಣ್ಣುಗುಂಡಿಯತ್ತ ದಾಂಗುಡಿ ಇಡಲು ಪ್ರಾರಂಭಿಸಿದ್ದು ಹೊಸ ವಿಷಯವೇನಲ್ಲ.
ಕೆಮ್ಮಣ್ಣುಗುಂಡಿ ಮಾಮೂಲು ಗಿರಿಧಾಮ ಅಲ್ಲ. ಇದು ಮೈಸೂರಿನ ರಾಜರಾಗಿದ್ದ 4 ನೇ ಕೃಷ್ಣರಾಜೇಂದ್ರ ಒಡೆಯರ್ ಅವರ ಬೇಸಿಗೆ ವಿಶ್ರಾಂತಿಯ ತಾಣವಾಗಿತ್ತು. ಆದರೆ ಅಲ್ಲಿ ಹೋಗುವ ಜನ ಸಾಮಾನ್ಯರಿಗೂ ರಾಜವೈಭೋಗ ಅನುಭವಿಸಿದಷ್ಟೇ ಸಂತಸ ಮತ್ತು ವಿಶ್ರಾಂತಿ ಸಿಗುವುದು ಖಚಿತ. ಕೆಮ್ಮಣ್ಣುಗುಂಡಿ ಒಮ್ಮೆ ಭೇಟಿ ಕೊಟ್ಟು ಮರೆತುಬಿಡೋ ಜಾಗವಲ್ಲ. ಅದು ಪದೇಪದೇ ನಮ್ಮನ್ನು ತನ್ನೆಡೆಗೆ ಆಕರ್ಷಿಸುತ್ತಲೇ ಇರುತ್ತದೆ. ಒಮ್ಮೆ ಹೋದವರು ಮತ್ತೆ ಮತ್ತೆ ಹೋಗಲು ಬಯಸುವ ವಿಶ್ರಾಂತಿ ಧಾಮ ಈ ಕೆಮ್ಮಣ್ಣುಗುಂಡಿ. ತಮಿಳುನಾಡಿಗೆ ಊಟಿ ಇರಬಹುದು. ಕರ್ನಾಟಕಕ್ಕೆ ಕೆಮ್ಮಣ್ಣುಗುಂಡಿ ಊಟಿಗಿಂತ ಒಂದು ಕೈ ಮೇಲು.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಬರುವ ಈ ತಾಣ ಅತ್ಯಂತ ಫೇಮಸ್ ಆಗಿದ್ದರೂ ಊಟಿ ಅಥವಾ ಕೊಡೈಕೆನಾಲ್‌ನ ಥರ ಪ್ರವಾಸಿಗರಿಂದ ಗಿಜಿಗಿಡುವುದಿಲ್ಲ. ಮನಸ್ಸಿಗೆ ಹಾಯಾಗಿಸುವಂಥ ಪ್ರಶಾಂತತೆ ಮತ್ತು ಶಾಂತಿಯನ್ನು ಇಲ್ಲಿ ಕಂಡುಕೊಳ್ಳಬಹುದು.
ಕೆಮ್ಮಣ್ಣುಗುಂಡಿ ಅಂದರೆ ಕೆಂಪು ಮಣ್ಣಿನ ಗುಂಡಿ. ಕೆಲವು ಬೆಳೆ ಬೆಳೆಯಲು, ಅದರಲ್ಲೂ ಕಾಫಿ ಬೆಳೆಯಲು ಅತ್ಯಂತ ಪ್ರಶಸ್ತ ಸ್ಥಳ ಇದು. ಇದು ಕೃಷ್ಣರಾಜ ಒಡೆಯರ್ ಅವರ ಬೇಸಿಗೆ ಸ್ಥಳವಾಗಿದ್ದರೂ ಮುಂದೆ ಅದನ್ನು ಕರ್ನಾಟಕ ರಾಜ್ಯದ ತೋಟಗಾರಿಕೆ ಇಲಾಖೆಗೆ ದಾನ ಮಾಡುತ್ತಾರೆ.
