Friday, October 3, 2025
Friday, October 3, 2025

IRCTC ಕೈಗೆಟುಕುವ ಬೆಲೆಯಲ್ಲಿ ಕೇರಳ ಪ್ರವಾಸ

ಪ್ರವಾಸಿ ತಾಣಗಳ ಬೀಡು, ದೇವರ ನಾಡನ್ನು ಸುತ್ತಾಡಿ ಬರುವ ಕನಸು ಅನೇಕರಿಗಿರುತ್ತದೆ. ಆದರೆ ದುಬಾರಿ ಬೆಲೆಯ ಕಾರಣಕ್ಕೆ ಯೋಜನೆಯನ್ನು ಮುಂದೂಡುತ್ತಲೇ ಇರುತ್ತಾರೆ. ಆದರೆ ಇನ್ನು ಚಿಂತೆ ಬಿಡಿ. IRCTC ಯಿಂದ ಕೇರಳ ಪ್ರವಾಸ ಹೊಸ ಪ್ಲ್ಯಾನ್‌ ನಿಮಗಾಗಿ ಕಾದಿದೆ.

ದಕ್ಷಿಣ ಭಾರತದ ಅತ್ಯಂತ ಸುಂದರವಾದ ರಾಜ್ಯಗಳ ಪೈಕಿ ಕೇರಳ ಪ್ರಮುಖವಾದುದು. ಇಲ್ಲಿರುವ ಪ್ರಕೃತಿ ರಮಣೀಯ ತಾಣಗಳು, ಹೌಸ್‌ಬೋಟ್‌ ಗಳು, ಮೋಡಿಮಾಡುವ ಹಿನ್ನೀರು ಪ್ರವಾಸಿಗರನ್ನು ಆಕರ್ಷಿಸುತ್ತವೆ. ಭಾರತೀಯರಷ್ಟೇ ಅಲ್ಲದೆ ವಿದೇಶಿಗರೂ ಸಹ ಸಾಕಷ್ಟು ಸಂಖ್ಯೆಯಲ್ಲಿ ಕೇರಳಕ್ಕೆ ಭೇಟಿ ನೀಡುತ್ತಾರೆ. ಆದರೆ ಕೇರಳದ ಪ್ರವಾಸ, ತಿರುಗಾಟ ದುಬಾರಿಯೆನ್ನುವ ಕಾರಣಕ್ಕೆ ಹಿಂದೇಟುಹಾಕುವ ಮಂದಿಗಾಗಿ IRCTC ಹೊಸ ಪ್ಯಾಕೇಜನ್ನು ಬಿಡುಗಡೆ ಮಾಡಿದೆ.

IRCTC ಯ ಈ ಪ್ಯಾಕೇಜ್‌ನ ಮೂಲಕ ಕಡಿಮೆ ಬೆಲೆಯಲ್ಲಿ ವಾಸ್ತವ್ಯ, ಆಹಾರ, ಪ್ರಯಾಣ ವೆಚ್ಚ, ಪ್ರಯಾಣ ವಿಮೆಯನ್ನು ಪಡೆಯುವ ಅವಕಾಶ ಪ್ರವಾಸಿಗರಿಗಿದೆ. ಹಾಗಾದರೆ ಕೇರಳದ ಪ್ಯಾಕೇಜ್‌ನ ವಿಶೇಷತೆ ಏನು ನಿಮಗೆ ಗೊತ್ತಾ?

train

ಕೇರಳ ಲಾಸ್ ಗ್ರೀನ್ ಹಿಲ್ಸ್ ಟೂರ್ ಪ್ಯಾಕೇಜ್

ಕೇರಳ ಪ್ರವಾಸ ಪ್ಯಾಕೇಜ್‌ಗೆ IRCTC ವಿಶೇಷವಾದ ಹೆಸರನ್ನಿಟ್ಟಿದ್ದು, 'ಕೇರಳ ಲಾಸ್ ಗ್ರೀನ್ ಹಿಲ್ಸ್' ಎಂದು ನಾಮಕರಣ ಮಾಡಿದೆ. ಈ ವಿಶೇಷವಾದ ಪ್ಯಾಕೇಜ್‌ ಜೂನ್ 14 ರಂದು ಕೇರಳದ ಕೊಚ್ಚಿ ನಗರದಿಂದ ಪ್ರಾರಂಭವಾಗಲಿದೆ. ಪ್ಯಾಕೇಜ್‌ನ ಪ್ರಕಾರ, ಕೇರಳದ ಸಂಸ್ಕೃತಿಯನ್ನು ಹತ್ತಿರದಿಂದ ನೋಡುವುದರ ಜೊತೆಗೆ, ನೀವು ಕೇರಳದ ಎರ್ನಾಕುಲಂ, ಮುನ್ನಾರ್, ತೆಕ್ಕಡಿ, ಕುಮಾರಕೋಮ್ ಮತ್ತು ಅಲೆಪ್ಪಿಯಂಥ ಪ್ರಸಿದ್ಧ ಪ್ರವಾಸಿ ತಾಣಗಳನ್ನು ಸುತ್ತಾಡಿ ಬರಬಹುದು.

ಟಿಕೆಟ್‌ ದರ ದುಬಾರಿಯೇನಿಲ್ಲ

ಈ ಪ್ಯಾಕೇಜ್‌ನಲ್ಲಿ ಪ್ರವಾಸ ಕೈಗೊಳ್ಳಲು ಪ್ರತಿ ವ್ಯಕ್ತಿ 35,725 ರು. ನೀಡಬೇಕಾಗುತ್ತದೆ. ಇಬ್ಬರುಜತೆ ಸೇರಿ ಬುಕ್ ಮಾಡಿದರೆ, ಪ್ರತಿಯೊಬ್ಬರಿಗೆ 18,390 ರುಪಾಯಿಯಾಗುತ್ತದೆ. ಅಲ್ಲದೆ, ಮೂವರು ಸೇರಿ ಬುಕ್ ಮಾಡಿದರೆ, ವ್ಯಕ್ತಿಗೆ 14,205 ರು. ಮೊತ್ತವಾಗುತ್ತದೆ. ಈ ಪ್ಯಾಕೇಜ್‌ನಲ್ಲಿ ಊಟ, ವಸತಿ, ಪ್ರಯಾಣ ವೆಚ್ಚಗಳೆಲ್ಲಾ ಸೇರ್ಪಡೆಯಾಗಿರುತ್ತದೆ. IRCTC ಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ನೀವು ಕೇರಳ ಲಾಸ್ ಗ್ರೀನ್ ಹಿಲ್ಸ್ ಟೂರ್ ಪ್ಯಾಕೇಜ್ ಅನ್ನು ಬುಕ್ ಮಾಡಿಕೊಳ್ಳಬಹುದು.

Bhagya Divana

Bhagya Divana

Bhagya Divana is a Professional Journalist. Working in Pravasi Prapancha.

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!

Read Previous

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!

ತತ್ಕಾಲ್ ಬುಕಿಂಗ್ ಸಮಯದಲ್ಲಿ ಬದಲಾವಣೆಗಲಿಲ್ಲ: IRCTC ಸ್ಪಷ್ಟನೆ

Read Next

ತತ್ಕಾಲ್ ಬುಕಿಂಗ್ ಸಮಯದಲ್ಲಿ ಬದಲಾವಣೆಗಲಿಲ್ಲ: IRCTC ಸ್ಪಷ್ಟನೆ