Tuesday, October 14, 2025
Tuesday, October 14, 2025

ದೇಶದ ಪ್ರಥಮ ಬೋನ್ಸಾಯ್ ವನ ಪ್ರವಾಸಿಗರಿಗೆ ಮುಕ್ತ: ಬೆಂಗಳೂರು ಮುಡಿಗೇರಿದೆ ಮತ್ತೊಂದು ಗರಿ

ಬೆಂಗಳೂರಿಗೆ ಬಂದು ಲಾಲ್‌ ಬಾಗ್‌ ಗೆ ಭೇಟಿ ಕೊಡದೇ ಹೋದರೆ ಹೇಗೆ? ಅದರಲ್ಲೂ ಲಾಲ್‌ ಬಾಗ್‌ ನಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸಿದ್ಧಗೊಂಡಿರುವ ಬೋನ್ಸಾಯ್ ವನ ಈಗ ಸಾರ್ವಜನಿಕರಿಗೆ ಮುಕ್ತವಾಗಿದ್ದು, ದೇಶದ ಹಲವೆಡೆಯಿಂದ ತಂದು ಬೆಳೆಸಿರುವ ವಿಶೇಷ ಬಗೆಯ ಬೋನ್ಸಾಯ್ ಸಸಿಗಳನ್ನು ಇಲ್ಲಿ ಕಣ್ತುಂಬಿಕೊಳ್ಳಬಹುದು.

ಬೆಂಗಳೂರಿಗೆ ಬರುವ ಪ್ರವಾಸಿಗರನ್ನು ಸೆಳೆಯುವ ಪ್ರಮುಖ ಆಕರ್ಷಣೀಯ ಕೇಂದ್ರ ಲಾಲ್‌ ಬಾಗ್..ಇಲ್ಲಿರುವ ಗ್ಲಾಸ್‌ ಹೌಸ್‌, ಬೋನ್ಸಾಯಿ ಗಾರ್ಡನ್‌ , ಕೆಂಪೇಗೌಡ ವಾಚ್‌ ಟವರ್‌, ಫ್ಲವರ್‌ ಕ್ಲಾಕ್‌, ದಾಸವಾಳದ ಹೂದೋಟ ಹೀಗೆ ಒಂದಿಡೀ ದಿನ ಸುತ್ತಾಡುವಷ್ಟು ಪ್ರೇಕ್ಷಣೀಯ ಸ್ಥಳ ಲಾಲ್‌ ಬಾಗ್‌ ಒಳಾಂಗಣದಲ್ಲಿದೆ. ಅದರಲ್ಲೂ ಮುಖ್ಯವಾಗಿ ಪ್ರವಾಸಿಗರನ್ನು ಸೆಳೆಯುವ ಉದ್ದೇಶದಿಂದಲೇ ಲಾಲ್‌ ಬಾಗ್‌ ಸದ್ಯ ಸ್ಥಗಿತಗೊಂಡಿದ್ದ ಬೋನ್ಸಾಯ್‌ ವನವನ್ನು ಅಭಿವೃದ್ಧಿಪಡಿಸಿದ್ದು, ಸಾರ್ವನಿಕರಿಗೆ ಮುಕ್ತವಾಗಿದೆ.

333aef54dfb518987e6c6bb0b81960552fc797ab

ಲಾಲ್‌ಬಾಗ್‌ನ 2.5 ಎಕರೆ ಪ್ರದೇಶದಲ್ಲಿರುವ ಬೋನ್ಸಾಯ್ ಉದ್ಯಾನಕ್ಕೆ ಆಧುನಿಕ ಸ್ಪರ್ಶ ನೀಡುವ ಸಲುವಾಗಿ ಮೂರು ವರ್ಷಗಳಿಂದ ಕಾಮಗಾರಿ ನಡೆಯುತ್ತಿದೆ. 10 ವರ್ಷದಿಂದ 80 ವರ್ಷದವರೆಗಿನ 100ಕ್ಕೂ ಹೆಚ್ಚು ಬೋನ್ಸಾಯ್ ಗಿಡಗಳನ್ನು ನಾನಾ ಹಂತಗಳಲ್ಲಿ ವಿನ್ಯಾಸಗೊಳಿಸಿ ಪ್ರದರ್ಶನಕ್ಕೆ ಇಡಲಾಗಿದೆ. ಬೋನ್ಸಾಯ್ ಕಲಾವಿದೆ ಅನುಪಮಾ ವೇದಾಚಲ ಅವರ ಮಾರ್ಗದರ್ಶನದಲ್ಲಿ ಈ ಉದ್ಯಾನವನ ಕಾಮಗಾರಿ ನಡೆಯುತ್ತಿದ್ದು, ಕೋಲ್ಕತ್ತಾ ಸೇರಿ ದೇಶದ ನಾನಾ ಭಾಗಗಳಿಂದ ಹೊಸ ಹೊಸ ತಳಿಯ ಸಸಿಗಳನ್ನು ತರಿಸಿ ಬೆಳೆಸಲಾಗುತ್ತಿದೆ.