ಹೀಗಾಗಿ ಇದನ್ನು ಶ್ರೀ ಕೃಷ್ಣರಾಜೇಂದ್ರ ಗಿರಿಧಾಮ ಎಂದೂ ಕರೆಯುತ್ತಾರೆ. ಕರ್ನಾಟಕ ಸರಕಾರದ ಆದೇಶದ ಮೇರೆಗೆ ಈ ಸ್ಥಳವನ್ನು ಜಂಗಲ್ ಲಾಡ್ಜಸ್ ಆಂಡ್ ರೆಸಾರ್ಸ್ಟ್ ಅವರು 2021ರ ಮಾರ್ಚ್ 1ನೇ ತಾರೀಖಿನಿಂದ ಸಮರ್ಥವಾಗಿ ಮತ್ತು ಜನಸ್ನೇಹಿಯಾಗಿ ನಿರ್ವಹಿಸಿಕೊಂಡು ಬರುತ್ತಿದ್ದಾರೆ.

ಸ್ಥಳ ಯಾವುದಿದ್ದರೇನು, ಅಲ್ಲಿ ಜೆಎಲ್‌ಆರ್ ಇದೆ ಅಂದರೆ ಸಾಕು, ಮತ್ತೊಂದು ಬಾರಿ ಆಲೋಚಿಸದೆ ಆ ಜಾಗಕ್ಕೆ ಪ್ರವಾಸ ಕೈಗೊಳ್ಳಬಹುದು. ಮನೆಯ ಅತಿಥಿಯ ರೀತಿಯಲ್ಲಿ ಆತಿಥ್ಯ ನೀಡುವ ಸಿಬ್ಬಂದಿಗಳು, ಶುಚಿ ರುಚಿಯಾದ ಊಟ, ಸ್ವಚ್ಛವಾಗಿರುವ ರೂಮ್ ಅಥವಾ ಕಾಟೇಜ್‌ಗಳು. ಆಹ್ಲಾದಕರ ವಾತಾವರಣ, ಬೇಕಾದ ರೀತಿಯಲ್ಲಿ ಸಹಾಯ ಮಾಡುವ ಅಲ್ಲಿನ ಸಿಬ್ಬಂದಿ ವರ್ಗ, ಮನೆಯನ್ನೇ ಮರೆಸುವ ಕಾಟೇಜ್‌ಗಳು ಜೆ ಎಲ್ ಅರ್ ನ ಹೆಚ್ಚುಗಾರಿಕೆ. ನಮ್ಮ ಪ್ರವಾಸ ಅಥವಾ ರಜಾದಿನಗಳನ್ನು ಕಳೆಯಲು ಇಂಥ ಪರಿಶುದ್ಧ ವಾತಾವರಣವಲ್ಲದೆ ಮತ್ತಿನ್ನೇನು ಬೇಕು ಹೇಳಿ?
ಕರ್ನಾಟಕದ ಊಟಿ
ಕೆಮ್ಮಣ್ಣುಗುಂಡಿಯನ್ನು ಕರ್ನಾಟಕದ ಊಟಿ ಎಂದೂ ಕರೆಯುತ್ತಾರೆ. ಅಲ್ಲಿನ ಹಸಿರು ತುಂಬಿದ ವಾತಾವರಣ, ಕನಸಿನಂಥ ಭೂ ಪ್ರದೇಶ, ಒಳ್ಳೆ ಗಾರ್ಡನ್‌ಗಳು, ಬೆಟ್ಟ ಮತ್ತು ಗಿರಿಗಳಲ್ಲಿ ʼಚೆಲ್ಲಾಪಿಲ್ಲಿʼಯಾಗಿ ಕಾಣುವ ಹಸಿರ ನೋಟ, ಅದೆಲ್ಲದರ ಜತೆಗೆ ಅಲ್ಲಿನ ಪರಿಸರದ ಬಗ್ಗೆ ಹಲವಾರು ಕಥೆಗಳನ್ನು ಹೇಳುತ್ತ ನಮ್ಮ ಪರಿಸರದ ನಡಿಗೆಯ ಅನುಭವವನ್ನು ಮತ್ತಷ್ಟು ಹೆಚ್ಚಿಸುವ ಜೆಎಲ್‌ಆರ್‌ನ ಸಿಬ್ಬಂದಿಗಳು. ಅವರ ಕತೆಗಳು, ಅಲ್ಲಿನ ಗಿಡ ಮರಗಳ ಬಗ್ಗೆ ಅವರಲ್ಲಿರುವ ಜ್ಞಾನ, ಪಕ್ಷಿ-ಪ್ರಾಣಿಗಳ ಬಗ್ಗೆ ಇರುವ ಮಾಹಿತಿ ಚಾಟ್ ಜಿಪಿಟಿಯನ್ನೂ ಒಂದು ಕ್ಷಣಕ್ಕೆ ಹಿಂದಕ್ಕೆ ತಳ್ಳಬಹುದು.
