ಕೆಎಸ್‌ಟಿಡಿಸಿ ಸೇವೆಗಳ ಮೇಲೆ 10% ವಿಶೇಷ ರಿಯಾಯಿತಿ
ಕೆಎಸ್‌ಟಿಡಿಸಿ ಮಯೂರ ಹೋಟೆಲ್ ಗಳ ಸೇವೆಯನ್ನು ಸಾರ್ವಜನಿಕರು ಹೆಚ್ಚಿನ ರೀತಿಯಲ್ಲಿ ಲಭ್ಯವಾಗುವಂತೆ ಮಾಡಲು Online ಮುಖಾಂತರ ಬುಕ್ಕಿಂಗ್ ಮಾಡುವ ಪ್ರವಾಸಿಗರಿಗೆ ಪ್ರತಿ ಬುಕ್ಕಿಂಗ್ ನಲ್ಲಿ ಶೇಕಡ 10ರಷ್ಟು ವಿಶೇಷ ರಿಯಾಯಿತಿ ನೀಡುತ್ತಿದೆ.
ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಕಳೆದ 55 ವರ್ಷಗಳಿಂದ ಆತಿಥ್ಯ ಹಾಗೂ ಪ್ರವಾಸೋದ್ಯಮ ಕ್ಷೇತ್ರಕ್ಕೆ ಸಂಬಂಧಪಟ್ಟ ಚಟುವಟಿಕೆಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜ್ಯಕ್ಕೆ ಭೇಟಿ ನೀಡುವ ದೇಶಿಯ ಹಾಗೂ ವಿದೇಶಿಯ ಪ್ರವಾಸಿಗರಿಗೆ ಉತ್ತಮ ಗುಣಮಟ್ಟದ ಆತಿಥ್ಯ ಸೇವೆಯನ್ನು ಒದಗಿಸುತ್ತಲೇ ಬಂದಿದೆ. ಸದ್ಯ 79 ನೇ ಸ್ವಾತಂತ್ರ ದಿನಾಚರಣೆಯ ಪ್ರಯುಕ್ತ ಕೆಎಸ್‌ಟಿಡಿಸಿ ಪ್ರವಾಸಿಗರಿಗೆ ಸಿಹಿ ಸುದ್ದಿ ನೀಡಿದೆ.
ಕೆಎಸ್‌ಟಿಡಿಸಿ ಮಯೂರ ಹೋಟೆಲ್ ಗಳ ಸೇವೆಯನ್ನು ಸಾರ್ವಜನಿಕರು ಹೆಚ್ಚಿನ ರೀತಿಯಲ್ಲಿ ಲಭ್ಯವಾಗುವಂತೆ ಮಾಡಲು ದಿನಾಂಕ: 15.08.2025 ರಿಂದ 22.08.2025 ರವರೆಗೆ ಅಂದರೆ ಒಂದು ವಾರದ ಅವಧಿಯಲ್ಲಿ Online ಮುಖಾಂತರ ಬುಕ್ಕಿಂಗ್ ಮಾಡುವ ಪ್ರವಾಸಿಗರಿಗೆ ಪ್ರತಿ ಬುಕ್ಕಿಂಗ್ ನಲ್ಲಿ ಶೇಕಡ 10ರಷ್ಟು ವಿಶೇಷ ರಿಯಾಯಿತಿ ನೀಡುತ್ತಿದೆ. ನಿಗಮದ ಹೋಟೆಲ್ ಗಳ ಸೇವೆಯನ್ನು ಸದುಪಯೋಗಪಡಿಸಿಕೊಳ್ಳಲು ನಿಗಮದ ಅಧಿಕೃತ ಜಾಲತಾಣ www.kstdc.co ರಲ್ಲಿ Promo Code "Independence79@KSTDC" ಅನ್ನು ಬಳಸುವ ಮೂಲಕ 10% ವಿಶೇಷ ರಿಯಾಯಿತಿಯನ್ನು ಪಡೆಯಬಹುದು.