ಬೋನ್ಸಾಯಿ ಗಾರ್ಡನ್‌ ಮಾತ್ರವಲ್ಲದೆ ಇಲ್ಲಿ ಬೋನ್ಸಾಯ್ ಸ್ಟುಡಿಯೊ ನಿರ್ಮಾಣ ಮಾಡಲಾಗಿದ್ದು, ಲ್ಯಾಂಡ್ ಸ್ಟೇಪಿಂಗ್ ಮತ್ತು ಇಕೊ ಶಾಪ್‌ ನಿರ್ಮಾಣದ ರೂಪು ರೇಷೆ ಸಿದ್ಧವಾಗಿದೆ. ಎರಡು ಅಂತಸ್ತಿನ ಇಕೊ ಶಾಪ್ ಬರಲಿದ್ದು, ಇಲ್ಲಿ ಬೋನ್ಸಾಯ್ ಗಿಡಗಳು ಹಾಗೂ ಅದಕ್ಕೆ ಬೇಕಾದ ಪರಿಕರಗಳ ಮಾರಾಟಕ್ಕೂ ಅವಕಾಶ ಕಲ್ಪಿಸಲಾಗುವುದು. ಬೋನ್ಸಾಯ್ ಉದ್ಯಾನದಲ್ಲಿ ಒಂದು ಫೌಂಟೇನ್ ಕೂಡ ಬರಲಿದೆ. ಹೀಗಾಗಿ, ಅತ್ಯಂತ ಸುಂದರ ವನ ಇದಾಗಲಿದೆ.

chiang-mai-series-bonsai-garden-province-art-thailand-collection-trees-species-356638912

ಬೃಹದಾಕಾರವಾಗಿ ಬೆಳೆಯುವ ನಾನಾ ಜಾತಿಯ ಸಸ್ಯಗಳನ್ನು ಬೋನ್ಸಾಯ್ ಪದ್ಧತಿಯ ಮೂಲಕ ಕುಬ್ಬಗೊಳಿಸಿದ್ದು, ಹೊಸ ಆಕರ್ಷಣೆಯೊಂದಿಗೆ ಸಾರ್ವಜನಿಕರನ್ನು ಸ್ವಾಗತಿಸಲು ಬೋನ್ಸಾಯ್ ಉದ್ಯಾನ ಸಜ್ಜಾಗಿದೆ. ಅದೇನೇ ಆದರೂ ಮೊದಲ ಹಂತದಲ್ಲಿ 55ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಉದ್ಯಾನವನದ ಮರುನಿರ್ಮಾಣ ಕಾಂಗಾರಿ ಕೈಗೊಳ್ಳಲಾಗಿದ್ದು, ಇನ್ನೊಂದು ವರ್ಷದಲ್ಲಿ ಕಾಮಗಾರಿಗಳು ಪೂರ್ಣಗೊಳ್ಳಲಿದೆ. ಅಲ್ಲದೆ ದೇಶದ ಮೊದಲ ಬೋನ್ಸಾಯ್ ಉದ್ಯಾನ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

Bhagya Divana

Bhagya Divana

Bhagya Divana is a Professional Journalist. Working in Pravasi Prapancha.

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

Read Previous

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

ಮಕ್ಕಳ ಜೊತೆ ಬೆಂಗಳೂರಿನ ಈ ಸ್ಥಳಗಳಿಗೊಮ್ಮೆ ಭೇಟಿ ಕೊಟ್ಟು ನೋಡಿ, ನೀವೂ ಮಕ್ಕಳೇ ಆಗಿಬಿಡುತ್ತೀರಿ..

Read Next

ಮಕ್ಕಳ ಜೊತೆ ಬೆಂಗಳೂರಿನ ಈ ಸ್ಥಳಗಳಿಗೊಮ್ಮೆ ಭೇಟಿ ಕೊಟ್ಟು ನೋಡಿ, ನೀವೂ ಮಕ್ಕಳೇ ಆಗಿಬಿಡುತ್ತೀರಿ..