ಹೆಬ್ಬೆ ಫಾಲ್ಸ್
ಜಂಗಲ್ ಲಾಡ್ಜ್ ರೆಸಾರ್ಟ್ ನಿಂದ ಕೇವಲ 12 ಕಿಮೀ ದೂರವಿರುವ ಹೆಬ್ಬೆ ಫಾಲ್ಸ್ ಇಲ್ಲಿನ ಪ್ರಮುಖ ಆಕರ್ಷಣೆ. ಬೆಟ್ಟಗಳ ಹಸಿರಿನ ನಡುವೆ ಜೀಪ್ ನಲ್ಲಿ ನಾವು ಮತ್ತು ನಮ್ಮ ಪ್ರೀತಿಪಾತ್ರರು ಹೊರಟಾಗ ಅಲ್ಲಿ ಸಿಗುವ ಆ ಅನುಭವವೇ ಬೇರೆ ಬಿಡಿ. ಯಾವುದೋ ಸಿನಿಮಾದ ಮುಖ್ಯಪಾತ್ರವೇ ನಾವು ಎಂದೆನಿಸೋಕೆ ಶುರುವಾಗುತ್ತೆ. ಆ ಹೆಬ್ಬೆ ಫಾಲ್ಸ್ ನ ಸೌಂದರ್ಯ ಎಂಥವರನ್ನೂ ಕೆಲಕ್ಷಣ ನಿಬ್ಬೆರಗಾಗಿಸುತ್ತದೆ.

ಝೆಡ್ ಪಾಯಿಂಟ್ ನ ಟ್ರೆಕ್ಕಿಂಗ್!
ಇಂಥ ಒಳ್ಳೆಯ ಗಿರಿಧಾಮಕ್ಕೆ ಹೋಗಿ ಟ್ರೆಕ್ಕಿಂಗ್ ಮಾಡದೇ ಬರೋದು ಹೇಗೆ? ಜೆಎಲ್‌ಆರ್ ನ ರೂಮುಗಳು ಎಷ್ಟು ಚೆನ್ನಾಗಿದ್ದರೂ ಅಲ್ಲೇ ಕೂತರೆ ಪ್ರವಾಸಕ್ಕೇನು ಅರ್ಥ? ಪ್ರಕೃತಿ ಸೌಂದರ್ಯವನ್ನು ಸವಿಯೋಕೆ ಟ್ರೆಕ್ಕಿಂಗ್‌ಗಿಂತ ಒಳ್ಳೆಯ ಚಟುವಟಿಕೆ ಮತ್ತಿನ್ನೇನಿದೆ ಹೇಳಿ? ಹರಟೆ ಹೊಡೆಯುತ್ತಾ, ಓಡುತ್ತಾ, ನಡೆಯುತ್ತಾ, ಖುಷಿಯಿಂದ ಟ್ರೆಕ್ಕಿಂಗ್ ಮಾಡಿದರೆ ಒಂದು ವರ್ಷಕ್ಕಾಗುವ ನೆನಪಿನ ಬುತ್ತಿಯನ್ನು ಇಲ್ಲಿ ಕಟ್ಟಿಕೊಂಡು ಬರಬಹುದು.
ಕೃಷ್ಣರಾಜೇಂದ್ರ ಹೂವಿನ ತೋಟ
ಮೊದಲೇ ಹೇಳಿದ ಹಾಗೆ ಈ ಸ್ಥಳ ನಾಲ್ಕನೇ ಕೃಷ್ಣರಾಜೇಂದ್ರ ಒಡೆಯರ್ ಅವರ ಬೇಸಗೆಯ ವಿಶ್ರಾಮ ಧಾಮ. ಆಗಿನ ಕಾಲದಲ್ಲಿ ಜೆ ಎಲ್ ಆರ್ ಇರದಿದ್ದರೂ, ಅವರು ತಂಗುತ್ತಿದ್ದುದು ಅವರದ್ದೇ ಆದ ಅರಮನೆಯಂಥ ಸ್ಥಳದಲ್ಲಿ. ಅಂಥ ಅರಮನೆ ಇಲ್ಲೂ ಇದೆ. ಅದು ಈಗ ರಾಜ್ಯಸರಕಾರದ ನಿರ್ವಹಣೆಯಲ್ಲಿದೆ. ಅದು ರಾಜಭವನದ ಗೆಸ್ಟ್ ಹೌಸ್. ರಾಜಭವನ ಅಂದರೆ ಬರೀ ದೊಡ್ಡದಾದ ಒಂದು ಬಂಗಲೆ ಅಷ್ಟೇ ಅಲ್ಲ. ವಿವಿಧ ರೀತಿಯ ಹೂವು-ಮರ-ಗಿಡಗಳನ್ನು ಹೊಂದಿದ ದೊಡ್ಡದಾದ ಗಾರ್ಡನ್. ಇಲ್ಲಿ ವಿಶ್ವದಲ್ಲಿ ಎಲ್ಲೋ ಕೆಲವೆಡೆ ಕಾಣಸಿಗುವ ವಿಸ್ಮಯಕಾರಿ ಹೂವು ಮರಗಳ ರಾಶಿಯೇ ಇದೆ. ಕೃಷ್ಣರಾಜೇಂದ್ರ ಫ್ಲವರ್ ಪಾರ್ಕ್ ಮತ್ತು ರಾಕ್ ಗಾರ್ಡನ್ ನಿಮಗೆ ವಿಸ್ಮಯದ ಲೋಕವನ್ನು ತೆರೆದಿಡುತ್ತದೆ.
ಒಂದು ದಿನದ ಸೈಟ್ ಸೀಯಿಂಗ್
ಕರ್ನಾಟಕದ ಅತಿ ಎತ್ತರದ ಪರ್ವತ ಮುಳ್ಳಯ್ಯನಗಿರಿಗೆ ಹೋಗಿ, ದತ್ತ ಪೀಠದಲ್ಲಿ ದತ್ತನ ಆಶೀರ್ವಾದ ಪಡೆದು, ಮಾಣಿಕ್ಯಾಧಾರಾ ಫಾಲ್ಸ್‌ಗೆ ಹೋಗಿ, ಗಳಿಕೆರೆಯನ್ನೂ ನೋಡಿ, ಸೀತಾಲಯ್ಯನಗಿರಿ ತೀರ್ಥಸ್ಥಳಕ್ಕೂ ಭೇಟಿನೀಡಿ. ಅತ್ತಿಗುಂಡಿ ಹತ್ತಿರದ ಹೊನ್ನಮ್ಮನ ಹಳ್ಳದಲ್ಲಿ ಮಿಂದೆದ್ದು ಬರಬಹುದು.

ಜೆಎಲ್‌ಆರ್ ಡೈರಿ
ದಿನ 1
ಮಧ್ಯಾಹ್ನ 1:00 - ಚೆಕ್ ಇನ್ ಮಾಡಿ, ಕುಳಿತು ಫ್ರೆಶ್ ಆಗಿ
ಮಧ್ಯಾಹ್ನ 1:30 - 2:30- ಊಟ
ಮಧ್ಯಾಹ್ನ 3:00 - 6:00- ಹೆಬ್ಬೆ ಜಲಪಾತಕ್ಕೆ ಭೇಟಿ
(ಹೆಚ್ಚುವರಿ ವೆಚ್ಚದಲ್ಲಿ ಐಚ್ಛಿಕ) /ತೋಟಗಾರಿಕೆ ಉದ್ಯಾನ/ಸೂರ್ಯಾಸ್ತದ ಸ್ಥಳ (ನಡೆಯಬಹುದಾದ ದೂರ)
ಸಂಜೆ 6:30 - 7:00 - ಚಹಾ/ಕಾಫಿ/ತಿಂಡಿಗಳು
ಸಂಜೆ 7:30 - 8:30- ಬಾನ್ ಫೈರ್‌ನಲ್ಲಿ ಹರಟೆ
ಸಂಜೆ 8:30 - 9:30- ಭೋಜನ
ದಿನ 2
ಬೆಳಿಗ್ಗೆ 5:45 -ವೇಕ್ ಅಪ್ ಕಾಲ್
ಬೆಳಿಗ್ಗೆ 6:00 - 6:30 ಚಹಾ/ಕಾಫಿ
ಬೆಳಿಗ್ಗೆ 6:30 - 8:30- ಝೆಡ್ ಪಾಯಿಂಟ್ ಮಾರ್ಗದರ್ಶಿಯ ಜತೆ ಚಾರಣ
ಬೆಳಿಗ್ಗೆ 8:30 - 9:30- ಉಪಹಾರ
ಬೆಳಿಗ್ಗೆ 10:30 - ಚೆಕ್ ಔಟ್
ಪ್ಯಾಕೇಜ್ ಗಳು
ಬುಡನ್‌ಗಿರಿ ಪ್ಯಾಕೇಜ್ (ನೆಲ ಮಹಡಿ)
ಬುಡನ್‌ಗಿರಿ ಪ್ಯಾಕೇಜ್ (ಮೊದಲ ಮಹಡಿ)
ಕಲ್ಲತ್ತಿ ಕಾಟೇಜ್
ಊಟ, ಭೋಜನ, ಉಪಾಹಾರ, ಚಾರಣ ಮತ್ತು ಅರಣ್ಯ ಪ್ರವೇಶ ಶುಲ್ಕವನ್ನು ಒಳಗೊಂಡಿದೆ.
ನಾರಾಯಣ ಕುಟೀರ (ನೆಲ ಮಹಡಿ)
ನಾರಾಯಣ ಕುಟೀರ (ಮೊದಲ ಮಹಡಿ)
ಕೊಠಡಿ KHR ಪ್ಯಾಕೇಜ್
ವಿರೂಪಾಕ್ಷ ಪ್ಯಾಕೇಜ್ (ಮೊದಲ ಮಹಡಿ)
ವಿರೂಪಾಕ್ಷ ಪ್ಯಾಕೇಜ್ (ನೆಲ ಮಹಡಿ)
ವಿರೂಪಾಕ್ಷ ಪ್ಯಾಕೇಜ್ ಸೂಟ್ (ಮೊದಲ ಮಹಡಿ)
ವಿರೂಪಾಕ್ಷ ಪ್ಯಾಕೇಜ್ ಸೂಟ್ (ನೆಲ ಮಹಡಿ)
ಊಟ, ಭೋಜನ, ಉಪಾಹಾರ, ಚಾರಣ ಮತ್ತು ಅರಣ್ಯ ಪ್ರವೇಶ ಶುಲ್ಕವನ್ನು ಒಳಗೊಂಡಿದೆ.
ಹೆಬ್ಬೆ ಜಲಪಾತಗಳಿಗೆ ಭೇಟಿ ನೀಡಿ
ಹೆಬ್ಬೆ ಜಲಪಾತವು ಜೆಎಲ್‌ಆರ್, ಕೆಮ್ಮಣ್ಣುಗುಂಡಿಯಿಂದ ಸುಮಾರು 12 ಕಿ.ಮೀ ದೂರದಲ್ಲಿದೆ. ಈ ಜಲಪಾತವು ಭದ್ರಾ ವನ್ಯಜೀವಿ ಅಭಯಾರಣ್ಯದೊಳಗೆ ಇದೆ. ಹೆಬ್ಬೆ ಜಲಪಾತವು 551 ಅಡಿ ಎತ್ತರದಿಂದ ಎರಡು ಹಂತಗಳಲ್ಲಿ ಧುಮ್ಮಿಕ್ಕಿ ದೊಡ್ಡ ಹೆಬ್ಬೆ (ದೊಡ್ಡ ಜಲಪಾತ) ಮತ್ತು ಚಿಕ್ಕ ಹೆಬ್ಬೆ (ಸಣ್ಣ ಜಲಪಾತ) ಗಳನ್ನು ರೂಪಿಸುತ್ತದೆ.
ತಲುಪುವುದು ಹೇಗೆ?
ರಸ್ತೆ ಮೂಲಕ
ಕೆಮ್ಮಣ್ಣುಗುಂಡಿಯು ಚಿಕ್ಕಮಗಳೂರಿನಿಂದ 53 ಕಿಮೀ, ಲಿಂಗದಹಳ್ಳಿಯಿಂದ 17 ಕಿಮೀ ಮತ್ತು ಶಿವಮೊಗ್ಗದಿಂದ 71 ಕಿಮೀ ರಸ್ತೆಯ ಮೂಲಕ- ಹತ್ತಿರದ ರಾಷ್ಟ್ರೀಯ ಹೆದ್ದಾರಿಗಳು, NH-206 ಅಥವಾ NH-48, ಬೆಂಗಳೂರಿಗೆ ಸಂಪರ್ಕ ಕಲ್ಪಿಸುತ್ತದೆ. ಮುಳ್ಳಯ್ಯನಗಿರಿ ಮತ್ತು ಅತ್ತಿಗುಂಡಿ ಮೂಲಕ ಮತ್ತೊಂದು ಮಾರ್ಗವಿದೆ. ಇದು ರಮಣೀಯ ಆಫ್ ರೋಡ್ ಡ್ರೈವ್ ಆಗಿದೆ.
ರೈಲು ಮೂಲಕ
ರೆಸಾರ್ಟ್‌ನಿಂದ 35 ಕಿಮೀ ದೂರದಲ್ಲಿರುವ ಬಿರೂರು ಹತ್ತಿರದ ರೈಲು ನಿಲ್ದಾಣವಾಗಿದೆ.
ಏರ್‌ಪೋರ್ಟ್
ಹತ್ತಿರದ ವಿಮಾನ ನಿಲ್ದಾಣವೆಂದರೆ ಶಿವಮೊಗ್ಗ ವಿಮಾನ ನಿಲ್ದಾಣ. ಇದು ರೆಸಾರ್ಟ್‌ನಿಂದ 80 ಕಿಮೀ ದೂರದಲ್ಲಿದೆ.
--
ರೆಸಾರ್ಟ್ ಸಂಪರ್ಕ
ಕೆಮ್ಮಣ್ಣುಗುಂಡಿ, ತರೀಕೆರೆ ತಾಲೂಕು, ಚಿಕ್ಕಮಗಳೂರು ಜಿಲ್ಲೆ - 577129
ಬುಕಿಂಗ್ ವಿಚಾರಣೆ ಸಂಖ್ಯೆ : 9448649751/9448649851
ವ್ಯವಸ್ಥಾಪಕರು: ಶ್ರೀ ರಜನೀಕಾಂತ ಎ ಆರ್
ವ್ಯವಸ್ಥಾಪಕರ ಸಂಪರ್ಕ ಸಂಖ್ಯೆ: 9449597883
ಇಮೇಲ್ ಐಡಿ: khr@junglelodges.com